Sunday, June 25, 2006

ಚಾಮುಂಡೇಶ್ವರಿನೇ ಇರ್ಲಿ ಅನ್ನೋನು ನಾನು

ದಸರಾ ಮೆರವಣಿಗೆಯನ್ನು ಎಲ್ಲಾ ಧರ್ಮದವರೂ ವೀಕ್ಷಿಸೋದರಿಂದ ಚಾಮುಂಡೇಶ್ವರಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಬಾರದು, ದಸರಾ ಮೆರವಣಿಗೆಯ ಪರಂಪರೆಯಲ್ಲಿಲ್ಲದ ಈ ವಿಧಿ ಪರಂಪರೆ ಹಾಗೂ ಸಂವಿಧಾನಕ್ಕೆರಡೂ ವಿರುದ್ಧವಾಗಿದೆ ಎಂದು ಅಲ್ಲಲ್ಲಿ ವರದಿಯಾಗಿರೋದನ್ನ ಓದಿದ ಮೇಲೆ ನನಗನ್ನಿಸಿದ್ದು ಇಷ್ಟು - ಎಲ್ಲರೂ ಅವರವರ ಅಭಿಪ್ರಾಯಕ್ಕೆ ಬಾಧ್ಯರು ಹಾಗೇ ನನ್ನದೂ ಒಂದು.

ನಮ್ಮೂರಲ್ಲಿ ಇವತ್ತಿಗೂ ಬನ್ನಿ ಮರದಲ್ಲಿ ಆಯುಧಗಳ ಬದಲಿಗೆ ತೆಂಗಿನ ಕಾಯಿಗಳನ್ನು ಕಟ್ಟಿ ಅದನ್ನು ಬಂದೂಕಿನಿಂದ ಹೊಡೆದುರುಳಿಸೋದೂ, ನಂತರ ಬನ್ನಿಯನ್ನು ಬಂಗಾರದಂತೆ ಹಂಚಿಕೊಳ್ಳೋದೂ ಇದೆ. ಇದು ಬರೀ ಪರಂಪರೆಯ ವಿಷಯ ಮಾತ್ರವೇ ಅಥವಾ ಇದಕ್ಕೆ ಇನ್ನೇನಾದರೂ ಅರ್ಥವಿದೆಯೇ ಎಂದು ಯೋಚಿಸಿದಾಗ ಗ್ರಾಮದ ಮಟ್ಟದಲ್ಲಿ ಇಡೀ ಗ್ರಾಮವನ್ನು ಒಂದಾಗಿ ಮಾಡುವಂತ ಶಕ್ತಿ ಇಂತಹ ಆಚರಣೆಗೆ ಇದೆ. ಅಲ್ಲದೇ ನಮ್ಮೂರಲ್ಲಿ ಯಾರಿಗೆ ಬನ್ನಿ ಕೊಟ್ರೂ ಅವರು ತಮ್ಮ ಶಕ್ತ್ಯಾನುಸಾರ ಒಂದಿಷ್ಟು ಚಿಲ್ಲರೆಯನ್ನು ಮಕ್ಕಳಿಗೆ ಕೊಡ್ತಾರೆ, ಇಲ್ಲಾ ಅಂದ್ರೆ ಒಂದೆರಡು ಒಳ್ಳೇ ಮಾತನ್ನಾದ್ರೂ ಆಡ್ತಾರೆ. ವಿಜಯದಶಮಿ ಆದ ಇಪ್ಪತ್ತು ದಿನಕ್ಕೆ ಬೂರೇ ಹಬ್ಬದ ಆಚರಣೆಯೊಂದಿಗೆ ಶುರುವಾಗಿ ದೀಪಾವಳಿ ಅಮಾವಾಸ್ಯೆಯ ದಿನ ಮುಗಿಯೋದು ದಸರಾ ಹಬ್ಬ ಮತ್ತು ದಸರಾ ರಜೆ. ಆಗೆಲ್ಲ ಇಂತಹವುಗಳನ್ನು ಆಚರಿಸೋದರಲ್ಲಿ ಬಹಳಷ್ಟು ಉತ್ಸಾಹವಿತ್ತು, ನನ್ನ ಪ್ರಕಾರ ನಮ್ಮ ಊರುಗಳಲ್ಲಿ ಇವತ್ತಿಗೂ ಹಾಗೇ ಇದೆ.

ನಮ್ಮ ನಾಡಿನ ವಿಮರ್ಶಕರಿಗೂ, ದೊಡ್ಡ-ದೊಡ್ಡ ಮೇಷ್ಟ್ರುಗಳಿಗೂ ಏನಾಗಿದೆಯೋ ಯಾರಿಗೆ ಗೊತ್ತು? ದಸರಾ ಉತ್ಸವವನ್ನು 'ಸಾಮ್ರಾಜ್ಯಶಾಹಿ ಆಚರಣೆಯ ಪಳಿಯುಳಿಕೆ' ಎಂದು ಕರೀತಾರಲ್ಲ ಅಂತ ಖೇದವಾಗ್ತಿದೆ. ನಾನು ಉದ್ದೇಶಪೂರ್ವಕವಾಗೇ ಇಲ್ಲಿ ಯಾರ ಹೆಸರುಗಳನ್ನೂ ಬರೀತಿಲ್ಲ - ಏಕೆಂದ್ರೆ, ಮೊದಲನೇದಾಗಿ ಅವರ ಹೆಸರುಗಳನ್ನು ಇಲ್ಲಿ ಬರೆಯೋದರಿಂದ ನನಗಂತೂ ಯಾವ ಪ್ರಯೋಜನವೂ ಇಲ್ಲ (ಅವರ ಶಿಷ್ಯರುಗಳು ನನ್ನ ಬೆನ್ನ ಹಿಂದೆ ಬೀಳದಿದ್ರೆ ಸಾಕು ಅನ್ನೋ ಅರ್ಥದಲ್ಲಿ), ಅಲ್ಲದೇ ಈ ದೊಡ್ಡ ಮನುಷ್ಯರು ಅವರ ಹೇಳಿಕೆಗಳನ್ನೆಲ್ಲ ಈಗಾಗ್ಲೇ ಸಾರ್ವಜನಿಕವಾಗಿ ಹೇಳಿದೋರಿಂದ ಆಗೋದು ಆಗಿ ಹೋಗಿದೆ.

ನಮ್ಮ ಯಾವ ಹಬ್ಬಗಳು ಪುರಾಣವನ್ನು ಆಧರಿಸೋದಿಲ್ಲ? ಹಾಗಂತ ಎಲ್ಲ ಹಬ್ಬ-ಹರಿದಿನಗಳನ್ನೂ ಕ್ಯಾಲೆಂಡರಿನಿಂದ ಎತ್ತಿ ಹಾಕಲಾಗುವುದೇ? ನಮ್ಮ ವೈವಿಧ್ಯಮಯ ದೇಶದಲ್ಲಿ ಮೈನಾರಿಟಿಗಳಿಗೂ ಒಂದು ಧ್ವನಿ ಅಂತ ಇದೆ, ಅವರನ್ನು ರೆಪ್ರೆಸೆಂಟ್ ಮಾಡೋದಕ್ಕೆ ಕಾನೂನು ಪ್ರಕಾರ ಒಂದಾದ್ರೂ ಅವರ ಹಬ್ಬವನ್ನ ಸೇರಿಸಲಾಗಿದೆ. ನಮ್ಮೂರಲ್ಲಿ ನಡೆಯೋ ಉರುಸ್ ಕಾರ್ಯಕ್ರಮವಾಗ್ಲೀ, ದಸರಾ-ಬನ್ನಿ ಮೆರವಣಿಗೆನಾಗ್ಲೀ ಬರೀ ಯಾವ್ದೋ ಒಂದು ಧರ್ಮದವರ ಕಾರ್ಯಕ್ರಮ ಅಂತ ಅನ್ನಿಸೋದೇ ಇಲ್ಲ. ಎಷ್ಟೋ ವರ್ಷಗಳಿಂದ ಹೀಗೇನೇ ನಡೀತಾ ಇದೆ. ಅದೂ ಯಾಕೆ, ನಮ್ಮಲ್ಲಿ ಮಳೆ ಸರಿಯಾಗೇನಾದ್ರೂ ಬರದೇ ಹೋದ್ರೆ ಮಾಮೂಲಿ ಸಂತೆ ನಡೆಯೋ ಸ್ಥಳದಿಂದ ಸ್ಥಳಾಂತರ ಮಾಡಿ ದುರ್ಗಮ್ಮನ ಗುಡಿ ಹತ್ರ ಸಂತೆ ನಡೆಸೋದಿಲ್ವೇ - ಎಲ್ಲರಿಗೂ ಒಳಿತಾಗ್ಲೀ ಅನ್ನೋ ಹಿಂದಿಂದ್ಲೂ ಬಂದ ಆಚರಣೆಯೇ ವಿನಾ ದುರ್ಗಮ್ಮನ ಕೇರಿ ಹತ್ರ ಸಂತೆ ನಡೆದ್ರೆ ಬರೀ ಹಿಂದೂಗಳು ಮಾತ್ರ ಹೋಗ್ಬೇಕು ಅಂತೇನೂ ಇಲ್ಲ. ಈ ಆಚರಣೆಗಳಲ್ಲಿ ವಿಧಿಗಳಲ್ಲಿ ತಪ್ಪಿದೆಯೋ ಇಲ್ವೋ ಯಾರಿಗ್ ಗೊತ್ತು? ಕೆಲವೊಂದು ನನ್ನ ತರ್ಕಕ್ಕೂ ಮೀರಿ ಹೋಗತ್ತೆ, ಇವತ್ತಿಗೂ ಸಹ ನಾನು ಬನ್ನಿಯನ್ನು ವಿನಿಮಯ ಮಾಡಿಕೊಂಡ್ರೆ, ಬೇವು-ಬೆಲ್ಲ ತಿಂದ್ರೆ, ನರಕಚತುರ್ದಶಿ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿಕೊಂಡ್ರೆ ಅದನ್ನೆಲ್ಲ ಪ್ರಶ್ನಿಸಿಕೊಳ್ತಾ ಕೂರೋದಿಲ್ಲ - ಹಾಗೆ ನಾನು ಮಾಡೋದನ್ನೆಲ್ಲ ಪ್ರಶ್ನಿಸಿಕೊಳ್ತಾ ಕೂತ್ರೆ ಆ ಪಟ್ಟಿ ಬಹಳ ದೊಡ್ದಾಗುತ್ತೆ, ಅದರಲ್ಲಿ ಬನ್ನಿ ಹಬ್ಬ ಕೊನೆಯಲ್ಲಿ ಬರುತ್ತೆ.

ನನ್ನನ್ನ ಕೇಳಿದ್ರೆ - ಮೊದಲಿದ್ದ ಹಾಗೆ ಚಾಮುಂಡೇಶ್ವರಿಯ ಪ್ರತಿಮೆಯನ್ನು ಈಗ ಇದ್ದ ಹಾಗೆ ಮೆರವಣಿಗೆಯಲ್ಲಿ ತಗೊಂಡ್ ಹೋಗೋದೇ ಒಳ್ಳೇದು. ಎಲ್ಲ ಧರ್ಮದವರೂ ವೀಕ್ಷಿಸುತ್ತಾರೆ ಅನ್ನೋ ಸರ್ವ ಧರ್ಮ ಹಿತವನ್ನು ದಸರೆಯಲ್ಲಿ ಕಾಪಾಡಿಕೊಂಡು ಬರಬೇಕು ಅಂದ್ರೆ, ಮೊದಲು ಚಾಮುಂಡೇಶ್ವರಿ ಪ್ರತಿಮೆ/ಫೋಟೋ ಮರೆಯಾಗಿ ಹೋಗುತ್ತೆ, ಆಮೇಲೆ ಆನೆಗಳು ಹೋಗುತ್ವೆ, ಆಮೇಲೆ ಮೆರವಣಿಗೆಯ ಸಡಗರ ಹೋಗುತ್ತೆ, ಹೀಗೇ ಮರೆಯಾಗಿ ಹೋಗೋದರೆಲ್ಲ ಪಟ್ಟಿ ದೊಡ್ಡದಾಗಿ ಬೆಳೆದೂ ಬೆಳೆದೂ ಕೊನೆಗೆ ಮಹಿಷಾಸುರನ ಹೆಸರಿನ ಮೇಲೆ ಹುಟ್ಟಿರೋ ಮೈಸೂರಿನ ಹೆಸರನ್ನೂ ಬದಲಾಯಿಸಬೇಕಾಗುತ್ತೆ, ನಮ್ಮ ಎಲ್ಲ ಆಚರಣೆಗಳನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತೆ.

ನಮ್ಮಲ್ಲಿ ಕುಡಿಯೋ ನೀರು, ಅಕ್ಷರಾಭ್ಯಾಸ ಮುಂತಾದ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗೇ ಇರೋದ್ರಿಂದ ದೊಡ್ಡ ಮನುಷ್ಯರು ದಯವಿಟ್ಟು ತಮ್ಮ ದೊಡ್ಡ ಮನಸ್ಸನ್ನು ನಿಜವಾದ ರಾಷ್ಟ್ರದ ಏಳೆಗೆಗೆ ಬಳಸ್ಲಿ, ಈ ಸಮಸ್ಯೆಗಳೆಲ್ಲ ನಿವಾರಣೆ ಆದ ಮೇಲೆ ಪುರುಸೊತ್ತು ಇದ್ರೆ ಆಮೇಲೆ ದಸರಾ ವಿಷ್ಯ ಮಾತಾಡೋಣ.

7 comments:

ವಿಶ್ವ said...

ಬಹಳ ಚೆನ್ನಾಗಿ ಬರೆದಿದ್ದೀರಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿಯಲ್ಲಿ ಪ್ರಕಟವಾದ ಒಂದು ಪತ್ರ ಇಲ್ಲಿ ನಮೂದಿಸಿದ್ದೇನೆ.

ಈ ವಿಷಯವನ್ನು ಜಿ.ಎಚ್. ನಾಯಕರು ಅನಗತ್ಯವಾಗಿ ಎತ್ತಿದ್ದಾರೆ ಅಂತಲೇ ನನ್ನ ಅನಿಸಿಕೆ. ಬುದ್ದಿಜೀವಿಗಳ 'ಬುದ್ದಿ' ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುವುದರಲ್ಲಿ ವ್ಯರ್ಥವಾಗುತ್ತಿದೆ. ಇದರ ಜೊತೆಗೆ ಪ್ರಮೊದ್ ಮುತಾಲಿಕ್ ರಂತಹವರು ನಾಲಿಗೆಯ ಮೇಲೆ ಹತೋಟಿ ಕಳೆದುಕೊಂಡವರಂತೆ ಪತ್ರಿಕಾ ಹೇಳಿಕೆ ನೀಡಿರುವುದು ಮತ್ತಷ್ಟು ಶೋಚನೀಯ ಸಂಗತಿ.

ದಸರಾ ಚಾಮುಂಡೇಶ್ವರಿ ಮೆರವಣಿಗೆಯನ್ನು ವಿರೋಧಿಸುವಷ್ಟು ಸಂಕುಚಿತ ಮನೋಭಾವದವರಲ್ಲ ನಮ್ಮ ಮುಸ್ಲಿಂ ಬಾಂಧವರು. ನಮ್ಮ ಎಲ್ಲಾ ದೈನಂದಿನ ವ್ಯವಹಾರಗಳಲ್ಲಿ ಅವರವರ ಆಚರಣೆಗಳು ಹಾಸುಕೊಕ್ಕಾಗಿ ಬೆರೆತುಕೊಂಡಿವೆ. ಅದನ್ನು ವಿವಿಧ ಧರ್ಮದವರು ಪರಸ್ಪರ ಅನುಸರಿಸಿಕೊಂಡು ಹೋಗುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೇ ಹೊರತು, ಆಚರಣೆಗಳನ್ನೇ ನಿಷೇಧಿಸುವುದಲ್ಲ. ನೀವು ಹೇಳಿದಂತೆ, ದಸರಾ, ಕರಗ, ಇತ್ಯಾದಿ ಮೆರವಣಿಗೆಗಳನ್ನು ನಿಲ್ಲಿಸಿಕೊಂಡು ಬಂದರೆ ಕೊನೆಗೆ ಉಳಿಯುವುದೇನು?

ಭಗವಂತಾ... ಕೋಮುವಾದಿ ವಿಷಯಗಳನ್ನು ಹುಟ್ಟಿಹಾಕದಂತೆ ಈ ಬುದ್ದಿಜೀವಿಗಳಿಗೆ 'ಬುದ್ದಿ' ಕೊಡಪ್ಪಾ...

=================
ಹೆಚ್ಚುತ್ತಿರುವ ಮತಾಂಧರು,
ವಾಚಕರವಾಣಿ ಪ್ರಜಾವಾಣಿ ೨೮, ಜೂನ್, ೨೦೦೬
`ದಸರಾ ಮೆರವಣಿಗೆಯ ಸ್ವರೂಪ ಹೇಗಿರಬೇಕು, ಕಳೆದ ಕೆಲವಾರು ವರ್ಷಗಳಿಂದ ನಡೆದು ಬರುತ್ತಿರುವ ಜಂಬೂ ಸವಾರಿ ಮೆರವಣಿಗೆ ತನ್ನ ಪಾರಂಪರಿಕ ಆಕರ್ಷಣೆ ಉಳಿಸಿಕೊಳ್ಳುವುದರ್‍ಲಲಿ ಸಫಲವಾಗಿದೆಯೇ? ಮುಂದಿನ ದಸರೆಯ ಮೆರವಣಿಗೆ ಹೇಗ್ದಿದರೆ ಜನಾಕರ್ಷಣೆ ಆದೀತು?'- ಎಂಬ ಪ್ರಶ್ನೆಯನ್ನು ಇತರ ೧೯ ಮುದ್ರಿತ ಪ್ರಶ್ನೆಗಳ ಜೊತೆಗೆ ಸಭೆಯ್ಲಲಿಯೇ ಕೊಟ್ಟು `ಪ್ರಾಮಾಣಿಕ ಮತ್ತು ಜನಪರ ಸಲಹೆ'ಗಳನ್ನು ನೀಡಬೇಕು ಎಂದು ಜೂನ್ ೧೫ರಂದು ನಡೆದ ಸಭೆಗೆ ಆಹ್ವಾನಿತರಾದ ನಗರದ ಗಣ್ಯರನ್ನು ಮೈಸೂರು ಜ್ಲಿಲಾ ಉಸ್ತುವಾರಿ ಸಚಿವ ಡಿ.ಟಿ. ಜಯಕುಮಾರ್ ಕೇಳ್ದಿದರು.

ಚಾಮುಂಡೇಶ್ವರಿ ಮೂರ್ತಿಯನ್ನು ಮೆರವಣಿಗೆಯ್ಲಲಿ ಒಯ್ಯುವುದು ಪರಂಪರೆಯಿಂದ ಬಂದ್ದದ್ಲಲ. ಮಹಾರಾಜರೇ ಮೆರವಣಿಗೆಯ ಉತ್ಸವ ಮೂರ್ತಿಯಾಗ್ದಿದರು. ಮಹಾರಾಜರ ಸ್ಥಾನದ್ಲಲಿ ಚಾಮುಂಡೇಶ್ವರಿ ಒಯ್ಯುವುದನ್ನು ಸರ್ಕಾರ ಮುಂದಾಲೋಚನೆ ಇಲದೆ ಪ್ರಾರಂಭಿಸಿತು. ಸಂವಿಧಾನ ಪ್ರಕಾರ ಸರ್ಕಾರ ಯಾವುದೇ ಜಾತಿಗೊ, ಧರ್ಮಕ್ಕೊ, ದೈವಕ್ಕೊ ಸೇರ್‍ದಿದ್ಲಲ. ಜಾತ್ಯತೀತ ತತ್ವಕ್ಕೆ ವಿರೋಧವಾದಂಥ ಆಚರಣೆಗಳನ್ನು ಸರ್ಕಾರವೇ ಮಾಡುವುದು ತಪ್ಪಾಗುತ್ತದೆ. ಸಂವಿಧಾನಕ್ಕೂ ಪರಂಪರೆಗೂ ವಿರೋಧವಾಗಿ ಸುಮಾರು ೩೦ ವರ್ಷಗಳಿಂದ ಚಾಲ್ತಿಯ್ಲಲಿ ಇರುವ ಈ ಪದ್ಧತಿ ಕೈಬಿಡುವ ಅಗತ್ಯವಿದೆ. ಬಹುಸಂಖ್ಯಾತ ಧರ್ಮದವರ ನಂಬಿಕೆಯ ದೈವವೆಂಬ ಕಾರಣದಿಂದ ಮುಂದುವರಿಸಿದರೆ ದಸರಾ, ನಾಡ ಹಬ್ಬವಾಗಿ ಉಳಿಯುವುದ್ಲಿಲ. ದೇಶದ ಮತ್ತು ರಾಜ್ಯದ ಬೇರೆ ಕಡೆಗಳ್ಲಲಿ ಆದಂತೆ, ಇದು ಸಮಸ್ಯೆಗಳನ್ನು ಹುಟ್ಟುಹಾಕುವ ಸಂಭವವಿದೆ. ದೇಶದ್ಲಲಿ ಮತ ಧರ್ಮ ರಾಜಕೀಯವು ಇತ್ತೀಚಿನ ವರ್ಷಗಳ್ಲಲಿ ಪಡೆದುಕೊಳ್ಳುತ್ತಿರುವ ವಿಕೃತ ಸ್ವರೂಪ ಮತ್ತು ತಿರುವುಗಳನ್ನು ನೋಡಿದರೆ ಇಂಥ ಸಾಧ್ಯತೆ‌ಅಲಗಳೆಯುವಂತ್ಲಿಲ.- ಈ ಧಾಟಿಯ್ಲಲಿ ನನ್ನ ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟ್ದಿದೆ.

ಇದೇ ೧೭ರಂದು ಹಿಂದೂ ರಾಷ್ಟ್ರೀಯ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್, ದಸರಾ ಮೆರವಣಿಗೆಯ್ಲಲಿ ಚಾಮುಂಡೇಶ್ವರಿಯನ್ನು ಒಯ್ಯುವುದು ಜಾತ್ಯತೀತ ತತ್ವಕ್ಕೆ ವಿರೋಧವಾಗುತ್ತದೆ ಎಂದು ಸಭೆಯ್ಲಲಿ ನಾನು ಹೇಳಿದನೆಂಬ ವರದಿಗೆ ಪ್ರತಿಕ್ರಿಯಿಸ್ದಿದಾರೆ. ಹಿಂದೂ ಪರಂಪರೆ, ಸಂಸ್ಕೃತಿ ನಾಶ ಮಾಡುವ ನನಗೆ, ನನ್ನಂಥ ಜಾತ್ಯತೀತವಾದಿಗಳಿಗೆ ಬೀದಿ ನಾಯಿಗಳಿಗೆ ಹೊಡೆಯುವಂತೆ ಹೊಡೆಯಬೇಕು /ಹೊಡೆಯಿರಿ ಎಂದು ಪತ್ರಿಕಾಗೋಷ್ಠಿಯ್ಲಲಿ ಹೇಳ್ದಿದಾಗಿ ವರದಿಯಾಗಿದೆ. ಬೆದರಿಕೆ ತಂತ್ರದಿಂದ ನನ್ನ ಬಾಯಿ ಮುಚ್ಚಿಸಬಹುದೆಂದು ಯಾರಾದರೂ ಭಾವಿಸ್ದಿದರೆ ಅದೊಂದು ದೊಡ್ಡ ಭ್ರಮೆ.

`ದ್ವೇಷ ಬಿಟ್ಟು ದೇಶ ಕಟ್ಟು' ಎಂಬುದು ನನ್ನ ಮತ್ತು ಮೈಸೂರಿನ ಶಾಂತಿಪ್ರಿಯ ನಾಗರಿಕರ ಸಾತ್ವಿಕ ಘೋಷಣೆಯಾದರೆ ಮುತಾಲಿಕರ ಹಿಂದೂ ರಾಷ್ಟ್ರೀಯ ಸೇನೆಯದು `ದ್ವೇಷ ಬಿತ್ತು ದ್ವೇಷ ಬೆಳೆ' ಎಂಬಂಥ ರಾಕ್ಷಸ ಘೋಷಣೆಯಾಗಿದೆ. ದಸರಾ ಹೊತ್ತಿಗೆ ಹಿಂದೂ ಧರ್ಮದ ಹೆಸರಿನ್ಲಲಿ ಏನಾದರೂ ನೆಪ ಮಾಡಿಕೊಂಡು ಸ್ಲಲದ ಸಮಸ್ಯೆಗಳನ್ನು ಮೈಸೂರಿನ್ಲಲಿ ಹುಟ್ಟುಹಾಕಲು ಮುತಾಲಿಕರ ಹಿಂದೂ ರಾಷ್ಟ್ರೀಯ ಸೇನೆ ಈಗಿನಿಂದಲೇ ದುಷ್ಟ ಯೋಜನೆ, ಕೆಟ್ಟ ತಂತ್ರ ರೂಪಿಸುತ್ತಿದೆಯೆ? ಅವರ ಪತ್ರಿಕಾ ಗೋಷ್ಠಿಯ ಅಪಾಲಾಪಗಳು ಅದರ ಮುನ್ಸೂಚನೆಯೆ? ಸರ್ಕಾರ, ಮೈಸೂರಿನ ಶಾಂತಿಪ್ರಿಯ ಜನತೆ, ಶಾಂತಿ ಸುವ್ಯವಸ್ಥೆ ಪಾಲನೆಯ ಹೊಣೆ ಹೊತ್ತ ಇಲಾಖೆಗಳವರು ಇಂಥವರ ವರ್ತನೆ, ಚಟುವಟಿಕೆಗಳ ಬಗ್ಗೆ ಈಗಿನಿಂದಲೇ ವಿಶೇಷ ನಿಗಾ ಇಡುವ ಅಗತ್ಯವಿದೆ.
-ಪ್ರೊ. ಜಿ.ಎಚ್. ನಾಯಕ, ಮೈಸೂರು
================

Satish said...

ವಿಶ್ವ ಅವರೇ,

ಹೌದು, ನಮ್ಮಂಥ ಸಾಧಾರಣ ಜನರಿಗೆ ಕಾಮನ್ ಸೆನ್ಸ್ ಅನ್ನಿಸೋದು ಈ ದೊಡ್ಡವರಿಗೆ ಏಕೆ ಗೊತ್ತಾಗುವುದಿಲ್ಲವೋ ಅಥವಾ ನಾವೇ ಏನಾದರೊಂದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲವೋ ಎನ್ನಿಸಿಬಿಡುತ್ತದೆ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಮೂಲ ಲೇಖನವನ್ನು ನೀಡಿ ಉಳಿದವರಿಗೆ ಉಪಕಾರವನ್ನು ಮಾಡಿದ್ದೀರಿ.
ಮತ್ತೊಂದು ಪ್ರತಿಕ್ರಿಯೆ ಇಲ್ಲಿದೆ ನೋಡಿ: http://www.prajavani.net/jun292006/5861420060629.php

ಅಂದ ಹಾಗೆ ಪ್ರಜಾವಾಣಿಯಲ್ಲಿ ಪ್ರಕಟವಾದದ್ದನ್ನು ಬರಹಕ್ಕೆ ಹೇಗೆ ತಂದಿರಿ?

ವಿಶ್ವ said...

ಅಂತರಂಗಿಗಳೇ,

ನೀವು ಹೇಳಿದ ಹಾಗೆ, ಈ 'ಬುದ್ದಿಜೀವಿ'ಗಳ ಮಾತು ಕೇಳೀ ಕೇಳೀ ನನಗೂ ಕೆಲವು ಸಲಾ 'ನನ್ನ ಯೋಚನೆಯಲ್ಲೇ ತಪ್ಪಿರಬಹುದೇನೋ...' ಅಂತ ಹಲವಾರು ಸಲಾ ಅನ್ನಿಸಿದ್ದಿದೆ. ಆದರೂ ನನ್ನ ಪಾಮರ ಮನಸ್ಸಿಗೆ ಇದುವರೆಗೂ ಹೊಳೆದಿರುವ ಸತ್ಯ ಇಷ್ಟು

೧. ಈ ಬುದ್ದಿಜೀವಿಗಳ ಮಾತುಗಳು ಯಾವಾಗಲೂ ಏಕಪಕ್ಷೀಯವಾಗಿರುತ್ತೆ. ಇವರು ಯಾವಾಗಲೂ ಅರ್ಧಸತ್ಯವನ್ನು ಮಾತ್ರ ಎತ್ತಿಹಿಡಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ರಾಜಾರೋಷವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಮಿಕ್ಕಕೆಲವು ಸಂದರ್ಭಗಳಲ್ಲಿ ಗಪ್‌ಚುಪ್; ದಿವ್ಯಮೌನ!(ಇಂತಹವರನ್ನು ಅರೆಬುದ್ದಿಜೀವಿಗಳೆಂದು ಕರೆಯಬಹುದು!)

೨. ಈ ಬುದ್ದಿಜೀವಿಗಳು ಇತರರ ಮುಂದೆ ತಾವು ಬುದ್ದಿಜೀವಿಯೆಂದು ಕಾಣಿಸಬೇಕೆಂದು, 'ಸಾಮಾನ್ಯ ಜನ'ಕ್ಕೆ ಹೊಳೆಯದ ಸತ್ಯ ತನಗೆ ಹೊಳೆದಿದೆಯೆಂದು ತೋರಿಸಿಕೊಳ್ಳುವ ಸಲುವಾಗಿ ಅನಗತ್ಯ ವಾದವಿವಾದಗಳನ್ನು ಸೃಷ್ಟಿಸುತ್ತಾರೆ.

ನೀವು ಕೊಟ್ಟಿರುವ ಮತ್ತೊಂದು ಲಿಂಕ್ ನ ಪಠ್ಯ ಇಲ್ಲಿ ಕೊಟ್ಟಿದ್ದೇನೆ.

ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ದಟ್ಸ್‌ಕನ್ನಡ ಮುಂತಾದವುಗಳಲ್ಲಿ ಪ್ರಕಟವಾದ ಮಾಹಿತಿಯನ್ನು ಬರಹದಲ್ಲಿರುವ FontConvert ಮೂಲಕ ಸುಲಭವಾಗಿ ಯೂನಿಕೋಡ್ ಗೆ ಪರಿವರ್ತಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ:
http://www.baraha.com/html_help/baraha/font_convert.htm

==============
ವಾಚಕರ ವಾಣಿ, ಪ್ರಜಾವಾಣಿ ಗುರುವಾರ, ಜೂನ್ ೨೯, ೨೦೦೬

ಅಧಿಕ ಪ್ರಸಂಗತನ ಏಕೆ ?

ಡಾ. ಪಂಡಿತಾರಾಧ್ಯರು ಜಿ. ಎಸ್. ನಾಯಕರನ್ನು ಸಮರ್ಥಿಸುತ್ತಾ, ಜಿ. ಎಚ್. ನಾಯಕರು ಯಾವ ಖಾಸಗೀ ನಂಬಿಕೆಯನ್ನಾಗಲೀ, ಆಚರಣೆಯನ್ನಾಗಲೀ ವಿರೋಧಿಸ್ಲಿಲ. ಶತ್ರು ವಿಜಯ, ಸಾಮ್ರಾಜ್ಯಶಾಹಿ ಆಚರಣೆಯ ದಸರಾ ಉತ್ಸವದ ಪಳೆಯುಳಿಕೆಯನ್ನು ಇಂದು ನಾಡಹಬ್ಬವಾಗಿ ಆಚರಿಸುವ ಅಗತ್ಯವ್ಲಿಲ ಎಂದ್ಲೆಲಾ ಬಡಬಡಿಸ್ದಿದಾರೆ (ಪ್ರ. ವಾ. ಜೂನ್ ೨೩).

ಮೊದಲನೆಯದಾಗಿ ದಸರಾ `ಶತ್ರು ವಿಜಯ' ಅಲ. ಅದು `ಧರ್ಮ ವಿಜಯ' ಹಿಂದೂಗಳ ಧಾರ್ಮಿಕ ಆಚರಣೆ. ಖಾಸಗೀ ನಂಬಿಕೆ ಕೂಡ.

ಎರಡನೆಯದಾಗಿ ದಸರಾ (ನವರಾತ್ರಿ) ಶಕ್ತಿದೇವತೆಗಳ ಆರಾಧನೆ. ತಾಯಿ ಚಾಮುಂಡೇಶ್ವರಿಯ ಕಿಂಕರರಾಗಿ ಹಿಂದೆ ಮಹಾರಾಜರು ತಾವೇ ಸ್ವತಃ ದಸರಾ ವಿಧಿವಿಧಾನಗಳನ್ನು ನೆರವೇರಿಸುತ್ತ್ದಿದರು. ಈಗ ಆ ಅವಕಾಶವ್ಲಿಲ್ದದರಿಂದ ತಾಯಿ ಚಾಮುಂಡೇಶ್ವರಿಯನ್ನೇ ಉತ್ಸವದ್ಲಲಿ ಒಯ್ದು, ಅವಳ ಸನ್ನಿಧಿಯ್ಲಲಿ ಆ ಕಾರ್‍ಯ ನೆರವೇರಿಸುವ್ಲಲಿ ತಪ್ಪೇನಿದೆ? ಇದು ಹಿಂದೂ ಧಾರ್ಮಿಕ ಮುಖಂಡರ ಸಲಹೆಯಂತೆ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಹಿಂದೂ ಧರ್ಮದ್ಲಲಿ ನಂಬಿಕೆಯುಳ್ಳ ಯಾರ್‍ದದೂ ಆಕ್ಷೇಪವ್ಲಿಲ.

ಯಾರೋ ಅರ್ಹತೆಯ್ಲಿಲದೆ ಬೀದಿ ಜನರನ್ನು ಮೆರೆಸುವುದು ಎನ್ನುವ ಹಾಗೆ `ತಾಯಿ ಚಾಮುಂಡೇಶ್ವರಿಯನ್ನು ಮೆರೆಸುವುದು' ಎಂದ್ಲೆಲಾ ಆರಾಧ್ಯರು ಕ್ಷ್ಲುಲಕವಾಗಿ ಮಾತನಾಡ್ದಿದಾರೆ. ಆ ತಾಯಿಯನ್ನು `ಮೆರೆಸು'ವ ಅರ್ಹತೆ ನಮಗಿದೆಯೇ? ಅಲದೆ ದಸರಾ ಶುದ್ಧ ಹಿಂದೂ ಧಾರ್ಮಿಕ ಹಬ್ಬ. ಅದನ್ನು ಜಾತ್ಯತೀತ ನಾಯಕರ ಸಲಹೆಯಂತೆ ಸುಧಾರಿಸಲು ಸಾಧ್ಯವೇ? ಫಿಜಿಕ್ಸ್ ಪಾಠದ ಸುಧಾರಣೆಗೆ ಕನ್ನಡ ಪಂಡಿತರ ಸಲಹೆ ಕೇಳಿದರೆ ಕೊಡುತ್ತೀರೇನು? ಹಾಗೇ, ಹಿಂದೂ ಧಾರ್ಮಿಕ ಹಬ್ಬದ ಅರ್ಥಪೂರ್ಣ ಆಚರಣೆಗೆ ಸಲಹೆ ಕೊಡಲು ಹಿಂದೂ ಧರ್ಮಗುರುಗಳ್ದಿದಾರೆ. ಜಿ. ಎಚ್. ನಾಯಕರು ಕನ್ನಡದ ಉತ್ತಮ ವಿಮರ್ಶಕರಿರಬಹುದು. ಆದರೆ ಅವರು ಹಿಂದೂ ಧರ್ಮ ಸುಧಾರಕರೇ? ಅಥವಾ ಧರ್ಮಗುರುಗಳೇ? `ಧರ್ಮದ ವಿಷಯದ್ಲಲಿ ನಮಗೆ ನಂಬಿಕೆ ಇಲ್ದದರಿಂದ ತಾವು ಧಾರ್ಮಿಕ ನಾಯಕರನ್ನು ಸಂಪರ್ಕಿಸಿ' ಎಂದು ಸರ್ಕಾರಕ್ಕೆ ಸಲಹೆ ನೀಡ್ದಿದರೆ ನಾವು ಅವರನ್ನು ಮೆಚ್ಚುತ್ತ್ದಿದೆವು. ಜಾತ್ಯತೀತ ನಾಯಕರಾದವರಿಗೆ ಧರ್ಮದ ವಿಷಯದ್ಲಲಿ ತಲೆತೂರಿಸುವ ಅಧಿಕ ಪ್ರಸಂಗತನ ಏಕೆ? ಎಲ ಧರ್ಮೀಯರಿಗೂ ಬೇಕಾದಂತೆ ಹೊಸ ಹಬ್ಬವೊಂದನ್ನು ಆಚರಿಸಿ, ಅದಕ್ಕಾಗಿ ಎಲರೂ ನೋಡುವರೆಂಬ ಕಾರಣದಿಂದ ಹಿಂದೂ ಹಬ್ಬವೊಂದನ್ನು ತಿರುಚುವ, ಕೆಡಿಸುವ, ಸಲಹೆ ಕೊಡುವ ಹಕ್ಕು ಜಾತ್ಯತೀತರಿಗ್ಲಿಲ. ಆ ಕಾರಣಕ್ಕಾಗಿ, ನಮ್ಮ ಧಾರ್ಮಿಕ ವಿಧಿಯನ್ನು ಬದಲಿಸಿಕೊಳ್ಳುವ ಅಗತ್ಯವೂ ಇಲ.
- ಸುಶೀಲಾ ರಮೇಶ್, ಶಿವಮೊಗ್ಗ
==========

Satish said...

ವಿಶ್ವ ಅವರೇ, ಈ ಬಗ್ಗೆ ನಮ್ಮವರು ಹೆಚ್ಚು ಚರ್ಚೆ ಮಾಡಿ ಬರೆಯುತ್ತಾ ಇರೋದು ತುಂಬಾ ಸಂತೋಷದ ಸಂಗತಿ ಆದರೆ ತಮ್ಮ-ತಮ್ಮ ನಿಲುವುಗಳನ್ನು ಪ್ರತಿಪಾದಿಸುವುದನ್ನು ಇನ್ನೂ ಚೆನ್ನಾಗಿ ಮಾಡಿದ್ದರೆ ಒಳ್ಳೆಯದಿತ್ತು, ಇಲ್ಲೊಂದು ವಿಚಾರವಿದೆ ನೋಡಿ: http://www.prajavani.net/jun302006/5869720060630.php

ಜಾತ್ಯತೀತರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕು ಎಲ್ಲಿಂದ ಬರುತ್ತೆ?
ಸುಮ್ಮನೇ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡು ಮೋಜು ನೋಡುತ್ತಾರೇನೋ ಎನ್ನಿಸಿತು.

ವಿಶ್ವ said...

ಅಂತರಂಗಿಗಳೇ,

ಬೀಚಿಯವರ ಒಂದು ಜೋಕ್ ಜ್ಞಾಪಕವಾಗುತ್ತಿದೆ.

ತಿಮ್ಮನ ಗೆಳೆಯ ಒಂದು ಕಾಫಿಪುಡಿ ಅಂಗಡಿ ಇಟ್ಟು "ಇಲ್ಲಿ ಶ್ರೇಷ್ಠ ದರ್ಜೆಯ ಕಾಫಿಪುಡಿ ಮಾರಲ್ಪಡುತ್ತದೆ" ಎಂದು ಬೋರ್ಡ್ ಹಾಕುತ್ತಾನೆ. ಅದನ್ನು ನೋಡಿ ತಿಮ್ಮ 'ಶ್ರೇಷ್ಠ ದರ್ಜೆ ಅಂತ ನೀನೇ ಹೊಗಳಿಕೊಳ್ಳುವುದು ಸರಿಯಲ್ಲ. ಅದನ್ನು ಗಿರಾಕಿಗಳು ಹೇಳಬೇಕು' ಎಂದು ಉಪದೇಶ ಮಾಡುತ್ತಾನೆ.

ಸರಿ ಮಾರನೇ ದಿನ ಬೋರ್ಡಿನಲ್ಲಿ "ಇಲ್ಲಿ ಕಾಫಿಪುಡಿ ಮಾರಲ್ಪಡುತ್ತದೆ" ಎಂದು ಹಾಕಿರುತ್ತದೆ. ಅದನ್ನು ನೋಡಿ ತಿಮ್ಮ ತಲೆಯಾಡಿಸಿ, 'ಇಲ್ಲಲ್ಲದೆ ಪಕ್ಕದ ಅಂಗಡೀಲಾ ಕಾಫಿ ಪುಡಿ ಮಾರ್ತಾರೆ?' ಅಂತ ಕೇಳುತ್ತಾನೆ.

ಸರಿ ಮಾರನೇ ದಿನ ಬೋರ್ಡಿನಲ್ಲಿ "ಕಾಫಿಪುಡಿ ಮಾರಲ್ಪಡುತ್ತದೆ" ಎಂದು ಹಾಕಿರುತ್ತದೆ. 'ಮಾರೋದಕ್ಕಲ್ದೇ ಬಿಟ್ಟೀಗೆ ಕೋಡ್ತೀಯಾ...' ಅಂತ ತಿಮ್ಮ ರೇಗುತ್ತಾನೆ.

ಸರಿ ಮಾರ್ನೇ ದಿನ ಬೋರ್ಡಿನಲ್ಲಿ "ಕಾಫಿಪುಡಿ" ಅಂತ ಮಾತ್ರ ಇರುತ್ತೆ. 'ಅಲ್ಲಯ್ಯಾ ಮೈಲು ದೂರದಿಂದಲೇ ಘಮ್ಮಂತ ಕಾಫಿಪುಡಿ ವಾಸನೆ ಬರ್ತಾಯಿದೆ. ಅದನ್ನ ಬೋರ್ಡಿನಲ್ಲಿ ಬರೆಯೋದು ಬೇರೆ ಯಾಕೆ?' ಅಂತ ಪ್ರಶ್ನಿಸುತ್ತಾನೆ.

ಕೊನೆಗೆ ತಿಮ್ಮನ ಸ್ನೇಹಿತ ಬೋರ್ಡನ್ನೇ ತೆಗೆಯಬೇಕಾದ ಪರಿಸ್ಥಿತಿ ಬರುತ್ತದೆ!

ನಾವು ಪರಂಪರಾಗತವಾಗಿ ನಮ್ಮ ಹಿರಿಯರಿಂದ ಅನೇಕ ಆಚರಣೆ ಪದ್ದತಿಗಳನ್ನು ಪಡೆದುಕೊಂಡಿದ್ದೇವೆ. ಕಾಲಕ್ರಮದಲ್ಲಿ ಅರಿವುಮೂಡಿ, ಅಮಾನವೀಯ ಅಂತ ಅನಿಸಿಕೊಂಡಿದ್ದನ್ನು ಕೈಬಿಟ್ಟಿದ್ದೇವೆ (ಸತಿಪದ್ದತಿ, ಬಾಲ್ಯವಿವಾಹ ಇತ್ಯಾದಿ). ಇನ್ನೂ ಹಲವಾರು ಅಮಾನವೀಯ ಪದ್ದತಿಗಳು ಉಳಿದುಕೊಂಡಿವೆ (ಬಾಲ ಕಾರ್ಮಿಕರು, ವರದಕ್ಷಿಣೆ ಇತ್ಯಾದಿ). ಬುದ್ದಿಜೀವಿಗಳು ಇಂತಹ ಪಿಡುಗುಗಳ ಪ್ರಾಮುಖ್ಯತೆ, ಸಮಂಜಸತೆಯನ್ನು ಗುರುತಿಸಿ ಅವುಗಳ ವಿರುದ್ಧ ಪ್ರತಿಭಟಿಸಬೇಕೇ ಹೊರತು, 'ಮೈಸೂರು ದಸರಾ' ದಂತಹ ನಿರುಪದ್ರವಿ ವಿಷಯಗಳನ್ನಲ್ಲ.

ನೀವು ಕೊಟ್ಟ ಲಿಂಕ್ ನ ಪಠ್ಯವನ್ನು ಯೂನಿಕೋಡ್‌ಗೆ ಪರಿವರ್ತಿಸಿದ್ದೇನೆ.
=====================
ಶುಕ್ರವಾರ, ಜೂನ್ ೩೦, ೨೦೦೬
ಪ್ರಜಾವಾಣಿ s ಸಂಪಾದಕೀಯ

ವಿಚಾರ: ನಾಡಹಬ್ಬ - ಅರಸೊತ್ತಿಗೆಯ ಪರಂಪರೆಯ ಪ್ರತೀಕ - ಹೊರೆಯಾಲ ದೊರೆಸ್ವಾಮಿ

ವಿಮರ್ಶಕ ಪ್ರೊ. ಜಿ.ಎಚ್. ನಾಯಕರು ಇತ್ತೀಚೆಗೆ `ನಾಡಹಬ್ಬ' ಅಂದರೆ ಕೇವಲ ಹಿಂದೂಗಳ ಹಬ್ಬವ್ಲಲ ಎಂದು ಹೇಳಿದ ಮಾತು ಹಿಂದೂ ಮೂಲಭೂತವಾದಿಗಳನ್ನು ಕೆರಳಿಸಿದೆ. ಮನುಷ್ಯನ ಜ್ಞಾನ ಹಂದರ ವಿಸ್ತರಿಸಿಕೊಳ್ಳುತ್ತಿರುವ ಇಂದಿನ ದಿನಗಳ್ಲಲಿ ಪುರಾತನವಾದ ಯಾವ ಧರ್ಮವೂ ತನ್ನ ಮೂಲ ಸ್ವರೂಪವನ್ನು ಕಾಯ್ದುಕೊಳ್ಳಲಾರದು. `ಮಾನವ ಧರ್ಮ'ವೊಂದೇ ಮುಂದಿನ ಜಗತ್ತಿನ ಏಕೈಕ ಧರ್ಮವಾಗುತ್ತದೆ ಎಂಬ ಸತ್ಯ ನಮಗೆ ಅರಿವಾದಾಗ ಈ ಎಲ ಕ್ಷ್ಲುಲಕಗಳು ಮಾಯವಾಗಿಬಿಡುತ್ತವೆ.

ಕನ್ನಡ ಸಾಹಿತ್ಯ ವಿಮರ್ಶಕ ಪ್ರೊ. ಜಿ.ಎಚ್. ನಾಯಕರು ಇತ್ತೀಚೆಗೆ ಮೈಸೂರಿನ
ಸಭೆಯ್ಲಲಿ ,`ನಾಡಹಬ್ಬ ಅಂದರೆ ಕೇವಲ ಹಿಂದೂಗಳ ಹಬ್ಬವ್ಲಲ. ಮುಸ್ಲಿಮರು, ಕ್ರೈಸ್ತರು ಹಾಗೂ ಇತರ ಅಲ್ಪಸಂಖ್ಯಾತರ ಹಬ್ಬವೂ ಹೌದು. ಚಾಮುಂಡೇಶ್ವರಿಗೆ ಪೂಜೆ ಸ್ಲಲಿಸುವ ಮೂಲಕ ದಸರಾ ಹಬ್ಬ ಆರಂಭವಾದರೆ, ಕೇವಲ ಹಿಂದೂಗಳ ಹಬ್ಬವಾಗುತ್ತದೆ. ನಾಡು ಎಂದರೆ ಕೇವಲ
ಹಿಂದೂಗಳಿಗ್ಲಲ' ಎಂದು ಹೇಳಿದ ಮಾತು ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ನಾಯಕರ ಈ ಹೇಳಿಕೆಗೆ ಹಿಂದೂ ರಾಷ್ಟ್ರೀಯ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ತೀವ್ರವಾಗಿ ಕಿಡಿ ಕಾರ್ದಿದಾರೆ.

`ಪ್ರೊ. ಜಿ.ಎಚ್. ನಾಯಕ್ ಹಿಂದೂ ಪರಂಪರೆ, ಸಂಸ್ಕೃತಿಯನ್ನು ನಾಶ ಮಾಡಲು ಹೊರಟ್ದಿದಾರೆ. ಇದೊಂದು ಕಮ್ಯುನಿಸ್ಟ್ ವಿಚಾರವಾದಿಗಳ ಕುತಂತ್ರವಾಗಿದೆ. ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಹೊರಟವರಿಗೆ ನಾಯಿಗಳಿಗೆ ಹೊಡೆದಂತೆ ಹೊಡೆಯುತ್ತಾರೆ. ಹಿಂದೂತ್ವದ್ಲಲಿಯೇ ಜಾತ್ಯತೀತತೆ ಇದೆ....' ಎಂದು ಮುತಾಲಿಕ್ ಖಂಡತುಂಡವಾಗಿ ತಮ್ಮ ವಾದ ಮಂಡಿಸ್ದಿದಾರೆ. ಮುತಾಲಿಕ್ ಹೇಳಿಕೆಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿದೇಶಕ ಡಾ. ಹಿ.ಶಿ. ರಾಮಚಂದ್ರೇಗೌಡ ಮೊದಲಾದವರು ತೀವ್ರವಾಗಿ ಖಂಡಿಸ್ದಿದಾರೆ. ಈ ಹೇಳಿಕೆ- ಪ್ರತಿ ಹೇಳಿಕೆಗಳ ವಾಕ್ ಸಮರ ಮುಂದುವರಿದಿದೆ.

ಪ್ರೊ. ನಾಯಕರ ಹೇಳಿಕೆಯ್ಲಲಿ `ನಾಡ ಹಬ್ಬ ದಸರಾ' `ಚಾಮುಂಡೇಶ್ವರಿ ಪೂಜೆ' ಈ ಎರಡು ಅಂಶಗಳು ಪ್ರಧಾನ ಆಗಿರುವುದನ್ನು ನಾವು ಗುರುತಿಸಬಹುದು. ಈ ಅಂಶಗಳನ್ನು ನಾವು ಐತಿಹಾಸಿಕ ದೃಷ್ಟಿಯಿಂದ ಅರ್ಥಮಾಡಿಕೊಂಡರೆ ಬಹುಶಃ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಆಶ್ವಯುಜ ಮಾಸದ್ಲಲಿ ಆಚರಿಸಲ್ಪಡುವ ದಸರಾ (ಹತ್ತು ದಿನಗಳ ಹಬ್ಬ) ಮೂಲಭೂತವಾಗಿ ಹಿಂದೂ ಸಂಪ್ರದಾಯದ್ಲಲಿ ನಡೆಯುವ ಒಂದು `ಅರಸೊತ್ತಿಗೆಯ ಹಬ್ಬ. ಒಂಬತ್ತು ದಿನಗಳ ನವಮಿ ಉತ್ಸವದ ಕೊನೆ ದಸರಾ ಅಥವಾ ಜಂಬೂ ಸವಾರಿಯ ಮೆರವಣಿಗೆ. ಹಿಂದಿನ ದಿನಗಳ್ಲಲಿ ಮಹಾನವಮಿಯ ನಂತರ ರಾಜಮಹಾರಾಜರು ದಿಗ್ವಿಜಯಕ್ಕೆ ಹೊರಡುತ್ತ್ದಿದರು. ಅದಕ್ಕೆ ಪೂರ್ವ ಸಿದ್ಧತೆಯಾಗಿ ಈ ಉತ್ಸವ ನಡೆಯುತ್ತಿತ್ತು. ಇತಿಹಾಸದ ದಾಖಲೆಗಳಿಂದ ಇದು ಸ್ಪಷ್ಟವಾಗುತ್ತದೆ. ಕ್ರಿ.ಶ. ೧೬೪೮ ರ್ಲಲಿ ಕವಿ ಗೋವಿಂದ ವೈದ್ಯರಿಂದ ರಚಿತವಾದ `ಕಂಠೀರವ ನರಸರಾಜ ವಿಜಯ' ಎಂಬ ಸಾಂಗತ್ಯ ಕೃತಿಯ್ಲಲಿ ಈ ಬಗ್ಗೆ ಸಾಕಷ್ಟು ಮಾಹಿತಿಗಳು ಇವೆ:

ನವಮಿ ನಂತರದ ದಶಮಿಯನ್ನು `ವಿಜಯದಶಮಿ' ಎಂಬ ಗುಣವಾಚದಿಂದ ಕರೆಯುತ್ತ್ದಿದುದು ಅರಸರ ದಿಗ್ವಿಜಯದ ಸಂಕೇತವೇ ಆಗಿದೆ. ಇದೇ ವಿಜಯದಶಮಿಯನ್ನು ೧೯ನೇಯ ಶತಮಾನದ ಕೊನೆಯ ಭಾಗದ್ಲಲಿ `ದಸರಾ' (ದಶ+ ಹರ= ಹತ್ತು+ ದಿನ) ಎಂದು ಕರೆಯಲಾಯಿತು. ಹಾಗೆಯೇ ವಿಜಯದಶಮಿಯ ಮೂಲ ಆಶಯವೂ ಬದಲಾಯಿತು. ಮೈಸೂರು ಅರಸರ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ೧೮೦೫ರ್ಲಲಿ ಸ್ಥಳಾಂತರಗೊಂಡ ಮೇಲೂ ಇದೇ ಪದ್ಧತಿ ಮುಂದುವರಿಯಿತು.

`ನಾಡಹಬ್ಬ' ಎಂಬ ಪದ ಮತ್ತು ಆಚರಣೆ ಮೈಸೂರು ಸಂಸ್ಥಾನಕ್ಕೆ ಸಂಬಂಧಿಸ್ದಿದ್ಲಲ. (ಕಾಯಾ ಶ್ರೀಗೌರಿ ಕರುಣಾಲಹರಿ- ಎಂಬುದು ಮೈಸೂರು ಮಹಾರಾಜರು ಸಿಂಹಾಸನಾರೂಢರಾಗುವ ಸಂದರ್ಭದ್ಲಲಿ ನುಡಿಸುತ್ತ್ದಿದ `ನಾಡಗೀತೆ' ಆಗಿತ್ತಷ್ಟೇ).

ವಾಸ್ತವವಾಗಿ `ನಾಡಹಬ್ಬ'ವನ್ನು ಒಂದು ಸಾಂಸ್ಕೃತಿಕ ಉತ್ಸವವಾಗಿ ಆಚರಿಸುತ್ತ್ದಿದವರು ಮೈಸೂರು ಸಂಸ್ಥಾನದ ಆಚೆಯ್ದಿದ ಕರ್ನಾಟಕ ಪ್ರಾಂತ್ಯದವರು ಹಾಗೂ ಹೈದ್ರಾಬಾದ್, ಮುಂಬಯಿಯಂಥ ಕೆಲವು ಪಟ್ಟಣ ಪ್ರದೇಶದ ಕನ್ನಡಿಗರು.

೧೯೭೦ ರ್ಲಲಿ ದಸರಾ ನಿಂತುಹೋಯಿತು. ೧೯೭೧ ರ್ಲಲಿ ಅಂದಿನ ಕರ್ನಾಟಕ ಸರ್ಕಾರ ದಸರಾವನ್ನು `ನಾಡಹಬ್ಬ ದಸರಾ' ಎಂದು ಹೆಸರಿಸಿ ಮತ್ತೆ ಮೈಸೂರು ದಸರಾಕ್ಕೆ ಚಾಲನೆ ನೀಡಿತಾದರೂ ಪರಂಪರಾಗತ ದಸರಾ ಆಚರಣೆಗಳೇ ಅಲಿ ಪ್ರಧಾನವಾಗ್ದಿದವು.

ಆ ವರ್ಷ ದಸರಾ ಕೊನೆಯ ದಿನ ಭುವನೇಶ್ವರಿ ಪ್ರತಿಮೆಯನ್ನು ಅಂಬಾರಿಯ್ಲಲಿ ಕೂರಿಸಿ ಮೆರವಣಿಗೆ ಮಾಡಿದಾಗ, ಹೆಚ್ಚಿನ ಜನ ಅದನ್ನು ಸ್ವೀಕರಿಸಲ್ಲಿಲ. ಆ ಮುಂದಿನ ವರ್ಷದಿಂದ (೧೯೭೨) ಚಾಮುಂಡೇಶ್ವರಿ ಪ್ರತಿಮೆಯನ್ನು ಇಟ್ಟು ಮೆರವಣಿಗೆ ತೆಗೆಯಲಾಯಿತು. ಹಿಂದೂ, ಕ್ರೈಸ್ತ, ಮುಸಲ್ಮಾನರಾದಿಯಾಗಿ ಹೆಚ್ಚಿನ ಯಾರೂ ಆ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲ್ಲಿಲ. ಇದು ಇತಿಹಾಸ.

ಚಾಮುಂಡೇಶ್ವರಿ ವಾಸ್ತವವಾಗಿ ಮೈಸೂರು ಅರಸು ಮನೆತನದವರ ಕುಲದೇವತೆಯೇ ಹೊರತು ಇಡೀ ನಾಡಿನ ಜನತೆಗ್ಲಲ. ಇನ್ನೂ ಕೊಂಚ ವಿಷದವಾಗಿ ನೋಡುವುದಾದರೆ ಮೈಸೂರಿನ ಜನತೆಗೂ ಆಕೆ ಕುಲದೇವತೆ ಆಗಿರಲ್ಲಿಲ. ಅರಮನೆಯ ಪ್ರಭಾವದಿಂದ ಆಕೆಯನ್ನು ಮೈಸೂರು ನಗರದ ಸುತ್ತಮುತ್ತಲ ಕೆಲವೊಂದು ಪ್ರದೇಶಗಳ್ಲಲಿ ಕುಲದೇವತೆಯಾಗಿಯೋ, ಗ್ರಾಮ ದೇವತೆಯಾಗಿಯೋ ಸ್ವೀಕರಿಸಿರುವುದುಂಟು.

ಮೈಸೂರು ದಸರಾ ಹಬ್ಬ ನಾಡಹಬ್ಬವಾಗಿ ಪರಿವರ್ತಿತವಾದ ಮೇಲೆ ಚಾಮುಂಡೇಶ್ವರಿ ಪೂಜೆ, ಮೂರ್ತಿ ಮೆರವಣಿಗೆ ಇವುಗಳಿಗೆ ಪ್ರಾಶಸ್ತ್ಯ ಬಂದಿದೆ ಅಷ್ಟೇ. ಈ ವಾಸ್ತವಗಳನ್ನು ಅರಿತುಕೊಂಡಾಗ ಪ್ರೊ. ನಾಯಕ ಹಾಗೂ ಪ್ರಮೋದ ಮುತಾಲಿಕರ ನಡುವೆ ಇರುವ ಭಿನ್ನಾಭಿಪ್ರಾಯಗಳಿಗೆ ಉತ್ತರ ಹುಡುಕುವುದು ಸಾಧ್ಯವಾದೀತೆಂದು ನಾವು ಭಾವಿಸಬಹುದು.

ದಸರಾವನ್ನು ನಾಡಹಬ್ಬ ಎಂದು ಸಂವಿಧಾನಾತ್ಮಕವಾಗಿ ಅಂದರೆ ಶಾಸನಬದ್ಧವಾಗಿ ರೂಪಿಸಿದರೆ (ಈಗ ಆ ಕುರಿತು ಯಾವುದೇ ಖಚಿತ ನಿಯಮಗಳ್ಲಿಲ) ಆಗ ಪ್ರೊ. ನಾಯಕರ ವಾದಕ್ಕೆ ಪುಷ್ಟಿ ದೊರೆಯುತ್ತದೆ. ಇಲದ್ದಿದರೆ `ನಾಡಹಬ್ಬ' ಎಂಬ ವಿಶೇಷಣವನ್ನು ಸೇರಿಸಿಕೊಂಡರೂ ಮೈಸೂರು ದಸರಾ ಮೈಸೂರು ಅರಸೊತ್ತಿಗೆಯ ಪ್ರತೀಕವೇ ಆಗುತ್ತದೆ; ಪರಂಪರೆಗೆ ಅರ್ಥ ಬರುವುದ್ಲಿಲ. ಈ ರೀತಿಯ ಬದಲಾವಣೆಗೆ ಇಲಿನ ಬಹುಸಂಖ್ಯಾತರಾದ ಹಿಂದೂ ಸಮುದಾಯದವರು ಒಪ್ಪುವರೇ ಎಂಬುದು ಗಮನಿಸಬೇಕಾದ ಅಂಶ. ಹಾಗೆಯೇ ಅರಸೊತ್ತಿಗೆಯ ಪರಂಪರೆಯನ್ನು `ನಾಡಹಬ್ಬ' ಎಂಬ ಹೆಸರಿನ್ಲಲಿ ಮುಂದುವರಿಸಿದರೂ ಅದು ಯಾವ ಮೌಲ್ಯದ ಸಂಕೇತವಾಗುತ್ತದೆ? ಇನ್ನು ಮುತಾಲಿಕ್ ಅವರು ಯಾವ ಆಧಾರದ ಮೇಲೆ ಪ್ರೊ. ನಾಯಕರನ್ನು `ಕಮ್ಯುನಿಸ್ಟ್ ವಿಚಾರವಾದಿ' ಎಂದು ಹೆಸರಿಸಿದರೋ ಅರ್ಥವಾಗುವುದ್ಲಿಲ.

ಮೈಸೂರು ದಸರಾ, ಮಹಾರಾಜರ ಅಂಬಾರಿ ಸವಾರಿ ಇವನ್ನು ಮೊದಲಿನಿಂದಲೂ (ಸ್ವಾತಂತ್ರ್ಯ ಬಂದಾಗಿನಿಂದ) ವಿರೋಧಿಸಿಕೊಂಡು ಬಂದಿರುವವರು ಲೋಹಿಯಾ ಸಿದ್ಧಾಂತ ಆಧಾರಿತ ಸಮಾಜವಾದಿಗಳು ಎಂಬ ತಿಳಿವಳಿಕೆ ಅವರಿಗೆ ಇರಬೇಕಿತ್ತು.

ಪ್ರೊ. ನಾಯಕರು ಹಿಂದೂ ಸಂಸ್ಕೃತಿಯ ವಿನಾಶಕರಾಗಲು ಸಾಧ್ಯವೇ ಇಲ. `ನಾಡಹಬ್ಬ' ಹಾಗೂ `ದಸರಾ' ಆಚರಣೆಗಳ ಬಗ್ಗೆ ಶಾಸನಬದ್ಧ ಸ್ವರೂಪ ಇಲದಿರುವುದರಿಂದ ಹಿಂದೂ ಸಂಸ್ಕೃತಿಯ ಪ್ರಶ್ನೆಯೇ ಬರುವುದ್ಲಿಲ. ಇನ್ನು ಅವರನ್ನು ನಾಯಿಗಳಿಗೆ ಹೊಡೆದಂತೆ ಮುಂದಾಗಲು- ಅವರು ಎಲಿ ಹಿಂದೂ ಸಂಸ್ಕೃತಿಯ ಭಂಜಕರಾಗುತ್ತಾರೆ? ಮುತಾಲಿಕ್ ಅವರ ಸಿಟ್ಟಿಗೆ ಇಲಿ ಬೆಲೆಯ್ಲಿಲ.

ಪ್ರಮೋದ ಮುತಾಲಿಕ್ ಅವರು ಹಿಂದೂ ಧರ್ಮಕ್ಕೆ ಆಗುತ್ತಿರುವ ಧಕ್ಕೆಗಳ ಬಗ್ಗೆ ಆಗಿಂದಾಗ್ಗೆ ಹುಯಿಲು ಎಬ್ಬಿಸುತ್ತ್ದಿದಾರೆ. ಅವರ ಮಟ್ಟಿಗೆ ಸರಿ. ಆದರೆ ಮನುಷ್ಯನ ಜ್ಞಾನ ಹಂದರ ವಿಸ್ತರಿಸಿಕೊಳ್ಳುತ್ತಿರುವ ಇಂದಿನ ದಿನಗಳ್ಲಲಿ ಪುರಾತನವಾದ ಯಾವ ಧರ್ಮವೂ ತನ್ನ ಮೂಲ ಸ್ವರೂಪವನ್ನು ಕಾಯ್ದುಕೊಳ್ಳಲಾರದು ಮನುಷ್ಯನ ಜ್ಞಾನ ಸೂಕ್ಷ್ಮತೆ ಹೆಚ್ಚಿದಂತ್ಲೆಲ ಎಲ ಧರ್ಮಗಳ ಆಚರಣೆಗಳು ತಮಾಷೆ ಆಗುತ್ತವೆ; ಮಕ್ಕಳ ಆಟವಾಗುತ್ತವೆ. ಇವನ್ನು ಊಹಿಸಿರುವುದರಿಂದಲೇ ಈಗೀಗ ಧಾರ್ಮಿಕ ಮೂಲಭೂತವಾದಿಗಳು ನಾನಾ ಬಗೆಗಳ್ಲಲಿ ತಮ್ಮ ಧರ್ಮಗಳನ್ನು ಪ್ರಸಾರ ಮಾಡಲು ಹೆಚ್ಚೆಚ್ಚು `ಶ್ರಮ' ಹಾಕುತ್ತ್ದಿದಾರೆ. ಮನುಷ್ಯನ ಆರ್ಥಿಕ ನೆಲೆಗಟ್ಟು, ಜೀವನ ವಿಧಾನವನ್ನು ಮರೆಸಲು ಯತ್ನಿಸುವ ಇಂಥ `ಶ್ರಮಗಳು' ಭದ್ರಬುನಾದಿ ಇಲದವು. ಬದುಕುವ ಅವಕಾಶ ಮತ್ತು ಮಾನವೀಯ ಅಂತಃಕರಣದ ನಡಾವಳಿಗಳನ್ನು ಆಧರಿಸಿದ `ಧರ್ಮ'ಅನ್ನುವುದಾದರೆ `ಮಾನವ ಧರ್ಮ'ವೊಂದೇ ಮುಂದಿನ ಜಗತ್ತಿನ ಏಕೈಕ ಧರ್ಮವಾಗುತ್ತದೆ ಎಂಬ ಸತ್ಯ ನಮಗೆ ಅರಿವಾದಾಗ ಈ ಎಲ ಕ್ಷ್ಲುಲಕಗಳು ಮಾಯವಾಗಿಬಿಡುತ್ತವೆ.
====================

ವಿಶ್ವ said...

ಮಂಗಳವಾರ, ಜುಲೈ ೧೧, ೨೦೦೬
ಪ್ರಜಾವಾಣಿ

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ

ಮತಧರ್ಮ ಕುರಿತ ಸಂಗತಿಗಳ ಬಗ್ಗೆ ಗಂಭೀರ ಸಂವಾದ, ಚರ್ಚೆ ಸಾಧ್ಯವಾಗದಂಥ ವಾತಾವರಣ ಮೈಸೂರಿನ್ಲಲಿ ಸೃಷ್ಟಿಯಾಗುತ್ತಿದೆ. ಧಾರ್ಮಿಕ ಸಂಗತಿಗಳ ಬಗ್ಗೆ ಪ್ರಶ್ನೆ ಎತ್ತಿದವರನ್ನ್ಲೆಲ ಇತರ ಧರ್ಮಗಳವರ ಪರ ಇದಾರೆಂದು ಆರೋಪಿಸುವುದು ಎಲ ಧಾರ್ಮಿಕ ಮೂಲಭೂತವಾದಿಗಳ ಕೆಟ್ಟತಂತ್ರವಾಗಿದೆ. ಯಾವ ಮತಧರ್ಮದ ಪರ ಅಥವಾ ವಿರೋಧ ಇಲದೆ, ಮಾನವೀಯ ಮೌಲ್ಯಗಳ ಬಗ್ಗೆ ನಿಷ್ಠೆಯಿಂದ ಬದುಕಲು ಬಯಸುವವರೂ ಇದಾರೆ. ಹಾಗೆ ಬದುಕಲು ಅವರಿಗೆ ಸ್ವಾತಂತ್ರ್ಯವಿದೆ ಎಂಬುದನ್ನೇ ಒಪ್ಪದವರು ಹೆಚ್ಚುತ್ತ್ದಿದಾರೆ.
ಎಂ. ಚಿದಾನಂದಮೂರ್ತಿ, ಎಲ್.ಎಸ್. ಶೇಷಗಿರಿರಾವ್, ಎಚ್.ಎಂ. ಮರುಳಸ್ದಿದಯ್ಯ, ಪಿ.ಎಸ್. ರಾಮಾನುಜಂ, ಎಸ್.ಎಲ್. ಭೈರಪ್ಪ, ರಾ.ನಂ. ಚಂದ್ರಶೇಖರ್ ಅವರೂ ಮೂಲಭೂತವಾದಿಗಳ ಈ ಕೆಟ್ಟತಂತ್ರ, ತಿಳಿವಳಿಕೆಯ ನೆಲೆಯ್ಲಲಿಯೇ ಪ್ರತಿಕ್ರಿಯಿಸ್ದಿದಾರೆ. ಆದರೆ ಹಿಂದೂ ಸೇನೆಯವರ ಹೊಡೆಯುವ, ಬಡಿಯುವ ಬೆದರಿಕೆಗಳನ್ನು ಅವರು ಒಪ್ಪ್ಲಿಲ. ಅಷ್ಟರಮಟ್ಟಿಗೆ ಪ್ರಜಾಸತ್ತಾತ್ಮಕ ನಾಗರಿಕ ವಿವೇಕವನ್ನು ತೋರ್ದಿದಾರೆ.
ಹಿಂದೂಗಳ ದೇವತೆಯಾದ ಚಾಮುಂಡೇಶ್ವರಿಯನ್ನು ಸರಕಾರವು ಮೆರವಣಿಗೆಯ್ಲಲಿ ಒಯ್ಯುವುದನ್ನು ಮಾತ್ರ ನಾವು ಪ್ರಶ್ನಿಸುತ್ತ್ದಿದೇವೆ ಎಂಬುದು ನಿಜವ್ಲಲ. ಅದರ ಬದಲು/ ಜೊತೆಯ್ಲಲಿ ಬೇರೆ ಧರ್ಮಗಳ ದೈವಗಳನ್ನು ಒಯ್ದರೆ ಅದನ್ನೂ ಪ್ರಶ್ನಿಸುತ್ತೇವೆ. ದಸರಾ ಪರಂಪರೆಗೂ, ಸಂವಿಧಾನದ ಜಾತ್ಯತೀತ ತತ್ತ್ವಕ್ಕೂ ಸಮ್ಮತವ್ಲಲದ ರೀತಿಯ್ಲಲಿ ಯಾವುದೇ ದೈವಾಚರಣೆಗಳನ್ನು, ಸಂವಿಧಾನದ ಹೆಸರಿನ್ಲಲಿಯೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಪಡೆದಿರುವ ಸರಕಾರವೇ ನಡೆಸುವುದು ಸರಿಯ್ಲಲ ಎಂಬುದು ನಮ್ಮ ನಿಲುವು. ದಸರಾವನ್ನು ಮಲೆನಾಡು, ಕರಾವಳಿ ಮೊದಲಾದ ಉತ್ಸವಗಳಂತೆ ಯಾವುದೇ ಮತೀಯ ಸೋಂಕ್ಲಿಲದ ಸಾಂಸ್ಕೃತಿಕ ಉತ್ಸವವಾಗಿ ಆಚರಿಸಬೇಕು. ಸರಕಾರವು ನಮ್ಮ ಈ ಸಲಹೆಗಳನ್ನು ಗಂಭೀರವಾಗಿ ಪರಿಶೀಲಿಸಿ ಮೈಸೂರಿನ ಒಟ್ಟೂ ಜನತೆಯ ಕ್ಷೇಮದ ದೃಷ್ಟಿಯಿಂದ ತೀರ್ಮಾನ ಕೈಗೊಳ್ಳಬೇಕು. `ದಸರಾ ಮೊದಲಾದ ಜನತೆಯ ನಾಡಹಬ್ಬವನ್ನು ಸರ್ಕಾರ ಆಚರಿಸುವ ವಿಪರ್ಯಾಸ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಹಿಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹೇಳ್ದಿದನ್ನೂ ಗಮನಿಸಬಹುದು (ಪ್ರ ವಾ. ೨೬-೯-೧೯೯೫).
ದೇಶದ್ಲಲಿ ಹಾಗೂ ರಾಜ್ಯದ ಬೇರೆ ಕಡೆಗಳ್ಲಲಿ ಮತ್ತು ಮೈಸೂರಿನ್ಲಲಿ ನಡೆದ ಮತ್ತು ನಡೆಯುತ್ತಿರುವ ವಿದ್ಯಮಾನಗಳು, ವಿಕೃತ ಸ್ವರೂಪದ ಮತೀಯ ರಾಜಕಾರಣ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುವ ಸೂಚನೆಗಳನ್ನು ನೀಡುತ್ತಿವೆ. ಸರ್ಕಾರ ಮೈಸೂರಿನ ಪ್ರಮುಖರನ್ನು ಆಹ್ವಾನಿಸಿ ಪ್ರಾಮಾಣಿಕ ಹಾಗೂ ಜನಪರ ಸಲಹೆ ನೀಡುವಂತೆ ಕೋರಿತ್ತು. ಸಲಹೆ ನೀಡಿದವರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವ ಹಿಂದೂ ಸೇನೆಯ ಕ್ರಮ ದುರದೃಷ್ಟಕರ.
ಈ ಹಿಂದೂಸೇನೆಯವರು ಇತರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಭಯದ ವಾತಾವರಣವನ್ನು ಸೃಷ್ಟಿಸುತ್ತ್ದಿದಾರೆ. ಈ ಬೆಳವಣಿಗೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮೈಸೂರು ಯಾವುದೇ ಧರ್ಮದ ಮತಾಂಧರ ಪಾಳೆಯಪಟ್ಟು ಆಗದಂತೆ ನೋಡಿಕೊಳ್ಳಬೇಕು.

- ಡಾ. ಪಂಡಿತಾರಾಧ್ಯ, ಮಾನಸ, ಜಿ.ಎಚ್. ನಾಯಕ, ಕೆ. ಶ್ರೀನಿವಾಸನ್, ಜಿ.ಟಿ. ನಾರಾಯಣರಾವ್, ಇತರರು. ಮೈಸೂರು
=============
ಶುಕ್ರವಾರ, ಜುಲೈ ೧೪, ೨೦೦೬
ಪ್ರಜಾವಾಣಿ

ಇಲದ ತಗಾದೆ ಈಗೇಕೆ?
ದಸರಾ ಉತ್ಸವದ್ಲಲಿ ಚಾಮುಂಡೇಶ್ವರಿ ದೇವತೆಯ ವಿಗ್ರಹದ ಮೆರವಣಿಗೆಯನ್ನು ವಿರೋಧಿಸಿ ಡಾ. ಪಂಡಿತಾರಾಧ್ಯ, ಜಿ.ಎಚ್. ನಾಯಕ ಮತ್ತಿತರರು ಮತ್ತೆ ಧ್ವನಿಯೆತ್ತ್ದಿದಾರೆ. (ಪ್ರ.ವಾ. ಜುಲೈ ೧೧).ದಸರಾ ವನ್ನು ಯಾವುದೇ ಮತೀಯ ಸೋಜಿಗದ ಸಾಂಸ್ಕೃತಿಕ ಉತ್ಸವವಾಗಿ ಆಚರಿಸಬೇಕೆಂದು ಕರೆ ನೀಡ್ದಿದಾರೆ.
ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸದ ಎಂ. ಚಿದಾನಂದಮೂರ್ತಿ, ಎಸ್.ಎಲ್. ಭೈರಪ್ಪ ಮುಂತಾದವರನ್ನು ಮೂಲಭೂತವಾದಿಗಳ ಸಾಲಿಗೆ ಸೇರಿಸ್ದಿದಾರೆ.
ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಧಾರ್ಮಿಕ ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗುತ್ತದೆಂದು ಇವರು ಹೇಳ್ದಿದಾರೆಯೇ ಹೊರತು ಧಾರ್ಮಿಕ ಅಲ್ಪಸಂಖ್ಯಾತರಾರೂ ಇದುವರೆಗೆ ಹೀಗೆ ಹೇಳ್ಲಿಲ. ಅವರಿಗೇ ನೋವಾಗದ್ದಿದ ಮೇಲೆ ಇವರೇಕೆ ಇಲದ ತಗಾದೆ ತೆಗೆಯಬೇಕು?
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂದೂ ಇವರ್ಲೆಲ ಆರೋಪಿಸ್ದಿದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಯಾರೋ ಕೆಲವರ ಗುತ್ತಿಗೆಯ್ಲಲ. ಪಂಡಿತಾರಾಧ್ಯ ಜಿ.ಎಚ್. ನಾಯಕರಿಗಿರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಇತರರಿಗೂ ಇದೆ ಎಂಬುದನ್ನು ಅವರು ಮರೆಯಬಾರದು.
ಚಾಮುಂಡೇಶ್ವರಿ ಮೆರವಣಿಗೆಯಿಂದ ಈವರೆಗೆ ಅಹಿತಕರ ಘಟನೆ ನಡೆದ್ಲಿಲ, ಭಯದ ವಾತಾವರಣ ನಿರ್ಮಾಣವಾಗ್ಲಿಲ. ಮೈಸೂರಿನ ಜನರಿಗೆ ತೊಂದರೆಯೂ ಆಗ್ಲಿಲ. ಚಾಮುಂಡೇಶ್ವರಿ ಮೆರವಣಿಗೆಯನ್ನು ನ್ಲಿಲಿಸಿದರೆ ಅಹಿತಕರ ಘಟನೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತ್ಲಿಲ.

-ದು.ಗು. ಲಕ್ಷ್ಮಣ
ಬೆಂಗಳೂರು
===========

ಗುರುಮೂರ್ತಿ said...

ಸ್ವಾಮಿ ಜಾತ್ಯಾತೀತರೆ (ಡಾ. ಪಂಡಿತಾರಾಧ್ಯ, ಮಾನಸ, ಜಿ.ಎಚ್. ನಾಯಕ, ಕೆ. ಶ್ರೀನಿವಾಸನ್, ಜಿ.ಟಿ. ನಾರಾಯಣರಾವ್, ಇತರರು)...

"ಸಂವಿಧಾನದ ಜಾತ್ಯತೀತ ತತ್ತ್ವಕ್ಕೂ ಸಮ್ಮತವ್ಲಲದ ರೀತಿಯ್ಲಲಿ ಯಾವುದೇ ದೈವಾಚರಣೆಗಳನ್ನು, ಸಂವಿಧಾನದ ಹೆಸರಿನ್ಲಲಿಯೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಪಡೆದಿರುವ ಸರಕಾರವೇ ನಡೆಸುವುದು ಸರಿಯ್ಲಲ ಎಂಬುದು ನಮ್ಮ ನಿಲುವು" ಎಂದು ಹೇಳಿದ್ದೀರಿ. ಪ್ರತಿವರ್ಷ ಸರಕಾರದ ಬೊಕ್ಕಸದ ಹಣದಿಂದ ಖರ್ಚು ಮಾಡಿ ಹಜ್ ಯಾತ್ರೆಗೆಂದು ಸಾವಿರಾರು ಮುಸ್ಲಿಮರನ್ನು ಕಳಿಸುತ್ತಾರಲ್ಲ. ಇದು ಯಾವ ಜಾತ್ಯಾತೀತತೆ? ಈ ಬಗ್ಗೆ ಮಾತನಾಡಲು ನಿಮ್ಮಲ್ಲಿ ಯಾರೊಬ್ಬರಿಗಾದರೂ ಧೈರ್ಯ ಇದೆಯೆ? "ಕುಲಕ್ಕೆ ಮೃತ್ಯು ಕೊಡಲಿ ಕಾವು" ಎಂದ ಹಾಗೆ ಬರೀ ನಿಮ್ಮ ಜನಗಳ (ಹಿಂದುಗಳ) ನಂಬಿಕೆಗಳನ್ನು ಮಾತ್ರ ಖಂಡಿಸುವ ನಿಮ್ಮ ಮನೋಭಾವಕ್ಕೆ ಧಿಕ್ಕಾರ!