Wednesday, October 10, 2007

ಕೂದಲು ಕತ್ತರಿಸೋರೂ ಪ್ರಶ್ನೆ ಕೇಳ್ತಾರೆ ಅಂದ್ರೆ...

'Was your marriage arranged or you picked your wife?' ಎಂದು ಮೊನ್ನೆ ನೇರ ಮುಖದ ಪ್ರಶ್ನೆಯನ್ನು ಕೇಳಿದ್ದು ಬೇರೆ ಯಾರೂ ಅಲ್ಲ, ನನ್ನ ಸಬ್‌ಸ್ಟಿಟ್ಯೂಟ್ ಹೇರ್ ಡ್ರೆಸ್ಸರ್ರ್ ಡೆಬಿ. ಭಾನುವಾರ ಬೆಳಿಗ್ಗೆ ಇನ್ನೂ ಕಾಫಿ ಬೀಳದ ನರಮಂಡಲದ ವ್ಯವಸ್ಥೆಯಲ್ಲಿ ಇಂಥ ಪ್ರಶ್ನೆಗೆ ನಾನಂತೂ ತಯಾರಿರಲಿಲ್ಲ. ಒಡನೆಯೇ ನನ್ನ ಮುಖ ಅಚಾನಕ್ ಆಗಿ ಕಷ್ಟದ ಟಾಪಿಕ್ ಅನ್ನು ಎತ್ತಿಕೊಂಡ ವರದಿಗಾರನನ್ನು ಎದುರಿಸುವ ಪ್ರೆಸಿಡೆಂಟ್ ಬುಷ್ ಥರ ಆಗಿ ಹೋಗಿತ್ತು. ನನ್ನ ಮಾಮೂಲಿ ಹೇರ್ ಕಟ್ ಮಾಡುವವಳು ಡಾಲಿ ಎನ್ನುವ ಗುಜರಾತಿ ಹೆಂಗಸು. ಆಕೆ ಯಾವ ಲಂಗು ಲಗಾಮಿಲ್ಲದೇ ಬಿಳಿ-ಕಪ್ಪು-ಕಂದು ಬಣ್ಣದ ಜನರ ಮಾತನಾಡುವುದು ನನಗಿಷ್ಟವಾದರೂ ವೃತ್ತಿಯಲ್ಲಿ ಒಬ್ಬ ಕೂದಲು ಕತ್ತರಿಸುವವಳಾಗಿ ಆಕೆಗೆ ಅವಳ ಮಿತಿ ಇರುವುದು ಮೊದಲ ದಿನದಿಂದಲೇ ಸ್ಪಷ್ಟವಾದ್ದರಿಂದ ನಾನು ಆಕೆಯ ಮಾತುಗಳನ್ನು ಬಹಳ ಮಟ್ಟಿಗೆ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಟ್ಟರೂ ಎಷ್ಟೋ ಸಾರಿ ಆಕೆಯ ಸ್ಪಷ್ಟವಾದ ನೋಟ ಇಷ್ಟವಾಗಿರೋದು ನಿಜ. ಕೂದಲು ಕತ್ತರಿಸುವವ, ಬಟ್ಟೆ ಇಸ್ತ್ರಿ ಮಾಡಿಕೊಡುವವ, ತರಕಾರಿ ಮಾರುವವ ಹಾಗೂ ಅವರ ಗಿರಾಕಿಯ ನಡುವೆ ಭಾರತದಲ್ಲಿ ಒಂದು ಅನ್ಯೋನ್ಯ ಸಂಬಂಧವಿರುತ್ತದೆ, ಅವರು ಎಷ್ಟೋ ಜನ ಗಿರಾಕಿಗಳ ಜೊತೆ ನಡೆದುಕೊಂಡು ಅವರದ್ದೇ ಆದ ಒಂದು ಮಾತಿನ ವರಸೆಯನ್ನು ಕಂಡುಕೊಂಡಿರುವುದೂ ಅದರಲ್ಲಿ ಕೆಲವೊಮ್ಮೆ ಗಮನ ಸೆಳೆಯುವ ಅಂಶಗಳು ಹೊರ ಬರುವುದನ್ನು ನಾನು ಗಮನಿಸಿದ್ದೆ. ಆದರೆ ಇಲ್ಲಿ ನನ್ನ ಮತ್ತು ನನ್ನ ಕೂದಲು ಕತ್ತರಿಸುವವಳ ಸಂಬಂಧ ಭಾರತದ ಅಂತಹ ಸಂಬಂಧದ ಒಂದು ಸಣ್ಣ ಎಳೆ ಅಷ್ಟೇ, ಅದನ್ನು ಬಿಟ್ಟರೆ ವ್ಯಾಪಾರಿ-ಗ್ರಾಹಕ ಸಂಬಂಧದಲ್ಲಿ ಬೇರೆ ಯಾರು ’ಮನಬಿಚ್ಚಿ’ ಮಾತನಾಡಿದ್ದನ್ನು ನಾನು ಈ ವರೆಗೂ ನೋಡಿಲ್ಲ.

ಕೂದಲು ಕತ್ತರಿಸುವ ವ್ಯಕ್ತಿ ಎಂದರೆ ಕೃತಕವಾದೀತು, ಹಜಾಮ ಎನ್ನೋಣ, ನಾಪಿಗ ಎನ್ನೋಣ - ಹಜಾಮ ಎನ್ನುವುದು ಹಾರ್ಶ್ ಆದರೆ, ನಾಪಿಗ ಎನ್ನುವುದು ತೀರಾ ನುಣುಪಾದೀತು, ಕ್ಷೌರ ಮಾಡುವವನು ಎಂದರೆ ಗ್ರಾಂಥಿಕವಾದೀತು! ಇವೆಲ್ಲ ಬಳಕೆಯಲ್ಲಿ ನೀವು ಬರೀ ಪುಲ್ಲಿಂಗದ ಬಳಕೆಯನ್ನು ಗಮನಿಸಿರಬಹುದು. ಹಜಾಮೆ, ನಾಪಿಗಿತ್ತಿ ಎನ್ನುವ ಪದಗಳು ಇದ್ದಂತೆ ನನಗೆ ತೋರದು. ಅಂದರೆ ಭಾರತದಲ್ಲಿ ಕ್ಷೌರ ಮಾಡುವುದು ಗಂಡಸರು ಮಾಡುವ ಕೆಲಸವೇ ಸರಿ, ಇತ್ತೀಚಿನ ಬ್ಯೂಟಿ ಪಾರ್ಲರ್‌ಗಳಲ್ಲಿ ಹೆಂಗಸರು ಅದೇನೇನೆಲ್ಲವನ್ನು ಮಾಡಿ ಬೆಚ್ಚಗಿನ ಏರ್ ಕಂಡೀಷನ್ಡ್ ಕೋಣೆಗಳಲ್ಲಿ ಬಹಳಷ್ಟು ಹಣವನ್ನು ಸುಲಿಯುವುದು ನಿಜವಾದರೂ ನನ್ನ ಮತ್ತು ನಮ್ಮೂರಿನ ಹಜಾಮನ ಸಂಬಂಧ ಬಹಳ ಅನ್ಯೋನ್ಯವಾದದ್ದೇ. ಊರಿನಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಗಳಿಗೂ ಆತ ಒಂದು ರೀತಿಯ ತೆರೆದ ಕಣ್ಣಿನ ವರದಿಗಾರನಿದ್ದ ಹಾಗೆ. ನೀವು ಯಾವುದೇ ಊರಿನ ಇತಿಹಾಸವನ್ನು ಹುಡುಕಿ ಹೋದರೂ ಆಯಾ ಊರಿನ ಹಜಾಮನ ಬಳಿ ಇರಬಹುದಾದ ಮಾಹಿತಿಗಳು ನಿಮಗೆ ಅಲ್ಲಿನ ಗ್ರಂಥಾಲಯಗಳಲ್ಲಿಯೂ ದೊರೆಯಲಾರವು. ಹೀಗೆ ಒಂದು ಊರಿನ ಸವಿತಾ ಸಮಾಜಕ್ಕೆ ಅವರದ್ದೇ ಆದ ಒಂದು ಕಾಯಕವಿದೆ, ಅದು ಊರಿನ ಇತಿಹಾಸ, ವರ್ತಮಾನವನ್ನು ಯಾವಾಗಲೂ ತಮ್ಮ ಡೇಟಾಬೇಸ್‌ಗಳಲ್ಲಿ ಅಪ್‌ಡೇಟ್ ಮಾಡಿಕೊಂಡು ಹೋಗುವುದು.

ಅಮೇರಿಕಕ್ಕೆ ಬಂದವರ ಪಾಡಿನಲ್ಲಿ ಇಲ್ಲಿ ಮೊದಲ ದಿನದಿಂದಲೇ ಮಹಿಳಾ ಕ್ಷೌರಿಕರ ಜೊತೆ ಹೊಂದಿಕೊಳ್ಳುವ ಅನಿವಾರ್ಯತೆ. ನಿಮಗೆಲ್ಲ ಹೇಗೋ ಏನೋ ಗೊತ್ತಿಲ್ಲ, ನನಗಂತೂ ಒಬ್ಬ ಒಳ್ಳೆಯ ಕ್ಷೌರಿಕನನ್ನು ಕಂಡುಕೊಳ್ಳುವುದು ಒಂದು ಒಳ್ಳೆಯ ದಿನಸಿ ಅಂಗಡಿಯನ್ನು ಕಂಡುಕೊಳ್ಳುವಷ್ಟೇ ಮುಖ್ಯ. ಮೊದಮೊದಲ ನಾಚಿಕೆ, ಬಿಂಕ ನನಗಂತೂ ಇಲ್ಲ - ಒಂದು ರೀತಿ ಕರ್ನಾಟಕದ ಜನರು ಬಸ್ಸುಗಳಲ್ಲಿ ಮಹಿಳಾ ಕಂಡಕ್ಟರುಗಳನ್ನು ಸ್ವೀಕರಿಸಿದ ಹಾಗೆ, ಮಹಿಳಾ ಆಟೋ ಡ್ರೈವರುಗಳನ್ನು ಗೌರವಿಸುವ ಹಾಗೇ ನಾನೂ ಹೊಂದಿಕೊಂಡು ಬಿಟ್ಟಿದ್ದೇನೆ. ಕೂದಲು ಕತ್ತರಿಸುವ ವಾತಾವರಣ ಬಹಳ ಮುಖ್ಯವಾದದ್ದು. ನಿಮ್ಮ ಮುಖವನ್ನು ಎಲ್ಲ ಬೆಳಕುಗಳಲ್ಲಿ ತೋರಿಸುವ ಕನ್ನಡಿ ನಿಮ್ಮ ಮುಂದೇ ಇರುತ್ತದೆ, ಜೊತೆಗೆ ಬಹಳಷ್ಟು ಸಾರಿ ಕ್ಷೌರ ಮಾಡುವವರು ನಿಮ್ಮನ್ನುದ್ದೇಶಿಸಿ ಮಾತನಾಡುವಾಗ ನಿಮ್ಮ ಕನ್ನಡಿಯ ಬಿಂಬವನ್ನು ನೋಡುತ್ತಿರುತ್ತಾರೆ ಎಂಬುದೂ ಸ್ಪಷ್ಟ. ಆದ್ದರಿಂದ ಅವರು ಕೇಳುವ ಪ್ರಶ್ನೆಗೆ ನೀವು ಯಾವ ಉತ್ತರ ಕೊಡುತ್ತೀರಿ, ಆ ಉತ್ತರಕ್ಕೆ ತಕ್ಕಂತೆ ನಿಮ್ಮ ಮುಖಭಾವ ಹೇಗೆ ಬದಲಾಗುತ್ತದೆ, ನೀವು ಸುಳ್ಳು ಹೇಳುತ್ತಿದ್ದೀರೋ ಇಲ್ಲವೋ ಎನ್ನುವುದನ್ನು ನಿಮಗೂ ಸ್ಪಷ್ಟ ಪಡಿಸುವ ಒಂದು ಸ್ವಚ್ಛ ಕನ್ನಡಿ ಇರೋದರಿಂದ ನೀವು ಎಷ್ಟು ಸಾಧ್ಯವೋ ಅಷ್ಟು ಸತ್ಯವಂತರಾಗದೇ ಬೇರೆ ದಾರಿಯೇ ಇರೋದಿಲ್ಲ. ನಿಮಗೆ ಗೊತ್ತಿರೋ ಹಾಗೆ ನಿಮ್ಮ ಹಾಗೂ ಕನ್ನಡಿಯಲ್ಲಿನ ನಿಮ್ಮ ಬಿಂಬದ ನಡುವೆ ಒಂದು ಅವಕಾಶವಿರುತ್ತದೆ (space), ಆ ವರ್ಚುವಲ್ ಇಮೇಜ್ ನಿಮ್ಮ ಹಾಗೂ ಕನ್ನಡಿಯ ನಡುವಿನ ಅಂತರದ ಎರಡು ಪಟ್ಟು ದೂರದಲ್ಲಿರುತ್ತದೆ. ಈ ರಿಯಲ್ ಹಾಗೂ ವರ್ಚುವಲ್ ಅವಕಾಶ ಒಂದು ರೀತಿಯ ರಂಗಪ್ರದೇಶವನ್ನು ಅನುಗೊಳಿಸಿ ನೀವು ಹಾಗೂ ನಿಮ್ಮ ನಡತೆ, ಹಾವಭಾವ, ಆಚಾರ-ವಿಚಾರ ಇವುಗಳಿಗೆಲ್ಲಕ್ಕೂ ಬೆಳಕು ತೋರಿ ನಿಮ್ಮನ್ನು ನೀವು ಬೇಡವೆಂದರೂ ಇಬ್ಬಂದಿಗೆ ಸಿಲುಕಿಸಬಲ್ಲದು.

ಸಬ್‌ಸ್ಟಿಟ್ಯೂಟ್ ಹೇರ್ ಡ್ರೆಸ್ಸರ್ ಡೆಬಿ ಕೇಳಿದ ಪ್ರಶ್ನೆಗೆ ಇಲ್ಲಿನ ರಾಜಕಾರಣಿಗಳು ಹೇಳುವಂತೆ ಸುತ್ತಿ ಬಳಸಿ ಉದ್ದವಾದ ಉತ್ತರವನ್ನು ಕೊಡಬಹುದಿತ್ತು, ಆದರೆ ಹೇರ್ ಸೆಲೂನ್‌ನಲ್ಲಿ ಅಂತಹ beating around the bush ಮುಮೆಂಟ್‌ಗಳಿಗೆ ಅವಕಾಶವೇ ಬರೋದಿಲ್ಲ. ನನ್ನ ಮಾಮೂಲಿ ಹೇರ್ ಡ್ರೆಸ್ಸರ್ ಡಾಲಿ ಇರದಿದ್ದುದು ಒಂದು ಬದಲಾವಣೆ, ಅಂತಹ ಬದಲಾವಣೆಯನ್ನು ನಾನೂ ಫೈಟ್ ಮಾಡಬೇಕಾಗುತ್ತದೆ ಹಲವಾರು ವಿಚಾರಗಳಲ್ಲಿ - ಕೂದಲು ಕತ್ತರಿಸುವ ಆಕೆಯ ಕೈಚಳಕ ಹೇಗೋ ಏನೋ ಎನ್ನುವ ಮೂಲಭೂತ ಪ್ರಶ್ನೆಯಿಂದ ಹಿಡಿದು ಆಕೆಯ ಪೊಲಿಟಿಕಲ್, ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯನ್ನು ಅರಿತು ಅಥವಾ ಅದಕ್ಕೆ ಸೆನ್ಸಿಟಿವ್ ಆಗಿದ್ದುಕೊಂಡು ನಾನು ಆಕೆಯೊಡನೆ ಮಾತನಾಡಬೇಕಾಗುತ್ತದೆ. ಇರೋ ಕೆಲವೇ ನಿಮಿಷಗಳಲ್ಲಿ ಆಕೆ ತನ್ನ ಬಗ್ಗೆ ಬಹಳಷ್ಟು ಹೇಳಿ ಬಿಟ್ಟಿದ್ದಳಾದ್ದರಿಂದ ಆಕೆಯೊಡನೆ ವ್ಯವಹರಿಸಲು ನನಗೆ ಯಾವ ಕಷ್ಟವೂ ಆಗಲಿಲ್ಲ. ಇಲ್ಲೇ ನಾವಿರುವ ಊರಿನ ಹತ್ತಿರದಲ್ಲಿಯೇ ಒಂದು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸುಗಳಲ್ಲಿ ನೆಲೆಸಿ ಬಹಳಷ್ಟು ಭಾರತೀಯರೊಡನೆ ಈಗಾಗಲೇ ಸಾಕಷ್ಟು ಒಡನಾಡಿರುವ ಒಮ್ಮೆ ಮದುವೆಯಾಗಿ ಈಗ ಡೈವೋರ್ಸ್ ಪಡೆದಿರುವ ನಲವತ್ತರ ನಡುವಿನ ಪ್ರಾಯದಲ್ಲಿರುವ ಆಕೆಯ ಪ್ರಶ್ನೆಗಳು ಹಾಗೂ ಉತ್ತರ ನೇರವಾದದ್ದೇ. ಅಂತಹ ತಾತ್ಕಾಲಿಕ ಸಂಬಂಧ ಅದೇ ರೀತಿಯ ಸಂವಾದವನ್ನು ಬಳಸುತ್ತದೆ ಹಾಗೂ ಬೆಳಸುತ್ತದೆ. ಆಕೆ ಕೇಳುವ ಪ್ರಶ್ನೆಗಳಿಗೆ Its none of your business ಎನ್ನುವ ಪ್ರಮೇಯವೇ ಬರೋದಿಲ್ಲ! ಆದ್ದರಿಂದಲೇ ಆಕೆಗೆ ನನ್ನ ಉತ್ತರ - ’No and yes. Was I free to pick anyone as my wife? No. Did I pick or chose my wife? Yes.'

ನಿಮಗೇನಾದರೂ ಇದೇ ರೀತಿಯ ಸಂದಿಗ್ಧ ಒದಗಿ ಬಂದಿದೆಯೇ? ಹಾಗೇನಾದರೂ ಆದಲ್ಲಿ ನಾನು ಆಗಾಗ್ಗೆ ಬಳಸುವ ಭಾರತೀಯರನ್ನು ವಿಸ್ತಾರವಾಗಿ ಕವರ್ ಮಾಡುವ ಈ ಕೆಳಗಿನ ಹೇಳಿಕೆಯೊಂದನ್ನು ಬಳಸಿ ನೋಡಿ ನಿಮ್ಮ ಕಷ್ಟ ಸ್ವಲ್ಪ ಕಡಿಮೆಯಾಗಬಹುದು - It varies (in India)...there are one billion people over there and as many cultures!

7 comments:

Anonymous said...

ಸರ, ನಮಗನಕಾ ಈ USA ದಾಗ್ ಹಜಾಮತಿ ಮಾಡವ್ರು 10 ವರ್ಷ ಆದ್ರೂ ಸರಿ ಒಗ್ಗಿಲ್ಲ ನೋಡ್ರೀ. ಆಲ್ಲ್ರಿ, ನಮ್ಮ ಧಾರ್ವಡದನ್ಥ ಊರಾಗ ಯಾರದ್ದ ಕಡೆ ಕಟಿಂಗ್ ಮಾಡ್ಸಾಕ ಹೋಗ್ರೀ, ಒಮ್ಮೆ ನಿಮ್ಮ current hair style ನೋಡಿ ಎಜ್ಜಾಟ್ಲೀ ಹಾಂಗ ಮಾಡಿ ಕಳಸ್ಥಾರ್ ನೋಡ್ರೀ. ಇಲ್ಲಿ ಅವನಾಪ್ನ ಪ್ರತಿ ಸರೆ ಹೋದಾಗೊಮ್ಮೆ ಹೊಳ್ಳಾ ಮಳ್ಳಿ ಹೇಳಿದ್ದ ಹೇಳೂದು. ಅದ್ರ ಮ್ಯಾಗ ನಮ್ಮ ಸ್ಟೈಲ್ ಎಲ್ಲ ಕೆಡ್ಸಿ, ಆದ ಸರಿ ಆಗಾಕ ಮತ್ತ 2 ವಾರ ಬೇಕ. ಈ ದೇಶದಾಗ ಸ್ಕಿಲ್ಲಫುಲ್ ಕೆಲ್ಸಾ ಬರಂಗಿಲ್ಲ್ರಿ. ಹಜಾಮರೂ, ಟೇಲರ್ಸ್, ಗಾಡಿ ಮೆಕ್ಯಾನಿಕ್ಸ್ ಎಲ್ಲ ನಮ್ಮ ದೇಶದಾಗಾಗ ಬೆಸ್ಟ್ ಬಿಡ್ರಿ. ಸ್ವಲ್ಪ ತಲಿ ಓಡಸ್ಥರ. ಇಲ್ಲೆ ತಲಿ ಬೊಳಸವ್ರ ಅವನಾಪ್ನ ತಲಿ ಎಲ್ಲಿ ಬಿಟ್ಟು ಬಂದಿರ್ತಾರೋ ಇಲ್ಲ ದೇವ್ರು ಅವ್ರಿಗೆ ತಲಿ ಒಳ್ಗ ಏನು ಇಟ್ಟೆ ಇಲ್ಲೊ ಗೊತ್ತಾಗ್ವಲ್ತು. 15% ಟಿಪ್ಪ ಬ್ಯಾರೆ ಕೇಡು ಇವ್ರಿಗೆ. ತಲಿ ಮ್ಯಾಲೆ ಎಜ್ಜಿಸ್ಟಿಂಗ್ ಸ್ಟೈಲ್ ಕುಂತೀರ್ತಾತೀ ಆದ್ರಾಂಗ ಟ್ರಿಮ್ ಮಾದಬೇಕ್ರಪ. ಅದ್ರ ಬದ್ಲಿ ಒಳ್ಳೇ ಅಸೆಂಬ್ಲೀ ಲೈನ್ ವರ್ಕ್ ಮಾಡಿ ಎಲ್ಲರ ತಲೀನೂ ಒಂದ ಥರಾ ಬೊಳ್ಸಿದ್ರ ಹ್ಯಾಂಗ್ರೀ?

ನಿಮ್ಮವ,
ಯೆಸ್.ಕೆ. ಮಠ

Anonymous said...

Remembered a funny incident regarding getting haircut in the USA. At least in small towns like Dharwad, we are used to getting "full service" hair cuts. Full service includes minor services such as nail clipping and most famous arm pit shaving service. Many adults involuntary raise their shirts and lift their arms at the end to let the barber run on fine stoke with his razor sharp razor to weed out and clean up the armpits. We take it for granted. It is said this tendency once created havoc with a professor from Dharwad who was in the US. He went to get a haircut. As usual, he got his haircut from barberette (female barber). By the force of habit, he did the same thing - lifted his shirt and raised his arms and scared the hell out of the barbarette. Must have been quite embarassing for him and her. Not sure if it really happened or people made it up to pull the leg of that professor. Nevertheless, this was one of the jokes about above said professor and his visit to the US. FYI - I am not that professor :) although he shares a form of my last name.

Cheers!

S.K. Math

Anonymous said...

ನನ್ಗೆ ಪ್ರಶ್ನೆ ಸ್ವಲ್ಪ ಬೇರೆ. "So, your parents must be searching a girl for you back home?" ಎಂತಾ ಸೂಪರ್ assumption ಅಂತ. ಆದ್ರೆ ಈ doubt ಇವ್ರಿಗೆ ಯಾಕೆ ಬರುತ್ತೆ ಅಂದ್ರೆ, ಇಲ್ಲಿ ಕೆಲ್ಸ ಮಾಡ್ತಾ ಇರ್ತಾರೆ, ೩-೪ ವಾರ vacation ಅಂತ ಹೋಗಿ ವಾಪಸ್ ಬರ್ವಾಗ ಹೆಂಡ್ತಿ ಕಟ್ಕೊಂಡು ಬರ್ತಾರೆ, obviously someone back home should be searching girl for you, to have that amazing turnaround time ;).
ನಾನು ೪ ತಿಂಗ್ಳ ಹಿಂದೆ ಊರಿಗೆ ಹೋಗಿದ್ದೆ. ಹೋಗೋ ಮುಂಚೆ ನನ್ನ ಲೀಡ್ ಹೇಳ್ದ, "I'm quite sure you'll be back as a married man". ಯಾಕೆಂದ್ರೆ ಇಲ್ಲಿವರ್ಗು ಅವ್ನ ಜೊತೆ ಕೆಲ್ಸ ಮಾಡಿರೊ ಭಾರತೀಯರು ವಾಪಸ್ ಬರ್ವಾಗ ಮದ್ವೆ ಆಗ್ದೇ ಬಂದಿದ್ದೇ ಇಲ್ವಂತೆ. ಓಹ್ ಅದನ್ನ ನಾನ್ ಸುಳ್ಳು ಮಾಡ್ದೆ ಬಿಡಿ.
"It varies (in India)...there are one billion people over there and as many cultures!"
ನಂದು ಯಾವಗ್ಲು ಇದೇ ಉತ್ತರ. ಆದ್ರೆ ೨-೩ culture ಅಲ್ಲಿ ಅದನ್ನ ವಿವರಿಸೋಕೆ try ಮಾಡ್ತೀನಿ ;)

Satish said...

ಮಠ್ ಅವ್ರೆ,

ನೀವ್ ಹೇಳಿದ್ದು ಖರೇ ನೋಡ್ರಿ, ಇಲ್ಲಿ ಪ್ರತಿ ಸರ್ತಿ ಹೋದಾಗೂ ಮೆಷೀನ್ ಹತ್ತಿ ಅಗದಿ ಕೆಟ್ಟ್ ಹಬ್ಬಿಸಿ ಬಿಡ್ತಾರ್ ಕೂದ್ಲಾನಾ. ಎಷ್ಟ್ ಸರ್ತಿ ಹೇಳಿದ್ರೂ ಅಷ್ಟಾ.

ನಿಮ್ಮ್ ಮೇಷ್ಟ್ರು ಕಥಿ ನೆನ್ಸಿಕ್ಯಂಡ್ ನಕ್ಕ್ ನಕ್ಕ್ ಸಾಕಾತ್ ನೋಡ್ರಿ, ನನಗೂ ಅದು ನಿಮದಾ ಯಾಕಿರ್ಬಾರ್ದೂ ಅನ್ನೋ ಅನುಮಾನಾ ಇತ್ತು!

Satish said...

ಮನೋಜ್,
ಬಹಳ ಒಳ್ಳೇ ಕೆಲ್ಸಾ ಮಾಡಿದ್ರಿ, ಈ ಸ್ಟೀರಿಯೋಟೈಪ್ ಬಂದಿದ್ದು ಹೋಗೋದ್ ಭಾಳಾ ಕಷ್ಟಾ. ನಾನು ಮೊದಲ ಸಾರಿ ಹೋದಾಗ ನನಗೂ ’ವೆಡ್ಡಿಂಗ್ ಪಾರ್ಟ್’ ಕೊಟ್ಟಿದ್ರು, ಆದ್ರೂ ನಾನು ಮದುವೆ ಆಗ್‌ಬೇಕು ಅಂತ ಹೋದೋನೇ ಅಲ್ಲ, ಎಷ್ಟು ಹೇಳಿದ್ರೂ ನನ್ ಮಾತನ್ನ ನಂಬ್ತಿರಲಿಲ್ಲ ನೋಡ್ರಿ.

ಅಂದ ಹಾಗೆ ನೀವು ಚತುರ್ಭುಜರಾಗೋದು ಯಾವಾಗಾ ಅಂತ? :-)

Anonymous said...

Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service