Monday, May 15, 2006

ಒಂದು sticking up ಸನ್ನಿವೇಶ

ಇವತ್ತು ಬೆಳಿಗ್ಗೆಯಿಂದ ಬರೀ ಗಡಿಬಿಡಿ, ಈ ಕಡೆ ಬಂದೂ ಸರಿಯಾಗಿ ಬಾರದೇ ಅಲ್ಲಲ್ಲಿ ತೊಂದರೆಕೊಡುವ ಮಳೆ, ಈ ಮಳೆ ಬಿದ್ದ ಕೂಡಲೇ ಪ್ರಪಂಚದಲ್ಲಿರೋ ಸಮಯವೆಲ್ಲ ತಮ್ಮದು ಎನ್ನುವಂತೆ ನಿಧಾನವಾಗಿ ರಸ್ತೆಯಲ್ಲಿ ಸಾಗೋ ಫೆಲೋ ಡ್ರೈವರುಗಳು, ಹೋದಲ್ಲಿ ಬಂದಲ್ಲೆಲ್ಲಾ ನಿರೀಕ್ಷೆಗಿಂತ ಮೀರಿ ಹಿಡಿಯೋ ಸಮಯ ಈ ಎಲ್ಲವೂ ಸೇರಿ ನನ್ನ ವ್ಯಸ್ತ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದವು. ಹೇಳೀ-ಕೇಳಿ ಸೋಮವಾರ ಬೇರೆ, 'ಮೊದಲೇ ಗೊಲ್ಲಿ, ಈಗಂತೂ ಹಡದಾಳೇ' ಅನ್ನೋ ಹಾಗೆ ಮನಸ್ಸಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿರುವಾಗ ಈ ದಿನ ಯಾರೊಡನೆಯಾದರೂ ಜಗಳವಾಡುತ್ತೇನೆ ಅಥವಾ ಯಾರಿಂದಲಾದರೂ ಸಮಾ ಉಗಿಸಿಕೊಳ್ಳುತ್ತೇನೆ ಎಂದು ಕೊಂಡಿದ್ದೆ, ಆದರೆ ಆಫೀಸಿನ ಕೆಲಸ ಮುಗಿದರೂ ಹಾಗೇನೂ ಆಗಲಿಲ್ಲ. ಒಳಗಿದ್ದ ಬಿಸಿಯನ್ನು ಹೊರಕ್ಕೆ ಕಳಿಸಲಾರದೇ ಒಳಗೇ ಇಟ್ಟುಕೊಂಡಿರುವ ಪರಿಣಾಮವೋ ಎಂಬಂತೆ ಸುಮಾರು ನಾಲ್ಕೂವರೆ ಹೊತ್ತಿಗೆ ಸರಿಯಾಗಿ ತಲೆನೋವು ಬೇರೆ ಶುರುವಾಯಿತು, ಅದರ ಹಿಂದೆ ಹೇಳಿ ಮಾಡಿಸಿದಂತೆ ಒಂದೆರಡು ಸೀನುಗಳೂ, ಹಾಗೂ ಅಲ್ಲಲ್ಲಿ ಮೂಗು ಸುರಿಯುವುದೂ ಶುರುವಾಯಿತು. ಅಯ್ಯೋ ಇನ್ನೇನು ನನಗೂ ಫ್ಲೂ ತಾಗಿಕೊಂಡಿತು ಎಂದು ಆಫೀಸಿನಲ್ಲಿ ಕೈ ಸರಿಯಾಗಿ ತೊಳೆಯದೇ ಅಲ್ಲಲ್ಲಿ ಮುಟ್ಟಿದ್ದಕ್ಕೆ ನನ್ನನ್ನೇ ಹುಡುಕಿಕೊಂಡು ಬಂದ ಫ್ಲೂ ವೈರಸ್ಸುಗಳು ಎಲ್ಲೆಲ್ಲೂ ಕಾಣತೊಡಗಿದಂತೆ ಒಮ್ಮೆ ಅನ್ನಿಸಿತು. ಆದರೆ, ನನ್ನ ಪುಣ್ಯಕ್ಕೆ ತಲೆನೋವು ಒಂದು ಬಿಟ್ಟು ಮಿಕ್ಕೆಲ್ಲ ಹೋಗಿ ದೊಡ್ಡ ಸಮಾಧಾನವಾದರೂ ಈ ಹಾಳು ತಲೆನೋವೊಂದು ಮಾತ್ರ ಇವತ್ತು ನಿನ್ನನ್ನು ಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತುಬಿಟ್ಟಿತ್ತು.

***

ಆರು ಘಂಟೆಯ ಹೊತ್ತಿಗೆ ಮನೆಗೆ ಬಂದವನೇ ಈ ಹಾಳು ನೋವಿಗೆ ಕಾಫೀನಾದರೂ ಸಹಾಯವಾಗಲಿ ಎಂದುಕೊಂಡು ಒಂದು ಬಿಸಿಬಿಸಿ ಟೇಸ್ಟರ್‍ಸ್ ಚಾಯ್ಸ್ ಮಾಡಿಕುಡಿದೆ, ಡಾರ್ಕ್ ರೋಸ್ಟ್ ನಿಧಾನವಾಗಿ ಸುಡುತ್ತಲೇ ಗಂಟಲಲ್ಲಿ ಇಳಿಯಿತೇ ವಿನಾ ತಲೆನೋವಿನ ಜೊತೆ ಸಂಧಿಯನ್ನು ಮಾಡಿಕೊಂಡಂತೆ ಕಂಡುಬಂದು ಅದರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಸಂಜೆ ಶಾಪ್ಪಿಂಗ್‌ಗೆ ಹೋಗೋಣವೆಂದು ಮೊದಲೇ ನನ್ನ ಹೆಂಡತಿಯೊಂದಿಗೆ ಮಾತನಾಡಿಕೊಂಡಿದ್ದರಿಂದ ಬಟ್ಟೆಯನ್ನೂ ಬದಲಿಸದೇ ಆಕೆಯ ಬರವನ್ನು ಕಾಯುತ್ತಾ ಕಂಪ್ಯೂಟರಿನಲ್ಲಿ ಏನೇನನ್ನೋ ಓದುತ್ತಾ ಕುಳಿತೆ - ಥೂ ಅವೇ ಹಳಸಲು ಸುದ್ಧಿಗಳು ಎಂದು ನಾನೋದುವ ಕನ್ನಡಪ್ರಭ, ಪ್ರಜಾವಾಣಿಗಳಿಗೆಲ್ಲ ಒಂದು ಹಿಡಿ ಶಾಪ ಹಾಕಿದೆ, ಮಧ್ಯೆ ಅಲ್ಲಲ್ಲಿ ಜೋರಾಗಿ ಬಂದು, ಆಗಾಗ ನಿಂತು ಹೋಗುವ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಕ್ಕಳಂತೆ ಕಂಡುಬಂತು, ಅದರಿಂದ ಡಿಸ್ಟರ್ಬ್ ಆದ್ದರಿಂದ ಅದಕ್ಕೂ ಒಂದು ಹಿಡಿ ಶಾಪ ಹಾಕಿದೆ.

ನನಗೇನಾದರೂ ಸಣ್ಣ ಖಾಯಿಲೆ ಬಂದರೆ ನಾನು 'ಊರೆಲ್ಲ ಒಂದು ಮಾಡುತ್ತೇನೆ' ಎನ್ನುವುದು ನನ್ನನ್ನು ಹತ್ತಿರದಿಂದ ಬಲ್ಲವರ ಅಂಬೋಣ - ಹೌದು, ಅದನ್ನು ನಾನು ಸಾಧಿಸಿಕೊಳ್ಳುತ್ತೇನೆ, ಏಕೆಂದರೆ ಐದು ವರ್ಷಗಳಿಗೆ ಒಮ್ಮೆಯೂ ನನಗೆ ಜ್ವರ ಬರುವುದಿಲ್ಲ, ಹಾಗಿದ್ದ ಮೇಲೆ ಒಮ್ಮೆಗೇ ಧಿಡೀರ್ ಎಂದು ಬಂದರೆ ನನಗೆ ಹಿಂದಿನ ಅನುಭವ ಯಾವುದೂ ನೆನಪಿನಲ್ಲಿ ಅಷ್ಟು ಸರಿಯಾಗಿ ಇಲ್ಲದಿರುವುದರಿಂದ ಅದೇ ಒಂದು ದೊಡ್ಡ ಎಪಿಸೋಡ್ ಆಗಿ ಕಾಣಿಸುತ್ತದೆ. ಮೊದಲೇ ಸೂಕ್ಷ್ಮ ಮನಸ್ಸಿನ ನನಗೆ ಪ್ರಪಂಚವೆಲ್ಲಾ ನನ್ನ ಸುತ್ತಲೇ ತಿರುಗೋದು ಎಂಬ ಬಲವಾದ ಹುಂಬ ನಂಬಿಕೆ ಇರೋದರಿಂದ 'ನನ್ನನ್ನು ನೋಡಿಕೊಳ್ಳೋರು ಯಾರೂ ಇಲ್ಲ' ಎಂದು ಸುತ್ತಲಿದ್ದವರನ್ನು ರೇಗಿದರೆ ನನ್ನದೇನೂ ತಪ್ಪಿಲ್ಲ, ಅಲ್ಲವೇ?

ಸರಿ ಆ ತಲೆನೋವಿನಲ್ಲೇ, ಮಾತು ಕೊಟ್ಟಂತೆ ಶಾಪ್ಪಿಂಗ್‌ಗೆ ಹೊರಟೆ - ಕಲ್ವರ್ ರಸ್ತೆಯ ಬಳಿ ಸಿಗ್ನಲ್‌ಗೆ ಕಾಯುತ್ತಿದ್ದಾಗ ಎಡಬದಿ ಹೊರಳಿ ನೋಡಿದೆ, ನಮ್ಮೂರಿನ ಮುನಿಸಿಪಾಲಿಟಿ ಆಫೀಸಿನ ಹಿಂದೆ ಸೂರ್ಯ ಮುಕ್ಕಾಲು ಮುಳುಗಿ, ಮಕ್ಕಳ ಬಾಯಲ್ಲಿ ಕರಗೋ ದುಂಡನೆ ಕಿತ್ತಳೆ ಚಾಕಲೇಟಿನಂತೆ ಕಂಡು ಬರುತ್ತಿದ್ದ, ಸೂರ್ಯ ಹೋದ ದಿಕ್ಕಿನಲ್ಲಿ ಚಾಕಲೇಟಿನಿಂದ ಕೆಂಪಾದ ಬಾಯಿ ಹಾಗೂ ನಾಲಿಗೆಯ ತರಹ ಮೋಡಗಳು ಚೆಲ್ಲಿಕೊಂಡಿದ್ದವು. ಕಾರಿನಲ್ಲಿ ಗಡಿಯಾರವನ್ನು ನೋಡಿದರೆ ಸರಿ ಎಂಟು ಘಂಟೆಯನ್ನು ತೋರಿಸುತ್ತಿತ್ತು - ಯಾವುದಾದರೂ ಒಳ್ಳೆಯ ಸಂಗೀತ ಬರುತ್ತೇನೋ ಎಂದು ೯೬.೩ ಸ್ಟೇಷನ್ ಹಾಕಿ ನೋಡಿದೆ, ದಿನವೂ ಇಂಪಾಗಿ ಕೇಳಿಸೋ ಪಿಟೀಲು, ಹಾರ್ಮೋನಿಯಮ್ ಧ್ವನಿ ಈ ದಿನ 'ಕುಯ್ಯೋ-ಕುಯ್ಯೋ' ರಾಗವಾಗಿ ಕೇಳಿ ಬಂತು.

***

ಇಲ್ಲಿನ ಹೋಲ್‌ಸೇಲ್ ಅಂಗಡಿಯೊಂದರಲ್ಲಿ ನಮಗೆ ಬೇಕಾದ ಸಾಮಾನುಗಳನ್ನು ತುಂಬಿಸಿಕೊಂಡು ನಾನೂ ನನ್ನ ಹೆಂಡತಿ ಸಾಲಿನಲ್ಲಿ ಚೆಕ್‌ಔಟ್ ಮಾಡಲೆಂದು ಮುಂದಿದ್ದ ಓರಿಯಂಟಲ್ ಕಪಲ್ ಹಿಂದೆ ನಿಂತೆವು, ನಾನೇ ಕೈಯಲ್ಲಿ ಶಾಪ್ಪಿಂಗ್ ಕಾರ್ಟ್ ಅನ್ನು ಹಿಡಿದುಕೊಂಡು ನಿಂತಿದ್ದೆ. ಅದೇ ಸಮಯಕ್ಕೆ ಒಬ್ಬಳು ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಆಫ್ರಿಕನ್ ಅಮೇರಿಕನ್ ಹುಡುಗಿಯೊಬ್ಬಳು ನಾನು ಹಾಗೂ ನನ್ನ ಮುಂದಿರುವವರ ನಡುವೆ ತನ್ನ ಗಾಡಿಯನ್ನು ತೂರಿಸಿದಳು. ಒಂದು ಕಡೆ ತಲೆ ಬೇರೆ ಸಿಡಿಯುತ್ತಲೇ ಇತ್ತು, ಅಂಥದ್ದರಲ್ಲಿಯೂ ಸಮಾಧಾನವಾಗಿ 'ನೋಡು, ನಾನು ನಿನಗಿಂತ ಮುಂಚೆ ಲೈನಿನಲ್ಲಿ ಇದ್ದವನು' ಎಂದೆ. ಆದರೆ ಆಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ - ಅದಕ್ಕೆ ಬದಲಾಗಿ ತನ್ನ ಕಾರ್ಟನ್ನು ಇನ್ನೂ ಮುಂದೆ-ಮುಂದೆ ತಳ್ಳುವ ಹಾಗೆ ಕಂಡು ಬಂದಳು. ನಿಜ ಹೇಳಬೇಕೆಂದರೆ, ಸಾಮಾನ್ಯವಾಗಿ, ಇಂಥ ಸಂದರ್ಭಗಳಲ್ಲಿ ನನ್ನ ಹೆಂಡತಿಗೆ ನನಗಿಂತಲೂ ಹೆಚ್ಚು ಸಿಟ್ಟು ಬರುತ್ತದೆ, ನಾನು ಅವಳನ್ನು ಸಮಾಧಾನಪಡಿಸುತ್ತಿರುತ್ತೇನೆ, ಆದರೆ ಇಂದು ನನ್ನ ಕಣ್ಣಮುಂದೇ ಹೀಗಾಗಿದ್ದಕ್ಕೆ ಅವಳಿಗಿಂತಲೂ ನನಗೇ ಹೆಚ್ಚು ಸಿಟ್ಟು ಬಂದಿತ್ತು, ನನ್ನ ಮಾತಿಗೆ ಉತ್ತರ ಕೊಡದೇ ತನ್ನನ್ನು ಹೀಗೆ ನೂಕಿಕೊಂಡು ಕಾಲುಕೆರೆದು ಜಗಳವಾಡುವವಳನ್ನು ಏನೆಂದು ಹೇಳಲಿ, ನನ್ನ ಹೆಂಡತಿಗೆ ನಮ್ಮ ಸಾಮಾನುಗಳನ್ನು ತೆಗೆದು ಕೌಂಟರಿನ ಮೇಲೆ ಇಡಲು ಹೇಳಿದೆ, ಅವಳು ಒಂದೊಂದಾಗೆ ಸಾಮಾನನ್ನು ಇಡುತ್ತಾ ಬಂದಳು. ಈ ಮಧ್ಯೆ ಆ ಕಪ್ಪು ಹುಡುಗಿಯ ಕಡೆಯವರು ಮೂರು ಜನರಾದರು, ನಾನು ಬಹಳ ದಿನಗಳ ನಂತರ ಜಗಳವಾಡಲು ಅವಕಾಶವೊಂದು ಸಿಕ್ಕಿತೆಂದು ಯೋಚಿಸಿ ಹೇಗೆ ಶುರುಮಾಡಲಿ ಎಂದು ಮೇಲೆ ನೋಡತೊಡಗಿದೆ.

ಇನ್ನೇನು ನಾವು ಸಾಮಾನುಗಳನ್ನು ಕೌಂಟರಿನ ಹಿಂದಿರುವವಳಿಗೆ ತೋರಿಸಿ ತೆಗೆದುಕೊಳ್ಳಬೇಕು ಅಷ್ಟರಲ್ಲಿ, ನನ್ನ ಮುಂದೆಯೇ ಸಾಲಿನಲ್ಲಿ ನುಗ್ಗಿದ ರೀತಿಯಲ್ಲೇ ಆ ಹುಡುಗಿ ತನ್ನ ಸಾಮಾನುಗಳನ್ನು ತನ್ನ ಕಾರ್ಟಿನಿಂದ ತೆಗೆದು ನನ್ನ ಸಾಮಾನುಗಳ ಮುಂದೆ ಇಟ್ಟಿದ್ದೂ ಅಲ್ಲದೇ 'ನಾನು ನಿನಗಿಂತ ಸಾಲಿನಲ್ಲಿ ಮೊದಲಿದ್ದೆ' ಎನ್ನುವಂತೆ ಗಟ್ಟಿಯಾಗಿ ಕೂಗಿಕೊಳ್ಳತೊಡಗಿದಳು, ಅವಳ ಜೊತೆಯಲ್ಲಿದ್ದ ಒಬ್ಬಳು ಹಿರಿಯ ಹೆಂಗಸು ನನ್ನನ್ನುದ್ದೇಶಿಸಿ 'she says, she was before you in the line.' ಎಂದಳು. ನಾನು 'That is not true' ಎಂದು ಆಕೆಯ ಉತ್ತರಕ್ಕೂ ಕಾಯದೇ ಕೌಂಟರಿನಲ್ಲಿ ಕೆಲಸ ಮಾಡುತ್ತಿದ್ದಾಕೆಗೆ ನಾನು ಸಾಲಿನಲ್ಲಿ ಮೊದಲಿದ್ದೇನಂತಲೂ, ನನ್ನ ಸಾಮಾನುಗಳನ್ನು ಮೊದಲು ತೆಗೆದುಕೊಳ್ಳುವಂತೆಯೂ ಹೇಳಿದೆ, ಆಕೆ ತನ್ನ ಅಸಹಾಯಕತೆಯನ್ನು ಹೇಳಿಕೊಂಡಳು - ನಾವಿಬ್ಬರೂ ಸ್ಟೋರ್ ಮ್ಯಾನೇಜರನ್ನು ಕರೆಯುವಂತೆ ತಾಕೀತು ಮಾಡಿದೆವು. ನಾವು ಒಬ್ಬರನ್ನು ಕರೆದರೆ ಇಬ್ಬರು ಮ್ಯಾನೇಜರರು ಬಂದರು - ಅವರಲ್ಲಿ ಒಬ್ಬ ಬಿಳಿಯ ಮತ್ತೊಬ್ಬ ಭಾರತೀಯ. ಈ ಕಪ್ಪು ಜನರು ಯಾರ ಮಾತನ್ನೂ ಕೇಳುವವರ ಹಾಗಿರಲಿಲ್ಲವೆಂದು ಅವರಿಗೂ ಚೆನ್ನಾಗಿ ಗೊತ್ತಿತ್ತೆಂದು ಕಾಣುತ್ತದೆ ಅವರು ನಮಗೇ ತಿಳಿಸಿ ಹೇಳಲು ನೋಡಿದರು - 'ನೋಡಿ ನೀವು ಹೀಗೆ ಮಾಡಿದರೆ ನಿಮಗೂ, ಮತ್ತೆಲ್ಲರಿಗೂ ತಡವಾಗುತ್ತದೆ' ಎಂದು ಕೌಂಟರಿನ ಕ್ಲರ್ಕ್‌ನ್ನು 'ನೀನು, ಯಾರು ಮೊದಲು ಸಾಲಿನಲ್ಲಿದ್ದದ್ದೆಂದು ನೋಡಿದ್ದೀಯೇನು?' ಎಂದು ಕೇಳಿದರು, ಅವಳು 'ನನಗೆ ಗೊತ್ತಿಲ್ಲ' ಎಂದು ಕೈ ಚೆಲ್ಲಿದಳು. ನಾನು ನನ್ನ ಮುಂದಿದ್ದ ಓರಿಯೆಂಟಲ್ ದಂಪತಿಗಳ ಕಡೆಗೆ ನೋಡಿದೆ, ಅವರು ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಮುಖ ತಿರುಗಿಸಿಕೊಂಡರು. ಉದ್ದವಾಗಿ ಬೆಳೆಯುತ್ತಿದ್ದ ಸಾಲಿನಲ್ಲಿ ಜನಗಳಿಗೆ ಪುಕ್ಕಟೆ ಮನರಂಜನೆಯೂ ಹಾಗೂ ಅವರಲ್ಲಿ ತರಾತುರಿಯಿಂದಿದ್ದವರ ಅಸಹನೆಯೂ ಗೋಚರವಾಗತೊಡಗಿತು. ನನ್ನ ಹೆಂಡತಿ ಇದು ಬಗೆ ಹರಿಯುವವರೆಗೂ ನಾವಿಲ್ಲಿಂದ ಕದಲುವುದು ಬೇಡವೆಂದು ನನಗೆ ಕನ್ನಡದಲ್ಲಿ ಹೇಳಿದಳು, ಇದಕ್ಕೆಲ್ಲ ತಾನೇ ಉತ್ತರ ಕಂಡುಹಿಡಿದುಕೊಂಡವಳಂತೆ ಕೌಂಟರಿನ ಕ್ಲರ್ಕ್ ನಮ್ಮ ಮುಂದೆ ಅಸಭ್ಯವಾಗಿ ನಡೆದುಕೊಂಡು, ಅವರ ಸಾಮಾನುಗಳನ್ನು ನಮ್ಮ ಮುಂದೆ ಬಲವಂತವಾಗಿ ತಳ್ಳಿದವರ ಕಡೆಗೆ ಅವರ ಸಾಮಾನುಗಳನ್ನು ಸ್ಕ್ಯಾನು ಮಾಡುವುದರ ಮೂಲಕ ನ್ಯಾಯ ಘೋಷಿಸಿಬಿಟ್ಟಳು. ನನಗೆ ಅದೆಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ ಆ ಕರಿಯರ ಕಡೆಗೆ ತಿರುಗಿ ಸಾಧ್ಯವಾದಷ್ಟು ದೊಡ್ಡ ಧ್ವನಿಯಲ್ಲಿ'You will never learn' ಎಂದೆ, ಹಾಗೂ ಬಂದಿದ್ದ ಆ ಮ್ಯಾನೇಜರುಗಳ ಕಡೆಗೆ ತಿರುಗಿ 'Look, I don't mind the delay, it is a matter of principle, someday someone will have to bring it home to them' ಎಂದು ದೊಡ್ಡದಾಗಿ ಶ್ವಾಸವನ್ನು ಬಿಟ್ಟೆ. ಗಾಯದ ಮೇಲೆ ಉಪ್ಪು ಸುರಿಯೋರ ಹಾಗೆ ನಮ್ಮ ನಡುವೆ ನುಗ್ಗಿ ನಮಗಿಂತ ಮೊದಲು ಸಾಮಾನುಗಳನ್ನು ತೆಗೆದುಕೊಂಡ ಹುಡುಗಿ 'ನಿನ್ನನ್ನು ಸೋಲಿಸಿಬಿಟ್ಟೆ ನೋಡು!' ಎಂಬ ಭಾವದಲ್ಲಿ ಪಕಪಕನೆ ನಕ್ಕು ಬಿಟ್ಟಳು - ನಾನು ಭಾರತದಲ್ಲಿ ಬಿಡೋ ಹಾಗೆ ನನ್ನ ಕೆಂಪು ಕಣ್ಣುಗಳನ್ನು ಸಾಧ್ಯವಾದಷ್ಟು ದೊಡ್ಡದು ಮಾಡಿ ಅವಳೆಡೆಗೆ ದುರುಗುಟ್ಟಿದೆ, ಅವಳು ಸುಮ್ಮನಾದದ್ದು ಮತ್ತೇನೂ ಅನಾಹುತವಾಗದ ಹಾಗೆ ನನ್ನನ್ನು ಕಾಪಾಡಿತು.

***

ಒಂಭತ್ತು ಘಂಟೆಯಾಯಿತೆಂದು ನಾವಿಬ್ಬರೂ ಲಗುಬಗೆಯಿಂದ ಮನೆಯ ಕಡೆಗೆ ಹೊರಟೆವು - ಆ ಕಪ್ಪು ಜನರ ಹಿಂಡು ಅದೇ ಅಂಗಡಿಯಲ್ಲಿರುವ ಫಾಸ್ಟ್‌ಫುಡ್ ವಿಭಾಗಕ್ಕೆ ತೆರಳಿ ಅಲ್ಲೇ ಕುಳಿತುಕೊಳ್ಳುವ ಹುನ್ನಾರ ನಡೆಸುವುದು ಕಂಡುಬಂದಿತು. ಹಠಮಾರಿತನದಲ್ಲಿ ಸಾಮಾನುಗಳನ್ನು ಅಲ್ಲೇ ಬಿಟ್ಟುಬರಬಹುದಿತ್ತು, ಅಥವಾ ಕ್ಯಾಮೆರಾ ರೀವೈಂಡ್ ಮಾಡಿ ನೋಡಿ ಎಂದು ಮ್ಯಾನೇಜರುಗಳಿಗೆ ಹೇಳಬಹುದಿತ್ತು, ತನ್ನ ವಂಶಸ್ಥರಿಗೆ ನ್ಯಾಯ ನೀಡಿದ ಆ ಕೌಂಟರ್ ಕ್ಲರ್ಕ್‌ನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ನಾವಿಬ್ಬರೂ ಗಟ್ಟಿ ಧ್ವನಿಯಲ್ಲಿ ಮಾತನಾಡಿ ನಮ್ಮ ನಿಲುವನ್ನು stick up ಮಾಡಿದ್ದೇ ಒಳ್ಳೆಯದಾಯಿತು, ಅದರಿಂದ ಇನ್ನೇನಾಗದಿದ್ದರೂ ಮುಂದೆ ಆ ಹುಡುಗಿ ಭಾರತೀಯರು ನರಸತ್ತವರು ಎಂದುಕೊಳ್ಳುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸುವುದಂತೂ ಗ್ಯಾರಂಟಿ.

ಆದರೆ, ಈ ಕಪ್ಪು ಜನರ ಬಾಯಿಂದ ಕೈಯಿಂದ ಯಾವಾಗ ಏನೇನು ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ, ಅವರು ನಮ್ಮನ್ನು ಹಿಂಬಾಲಿಸಿಕೊಂಡು ಪಾರ್ಕಿಂಗ್ ಲಾಟಿನವರೆಗೂ ಬಂದಿದ್ದರೆ ಎನ್ನುವ ಹೆದರಿಕೆ ನನ್ನಲ್ಲಿತ್ತು.

***

ಒಂದು ನೋವು ಅಥವಾ ಸಂಕಟ ಸಡನ್ ಆಗಿ ಮಾಯವಾಗಬೇಕೆಂದರೆ ಅದಕ್ಕಿಂತ ಬಲವಾದ ಮತ್ತೊಂದು ನೋವು ಅಥವಾ ಸಂಕಟವಾಗಬೇಕಂತೆ - ಈ ಗೊಂದಲದಲ್ಲಿ ನನ್ನ ತಲೆನೋವು ಯಾವಾಗಲೋ ಹಾರಿಹೋಗಿತ್ತು!

6 comments:

Shrilatha Puthi said...

well, no comments abt the incident, but liked the proverb 'modalE golli, EganthU haDedALe', had never heard it before...

n loved the upame at describing setting sun (of comparing it to the orange candy in kids' mouth), too good!!

Sarathy said...

ಅಮೆರಿಕದಲ್ಲಿ ಅಸಭ್ಯಾಚಾರಿಗಳ ಪರಿಚಯ ಕಣ್ಣಿಗೆ ಕಟ್ಟುವಂತೆ ಮಾಡಿದ್ದೀರಿ. ಅಮೆರಿಕದಲ್ಲಿನ ನಿಮ್ಮ ಯಾವುದೇ ಚಿಕ್ಕಪುಟ್ಟ ಅನುಭವಗಳನ್ನೂ ಬಿಡದೇ ಬರೆಯಿರಿ. ನಮ್ಮಂಥ ಅಂತರ ದೇಸೀ ಕುತೂಹಲಿಗಳಿಗೆ ಆಹಾರವಾಗುತ್ತದೆ.

ರಾಜೇಶ said...

ಓದಿ ಮನಸ್ಸು ಭಾರವಾಯಿತು.

ನಮ್ಮ ಡಾ||ಬಿ.ಜಿ.ಎಲ್.ಸ್ವಾಮಿ ಯವರ ಬರವಣಿಗೆ ನೆನಪಾಯಿತು.

ಅಂತೂ ನೀವು ಹೇಳಿದ ಹಾಗೆ 'ವ್ಯಸ್ತ' ಅನ್ನೊ ಪದವನ್ನ ಉಪಯೋಗಿಸೊಕೆ ಪ್ರಾರಂಭಿಸಿ ಬಿಟ್ರಿ.

nIlagrIva said...

ಕಪ್ಪು ಜನರು ಒಮ್ಮೊಮ್ಮೆ ಅಪಾಯ ಮಾಡಲು ಸಾಧ್ಯ. ಒಮ್ಮೆ ನನ್ನನ್ನು ಅಂಗಡಿಯ ಬಳಿಯೊಬ್ಬ ಕಪ್ಪು ದಾಂಡಿಗ - "ಇಂದು ತಾನೆ ಜೈಲಿನಿಂದ ಬಿಡುಗಡೆಯಾಗಿದೆ. ಒಂದೆರಡು ಡಾಲರ್ ಚಿಲ್ಲರೆ ಇದ್ರೆ ಕೊಡ್ತೀರಾ" ಅಂತ ಕೇಳಿದ. ಅವನ ಆಕಾರ ನೋಡಿ ಭಯವಾಗಿ ಒಂದೋ ಎರಡೋ ಡಾಲರ್ ಬಿಲ್ ತೆಗೆದುಕೊಟ್ಟ ನೆನಪು. ಆದರೆ ನನಗೆ ತಿಳಿದ ಒಳ್ಳೆಯ ಕಪ್ಪುಜನಾಂಗದವರೂ ಇದ್ದರು. racial stereotyping (ಟಿ.ವಿ.ಯಲ್ಲಿ, ಸಿನಿಮಾಗಳಲ್ಲಿ ಅದನ್ನೇ ಅಲ್ಲವೇ ಮಾಡುವುದು?) ಮಾಡುವ ಚಪಲ ಮನಸ್ಸಿಗಿದ್ದರೂ ನಾವು ತಡೆಯಬೇಕಲ್ಲವೇ?

ಸಣ್ಣ ತೊಂದರೆ/ನೋವು ನಿವಾರಣೆಯಾಗಬೇಕಾದರೆ ದೊಡ್ಡದೊಂದು ಬರಬೇಕು ಅಂತ ಚೆನ್ನಾಗಿ ಹೇಳಿದ್ದೀರಿ. ಆದ್ದರಿಂದ "ಈ ತೊಂದರೆ ನಿವಾರಣೆ ಮಾಡು,ದೇವರೇ" ಎಂದು ಪ್ರಾರ್ಥಿಸಿದಾಗ ದೊಡ್ಡ ತೂಂದರೆ ಬಂದೀತು ಎಂಬ ಎಚ್ಚರವಿರಲಿ! Be careful of what you wish for!

Anonymous said...

ಕಪ್ಪು ಜನರು ಒಮ್ಮೊಮ್ಮೆ ಅಪಾಯ ಮಾಡಲು ಸಾ�

Anonymous said...

Hallo I absolutely adore your site. You have beautiful graphics I have ever seen.
»