ಭಾನುವಾರದ ಒಣಮನಸ್ಸು
ಇವತ್ತು ಬೆಳಗ್ಗಿನಿಂದಲೂ ಒಂಥರಾ ಯಾರ ಮೇಲಾದ್ರೂ ಕಿರುಚಾಡಬೇಕು ಅನ್ನೋ ಅಸ್ತವ್ಯಸ್ತ ಮನಸು, ಯಾಕ್ ಹೀಗೆ ಅಂತ ನೋಡ್ತಾ ಹೋದ್ರೆ ಸಾವಿರದ ಒಂದು ಕಾರಣಗಳು...ನಾನೂ moody ಆಗಿ ಬಿಟ್ಟೆನೇ ಎಂದು ಚಿವುಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ... ಸ್ವಲ್ಪ ಕೆದಕಿ ನೋಡಿದಾಗ ಒಂದು ಮಹಾ ಕಾರಣ ಗಂಟು ಬಿದ್ದಿತು. ಎರಡು ವಾರದ ಹಿಂದೆ ನನ್ನ ಪರ್ಸನಲ್ ಲ್ಯಾಪ್ಟಾಪಿನ ಹಾರ್ಡ್ ಡ್ರೈವ್ ಮಠ ಹತ್ತಿ ಹೋಗಿದ್ದು, ಇವತ್ತು ಅದನ್ನು ರಿಪೇರಿ ಮಾಡಿ ಡೇಟಾ ರಿಕವರಿ ಮಾಡುವ ಪುಣ್ಯಾತ್ಮ ಕೊಟ್ಟ ಎಸ್ಟಿಮೇಟನ್ನ್ ನೋಡಿದ ಮೇಲೆ ಡೇಟಾ ಮುಖ್ಯವೋ ಹಣ ಮುಖ್ಯವೋ ಎಂದು ಒಂದನೇ ಕ್ಲಾಸಿನ ಹುಡುಗನ ಹಾಗೆ ಮನಸಿನಲ್ಲೇ ಕೂಡಿಸಿ ಭಾಗಿಸಿ ಗುಣಿಸಿ ಕಳೆದರೂ ಉತ್ತರ ದೊರೆಯವಲ್ಲದು.
ಸುಮಾರು ಒಂದು ತಿಂಗಳ ಹಿಂದೆ ನನಗೇ ನಾನು ರಿಮೈಂಡರ್ ಬರೆದುಕೊಂಡು ಒಂದು ದಿನ ಪರ್ಸನಲ್ ಲ್ಯಾಪ್ಟಾಪಿನ ಡೇಟಾ ಬ್ಯಾಕ್ಅಪ್ ಮಾಡಿಡಬೇಕು ಎಂದುಕೊಂಡಿದ್ದೆ. ಅದಾದ ಒಂದು ವಾರದ ನಂತರ ಇದ್ದಕ್ಕಿದ್ದ ಹಾಗೆ ಒಂದು ಬ್ಲೂ ಸ್ಕ್ರೀನ್ ಎರರ್ ಮೆಸೇಜ್ ಬಂತು, ಎರರ್ ಅನ್ನು ಓದಿ ಬರೆದುಕೊಳ್ಳಲೂ ಆಸ್ಪದ ಕೊಡದ ಹಾಗೆ ಸಿಸ್ಟಂ ನಿಂತು ಹೋಯಿತು. ಮತ್ತೆ ಪುನಃ ಚಾಲೂ ಮಾಡಿ ನೋಡಿದರೆ ಕೆಲಸ ಮಾಡುತ್ತಿಲ್ಲ, ಬದಲಿಗೆ ’ಕ್ಲಿಕ್ ಕ್ಲಿಕ್’ ಶಬ್ದ ಬೇರೆ. ಅಷ್ಟು ಹೊತ್ತಿಗೆಲ್ಲಾ ನನಗೆ ಆಗಿದ್ದೇನು ಎಂದು ಗೊತ್ತಾಗಿ ಹೋಗಿತ್ತು, ಇನ್ನು ಹಾರ್ಡ್ ಡ್ರೈವ್ ತೆರೆದೇ ಅದರಲ್ಲಿರೋ ಡೇಟಾ ರಿಕವರಿ ಮಾಡಬೇಕು, ಹೆಚ್ಚೆಂದರೆ ಒಂದು ಐನೂರು ಡಾಲರ್ ಖರ್ಚಾಗುತ್ತೇನೋ ಎಂದುಕೊಂಡಿದ್ದವನಿಗೆ ಇವತ್ತಿನ ಎಸ್ಟಿಮೇಟ್ ಪ್ರಕಾರ ಸಾವಿರದ ಏಳುನೂರು ಡಾಲರುಗಳಂತೆ! ಬೇರೆಡೆ ಕೇಳಿ ನೋಡಬೇಕು, ಆದರೂ ಐನೂರು ಡಾಲರುಗಳಿಗೆ ಅದನ್ನು ಬಿಚ್ಚಿ ಸರಿ ಮಾಡುವ ಭೂಪ ಸಿಗುವವರೆಗೆ ಇನ್ನು ಅದೆಷ್ಟು ವರ್ಷಗಳು ನನಗೆ ಬೇಕೋ!
ಆ ಹಾರ್ಡ್ಡ್ರೈವ್ನಲ್ಲಿ ಅಸಂಖ್ಯ ಫೈಲುಗಳು ನನಗೆ ಬೇಕಾದವುಗಳು ಇದ್ದವು - ಫೋಟೋಗಳು, ಹಾಡುಗಳು, ಸ್ಪ್ರೆಡ್ಶೀಟುಗಳು, ಡಾಕ್ಯುಮೆಂಟುಗಳು, ನಾನು ಈ ಕಂಪನಿ ಸೇರಿದಂದಿನ ಮೊದಲ ದಿನದಿಂದ ಪೇರಿಸಿಟ್ಟ ಇ-ಮೇಲುಗಳು, ’ಅಂತರಂಗ’ದ ಒರಿಜಿನಲ್ ಫೈಲುಗಳು, ನಾನಾ ರೀತಿಯ ಸಾಫ್ಟ್ವೇರುಗಳು, ಇತ್ಯಾದಿ. ಈಗ ಅವುಗಳಿಗೆಲ್ಲ ಒಂದೊಂದು ಬೆಲೆ ಕಟ್ಟಿ ಅವುಗಳ ಮೊತ್ತವನ್ನು ತುಲನೆ ಮಾಡಿ ನೋಡಬೇಕಾದ ಸಂದರ್ಭ ಬಂದಿದೆ. ಅವುಗಳೆಲ್ಲ ಬೇಕೋ, ಬೇಡವೋ...ಬೇಕಿದ್ದರೆ ಎಷ್ಟು ಹಣವನ್ನು ಖರ್ಚು ಮಾಡಬಲ್ಲೆ, ಇಡೀ ಕಂಪ್ಯೂಟರ್ಗೇ ಸಾವಿರದ ಇನ್ನೂರನ್ನು ಕೊಟ್ಟು ಮೂರು ವರ್ಷ ಉಪಯೋಗಿಸಿರುವ ನಾನು ಇನ್ನು ಕೇವಲ್ ಹಾರ್ಡ್ಡ್ರೈವ್ ಸರಿ ಮಾಡಿಸಲು ಹತ್ತಿರ ಹತ್ತಿರ ಅದರ ಎರಡು ಪಟ್ಟು ಹಣವನ್ನು ಖರ್ಚು ಮಾಡುವುದು ತರವೇ ಅಥವಾ ನಮ್ಮ ಮಾಹಿತಿ, ಡೇಟಾ ಮುಖ್ಯ ಅವುಗಳಿಗೆ ಯಾವ ಬೆಲೆಯನ್ನು ಕಟ್ಟಲಾಗದು ಎನ್ನುವುದು ಸರಿಯೇ?
ಈ if ಮತ್ತು when ಗಳ ವ್ಯತ್ಯಾಸದಲ್ಲಿ ನಾನಂತೂ ನಲುಗಿ ಹೋಗಿದ್ದೇನೆ. If the hard drive crashes...ಎನ್ನುವುದಕ್ಕಿಂತ When the hard drive crashes ಎನ್ನುವುದು ಸರಿಯಾದದ್ದು. ಇವತ್ತಲ್ಲ ನಾಳೆ ಹಾಳಾಗುತ್ತದೆ ಎಂದು ಗೊತ್ತಿದ್ದ ನನಗೆ ಬೇಕಾದ್ದನ್ನು ಸಂರಕ್ಷಿಸಿಡ ತಪ್ಪಿಗೆ ಇಂದು ತೆರಬೇಕಾದ ಬೆಲೆ ಬಹಳ. ತಂತ್ರಜ್ಞಾನ ಯಾವುದೇ ರೀತಿಯಲ್ಲಿ ಮುಂದುವರೆಯಲಿ ಬಿಡಲಿ, ನಾವು ಅವಿಷ್ಕರಿಸುವ ಹೊಸ ಮಾರ್ಗಗಳು ಅಷ್ಟೇ ವಲ್ನರೆಬಲ್ ಅನ್ನಿಸೋಕೆ ಶುರುವಾಗಿದ್ದೇ ಇವತ್ತಿನ ಒಣಮನಸ್ಸಿನ ಹಿಂದಿನ ಮೂಲ ಕಾರಣ. ನನ್ನ ವಸ್ತುಗಳಿಗೆ, ಮಾಹಿತಿಗೆ, ಅವುಗಳ ಹಿಂದಿನ ಫೈಲುಗಳಿಗೆ ಬೆಲೆ ಕಟ್ಟಲಾಗದು ಸರಿ, ಆದರೆ ಇವತ್ತಲ್ಲ ನಾಳೆ ಎಂದು ಮುಂದೂಡುತ್ತಲೇ ಬಂದ ಬ್ಯಾಕ್ಅಪ್ ಕಾಯಕಕ್ಕೆ ಇಷ್ಟೊಂದು ದೊಡ್ಡ ಹೊಡೆತ ಬೀಳಬಾರದಿತ್ತು. ಹೀಗೇ ಒಂದು ದಿನ ಗೂಗಲ್ ವೇರ್ಹೌಸ್ಗಳಿಗೆ ಬೆಂಕಿ ಬಿದ್ದು ’ಅಂತರಂಗ’ದಂತಹ ಎಲ್ಲ ಬ್ಲಾಗ್ಗಳೂ ತಮ್ಮ ತಮ್ಮ ಹಿಂದಿನ ಫೈಲುಗಳನ್ನು ಕಳೆದುಕೊಂಡವೆನ್ನೋಣ, ಅಂದರೆ ನಮ್ಮ ಇತಿಹಾಸ, ನಾವು ನಡೆದು ಬಂದ ಹಾದಿಗೆ ಅಷ್ಟೇ ಬೆಲೆಯೇ? ಅಥವಾ ನಮ್ಮ ಇತಿಹಾಸ ಎನ್ನುವುದು ಕೆಲವು ಕಂಪ್ಯೂಟರ್ ಸರ್ವರ್ ಅಥವಾ ಹಾರ್ಡ್ಡ್ರೈವ್ಗಳ ಮೇಲೆ ಅವಲಂಭಿತವಾಗಬೇಕೆ? ಗೂಗಲ್ ಅಥವಾ ಯಾಹೂ ಅಂತಹ ಕಂಪನಿಗಳು ತಮ್ಮ ತಮ್ಮ ಡಿಸಾಸ್ಟರ್ ರಿಕವರಿ ಪ್ರೊಸೀಜರ್ ಪ್ರಕಾರ ಅವರ ಸರ್ವರ್ ಹಾಗೂ ಮಾಹಿತಿಯನ್ನು ಬ್ಯಾಕ್ಅಪ್ ಮಾಡಿ ಇನ್ನೆಲ್ಲೋ ಫಿಸಿಕಲ್ ಲೊಕೇಷನ್ನಲ್ಲಿ ಇಟ್ಟಿರಬಹುದು, ಇಡದೆಯೂ ಇರಬಹುದು - ಒಂದು ಇ-ಮೇಲ್ ಅಕೌಂಟ್ ತೆರೆದರೆ ಅದರಲ್ಲಿನ ಟರ್ಮ್ಸ್ ಮತ್ತು ಕಂಡೀಷನ್ಸ್ ಅನ್ನು ಪೂರ್ಣವಾಗಿ ಓದಿದ್ದವರಿಗೆ ಗೊತ್ತಿರುತ್ತದೆ, ಈ ಫ್ರೀ ಆಗಿ ಸಿಗಬಹುದಾದ ಅಮೂಲ್ಯ ಸಾಧನಗಳು ಅಷ್ಟೇ ವಲ್ನರಬಲ್ ಎಂಬುದಾಗಿ.
ಕೆಟ್ಟ ಮೇಲೆ ಬುದ್ಧಿ ಬಂತು - ಎಂದ ಹಾಗೆ ನಾನು ನನ್ನೆಲ್ಲ ಮಾಹಿತಿ/ಡೇಟಾವನ್ನು ಬ್ಯಾಕ್ಅಪ್ ಮಾಡಿಟ್ಟು ಬಿಟ್ಟಿದ್ದೇನೆ ಎಂದುಕೊಂಡರೆ ಅದು ತಪ್ಪು. ಈಗ ಟೈಪ್ ಮಾಡುತ್ತಿರುವ ಆಫೀಸ್ ಲ್ಯಾಪ್ಟಾಪ್, ಮತ್ತೆ ಮನೆಯಲ್ಲಿರುವ ಡೆಸ್ಕ್ಟಾಪ್ ಇವೆಲ್ಲವನ್ನೂ ಹಾಗೇ ಬಿಟ್ಟಿದ್ದೇನೆ, ಕೆಟ್ಟು ಹೋದರೆ ಹೋಗಲಿ ಎಂದು. ಅಷ್ಟೊಂದು ಫೈಲುಗಳನ್ನು ಕಳೆದುಕೊಂಡವನಿಗೆ ಇನ್ನೊಂದಿಷ್ಟು ಹೋದರೆ ಏನೂ ಅನಿಸದಿರಬಹುದು ಎಂಬ ಹುಂಬ ನೆಪದ ಹಿನ್ನೆಲೆಯಲ್ಲಿ. ಆದರೆ ಇವತ್ತಲ್ಲ ನಾಳೆ ನನಗೆ ಬೇಕಾದ ಎಲ್ಲ ಫೈಲುಗಳನ್ನು ಡಿವಿಡಿ ಬರ್ನ್ ಮಾಡುವುದರ ಮೂಲಕ ಉಳಿಸಿಕೊಳ್ಳಬೇಕು, ಜೊತೆಗೆ ಯಾವುದಾದರು ಆನ್ಲೈನ್ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿ ಕೈ ತೊಳೆದುಕೊಳ್ಳಬೇಕು. ದುಡ್ಡುಕೊಟ್ಟಾದರೂ ಡೇಟಾವನ್ನು ಉಳಿಸಿಕೊಳ್ಳುವುದು ಜಾಣತನ, ಇಲ್ಲವೆಂದಾದರೆ ನನ್ನ ಹಾಗೆ ಒಣ ಭಾನುವಾರವನ್ನಷ್ಟೇ ಅಲ್ಲ, ಇಡೀ ವಾರವನ್ನು ಕಳೆದರೂ ಕಳೆದು ಹೋದುದು ಮತ್ತೆ ಬರಬೇಕಾದರೆ ಬಹಳ ಕಷ್ಟವಿದೆ.
ಇವತ್ತಲ್ಲ ನಾಳೆ - ಹಾಳಾಗಿರುವ ಹಾರ್ಡ್ಡ್ರೈವ್ ಅನ್ನು ಭಾರತಕ್ಕೋ, ಸಿಂಗಪುರಕ್ಕೋ, ಮಲೇಶಿಯಾಕ್ಕೋ ಕಳಿಸಿ, ಅಷ್ಟೊಂದು ದುಬಾರಿ ಬೆಲೆಯನ್ನು ತೆರದೆ ಡೇಟಾ ರಿಕವರ್ ಮಾಡಿಸಬಹುದು ಎನ್ನುವುದು ಎಲ್ಲೋ ಅಂತರಾಳದಲ್ಲಿ ಹುಟ್ಟಿ ಬೆಳೆಯುವ ಅಲೆ, ಅಥವಾ ನಂಬಿಕೆ ಅಥವಾ ಹುಂಬತನದ ಪರಮಾವಧಿ. ಏಕೆಂದರೆ ಒಂದು ಪತ್ರವನ್ನು ಮೇಲ್ ಮಾಡೋದಕ್ಕೆ ಎರಡು ವಾರ ತೆಗೆದುಕೊಳ್ಳೋ ನಾನು ಇನ್ನು ಹಾರ್ಡ್ಡ್ರೈವ್ ಅನ್ನು ಮತ್ಯಾವುದೋ ದೇಶಕ್ಕೆ ಕಳಿಸಿ ಅದನ್ನು ಫಾಲ್ಲೋ ಅಪ್ ಮಾಡಿ ಯಶಸ್ವಿಯಾಗಿ ಹಿಂತಿರುಗಿಸಿಕೊಳ್ಳುವುದೆಂದರೆ ನನ್ನ ಮಟ್ಟಿಗೆ ಗೌರಿಶಂಕರವನ್ನು ಹತ್ತಿದಂತೆಯೇ ಸರಿ.
ಈಗಿರುವ ಆಪ್ಷನ್ನುಗಳು ಇಷ್ಟೇ - ಒಂದೇ ಒಂದಕ್ಕೆರಡು ಅಥವಾ ಮೂರು ಪಟ್ಟು ಹಣ ತೆತ್ತು ಡೇಟಾ ರಿಕವರಿ ಮಾಡಿಸುವುದು, ಇಲ್ಲಾ ಹೋದರೆ ಹೋಗಲಿ ಎಂದು ಅದನ್ನು ಬದಿಗೆಸೆದು ಮತ್ತೊಂದನ್ನು ತಂದು ಕೂರಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ತಪ್ಪಿನಿಂದ ಪಾಠ ಕಲಿಯುವುದು, ಅಲ್ಲಲ್ಲ ಕಲಿತ ಪಾಠವನ್ನು ಆಚರಣೆಗೆ ತರುವುದು!
3 comments:
ಬೇರೆ ಕಂಪ್ಯೂಟರ್ ಗೆ ಕನೆಕ್ಟ್ ಮಾಡಿ ಸಾಫ್ಟ್ವೇರ್ ರಿಕವರಿ ಪ್ರಯತ್ನಿಸಿದೀರಾ?
ಹೌದು ಹರೀಶ್, ಫಿಸಿಕಲ್ ಡ್ರೈವ್ ಹಾಳಾಗಿರೋದರಿಂದ ಯಾವುದೇ ಪ್ರಯೋಜನವಾಗಲಿಲ್ಲ, ನಿಮ್ಮ ಕಳಕಳಿಗೆ ಧನ್ಯವಾದಗಳು.
Conan Barbarian
Conan the Barbarian Wallpapers
Age of Conan Classes
Game multiplayer online rpg
multiplayer online game like runescape
free online multiplayer game
age of conan gold
aoc gold
Age of Conan Torrent
Age of Conan Trial
Age of Conan Free Trial
Hibernia
Midgard
Albion
DAOC 3 Accounts
DAOC How to Run 3 Accounts
DAOC Triple Log
daoc plat
daoc platinum
wow gold
DAOC Emissary Broken Visions
DAOC Champ Exp Quest
DAOC Artifacts
DAOC templates
Dark Ages of Camelot
EQ2 Plat
EQ2 Gold
EverQuest ii platinum Venekor
Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food
Fading memories Everquest
Mentor everquest
eq2 guild permafrost
free warcraft servers
world of warcraft private servers
world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming
wow pvp
wow arena season 4
wow s3 arena power leveling service
Post a Comment