ಒಣದ್ರಾಕ್ಷಿ ಸ್ನೇಹಿತರ ಪರಸಂಗ
ಬೇಯಿಸಿದ ಓಟ್‌ಮೀಲ್‌ಗೆ ಹಾಕೋಕೇ ಅಂತ ಒಣದ್ರಾಕ್ಷಿ ಡಬ್ಬದ ಮುಚ್ಚಲ ತೆಗೆದರೆ ಅಲ್ಲಿ ಎಲ್ಲವೂ ಖಾಲೀಯಾಗಿ ಡಬ್ಬದ ಕೆಳಗೆ ಒಂದು ಮೂಲೆಯಲ್ಲಿ ಎರಡು ದ್ರಾಕ್ಷಿಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ’ಏನ್ರಯ್ಯಾ, ಸಮಾಚಾರ?’ ಅಂತ ಮಾತನಾಡಿಸ್ಸಿದ್ದಕ್ಕೆ ಬೇಕೋ ಬೇಡವೋ ಎನ್ನುವಂತೆ ನನ್ನ ಕಡೆ ನೋಡಿದವು, ಅದ್ಯಾವ್ದೋ ತಪ್ಪಸ್ಸು ಮಾಡ್ತಾ ಇರೋ ಋಷಿ ಮಧ್ಯೆ ಯಾರೋ ತೊಂದ್ರೇ ಕೊಟ್ರು ಅಂತ ಕೋಪಿಸಿಕೊಂಡಿದ್ದನಂತಲ್ಲ ಹಾಗೆ. ’ನಾನೇನ್‌ರಯ್ಯಾ ಮಾಡ್ಲಿ...ಉಳಿದವ್ರೆಲ್ಲಾ ಎಲ್ಲಿ?’ ಎಂದು ಮತ್ತೊಂದು ಪ್ರಶ್ನೆ ಹಾಕಿದೆ ಅದಕ್ಕಾದ್ರೂ ಉತ್ರಾ ಕೊಡ್ಲಿ ಅನ್ನೋ ಹುಮ್ಮಸ್ಸಿನಲ್ಲಿ, ಆದ್ರೂ ಸುಮ್ನೆ ಕುಂತಿವೆ! ಎಲಾ ಇವ್ನಾ ಎಂದುಕೊಂಡು ಒಂದು ಸ್ಟೀಲ್ ಚಮಚೆಯಿಂದ ಅವುಗಳನ್ನು ತವಕದಿಂದ ಅಲುಗಾಡಿಸಿ ನೋಡಿದೆ. ನಾನು ಅವುಗಳನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಳ್ಳಿದರೆ ಕಷ್ಟಪಟ್ಟು ಒಲ್ಲದ ಮನಸ್ಸಿನಿಂದ ಹೋಗೋಕೇನೋ ತಯಾರಿದ್ದಾವೆ, ಆದ್ರೆ ಒಬ್ಬರನ್ನೊಬ್ಬರು ಬಿಟ್ಟು ಅಗಲ್ತಾ ಇಲ್ಲಾ. ’ಯಾಕ್ರೋ, ಹುಷಾರಿಲ್ವಾ?’ ಎಂದು ಇನ್ನೊಂದು ಪ್ರಶ್ನೆ ಬಿಸಾಕಿದ್ದಕ್ಕೆ ’ಈ ಮಾರಾಯಾ ಬರೀ ಪ್ರಶ್ನೆಗಳಿಂದ್ಲೇ ತಲೇ ತಿಂತಾನೇ’ ಅಂತ ಮನಸ್ಸಿನ್ನಲ್ಲೇ ಅಂದುಕೊಂಡಿರಬೇಕು, ಇದ್ದದ್ದರಲ್ಲಿ ಒಬ್ಬನಿಂದ ಧ್ವನಿಯೊಂದು ಹೊರಗೆ ಬಂತು.
’ಹುಷಾರಿಲ್ಲ ಅಂತೇನಿಲ್ಲಾ...ನಮ್ ಸ್ನೇಹಿತ್ರುಗಳು ಎಲ್ಲೋ ಕಾಣಿಸ್ತಾ ಇಲ್ಲಾ ಅಂತ ಬೇಜಾರ್ ಮಾಡ್ಕೋಂಡ್ ಕೂತೀದೀವಿ...’
ನಾನು, ’ಸ್ನೇಹಿತ್ರಾ? ಯಾರು...ನಿಮ್ ಜೊತೆ ಯಾವ್ ಸ್ನೇಹಿತ್ರಿದ್ರು?’ ಎಂದು ಕಳಕಳಿಯಿಂದ ಕೇಳಿದ್ದಕ್ಕೆ,
’ಊ, ನಾವೆಲ್ಲಾ ಒಟ್ಟಿಗೆ ಹುಟ್ಟೀ, ಬೆಳೆದು ಬಂದಿದ್ವಿ...ಇಲ್ಲೀವರೆಗೆ ಬಂದಿದ್ವಿ, ಒಬ್ಬರ ಕೈ ಒಬ್ರು ಹಿಡಕೊಂಡು...ಆದ್ರೆ ದಿನಾ ದಿನಾ ನಮ್ ಸಂಖ್ಯೆ ಖಾಲೀ ಆಗ್ತಾ ಆಗ್ತಾ ಈಗ ನೋಡಿ ನಾವಿಬ್ರೇ ಇರೋ ಹಾಗಾಗಿದೆ’ ಎಂದು ಇನ್ನು ಸ್ವಲ್ಪ ಆದ್ರೆ ಅತ್ತೇ ಬಿಡ್ತಾವೇನೋ ಅನ್ನೋ ಸ್ವರದಲ್ಲಿ ಸಮಜಾಯಿಷಿ ಸಿಕ್ಕಿತು.
ನನಗೇನು ಗೊತ್ತು, ಈ ಒಣ ದ್ರಾಕ್ಷಿಗಳಿಗೂ ಅನ್ಯೋನ್ಯತೆ, ಸ್ನೇಹ, ಸಂಬಂಧ ಇರುತ್ತೇ ಅಂತ. ಅವುಗಳ ಬಗ್ಗೆ ಇನ್ನಷ್ಟು ತಿಳಕೊಳ್ಳಬೇಕು ಅನ್ನಿಸ್ತು, ಆದ್ರೆ ಮೊದಲ ಭೇಟಿಯಲ್ಲೇ ಪೂರ್ವಾಪರ ವಿಚಾರ್ಸೋದು ಶಿಷ್ಟಾಚಾರ ಅಲ್ಲಾ ಅಂತ ಬಲವಂತವಾಗಿ ಸುಮ್ಮನಿದ್ದೆ. ಆಫೀಸಿಗೆ ಅರ್ಜೆಂಟಾಗಿ ಹೋಗ್‌ಬೇಕು ಅನ್ನೋ ತವಕ ಒಂದು ಕಡೆ, ಟೇಬಲ್ ಮೇಲೆ ಛಳಿ ಗಾಳಿ ಜೊತೆಗೆ ಫ್ರೆಂಡ್‌ಶಿಪ್ ಮಾಡ್ಕೊಂಡು ಇನ್ನೊಂದ್ ಸ್ವಲ್ಪಾ ಹೊತ್ನಲ್ಲೇ ಆರಿ ತಣ್ಣಗಾಗಿ ಬಿಡ್ತೀವಿ ಅಂತ ನನ್ ಮೇಲೆ ಪಂಥಾ ಕಟ್ಟಿರೋ ಕಾಫಿ ಗ್ಲಾಸೂ, ಓಟ್‌ಮೀಲ್ ಭರಣೀನೂ ಮತ್ತೊಂದು ಕಡೆ. ಇವತ್ತು ದ್ರಾಕ್ಷೀ ಇಲ್ಲದೇ ಓಟ್‌ಮೀಲ್ ತಿಂದ್ರೂ ಪರವಾಗಿಲ್ಲ, ಅಷ್ಟೊಂದು ಅನ್ಯೋನ್ಯತೆಯಿಂದ ಇರೋ ಸ್ನೇಹಿತರ ಬಂಧನವನ್ನ ಮುರಿಯೋದ್ ಬೇಡ ಅಂತ ಮನಸ್ಸು ಆಗಷ್ಟೇ ಇಳಿಸಿದ ಸಕ್ರೆ ಪಾಕದ ಥರ ಹರಳುಗಟ್ಟತೊಡಗಿತ್ತು.
ಇದ್ದಕ್ಕಿದ್ದ ಹಾಗೆ, ಇವರ ಸ್ನೇಹಿತ್ರೆನ್ನೆಲ್ಲ ಹಿಂತಿರುಗಿಸಿ ತಂದು ಕೊಟ್ಟಂತೆ ಮಾಡಿದ್ರೆ ಹೇಗೆ ಅನ್ನೋ ಆಲೋಚ್ನೇ ಬಂದಿದ್ದೇ ತಡ ಒಡನೆಯೇ ಪ್ಯಾಂಟ್ರಿ ಕ್ಲಾಸೆಟ್ಟಿನಿಂದ ಸನ್‌ಮೇಡ್ (sun maid) ರೇಸಿನ್ ಡಬ್ಬವನ್ನು ತಂದೆ, ಇನ್ನೇನು ಮುಚ್ಚಲವನ್ನು ತೆಗೆದು ಖಾಲಿಯಾದ ಡಬ್ಬದೊಳಗೆ ಸುರಿಯಬೇಕು ಆಗ ಈ ಸ್ನೇಹಿತರ ಭಾವನೆಗಳಿಗೆ ಸ್ವಲ್ಪವೂ ಬೆಲೆಕೊಡದೆ ಎಂಥಾ ಹುಂಬ ಕೆಲಸವನ್ನು ಮಾಡುತ್ತಿದ್ದೇನೆ ಎಂದೆನಿಸಿದ್ದರಿಂದ, ನಿಧಾನವಾಗಿ ಅಕ್ವೇರಿಯಂನಲ್ಲಿರುವ ಮೀನನ್ನು ತೆಗೆಯುವ ಹಾಗೆ ಚಮಚೆಯಿಂದ ಅಗಲದ ಸ್ನೇಹಿತರನ್ನು ತೆಗೆದು ದ್ರಾಕ್ಷಿ ಡಬ್ಬದ ಮುಚ್ಚಲದ ಮೇಲೆ ಹಾಕಿದೆ, ಸನ್‌ಮೇಡ್ ರೇಸಿನ್ ಡಬ್ಬದಿಂದ ಸುಮಾರು ಅರ್ಧ ಡಬ್ಬಿ ತುಂಬುವವರೆಗೆ ದ್ರಾಕ್ಷಿ ಡಬ್ಬವನ್ನು ತುಂಬಿದೆ, ಆಗಲಾದರೂ ತಮ್ಮ ಅಗಲಿದ ಸ್ನೇಹಿತರನ್ನು ಇವರಿಬ್ಬರೂ ಮರೆಯಲಿ ಎಂಬ ಆಸೆಯಲ್ಲಿ, ಆದರೆ ಆದದ್ದೇ ಬೇರೆ.
ನಾನು ಅರ್ಧ ಡಬ್ಬವನ್ನು ತುಂಬುತ್ತಿರುವುದನ್ನು ನೋಡಿ ಇಬ್ಬರ ಮುಖವೂ ಪೆಚ್ಚಾಯಿತು, ಏಕೆ ಎಂದು ಹೊಳೆಯಲಿಲ್ಲ, ಕೇಳಿಯೇ ಬಿಡೋಣವೆಂದು, ’ಈಗೇನಾಯ್ತು?’ ಎಂದೆ.
ಇಬ್ಬರೂ ಒಬ್ಬರನೊಬ್ಬರನ್ನು ನೋಡಿಕೊಂಡು, ’ಏನಿಲ್ಲ, ಅವರೆಲ್ಲಾ ನಮ್ ಸ್ನೇಹಿತ್ರಲ್ಲಾ...’ ಎಂದು ಒಕ್ಕೊರಲಿನಿಂದ ಉತ್ತರ ಕೊಟ್ಟವು. ಎಲಾ ಇವ್ನಾ...’ನಿಮಗೆ ಹೇಗೆ ಗೊತ್ತಾಯ್ತು?’ ಎಂದಿದ್ದಕ್ಕೆ,
’ನಮ್ ಸುತ್ಲೂ ಬಾಳಾ ವರ್ಷದಿಂದ ಇದ್ದು ಬೆಳದೋರಿಗೂ ಇವರಿಗೂ ತುಂಬಾ ವ್ಯತ್ಯಾಸ ಇದೆ, ಈಗ ಮನುಷ್ಯರನ್ನು ತಗೊಂಡ್ರೇ ಎಲ್ಲರೂ ಒಂದೇನಾ?’ ಎಂದು ನನ್ನನ್ನೇ ಪ್ರಶ್ನಿಸಿದವು. ಇದೊಳ್ಳೇ ಕಥೆಯಾಯ್ತಲ್ಲಪ್ಪಾ, ಬೆಳ್ಳಂಬೆಳಗ್ಗೆ, ಏನಾದ್ರೂ ಹಾಳ್ ಬಡಿಸಿಕೊಂಡ್ ಹೋಗ್ಲೀ, ತಿಂಡಿ ತಿನ್ನದಿದ್ರೂ ಪರವಾಗಿಲ್ಲ ಆಫೀಸಿಗೆ ಹೋಗಿ ಬಿಡಲಾ ಎಂದು ಒಂದು ಮನಸ್ಸಿಗೆ ಅನ್ನಿಸಿದ್ರೂ, ನೋಡೇ ಬಿಡೋಣ ಇವರ ಸ್ನೇಹ ಎಲ್ಲೀವರೆಗೆ ಬರುತ್ತೆ ಅಂತ ಇನ್ನೊಂದು ಮನಸ್ಸಿಗೆ ಅನ್ನಿಸಿದ್ದು ನಿಜ. ನಾನು ಮತ್ತೆ ಪ್ರಶ್ನೆ ಕೇಳತೊಡಗಿದೆ.
’ನೀವಿಬ್ರೂ ಎಲ್ಲಿ ಬೆಳದೋರು? ಯಾವೂರಿನವ್ರು?’
’ನಮ್ಮೂರು ತುಂಬಾ ದೂರಾ ಸಾರ್, ನಾವು ನಿಮ್ಮನೇ ಡಬ್ಬಿಗೆ ಹೇಗ್ ಬಂದ್ವೋ ಗೊತ್ತಿಲ್ಲಾ, ಒಂದೇ ಗದ್ದೇಲ್ ಹುಟ್ಟಿದ್ವಿ, ಒಂದೇ ಗೊಂಚಲಲ್ಲಿ ಬೆಳೆದಿದ್ವಿ, ಒಂದೇ ಕಡೆ ಒಣಗಿದ್ರೂನ್ವೆ ನಾವ್ ಯಾವತ್ತೂ ಜೊತೆ ಬಿಟ್ಟೋರಲ್ಲಾ...ಹೀಗಿರೋ ಸ್ನೇಹಿತ್ರು ಅವರವ್ರ ಕಾಲಾ ಬಂತೂ ಅಂತ ಒಂದೊಂದ್ ಕಡೇ ಹೋದ್ರು, ಕೊನೇಗ್ ನಾವ್ ಮಾತ್ರ ಉಳಿದೀದೀವ್ ನೋಡ್ರಿ, ನಮ್ ಕಥೆ ಇನ್ನೇನಾಗುತ್ತೋ ಅನ್ನೋ ಭಯ ಬೇರೆ...’ ಎಂದು ತಮ್ಮ ಅಳಲನ್ನು ತೋಡಿಕೊಂಡವು.
’ಓ ಹಾಗಾ...’ ಎಂದು ಯಾರದ್ದೋ ಪ್ರಶ್ನೆಗೆ ಉತ್ತರ ಹೊಳೆದವರ ಹಾಗೆ ಧ್ವನಿ ಹೊರಗಡೆ ಬಂದರೂ, ಈ ಸ್ನೇಹಿತರುಗಳ ಬಗ್ಗೆ ಚಿಂತಿಸೋದು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಅವರಿಗೆ ಸಮಜಾಯಿಷಿ ಹೇಳೋ ಹಾಗೆ,
’ನೋಡ್ರಪಾ, ನಿಮ್ ಸ್ನೇಹಿತ್ರು ಎಲ್ಲೆಲ್ಲಿ ಹೋಗೋವ್ರೇ ಅಂತ ನನಗೂ ತಿಳೀದೂ, ಈ ಭೂಮಿಗ್ ಬಂದೋರೆಲ್ಲಾ ಒಂದಲ್ಲ ಒಂದ್ ದಿನ ಹೋಗೋದೇ ಅಂತ ನಿಮಗೂ ತಿಳಿದಿರ್‍ಬೇಕು, ಅಂಥಾದ್ದರಲ್ಲಿ ಹೋದೋರ್ ಬಗ್ಗೆ ಮರುಕಾ ಪಟ್ಟು ಯಾರಿಗೇನ್ ಸುಖಾ ಇದೆ...’ ಎಂದು ಉಪದೇಶ ಸಾರೋ ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, ಅವರಲ್ಲೊಬ್ಬ ಹೀಗನ್ನೋದೇ,
’ನೀವೇನೋ ದೊಡ್ಡ ಮನುಷ್ಯರೂ ಅಂತ ಅಂದುಕೊಂಡಿದ್ವಿ, ಹುಟ್ಟೀ ಸಾಯೋದೇನಿದ್ರೂ ದೇಹಾ ಸಾರ್, ಆದ್ರೆ ಸಂಬಂಧ-ಬಾಂಧವ್ಯಾ ಅನ್ನೋದೂ ದೇಹಕ್ಕಿಂತ ದೊಡ್ಡದು. ನಾವು ಎಲ್ಲೋ ಕಳಕೊಂಡ ನಮ್ ಸ್ನೇಹಿತ್ರು ಬಗ್ಗೆ ಮರುಗ್ತಾ ಇದ್ರೆ ಮುಂದಿನ್ ದಾರೀ ನೋಡ್ರೀ ಅಂತ ಹೇಳ್ತೀರಲ್ಲಾ ಸಾರ್...’ ಎಂದು ಅಳುಮುಖದಿಂದ ಸಿಟ್ಟಿಗೆ ಪರಿವರ್ತನೆಗೊಂಡವು.
’ಲೋ, ಮನಸ್ಸು ಮಾಡಿದ್ರೆ ನಿಮ್ಮನ್ನ್ ಒಂದೇ ಮುಕ್ಕಿಗೆ ತಿಂದ್ ಬಿಸಾಕ್ತೀನ್ ನೋಡ್ರೀ...’ ಎಂದು ಹೆದರಿಸೋಣವೆಂದು ನಾಲಿಗೆ ತುದೀವರೆಗೆ ಬಂದರೂ ಕಷ್ಟಪಟ್ಟು ತಡೆದುಕೊಂಡೆ, ಇನ್ನೊಂದ್ ಸರ್ತಿ ಪ್ರಯತ್ನಿಸೋಣಾ ಅಂತ,
’ನೋಡ್ರೋ, ನಿಮ್ ಕಷ್ಟಾ ನನಗರ್ಥಾ ಆಗುತ್ತೇ, ಆದ್ರೆ ನಿಮ್ಮ್ ಸಮಸ್ಯೇ ಕೇಳೋಕಾಗ್ಲೀ ಅದಕ್ಕ್ ಪರಿಹಾರಾ ಹುಡುಕೋಕ್ ಆಗ್ಲಿ ನನ್ ಹತ್ರ ಟೈಮಿಲ್ಲ, ಆಫೀಸಿಗೆ ಬೇರೆ ಹೊತ್ತಾಗ್ತಾ ಇದೆ...’ ಎನ್ನೋ ಮಾತನ್ನೂ ಅರ್ಧದಲ್ಲೇ ತಡೆದು, ಅವರಿಬ್ಬರಲ್ಲಿ ಮತ್ತೊಬ್ಬ,
’ಕಂಡಿದ್ದೀವಿ ನಡೀರಿ ನಿಮ್ ಆಫೀಸ್ ಕೆಲ್ಸಾನಾ...ಆಫೀಸಲ್ಲಿದ್ದಾಗ ಮನೇ ಬಗ್ಗೆ ಕೊರಗ್ತೀರಿ, ಮನೇಲಿದ್ದಾಗ ಆಫೀಸಿನ್ ವಿಷ್ಯಾ ತೆಲೆಕೆಡಿಸಿಕಂತೀರಿ...ನಿಮ್ ಆಫೀಸೂ, ಆಫೀಸ್ ಕೆಲ್ಸಾ, ಆಫೀಸ್ ತಿರುಗಾಟಾ ಅಂತೆಲ್ಲಾ ಅಂದೂ ಅಂದೇ ನಿಮ್ಮ್ ಮನಸಿನ್ನಷ್ಟೇ ನಿಮ್ಮ್ ನಿಮ್ಮ್ ಸಂಬಂಧಗಳೂ ಸಣ್ಣವಾಗಿರೋದು...ಕೊನೇಗೆ ನಮ್ಮಂತೋರ್ ಸತ್ರೆ - ಒಳ್ಳೇ ಸ್ನೇಹಿತ್ರು, ಸಂಬಂಧಗಳ ಜೀವಂತಿಕೆಗೆ ತಡಪಡಿಸೋರು - ಅಂತ ನಮ್ ಗೋರೀ ಮೇಲೆ ಬರೀತಾರೆ, ಇನ್ನು ನಿಮ್ಮಂತೋರಿಗೆ ದಿನಾ ಆಫೀಸಿಗೆ ಹೋಗೋ ದಾಸಯ್ಯಾ ಸತ್ತಾ ಅಂತ ಬರೀತಾರೆ...’ ಎಂದು ಜೋರು ಮಾಡತೊಡಗಿದವು. ನನಗಂತೂ ಈ ಫುಟ್‍ಪಾತ್ ಮೇಲೆ ಇದ್ದೋರಿಗೆ ಸಹಾಯ ಮಾಡಕ್ಕೋಗಿ ಅವರೇ ಎದುರಿಗೆ ತಿರುಗಿ ಬಿದ್ದ ಅನುಭವವಾದಂತಾಗಿ, ಈ ಒಣದ್ರಾಕ್ಷಿಗಳು ನಿಜವಾಗಿಯೂ ಮಾತನಾಡುತ್ತಿವೆಯೇ ಎಂದು ಪರೀಕ್ಷಿಸುವಂತಾಯಿತು. ಮತ್ತೆ ಸಮಜಾಯಿಷಿ ಹೇಳೋ ಧ್ವನಿಯಲ್ಲಿ ಶುರು ಮಾಡಿದೆ,
’ನಿಮಗ್ಗೊತ್ತಾಗಲ್ಲ, ನಾವು ಇವತ್ತು ದುಡಿದು ನಾಳೇ ತಿನ್ನಬೇಕು, ದುಡಿದದ್ದನೆಲ್ಲ ಬಿಲ್ ಕಟ್ಟೋದಕ್ಕೇ ಆಗಿ ಹೋಗುತ್ತೇ, ಇನ್ನು ಸಂಸಾರ ತೂಗಿಸೋದೂ ಅಂದ್ರೆ...’ ಎಂದು ರಾಗ ಎಳಿಯುತ್ತಿದ್ದ ಹಾಗೆ...
’ಮತ್ತೆ ಶುರು ಮಾಡಿದ್ರಾ ನಿಮ್ ಅಳುಮುಂಜೀ ರಾಗಾನಾ...’ಎಂದು ಇಬ್ಬರೂ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಸ್ವಲ್ಪ ಖುಷಿಯನ್ನು ಕಿರುಚುವಿಕೆಯಲ್ಲಿ ಅಭಿವ್ಯಕ್ತಗೊಳಿಸಿ ಅರ್ಧ ತುಂಬಿದ ಒಣ ದ್ರಾಕ್ಷಿ ಡಬ್ಬದೊಳಗೆ ಜಿಗಿದು ಅವುಗಳಲ್ಲಿ ಒಂದಾಗಿ ಹೋದವು.
’...ನಿಮ್ಮನ್ನಾ ಒಂದ್ ಕೈ ನೋಡೇ ಬಿಡ್ತೀನಿ...’ ಎನ್ನುವ ನನ್ನ ಧ್ವನಿ ಹಲ್ಲಿನ ಹಿಂದೆಯೇ ಉಳಿದು ಹೋಗಿ, ಒಣದ್ರಾಕ್ಷಿ ಡಬ್ಬವನ್ನು ಗಟ್ಟಿಯಾಗಿ ಮುಚ್ಚುಳ ಹಾಕಿದೆ, ಮತ್ತೆನ್ನೆಲ್ಲಿಯಾದರೂ ಓಡಿ ಹೋಗಿ ಕಾರಿನ ವಿಂಡ್‌ಶೀಲ್ಡ್ ಹಿಂದೆ ಸೇರಿ ಬಿಟ್ಟಾರು ಎನ್ನುವ ಹೆದರಿಕೆಯಂತೂ ಇತ್ತು, ಸದ್ಯ ಹಾಗಾಗಲಿಲ್ಲ!
8 comments:
ಸತೀಶ್,
ತುಂಬಾ ಚೆನ್ನಾಗಿದೆ. ಬರೀ ದ್ರಾಕ್ಷಿ ಕಥೆಯಲ್ಲಿ ಸ್ನೇಹ ಎಂದರೆ ಮತ್ತು ಜೀವನದ ಬಗ್ಗೆ ಹೇಳಿದ್ರಿ.
ಸತೀಶ್, ಈ ರೀತಿ ಹೇಳುತ್ತಿದ್ದೇನೆಂದು ತಪ್ಪು ತಿಳಿಯಬೇಡಿ, ಆದರೆ ನಾನು ನನ್ನ ಫೀಡ್ ರೀಡರ್‍ನಲ್ಲಿ ಪ್ರತಿ ಬಾರಿ ’ಅಂತರಂಗ’ದ ಲೇಖನವನ್ನು ಓದಿದಾಗಲೂ ಯಾವುದೋ ಹುಡುಗಿ ಬರೆದಿರುವ ಲೇಖನ ಎಂದುಕೊಳ್ಳುತ್ತೇನೆ.
ಇದಕ್ಕೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ. ಎಲ್ಲಾ ಲೇಖನಗಳೂ ಚೆನ್ನಾಗಿವೆ.
ಯಜ್ಞೇಶ್,
ಇದೂ ಕೂಡಾ ಒಂದು ಹೊಸ ಪ್ರಯೋಗ, ಅಸಾಮಾನ್ಯ ಪಾತ್ರಗಳು ನಮ್ಮೊಳಗಿನ ಗೊಂದಲವನ್ನು ಹೊರಗೆ ತರೋದು.
ಹರೀಶ್,
ನೀವು ಫೀಡ್ ರೀಡರ್ ಅನ್ನು ಬಿಟ್ಟು ನೇರವಾಗಿ ’ಅಂತರಂಗ’ದಲ್ಲೇ ಓದಿ ಇನ್ನು ಮುಂದೆ! :-)
ನಿಮ್ಮ ಈ ಫೀಡ್‌ಬ್ಯಾಕ್ ಬಹಳ ಮುಖ್ಯವಾದದ್ದು, ಅದರ ಹಿಂದೆ ಅಪಾರ್ಥವೇನಿಲ್ಲ.
ಈ ಬರಹ ಸ್ವಲ್ಪ Kafkaನನ್ನು ನೆನಪಿಸಿತು. ಮನಸ್ಸು ಮತ್ತು ವಾಸ್ತವದ ಕ್ಷಣಗಳು ಸಂಧಿಸಿದಾಗ ಮೂಡುವ ಬರಹಗಳು classic ಆಗುತ್ತವೆ. ಅಂತಹದರಲ್ಲಿ ಇದೊಂದು piece. ಚೆನ್ನಾಗಿರುವುದನ್ನು ಸುಮ್ಮನೆ ಚೆನ್ನಾಗಿದೆ ಎಂದು ಹೇಳಲೂ ಬರದವನು ನಾನು!
ಹೆಹ್ಹೆ .. ನೀವು ಬರೆಯುವ ಶೈಲಿಯ ಬಗ್ಗೆ ನಾನು ಹೇಳಿದ್ದು.. ಫೀಡ್ ರೀಡರ್ ನ ಪ್ರಾಬ್ಲಂ ಅಲ್ಲ ಅದು..
ಬಾನಾಡಿ,
ನಿಮ್ಮ ಕಾಫ್ಕಾನ ನೆನಪಿನಿಂದ ನನ್ನ ನೆನಪುಗಳು ಮತ್ತೆ ಚಿಗುರೊಡೆದುಕೊಂಡವು! ’ಚೆನ್ನಾಗಿದೆ’ ಅಂತೇನೂ ಹೇಳೋದೇ ಬೇಡಾ, ಆಗಾಗ್ಗೆ ಬಂದು ಓದ್ತಾ ಇರಿ ಅಷ್ಟೇ ಸಾಕು.
ಹರೀಶ್,
ನಾನು ಹೇಳಿದ್ದು ನಿಮಗೆ ಅರ್ಥವಾಗಲಿಲ್ಲ...ಗೂಗಲ್’ರೀಡರ್’ ಸಮಸ್ಯೆ ಅಲ್ಲ, ’ರೀಡರ್’ ಸಮಸ್ಯೆಯೇನೋ ಅಂದುಕೊಂಡಿದ್ದೆ, ಆದರೆ ಈಗ ಅದಲ್ಲ ಅಂತ ಗೊತ್ತಾಯಿತು ಬಿಡಿ! :-)
Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.
Conan Barbarian
Conan the Barbarian Wallpapers
Age of Conan Classes
Game multiplayer online rpg
multiplayer online game like runescape
free online multiplayer game
age of conan gold
aoc gold
Age of Conan Torrent
Age of Conan Trial
Age of Conan Free Trial
Hibernia
Midgard
Albion
DAOC 3 Accounts
DAOC How to Run 3 Accounts
DAOC Triple Log
daoc plat
daoc platinum
wow gold
DAOC Emissary Broken Visions
DAOC Champ Exp Quest
DAOC Artifacts
DAOC templates
Dark Ages of Camelot
EQ2 Plat
EQ2 Gold
EverQuest ii platinum Venekor
Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food
Fading memories Everquest
Mentor everquest
eq2 guild permafrost
free warcraft servers
world of warcraft private servers
world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming
wow pvp
wow arena season 4
wow s3 arena power leveling service
Post a Comment