ಸುಳಿವು ಕೊಡುವ ಸಂಗೀತ
ಜೇಮ್ಸ್ ಬಾಂಡ್ ಚಿತ್ರದಲ್ಲಿ ಅದರ ಥೀಮ್ ಮ್ಯೂಸಿಕ್ ಆಗಾಗ್ಗೆ ಕೇಳ್ಸುತ್ತೆ, ಬಾಂಡ್ ದುಷ್ಟರ ಕೂಟವನ್ನು ಹೊಕ್ಕಾಗ, ದುಷ್ಟರನ್ನು ಸೆದೆಬಡಿಯುತ್ತಿರುವಾಗ, ಅಪಾಯದ ಸುಳಿಯಲ್ಲಿ ಸಿಲುಕುವಾಗ, ಸುಳಿಯಿಂದ ಹೊರಬರುತ್ತಿರುವಾಗ...ಹೀಗೆ ಅನೇಕ ಸನ್ನಿವೇಶಗಳಲ್ಲಿ ಅದು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ಪ್ರೇರೇಪಿಸಿ ಮುಂಬರುವ ಅಪಾಯದ ಸುಳಿವನ್ನು ಹೀರೋಗಿಂತ ಮೊದಲೇ ಪ್ರೇಕ್ಷಕರಿಗೆ ನೀಡುವ ತಂತ್ರವದು. ನಿಜ ಜೀವನದಲ್ಲೂ ಹೀಗೇ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಲ್ವಾ? ನಮಗೆ ಬರೋ ತೊಂದರೆ ತಾಪತ್ರಯಗಳು, ನಾಳೆಯ ಕೆಲಸದ ಬಗ್ಗೆ ಇಂದೇ ಕೇಳುವ ಬಾಸಿನ ಬಗ್ಗೆ, ದೂರದಲ್ಲೆಲ್ಲೋ ಹೊಂಚು ಹಾಕಿ ಕುಳಿತು ಟ್ರಾಫಿಕ್ ವಯಲೇಷನ್‌ಗೆ ಟಿಕೇಟ್ ಕೊಡುವ ಮಾಮಾನ ಬಗ್ಗೆ, ನಮ್ಮ ಪಕ್ಕದಲ್ಲೇ ಇದ್ದು ನಮ್ಮ ವಿರುದ್ಧ ಸಂಚು ಮಸೆಯುವವರನ್ನು ಕುರಿತು...ಇತ್ಯಾದಿಯಾಗಿ ಸುಳಿವು ಸಿಕ್ಕಿದ್ದರೆ ಎಷ್ಟೊಂದು ಚೆನ್ನಿತ್ತು!
ಅಥವಾ ನಮ್ಮ ಸುತ್ತ ಮುತ್ತಲು ಬೇಕಾದಷ್ಟು ಆ ರೀತಿಯ ಸುಳಿವುಗಳು ಇರುತ್ತವೆಯೋ ಏನೋ, ಅದನ್ನು ನೋಡುವ ಕೇಳಿಸಿಕೊಳ್ಳುವ ಮನಸ್ಥಿತಿ ಇರಬೇಕಷ್ಟೇ. ಯಾವುದೋ ಒಂದು ಅವಘಡದಿಂದ ಪಾರಾಗಿ ಹೊರಬಂದ ಮೇಲೆ ಅಥವಾ ನೋವು ಅನುಭವಿಸಿ ಅದರಿಂದ ಸುಧಾರಿಸಿಕೊಂಡ ಮೇಲೆ ಅಯ್ಯೋ ಆ ಸುಳಿವು ಸಿಕ್ಕಿತ್ತು, ಅದನ್ನು ನಾನು ಗಮನಿಸಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡಿರುವ ಪ್ರಸಂಗಗಳೂ ಇಲ್ಲದೇನಿಲ್ಲ. ಇಂಗ್ಲೀಷ್‌ನಲ್ಲಿ hind site is 20/20 ಅಂತಾರಲ್ಲ ಹಾಗೆ. ಆದರೆ ಅತಿಯಾಗಿ ಇಂತಹ ಆಘಾತಕಾರಿ ಸಂಗೀತದ ಸುಳಿಯನ್ನು ಹುಡುಕಿಕೊಂಡೋ ಅಥವಾ ಪ್ರಾಬ್ಲೆಮ್ಮುಗಳನ್ನು ಆಲೋಚಿಸಿಕೊಂಡು ಅದಕ್ಕೆಲ್ಲಾ ಉತ್ತರವನ್ನೋ ಅಥವಾ ಕಾಂಟಿಜೆನ್ಸಿಯನ್ನೋ ಪ್ಲಾನು ಮಾಡಿಕೊಂಡು ಹೋಗುವುದೂ ಅಷ್ಟೇ ಅಪಾಯಕಾರಿಯಾದ ಸಮಸ್ಯೆಯಾಗಬಹುದು. ನೋಡದೇ ಬರುವ ಆಘಾತ, ಗೊತ್ತಿರುವ ಸಮಸ್ಯೆಗಳ ನಡುವೆ ಎಲ್ಲೋ ಒಂದು ಎಡೆ ಮಾಡಿಕೊಂಡು ಉಪಾಯವಾಗಿ ಕೆಲಸ ಸಾಗಿಸುವುದು ದೈನಂದಿನ ಸವಾಲು ಅಷ್ಟೇ, ಇವರೆಡರ ನಡುವೆ ಇರುವ ವ್ಯತ್ಯಾಸ ಚಿಂತೆ ಹಾಗೂ ಚಿಂತನೆಗಳಿರುವಷ್ಟೇ ಸೂಕ್ಷ್ಮವಾದದ್ದು.
ಆದರೆ, ಸಮಸ್ಯೆಗಳಿರದ ಕೆಲಸವಾಗಲೀ ಬದುಕಾಗಲೀ ಯಾವುದಿದ್ದೀತು? ಸಮಸ್ಯೆಗಳು ಬರುವುದೇ ನಮ್ಮನ್ನು ಸುಧಾರಿಸುವುದಕ್ಕೆ ಮುಂಬರುವ ಇನ್ನೊಂದ್ಯಾವುದೋ ಸನ್ನಿವೇಶಗಳಿಗೆ ನಮ್ಮನ್ನು ಅನುವು ಮಾಡುವುದಕ್ಕೆ. ನಮಗೆ ಎಂಟನೆ ತರಗತಿಯ ಕನ್ನಡ ನಾನ್ ಡೀಟೈಲ್‌ನ ’ಶಿಖರಗಾಮಿಗಳು’ ಪಾಠದಲ್ಲಿ ತೇನಸಿಂಗ್ ಬಗ್ಗೆ ಹೇಳುವಾಗ ಒಂದು ಮಾತು ಬರುತ್ತಿತ್ತು - ದೈಹಿಕ ಪರಿಶ್ರಮದಿಂದ ದೇಹ ಗಟ್ಟಿಯಾಗುವ ಹಾಗೆ ಮಾನಸಿಕ ಸಂಕಷ್ಟಗಳು ಮನಸ್ಸನ್ನೂ ಅಷ್ಟೇ ಗಟ್ಟಿಗೊಳಿಸುತ್ತವೆ - ಎಂಬುದಾಗಿ. ನಮ್ಮ ಭಾರತದ ಆಫೀಸುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೇಗೋ ಗೊತ್ತಿಲ್ಲ, ಇಲ್ಲಿನ ಹೆಚ್ಚೂ ಕಡಿಮೆ ಎಲ್ಲ ಕೆಲಸಗಳಲ್ಲಿ, ನನ್ನ ಸ್ನೇಹಿತನೊಬ್ಬ ಹೋಗುವ ಮರೀನ್‌ಕಾರ್ಪ್ ಮಿಲಿಟರಿ ಅಸೈನ್‌ಮೆಂಟ್‌ನಿಂದ ಹಿಡಿದು, ಕಾರ್ಪೋರೇಟ್ ಪ್ರಾಜೆಕ್ಟುಗಳವರೆಗೆ ಎಲ್ಲಿ ಹೋದರೂ lessons learned ಎಂದು ಒಂದು ವರದಿ ತಯಾರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಈ ರೀತಿ ಕಲಿತ ಪಾಠಗಳು ಹೆಚ್ಚಿದ್ದರೂ ಕಷ್ಟ, ಕಡಿಮೆಯಾದರೂ ಕಷ್ಟ ಎನ್ನಿಸಿದ್ದಿದೆ. ಇತ್ತೀಚೆಗೆ ಪ್ರಾಜೆಕ್ಟ್ ಮಾಡಿ ಮುಗಿಸಿದ ಮೇಲೆ (ತಪ್ಪಿನಿಂದ) ಕಲಿತ ಪಾಠಗಳನ್ನು ಒಪ್ಪಿಸಬೇಕಾಗಿ ಬಂದಿದ್ದು ಇನ್ನೂ ಸಂಕಷ್ಟದ ಪರಿಸ್ಥಿತಿಯೊಂದನ್ನು ಹುಟ್ಟು ಹಾಕಿತ್ತು. ಯಾರ ಮೇಲೂ (ನೇರವಾಗಿ) ಬೆರಳು ಮಾಡಿ ತೋರುವಂತಿಲ್ಲ, ಆದರೆ ವ್ಯವಸ್ಥಿತವಾದ ವರದಿಯೊಂದನ್ನು ತಯಾರಿಸಬೇಕು, ಇದೆಂಥ ಕಷ್ಟದ ಕೆಲಸ ಎಂದು ಒಮ್ಮೆ ಅನ್ನಿಸಿದ್ದೂ ಹೌದು.
ಸಮಸ್ಯೆಗಳ ಬಗ್ಗೆ ಯೋಚಿಸಿ ಒಂದು ಹೆಜ್ಜೆ ಮುಂದೆ ಹೋದರೆ ಸಮಸ್ಯೆಗಳು ಒಂದು ಮಾನಸಿಕ ನೆಲೆಗಟ್ಟೋ ಅಥವಾ ಭೌತಿಕ ಸ್ಥಿತಿಯೋ, ನಾವೇ ಹುಟ್ಟಿಸಿಕೊಂಡವುಗಳನ್ನು ಸಮಸ್ಯೆಗಳು ಎಂದು ಕರೆಯಬೇಕೋ ಅಥವಾ ನಮ್ಮಿಂದ ನಿವಾರಣೆಯಾಗಬಲ್ಲದು ಸಮಸ್ಯೆಯಾಗೇ ಹೇಗೆ ಉಳಿಯುತ್ತದೆ ಎಂದು ಹಲವಾರು ಪ್ರಶ್ನೆಗಳು ಎದುರಾದವು. ಜೊತೆಗೆ ಪ್ರತಿಯೊಂದು ಸಮಸ್ಯೆಗೂ ಉತ್ತರವೆನ್ನುವುದು ಇದೆಯೇ? ಅಥವಾ ಉತ್ತರವಿಲ್ಲದ್ದನ್ನೂ ಉತ್ತರವಿರುವಂತಹದ್ದನ್ನೂ ಸಮಸ್ಯೆ ಎಂದು ಒಂದೇ ಹೆಸರಿನಿಂದ ಹೇಗೆ ಕರೆಯಲು ಸಾಧ್ಯ? ಹೀಗೆ ಸಮಸ್ಯೆಯನ್ನು ಕುರಿತು ಯೋಚಿಸಿದಷ್ಟೂ ಸಮಸ್ಯೆ-ಉಪಸಮಸ್ಯೆಗಳು ಸೃಷ್ಟಿಯಾದವೇ ವಿನಾ ಉತ್ತರಗಳೇನೂ ದೊರಕಲಿಲ್ಲ.
’ಯೋಚಿಸಿ ಮುಂದೆ ನಡೆ...’, ’ಆಲೋಚಿಸಿ ಕೆಲಸ ಮಾಡು, ಮಾತನಾಡು...’ ಎಂದು ಹೇಳುವುದೇನೋ ಸುಲಭ, ಆದರೆ ನಿಜವಾಗಿಯೂ ಅದು ಸಾಧ್ಯವೇ? ಕೆಲವೊಮ್ಮೆ ಹಿಂದಿನ ಅನುಭವಗಳಿಂದ ಕಲಿತ ಪಾಠಗಳು ಸಮಸ್ಯೆಗಳಿಗೆ ತಂತಾನೆ ಉತ್ತರವನ್ನು ಕಂಡುಕೊಳ್ಳಬಲ್ಲವಾದರೂ ಅನುಭವದ ಒಂದೇ ಒಂದು ಸಮಸ್ಯೆ ಎಂದರೆ ಎಂದು ಪೂರ್ವಭಾವಿಯಾಗಿ ಬರದೇ ಕೆಲಸವೆಲ್ಲ ಆದ ಬಳಿಕ ಬರುವಂಥದ್ದು. ಮತ್ತೆ ಅದೇ ರೀತಿಯ ಕೆಲಸ ಮಾಡುವಲ್ಲಿಯವರೆಗೆ ಆ ಅನುಭವ ಕಲಿಸಿದ ಪಾಠದ ಅಗತ್ಯವೇನೂ ಇರಲಾರದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೀವನವೆನ್ನುವುದು ಬರೀ ನಮ್ಮ ತಪ್ಪಿನಿಂದ ಕಲಿಯುವ ಪಾಠಗಳ ಸಂಗ್ರಹ ಎಂದು ಯಾರಾದರೂ ದೊಡ್ಡ ಮನುಷ್ಯರು ಹೇಳಿದ್ದಾರು, ಹಾಗೆ ಹೇಳಿರುವ ಅವರ ಅನುಭವವನ್ನು ನಾವು ನಮ್ಮ ಅನುಭವದ ಮಸೂರದಲ್ಲಿ ನೋಡುವುದಾದರೂ ಹೇಗೆ?
ಏನೇ ಆದ್ರೂ ಜೇಮ್ಸ್ ಬಾಂಡ್‌ಗೆ ಇರೋ ಹಾಗೆ ನಮಗೂ ಒಂದು ಪರ್ಸನಲ್ ಮ್ಯೂಸಿಕ್ ರಿಮೈಂಡರ್ ಇದ್ದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು ಅಂತ ಬೇಕಾದಷ್ಟು ಸಾರಿ ಅನ್ನಿಸಿದೆ. ನಿಮಗೇನಾದ್ರೂ ಆ ರೀತಿಯ ಸಂಗೀತವನ್ನು ಸಿದ್ಧಿಸಿಕೊಳ್ಳುವ ಸಾಧನವೇನಾದ್ರೂ ತಿಳಿದಿದ್ರೆ ನಮಗೂ ಒಂದಿಷ್ಟು ತಿಳಿಸ್ತೀರಾ ತಾನೇ?
***
MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ
5 comments:
ಹೊಟ್ಟೆಕಿಚ್ಚಾಗುವಷ್ಟು ಚೆನ್ನಾಗಿ ಬರಿತೀರಾ :)
I thought that it is better to hear your voice instead of reading your article. Beacuse I can grasp the contents of article while working.really good. But voice is low, talk in high pitch and with emotions where it needs. Hey how u had done this? i.e. making your audio. mail the procedures to follow to link the voice in blog. just i started my blog for experiment i.e khvmathematics.blogspot.com
ಮನ,
ಮತ್ತೆ ’ಅಂತರಂಗ’ಕ್ಕೆ ಭೇಟಿ ಮಾಡಿದ್ದಕ್ಕೆ ಧನ್ಯವಾದಗಳು, ಹೊಟ್ಟೆಯ ಕಿಚ್ಚಿಗೆ ಸ್ವಲ್ಪ ತಣ್ಣೀರನ್ನೋ ಅಥವಾ ಮಜ್ಜಿಗೆಯನ್ನೋ ಕುಡಿಯಿರಿ, ಅದಿಲ್ಲವೆಂತಾದರೆ ಪ್ರತಿದಿನವೂ ಬ್ಲಾಗ್ ಬರೆಯಿರಿ ಎಲ್ಲವೂ ಶಮನವಾದೀತು. :-)
ವಾಸು,
ಧ್ವನಿಗೆ ಪ್ರತಿಕ್ರಿಯೆ ತೋರಿಸಿದ್ದು ಸ್ವಾಗತಾರ್ಹ, ನಾನು ಭಾವನೆಗಳೆನ್ನೆಲ್ಲ ಧ್ವನಿಯಲ್ಲಿ ತೋರಿಸಿ ಕೊನೆಗೆ ಪಕ್ಕದ ಮನೆಯವರೇನಾದರೂ ಓಡಿ ಬಂದಾರೇನೋ ಎನ್ನೋ ಹೆದರಿಕೆಯಿಂದ ನ್ಯೂಟ್ರಲ್ ಧ್ವನಿಯನ್ನು ಬಳಸಿದ್ದೇನೆ, ಇನ್ನು ಮುಂದೆ ಎಲ್ಲಿ ಅಗತ್ಯವಿದೆಯೋ ಅಲ್ಲಿ ನಾಟಕೀಯತೆಯನ್ನು ಪಡೆದುಕೊಳ್ಳುತ್ತೆ, ದೇವರು ನಿನ್ನಂಥ ಕೇಳುಗರನ್ನು ಚೆನ್ನಾಗಿಟ್ಟಿರಲಿ! :-)
Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.
Conan Barbarian
Conan the Barbarian Wallpapers
Age of Conan Classes
Game multiplayer online rpg
multiplayer online game like runescape
free online multiplayer game
age of conan gold
aoc gold
Age of Conan Torrent
Age of Conan Trial
Age of Conan Free Trial
Hibernia
Midgard
Albion
DAOC 3 Accounts
DAOC How to Run 3 Accounts
DAOC Triple Log
daoc plat
daoc platinum
wow gold
DAOC Emissary Broken Visions
DAOC Champ Exp Quest
DAOC Artifacts
DAOC templates
Dark Ages of Camelot
EQ2 Plat
EQ2 Gold
EverQuest ii platinum Venekor
Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food
Fading memories Everquest
Mentor everquest
eq2 guild permafrost
free warcraft servers
world of warcraft private servers
world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming
wow pvp
wow arena season 4
wow s3 arena power leveling service
Post a Comment