ಸುಮ್ನೇ ತಲೇ ತಿಂತಾರ್ ನೋಡಿ ಸಾರ್...
ಏನಾದ್ರೂ ಒಂದಿಷ್ಟು ಕುಟ್ಟಿ ಬಿಸಾಕೋಣಾ ಅಂತಂದು ಈ ಕಂಪ್ಯೂಟ್ರು ಶುರು ಮಾಡೋಕ್ ಹೋದ್ರೇ ಬಸವನ ಹುಳೂನಾದ್ರೂ ಬೇಕು, ಈ ಕಂಪ್ಯೂಟರ್ರ್ ಬ್ಯಾಡಾ, ಸ್ಲೋ ಅಂದ್ರೆ ಸ್ಲೋ...ಮೊದಲೇ ಗೊಲ್ಲೀ ಈಗಂತೂ ಹಡದಾಳೇ ಅಂತಾರಲ್ಲಾ ಹಾಗೆ ಇವತ್ತು ಅದೇನೋ ವೈರಸ್ ಪ್ಯಾಚ್ ಇನ್ಸ್ಟಾಲ್ ಮಾಡ್ತಾ ಇದ್ದೇನೆ ಅಂತ ಮೆಸ್ಸೇಜ್ ಬೇರೆ ಕೊಡುತ್ತೆ...ಈ ವೈರಸ್ಸೂ, ಪ್ಯಾಚೂ ಇವುಗಳೆಲ್ಲಾ ನಾವ್ ನಾವ್ ಸೃಷ್ಟಿಸಿಕೊಂಡಿರೋ ಟೆಂಪೋರರಿ ಮೆಂಟಲ್ ಸ್ಯಾಟಿಸ್‌ಫ್ಯಾಕ್ಷನ್ ಅಷ್ಟೇ ಅನ್ಸಲ್ಲಾ ಎಷ್ಟೊಂದ್ ಸರ್ತಿ? ಇವೆಲ್ಲಾ ಎಲ್ಲೀವರೆಗೆ ಚೆಂದ ಅಂದ್ರೆ ಅದ್ಯಾವ್ದೋ ಸಿನಿಮಾದಲ್ಲಿ ತೋರ್ಸೋ ಹಾಗೆ ಇವತ್ತಲ್ಲಾ ನಾಳೆ ಯಾವನೋ ಒಬ್ನು ಎಲೆಕ್ಟ್ರಿಕ್ ನೆಟ್‌ವರ್ಕ್ ಅಥವಾ ಕೇಬಲ್ ನೆಟ್‌ವರ್ಕ್ ಮೂಲ್ಕಾ ವೈರಸ್ ಕಳಿಸೋದನ್ನ ಕಂಡ್ ಹಿಡೀತಾನೇ ಅಲ್ಲೀವರೆಗೆ ಮಾತ್ರಾ ಅಷ್ಟೇ. ನನಗೆ ಎಷ್ಟೋ ಸರ್ತಿ ಅನ್ಸಿದೆ, ಈ ಅಂಟೀ ವೈರಸ್ ಕಂಪನಿಗಳೇ ವೈರಸ್ಸುಗಳ್ನ ಬರೀತಾವೇ ಅಂತ...ಯಾಕಂದ್ರೆ ಅವ್ರು ಬಿಸಿನೆಸ್ಸಲ್ಲಿ ಇರೋದ್ ಬ್ಯಾಡ್ವೇ? ಹಿಂಗಂದ್ ಕೂಡ್ಲೇ ನಮ್ ಕಡೇ ಇರೋ ಒಂದು ಪ್ರಚಲಿತ ಜೋಕ್ ನೆನಪಿಗೆ ಬಂತು...
'ನಿಮಗೆ ಹುಷಾರಿಲ್ದೇ ಇದ್ರೆ ಡಾಕ್ಟ್ರ ಹತ್ರ ಹೋಗ್ಬೇಕು, ಯಾಕೇಂದ್ರೆ ಡಾಕ್ಟರ್ ಬದುಕೋದ್ ಬ್ಯಾಡ್ವೇ?
ಡಾಕ್ಟ್ರು ಔಷ್ಧಿ ಬರ್ಕೊಟ್ರೆ, ಮೆಡಿಕಲ್ ಸ್ಟೋರ್‌ಗೆ ಹೋಗ್ಬೇಕು, ಯಾಕೇಂದ್ರೆ ಮೆಡಿಕಲ್ ಸ್ಟೋರ್‌ನೋರ್ ಬದುಕೋದ್ ಬ್ಯಾಡ್ವೇ?
ಮೆಡಿಕಲ್ ಸ್ಟೋರ್‌ನೋರ್ ಔಷ್ಧಿ ಕೊಟ್ರೆ ಅದ್ನ ನೀವ್ ತೊಗೋಬೇಡಿ, ಯಾಕೇಂದ್ರೆ ನೀವ್ ಬದ್ಕೋದ್ ಬ್ಯಾಡ್ವೇ!'
ಈ ವೈರಸ್ ಪ್ಯಾಚ್ ಇನ್ಸ್ಟಾಲ್ ಮಾಡ್ತಾ ಇದ್ನಾ, ಅಷ್ಟೋತ್ತಿಗ್ ತಗಳ್ಳಪ್ಪಾ ಮೈಕ್ರೋಸಾಫ್ಟ್‌ನೋನ್ ಶುರು ಮಾಡ್ಕೊಂಡಾ, ಅದೇನೋ ಪ್ಯಾಚ್ ಇನ್ಸ್ಟಾಲ್ ಅಂತ. ಅವನು ಐದು ನಿಮಿಷಾ ಕಂಪ್ಯೂಟರ್ರನ್ ಬಿಜಿಯಾಗಿಟ್ಟಿದ್ದೂ ಅಲ್ದೇ ಆಮೇಲೆ ಈಗಿನ್ನೂ ಶುರು ಮಾಡಿರೋ ಕಂಪ್ಯೂಟರ್ರನ್ನ ರೀ ಸ್ಟಾರ್ಟ್ ಮಾಡು ಅಂತ ಆದೇಶ ಬೇರೆ ಕೊಡ್ತಾನೆ! ಎಲ್ಲಾ ನನ್ನ ಮಕ್ಳೂ ಇಲ್ಲಿ ಆದೇಶ ಕೊಡೋರೇ...CALL NOW...1-800 ಅಂದ್‌ಕೊಂಡ್ ಟಿವಿ ನಲ್ಲಿ ನಂಬರ್‌ಗಳನ್ನ ಪ್ರವರ ಹೇಳೋ ಥರ ಒದರಿಕೊಂಡ್ ಹೋಗ್ತಾರೆ, Talk to your doctor ಅಂತ ಏನೇನೋ ಔಷಧಿಗಳ್ನ ತೋರಿಸ್ತಾರೆ - ಇಲ್ದಿರೋ ಕಾಯ್ಲೆಗಳನ್ನೆಲ್ಲ ಹುಟ್ಟಾಕಿ...ಅಷ್ಟ್ ತಾಕತ್ತಿದ್ರೆ ಏಯ್ಡ್ಸ್‌ಗೆ ಔಷಧಿ ಕಂಡ್ ಹಿಡೀಲಿ...ನಾವ್ ಹೋಗೀ ಡಾಕ್ಟರ್‌ನ ಇಂಥಾ ಮಾತ್ರೆ ಔಷಧಿ ಕೊಡೀ ಅಂತ ಕೇಳೋದೋ ಅವ್ರೇ ನಮ್ ನಮ್ ಕಂಡೀಷನ್ನ್ ನೋಡೀ ಬರ್ದು ಕೊಡೋದೋ? ಎಲ್ಲಾರೂ ಆರ್ಡರ್ ಮಾಡೋರೇ ಇಲ್ಲಿ... ಬೆಳ್ಳಂ ಬೆಳಗ್ಗೆ ಶುರು ಹಚ್ಕೊಂಡ್ ಬಿಡ್ತಾರೆ...do that, do this ಅಂದ್‌ಕೊಂಡು...ದುಡ್ಡೂ, ಸಮಯಾ ಇವ್ರ ಅಪ್ಪ ತಂದ್ ಕೊಡ್ತಾನೆ.
ಹಂಗಂತ ನನ್ನದಾಗ್ಲೀ, ಈ ಲೇಖ್ನಾ ಓದ್ತಾ ಇರೋ ನಿಮ್ಮ್ ಕಂಪ್ಯೂಟರ್ರಾಗ್ಲೀ ಹಳೇದೂ, ಔಟ್ ಡೇಟೆಡ್ಡೂ ಅಂತ ನಾನ್ ಹೇಳ್ತಾ ಇಲ್ಲಾ...ಇದರಲ್ಲಿ ಬೇಕಾದಷ್ಟು ಜ್ಯೂಸ್ ಇನ್ನೂ ಇದೆ...ಒಂದು ಗಿಗ್ ಮೆಮೆರಿ ಇದ್ರೂ ಈ ನನ್ ಮಕ್ಳು ಪ್ರೋಗ್ರಾಮ್ ಎಲ್ಲಾ ಲಾಂಚ್ ಆಗೋಕೆ ಎಷ್ಟೊಂದ್ ಸಮ್ಯಾ ಬೇಕು...ಹಾರ್ಡ್‌ವೇರೂ, ಸಾಫ್ಟ್‌ವೇರೂ ಅಂತ ತುಂಬ್ ತುಂಬ್‌ಕೊಂಡು ತಲೇ ಎಲ್ಲಾ ಚಿಟ್ಟ್ ಹಿಡಿಯೋ ಹಾಗ್ ಮಾಡಿದ್ದ್ ಯಾರು? ಒಂದ್ ಕಾಲ್ದಾಲ್ಲಿ ಕೇವ್ಲಾ 166 MHz ಕಂಪ್ಯೂಟ್ರೂ ಬಳಸಿ ನ್ಯಾಸಾದೋರು ಚಂದ್ರಯಾನ ಮಾಡ್ಲಿಲ್ವೇ? ಇವತ್ತಿನ್ ಕಂಪ್ಯೂಟ್ರುಗಳಿರ್ಲಿ, ಈಗಿನ್ ಕಾಲದ್ ಕಾರ್‌ಗಳಲ್ಲಿ ಅದಕ್ಕಿಂತ ಹೆಚ್ಚು ಕಂಪ್ಯೂಟಿಂಗ್ ಪವರ್ ಇರೋವಾಗ...ಏನಾಗಿದೆ ನಮ್ ಹೊಸ ಹೊಸಾ ಕಂಪ್ಯೂಟರ್ರ್ ಗಳಿಗೆ ಅನ್ಸೋಲ್ಲಾ? ಇವರ್ದೆಲ್ಲಾ ದೊಡ್ಡದೊಂದು ಕಾನ್ಸ್‌ಪಿರಸಿ, ಅದ್ಯಾವನೋ ಮೂರ್ (Moore) ಅನ್ನೋನ್ ಅದೇಷ್ಟೋ ವರ್ಷದ ಹಿಂದೆ ಪ್ರಿಡಿಕ್ಟ್ ಮಾಡ್ಲಿಲ್ಲಾ ಕಂಪ್ಯೂಟಿಂಗ್ ಪವರ್ರ್ ಬಗ್ಗೆ, ಪ್ರಾಸೆಸಿಂಗ್ ಬಗ್ಗೆ? ಆದ್ರೂ ಇಲ್ಲಿನ ಮಾರ್ಕೆಟಿಂಗೇ ಮಾರ್ಕೆಟಿಂಗು...ದಿನದಿನ ಬಿಟ್ಟು ದಿನಾ ಹೊಸ ಹೊಸ ಕಂಪ್ಯೂಟರ್ ತೊಗೊಳೋಕೆ ಯಾರ್ ಕೊಟ್ತಾರೆ ರೊಕ್ಕಾನಾ? ವಿಂಡೋಸ್ ವಿಸ್ತಾನಾದ್ರೂ ಬರ್ಲಿ, ಪಿಸ್ತಾನಾದ್ರೂ ಬರ್ಲಿ (ಸ್ಟಾರ್ಟ್ ಆಗೋಕೇ, ಶಟ್‌ಡೌನ್ ಆಗೋಕೇ ಏನಿಲ್ಲಾ ಅಂದ್ರೂ ಐದ್ ಐದ್ ನಿಮಿಷಾ ತೊಗೊಳುತ್ತೇ ಅದ್ ಬೇರೆ ವಿಷ್ಯಾ) ನನ್ ಈಗಿರೋ ಕಂಪ್ಯೂಟರ್ರ್ ಬದ್ಲೀ ಮಾಡಲ್ಲಾ ಅಂತ ಹಠ ಹಿಡಿದು ಕುಳಿತಿರೋ ಕಂಪ್ನಿ, ಬಳಕೆದಾರರಿಗೆ ಎಲ್ಲಾ ಇನ್ನು ಮುಂದೆ ನಾವು ನಮ್ಮ್ ಪ್ರಾಡಕ್ಟನ್ನ ಸಪ್ಫೋರ್ಟ್ ಮಾಡಲ್ಲಾ ಅಂತ ಹೆದರ್ಸಿ ಹೊಸ ಹೊಸದನ್ನ ಮಾರೋದು...ಮನುಷ್ಯಾ ಅನ್ನೋನು ಮಂಗಳಗ್ರಹಕ್ಕೆ ರಾಕೇಟ್ ಕಳ್ಸಿ ವಾಪಾಸ್ ಕರೆಸಿಕೊಂಡಿದ್ದು ಸಾಧ್ಯಾ ಆದ್ರೂ ಇಪ್ಪತ್ತು ವರ್ಷದ ಹಿನ್ನೆಲೇನಲ್ಲಿ ಒಂದ್ ನೆಟ್ಟಗಿರೋ ಆಪರೇಟಿಂಗ್ ಸಿಸ್ಟಂನ ಹೊರಗ್ ತರಲಿಲ್ಲಾ ಅಂದ್ರೆ ಏನ್ ಹೇಳೋಣ!
ಈ ಎಲ್ಲಾರ್ದೂ ಒಂದೊಂದು user interfaceಸೂ...ಸೆಲ್ ಫೋನ್ ತಗಳ್ಳಿ (ಅದೊಂದ್ ಡಬ್ಬಾ ಅದ್ ಬೇರೆ ವಿಷ್ಯಾ) ಅಲ್ಲಿ ಅವನ್ದೇ ಒಂದು ಆದೇಶ...ಹಂಗ್ ಮಾಡೀ, ಹಿಂಗ್ ಮಾಡಿ ಅಂತ...ಒಂದ್ ಕಾಮನ್ ಸೆನ್ಸಿನ್ ವಿಷ್ಯಾ...ಸೆಲ್ ಫೋನ್ನಲ್ಲಿ ಬ್ಯಾಟರಿ ಇನ್ನೇನ್ ಖಾಲಿ ಆಗ್ತಾ ಇದ್ರೆ ಅನ್ನೋವಾಗ ಶಟ್ ಡೌನ್ ಆಗೋವಾಗ್ಲೂ ದೊಡ್ಡದಾಗಿ ಗ್ರಾಫಿಕ್ ತೋರ್ಸಿ, ಸೌಂಡ್ ಮಾಡ್ಕೊಂಡೇ ಸಾಯ್‌ಬೇಕಾ...ಅದರ ಬದ್ಲಿ ಬ್ಯಾಟರಿ ಕನ್ಸರ್ವ್ ಮಾಡಿ ಕೊನೇ ಪಕ್ಷಾ ಒಂದೇ ಒಂದು ನಿಮಿಷಾ ಕಾಲ್ ಆದ್ರೂ ಮಾಡೋ ಹಾಗಿದ್ರೆ ಅನ್ಸಲ್ಲಾ?...ಈ ನನ್ ಮಕ್ಳು ಸೆಲ್ ಫೋನ್ ತೆಗೊಂಡಕ್ಷಾಣ ದಿನಾ ಬೆಳಗ್ಗೆ ಎದ್ದು ಸ್ಕ್ರೀನ್ ಆನ್ ಮಾಡಿದ್ರೆ ಇವ್ರ ಕಂಪನೀ, ಲೋಗೋಗಳ ಹೆಸರನ್ನ್ಯಾಕ್ ನೋಡ್ಬೇಕ್ ನಾವು...ಇವರಿವರ ಬ್ರ್ಯಾಂಡಿಂಗ್ ಕಟ್‌ಕೊಂಡ್ ನಮಿಗೇನಾಗ್ಬೇಕು? ಇದೇ ರೀತಿ ಇವರು ಹೇಳಿದ್ದನ್ನೆಲ್ಲಾ ನೋಡ್ತಾ, ತೋರಿಸ್ಕೊಳ್ತಾ ಹೋದ್ರೆ ಇವತ್ತಲ್ಲಾ ನಾಳೆ ನಮ್ಮನ್ನೂ ನ್ಯಾಸ್ ಕಾರ್ ಥರಾ ಮಾಡ್ ಬಿಡ್ತಾರೇನೋ ಅಂತ ಹೆದರಿಕೆ ಆಗುತ್ತೆ. ಕಷ್ಟಾ ಪಟ್ಟು ಸಂಪಾದ್ನೇ ಮಾಡಿ ಒಂದ್ ಟೀ ಶರ್ಟ್ ತೊಗೊಂಡ್ರೂ ಅದರ ಮೇಲೆ ಈ ನನ್ ಮಕ್ಳು ಲೋಗೋ ಬೇರೆ ಕೇಡಿಗೆ...ನಲವತ್ತ್ ಡಾಲರ್ ಖರ್ಚ್ ಮಾಡೀ ನನ್ ಎದೇ ಮೇಲೆ ದೊಡ್ಡದಾಗಿ Calvin...ನ್ನೋ ...Lauren ನ್ನೋ ಅಂತ ಬರಸಿಕೊಂಡು ಓಡಾಡೋಕೆ ನನಗೇನ್ ಹುಚ್ಚ್ ಹಿಡಿದಿದೇ ಅಂತ ತಿಳಕೊಂಡಿದಾರೋ ಇವರು? ಹೋಗ್ರೋಲೋ, ನಮ್ಮೂರ್ ಟೈಲರ್ರೂ ನಾನು ಹುಟ್ಟಿದಾಗ್ನಿಂದಾ ಬಟ್ಟೇ ಹೊಲಕೊಟ್ರೂ ಒಂದಿನಾ ಅವ್ನ ಹೆಸರನ್ನಾ ಕುತ್ತಿಗೆ ಹಿಂದಿನ ಕಾಲರ್ ಲೇಬಲ್ ಬಿಟ್ಟು ಮತ್ತೆಲ್ಲೂ ಹಾಕ್ಲಿಲ್ಲಾ, ಪಾಪ ಅಂತಾ ದೊಡ್ಡ ಮನುಷ್ಯನಿಗೆ ನಾನು ಒಂದ್ ಶರ್ಟ್ ಹೊಲ್ ಕೊಟ್ರೆ ಎರಡ್ ಡಾಲರ್ ಕೊಟ್ರೇ ಹೆಚ್ಚು! ಪ್ಯಾಂಟಿನ್ ಮೇಲೆ ಲೋಗೋ, ಶರಟಿನ್ ಮೇಲ್ ಲೋಗೋ, ಶೂ ಮೇಲ್ ಲೋಗೋ, ನಾವ್ ಮುಟ್ಟೋ ಎಲ್ಲದರ ಮೇಲೂ ಲೋಗೋನೇ...ಜನಿವಾರ ಒಂದ್ ಬಿಟ್ಟು ಹಾಕ್ಕೊಂಡಿರೋ ಮತ್ತೆಲ್ಲದರ ಮೇಲೂ ಒಂದೊಂದ್ ಲೋಗೋ...ಭೀಮಾ ಜ್ಯುಯೆಲರ್ಸ್ ಹತ್ರ ತೊಗೊಂಡಿರೋ ಕತ್ನಲ್ಲಿರೋ ಚಿನ್ನದ ಸರದ್ ಮೇಲೂ ಅವನಂಗಡೀಲೇ ತಗೊಂಡಿದ್ದೂ ಅಂತ ಸಣ್ಣದಾಗಿ ಏನೋ ಕೆತ್ತ್‌ಗೊಂಡಿದಾನೆ...ನೋಡಿದ್ರಾ ಎಲ್ಲೀವರೆಗೆ ಬಂದಿದೆ ಇದೂ ಅಂತ!
ಈ ನನ್ ಮಕ್ಳು ತಮ್ ತಮಿಗೆ ಬೇಕಾದ್ದು ಇನ್ಸ್ಟಾಲ್ ಮಾಡ್ಕೊಂಡ್ರಾ...ಈಗ ಒಂದೇ ಸಮನೆ ಅಳೋಕ್ ಸ್ಟಾರ್ಟ್ ಮಾಡಿದಾವೆ...Restart ಮಾಡೂ ಅಂತ. ನೀನೇ ಮಾಡ್ತೀಯೋ ಇಲ್ಲಾ ನಾವೇ ಮಾಡೋಣ್ವೋ ಅಂತ ಕೇಳಿದ್ದಕ್ಕೆ ನಾನೇ ಮಾಡ್ತೀನಿ ನನಗೆ ಬೇಕಾದಾಗ ಅಂತ ಒಂದ್ಸರ್ತಿ ಹೇಳಿದ್ರೆ ಅರ್ಥಾನೇ ಆಗಲ್ಲ ಇವುಗಳಿಗೆ...ಈ ಹದಿನೈದ್ ನಿಮಿಷದಲ್ಲಿ ಕೊನೇ ಪಕ್ಷ ಒಂದ್ ಐದು ಸರ್ತೀನಾದ್ರೂ ಪಾಪ್ ಅಪ್ ಮೆಸ್ಸೇಜ್ ಬಂದಿವೆ...Restart ಮಾಡೂ ಅಂತ...ಸಾಯ್ತಾರ್ ನನ್ ಮಕ್ಳು.
ನಿಮಿಗೆ ಮತ್ತೊಂದ್ ವಿಷ್ಯಾ ಹೇಳ್ಬೇಕು...ನನಗೆ ನಾನು ಯಾವ್ಯಾವ್ದೋ ದೇಶ್ದಲ್ಲಿ ಅದೆಷ್ಟೋ ಡಾಲರ್/ಯೂರೋ ಲಾಟರಿ ಗೆದ್ದಿದ್ದೀನಿ ಅಂತ ಮೆಸ್ಸೇಜ್‌ಗಳು ಬರೋಕ್ ಶುರುವಾಗಿವೆ! ಇಂಥಾ ಮೆಸ್ಸೇಜ್ ಬಂದಾಗೆಲ್ಲಾ ಒಂದೊಂದ್ ಡಾಲರ್ ನನಿಗೆ ಸಿಕ್ಕಿದ್ರೆ ಇಷ್ಟೋತ್ತಿಗೆ ಮಿಲಿಯನ್ನರ್ ಆಗ್ತಿದ್ನೋ ಏನೋ...ಎಲ್ಲಾ ಡಬ್ಬಾ ನನ್ ಮಕ್ಳೂ ಯಾವನ್ನಾದ್ರೂ ಬೇವಕೂಫನ್ನ ಬುಟ್ಟಿಗೆ ಬೀಳಿಸ್ ಕೊಂಡೂ ಏಮಾರ್ಸೋಕೋ ಕಾದಿರೋ ಹಾಗೆ ಕಾಣ್ಸುತ್ತೆ. ಇ-ಮೇಲ್ ಅನ್ನೋ ಕಮ್ಮ್ಯೂನಿಕೇಷನ್ ಮಾಧ್ಯಮವನ್ನಾ ಸ್ಪ್ಯಾಮ್ ಆಗಿ ಬಳಸಿ ಫಿಷಿಂಗ್ ಮಾಡಿ ಅಮಾಯಕರನ್ನ ಬಲೆಗೆ ಹಾಕ್ಕೊಂಡು ಬಲೀ ತೊಗೊಳೋರ್‌ನಾ ಹಿಡಿದು ಇರಾಕ್‌ನಲ್ಲಿ ತಲೆ ತೆಗೆದಂಗ್ ತೆಗೀಬೇಕು ಅಂತ ಎಷ್ಟೋ ಸರ್ತಿ ಸಿಟ್ಟೇ ಬರುತ್ತೆ.
ಈ ನನ್ ಮಕ್ಳುದ್ ಎಲ್ಲಾರ್ದೂ ಒಂದೊಂದ್ ಅಜೆಂಡಾ...ಬದುಕು ಅನ್ನೋದು ಅವರಿವರು ಹೇಳಿದಂಗೆ ಕುಣಿಯೋ ಸೂತ್ರದ ಬೊಂಬೆಯಾಗಿ ಹೋಗಿದೆ ಅನ್ನೋದಕ್ಕೆ ಇಷ್ಟು ಬರೀ ಬೇಕಾಯ್ತು...ನಮ್ ತಂತ್ರಜ್ಞಾನ ಮತ್ತೊಂದು ಎಷ್ಟೇ ಬೆಳೀಲಿ...ಗೋಡೇ ಮೇಲೆ ಏರಿದಂತೆಲ್ಲಾ ಏಣಿ ಗೋಡೆಗೇ ಹೆಚ್ಚ್ ಹೆಚ್ಚು ವಾಲಿಕೊಳ್ಳೋ ಹಾಗೆ ನಮ್ ಡಿಪೆಂಡೆನ್ಸಿ ಅವುಗಳ ಮೇಲೆಲ್ಲಾ ಜಾಸ್ತೀನೇ ಆಗುತ್ತೇ ಅನ್ಸಲ್ಲಾ? ಒಂದೊಂದ್ ಸರ್ತಿ ಇವೆಲ್ಲಾ ಬಿಟ್ಟು ಎಲ್ಲಾದ್ರೂ ಓಡ್ ಹೋಗ್ಭೇಕು ಅನ್ಸುತ್ತೆ, ಏನ್ ಮಾಡ್ಲೀ ಬೆಳಗ್ಗೆ ಒಂದು ಇಂಪಾರ್ಟೆಂಟ್ ಪ್ರೆಸೆಂಟೇಷನ್ನಿದೆ...(ಇಲ್ಲಾ ಅಂದ್ರೆ ಎಲ್ಲಾದ್ರೂ ದೇಶಾಂತ್ರ ಹೋಗ್ತಿದ್ನೋ ಇಲ್ಲ್ವೋ ಅದ್ ಬೇರೇ ವಿಷ್ಯಾ).
ಮತ್ತ್ ಶುರುವಾಯ್ತು ನೋಡಿ, Restart ಮಾಡ್ದೇ ಹೋದ್ರೆ Security compromise ಮಾಡಿದ ಹಾಗೆ ಅನ್ನೋ ಆದೇಶ...ಮಾಡ್ತೀನ್ ತಾಳಿ, ಇವ್ರುಗಳು ಹೇಳಿದ ಹಾಗೆ Restart ಯಾಕ್ ಮಾಡ್ಬೇಕು? Shutdown ಮಾಡಿ ನನಗ್ಯಾವಾಗ್ ಬೇಕೋ ಅವಾಗ್ Start ಮಾಡ್ಕೋತೀನಿ... ತಮಾಷೆ ವಿಷ್ಯಾ ಅಂದ್ರೆ Turn Off Computer ಅಂತ ಅನ್ನೋದಕ್ಕೂ Start button ಮೇಲೇ ಕ್ಲಿಕ್ ಮಾಡ್‌ಬೇಕು! ಒಂದ್ಸರ್ತಿ Turn-off ಮಾಡ್ಬೇಕು ಅನ್ನೋವಾಗ ಮತ್ತಿನ್ನೊಂದಿಷ್ಟ್ ಆಪ್ಷನ್ನುಗಳು ಯಾಕೆ ಅಂತ ಅನ್ಸಲ್ವಾ? ಈ ಮನುಷ್ಯನ್ ತಲೇ ಅನ್ನೋದು ಖತರ್‌ನಾಕ್ ಶಿವಾ...ಒಂದನೇ ಕ್ಲಾಸ್ ಮಕ್ಳಿಗೆ ಯಾವತ್ತಾದ್ರೂ ಹೇಳ್ಕೊಡಿ ಕಂಪ್ಯೂಟರ್ರ್ ಬಗ್ಗೆ ಆಗ ಗೊತ್ತಾಗುತ್ತೆ, ಇವರ ಕಮ್ಯಾಂಡ್ ಸೀಕ್ವೆನ್ಸುಗಳೆಲ್ಲಾ ಎಷ್ಟು ಇಲ್ಲಾಜಿಕಲ್ಲೂ ಅಂತ...ನಾನೇನಾದ್ರೂ ಆಪರೇಂಟಿಂಗ್ ಸಿಸ್ಟಂ ಬರೆದ್ರೆ Shutdown ಅಂತ ಒಂದು ಬಟನ್ ಬರೀತೀನಿ, ಅದನ್ನ್ ಕ್ಲಿಕ್ ಮಾಡಿದ್ರೆ shutdown ಆಗೋ ಹಾಗೆ ಮಾಡ್ತೀನಿ...as simple as that!
4 comments:
sakhath aagi barediddiraa sivaa, hoTTe tuMba nagu baMtu. Keep it up
Keshav (www.kannada-nudi.blogspot.com)
ಕೇಶವ್,
ನೀವು ನಕ್ಕ ವಿಷ್ಯಾ ಕೇಳಿ ನನಗೂ ನಗುಬಂತು! :-)
ಧನ್ಯವಾದ.
Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.
Conan Barbarian
Conan the Barbarian Wallpapers
Age of Conan Classes
Game multiplayer online rpg
multiplayer online game like runescape
free online multiplayer game
age of conan gold
aoc gold
Age of Conan Torrent
Age of Conan Trial
Age of Conan Free Trial
Hibernia
Midgard
Albion
DAOC 3 Accounts
DAOC How to Run 3 Accounts
DAOC Triple Log
daoc plat
daoc platinum
wow gold
DAOC Emissary Broken Visions
DAOC Champ Exp Quest
DAOC Artifacts
DAOC templates
Dark Ages of Camelot
EQ2 Plat
EQ2 Gold
EverQuest ii platinum Venekor
Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food
Fading memories Everquest
Mentor everquest
eq2 guild permafrost
free warcraft servers
world of warcraft private servers
world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming
wow pvp
wow arena season 4
wow s3 arena power leveling service
Post a Comment