ಕಗಪ
ಎಷ್ಟೋ ಸರತಿ ಅನ್ಸಲ್ವಾ? ನಮಗೆ ಗೊತ್ತಿದ್ದೂ ಗೊತ್ತಿದ್ದೂ ಕೆಲವೊಮ್ಮೆ ನಾವು ನಮಗೆ ಗೊತ್ತಿರೋದನ್ನೇ ಮಾಡ್ತೀವೇ ವಿನಾ ಹೊಸದೇನನ್ನೂ ಪ್ರಯತ್ನಿಸೋಲ್ಲಾ ಅಂತಾ? ನಿನ್ನೆ ರಾತ್ರಿ "ಬರಹ"ದಲ್ಲಿ ಏನನ್ನೋ ಹುಡುಕುತ್ತಿದ್ದವನಿಗೆ ಕಗಪ ಕೀಲಿಮಣೆಯನ್ನು ಅಭ್ಯಾಸ ಮಾಡಿದರೆ ಹೇಗೆ ಎಂದು ಪ್ರಯೋಗಗಳನ್ನು ಮಾಡತೊಡಗಿ ಒಮ್ಮೆ ಹೂಟಿ ಸಿಕ್ಕರೆ ಕಗಪ ಕೀಲಿಮಣೆ ಬಹಳ ಸುಲಭ, ಅದೂ ಅಲ್ಲದೆ ಕಡಿಮೆ ಕೀ ಸ್ಟ್ರೋಕ್‌ಗಳನ್ನು ಉಪಯೋಗಿಸಿ ಹೆಚ್ಚು ಬರೆಯಬಹುದು ಎನ್ನಿಸಿದ್ದು ನಿಜ.
ಆದರೆ, ನನ್ನ ಬರಹದ Transliteration (ba ra ha) ಗೂ, ಕಗಪ ದ ವೇಗಕ್ಕೂ ಬಹಳ ವ್ಯತ್ಯಾಸವಿರೋದಂತೂ ನಿಜ. ದಿನನಿತ್ಯ ಬಳಸಿದರೆ ಕಗಪವೂ ಹೆಚ್ಚು ವೇಗವನ್ನು ದೊರಕಿಸಿಕೊಡಬಹುದು ಎಂದು ನನಗೆನ್ನಿಸುವ ಹೊತ್ತಿಗೆ ತುಂಬಾ ತಡವಾಗಿದೆ ಎಂದು ನನಗೆ ಗೊತ್ತು.
’ಅಂತರಂಗ’ದ ಬರಹಗಳನ್ನು ಲೆಕ್ಕ ಹಾಕಿದರೆ ಲೇಖನಗಳು ಸರಾಸರಿ ಏಳೆಂಟು ಕಿಲೋ ಬೈಟ್‌ಗಳು ಇರಬಹುದೇನೋ, 'ಕಗಪ'ದಲ್ಲಿ ಕಡಿಮೆ ಟೈಪ್ ಮಾಡಿ ಹೆಚ್ಚು ಬರೆಯುವಂತೆ ಮಾಡುವುದು ನನ್ನಂತಹ ಸೋಮಾರಿಗಳಿಗೆ ವರದಾನವಾಗಬಲ್ಲದು.
ಈ ಲೇಖನ ಚಿಕ್ಕದಾಗಿರುವುದಕ್ಕೆ ಕಾರಣ ನಿಮಗೆ ಈಗಾಗಲೇ ಗೊತ್ತಾಗಿರಬಹುದು!
(ಬರಹ ಬ್ರಹ್ಮನಿಗೆ ಡ್ಯೂ ಕ್ರೆಡಿಟ್ ಕೊಡುತ್ತಾ...’ಅಂತರಂಗ’ದ ನಮನಗಳು)
ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು ಕನ್ನಡಿಗರು ನೀವೆಂಬ ಅಭಿಮಾನವಿರಲಿ! (66)
ಬರಹದಲ್ಲಿ (ನಾನು ಎಣಿಸಿದ ಹಾಗೆ) ೬೬ ಕೀ ಸ್ಟ್ರೋಕ್‌ಗಳು.
ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು ಕನ್ನಡಿಗರು ನೀವೆಂಬ ಅಭಿಮಾನವಿರಲಿ! (51)
ಮೇಲಿನ ವಾಕ್ಯ ಕಗಪದಲ್ಲಿ ಬರೆದಾಗ ೫೧ ಕೀ ಸ್ಟ್ರೋಕ್‌ಗಳು.
ವ್ಯಂಜನಗಳನ್ನು ಬರೆಯುವಾಗ Transliteration ಸ್ಕೀಮ್ ನಲ್ಲಿ "ka" ಎಂದು ಟೈಪ್ ಮಾಡಿದರೆ "ಕ" ಆಗುವುದು ಎರಡು ಕೀ ಸ್ಟ್ರೋಕ್‌ಗಳನ್ನು ಬೇಡುತ್ತದೆ, ಅದೇ ಕಗಪದಲ್ಲಿ "k" ಟೈಪ್ ಮಾಡಿದರೆ "ಕ" ಆಗುವುದಕ್ಕೆ ಕೇವಲ ಒಂದೇ ಕೀ ಸ್ಟ್ರೋಕ್ ಬೇಕಾಗುತ್ತದೆ. ಆದರೆ, ಸ್ವರಗಳನ್ನು ಬಳಸುವಲ್ಲಿ, ಹಾಗೂ ಕಾಗುಣಿತದ (ಕಿ,ಕೀ,ಕು,ಕೂ,ಕೃ,ಕೆ,ಕೇ,ಕೈ,ಕೊ,ಕೋ,ಕೌ,ಕಂ,ಕಃ) ಬಳಕೆಯಲ್ಲಿ ಅಂತಹ ವ್ಯತ್ಯಾಸವೇನೂ ಕಾಣಲಿಲ್ಲ. ಇಂಗ್ಲೀಷ್ ಕೀ ಬೋರ್ಡ್‌ನ q, w, ಅಕ್ಷರಗಳನ್ನು ಟ, ಡ, ಎಂದು ಮನದಲ್ಲಿ ಆಲೋಚಿಸಿಕೊಳ್ಳಲು ನನಗೆ ಸ್ವಲ್ಪ ಸಮಯಬೇಕಾಯಿತು, ಜೊತೆಗೆ ಪ್ರತಿಯೊಂದು ಒತ್ತಕ್ಷರಕ್ಕೆ ’f' ಬಳಸುವುದು ತುಸು ಹಿಂಸೆ ಎನಿಸಿತು.
9 comments:
satish,
nimma blog nanage ishtavaitu.ello aagaga chittalaru nimma barhagallli 'dhuttane' baruttirutiddare.its ok.
biduviddare nanna blog nodi
http;\\kuntini.blogspot.com\
ಸತೀಶ್,
ನಮಸ್ಕಾರ.
ಬರಹ, ನುಡಿ ಕೀಲಿಮಣೆ ಮಾತು ಬಿಡಿ. ಇಂದಿಗೂ ಕೆಲವು ‘ಟೈಪ್ ರೈಟರ್’ ರೀತಿಯ ಕೀಲಿಮಣೆಗಳನ್ನು ಉಪಯೋಗಿಸುವವರು ಇದ್ದಾರೆ! ಅಭ್ಯಾಸ ಬಲ.
ನ್ಯೂಜೆರ್ಸಿಯಲ್ಲಿ ಇಂದಿಗೂ ನನ್ನ ಫೇವರೈಟ್ ರಸ್ತೆ ಅಂದ್ರೆ ‘ರೂಟ್ ೧’! ಟರ್ನ್ ಪೈಕ್, ಪಾರ್ಕ್ ವೇ ನಲ್ಲಿ ಬೇಗ ಹೋಗಬಹುದಾದ್ರೂ ‘ರೂಟ್ ೧’ ನ್ನೇ ಉಪಯೋಗಿಸುತ್ತೇನೆ. ನಮ್ಮ ಮನೇ ಪಕ್ಕದಲ್ಲೇ ಹೋಗುತ್ತೆ ಅನ್ನೊ ಅಭಿಮಾನ ಬೇರೆ!
-ಬರಹ ಬ್ರಹ್ಮ!
ಕಗಪ ಕೀಲ್ಮಣೆಯಲ್ಲಿ ಬಲು ಚುರುಕಾಗಿ, ಸುಲಭವಾಗಿ ಟೈಪಬಹುದು.
ಆದರೆ "ಬರಹ"ದ ಸಾಧನೆಗೆ ಅದಕ್ಕೆ ಮೆಚ್ಚು ಸಲ್ಲಿಸಲೇ ಬೇಕು.
ಕುಂಟಿನಿ,
ಹಾಗೆ 'ಧುತ್ತನೆ' ಬಂದ ಚಿತ್ತಾಲರನ್ನು ಇನ್ನೂ ಸ್ವಲ್ಪ ಆದರಿಸೋಣವೆಂದುಕೊಂಡಿದ್ದೇನೆ! :-)
ನಿಮ್ಮ ಬ್ಲಾಗ್ ಚೆನ್ನಾಗಿ ಬರುತ್ತಿದೆ ಹಾಗೇ ಮುಂದುವರೆಸಿ.
ಬರಹಬ್ರಹ್ಮ,
ಒನ್ ಎಂಡ್ ನೈನ್ ನಲ್ಲಿ ನಾನೊಬ್ನೇ ಹೋಗೋದ್ ಹೆಚ್ಚು, ಇಲ್ಲಾಂತಂದ್ರೆ ಇಕ್ಕೆಲಗಳಲ್ಲಿ ಕಾಣೋ ಹಲವಾರು ಅಂಗಡಿಗಳಿಂದ ನನ್ನ ಕ್ರೆಡಿಟ್ ಕಾರ್ಡ್ ಉಳಿಸಿಕೊಳ್ಳೋದಕ್ಕೆ ಬಹಳಷ್ಟು ಕಷ್ಟಪಡಬೇಕಾಗಿ ಬರುತ್ತೆ!
ಮಹೇಶ್,
ಈ ಕಾಮೆಂಟ್‌ಗೆ ಉತ್ತರವನ್ನೂ ಕಗಪದಲ್ಲಿ ಬರೆಯಲಾಗುತ್ತಿಲ್ಲ, ಇನ್ನೂ ಸ್ಪೀಡ್‍ಗೆ ಹೊಂದಿಕೊಂಡಿಲ್ಲ!
೧. ಕಗಪ ಕೀಲಿಮಣೆ ಅಂತ ಹೆಸರು ಪಡ್ಕೊಂಡಿರುವುದು ನಿಜವಾಗಿ 'ಕಗಪ'ದವರದಲ್ಲ. ಕೆ. ಪಿ. ರಾವ್ ಅವರದು. ಕಗಪದವರು ಅದನ್ನು ಬಳಸ್ತಾ ಇದ್ದಾರೆ ಅಷ್ಟೇ.
೨. ಬರಹದಲ್ಲಿ ಬರೆದದ್ದನ್ನು ಆಂಗ್ಲದಲ್ಲಿ ಟೆಕ್ಸ್ಟ್ ಆಗಿ ಇಟ್ಟುಕೊಂಡು ಎಲ್ಲಿ ಬೇಕಾದರೂ ನೋಡಬಹುದು. ನುಡಿಯಲ್ಲಿ ಅದು ಆಗುವುದಿಲ್ಲ. ಕನ್ನಡದಲ್ಲಿ ಯೂನಿಕೋಡ್ ಸಾಮಾನ್ಯ ಬಳಕೆಗೆ ಬರುವ ತನಕ್ ಇದು ಮುಖ್ಯ.
೩. ಕನ್ನಡ ಹೆಚ್ಚ್-ಹೆಚ್ಚು ಕಂಪ್ಯೂಟರ್ ನಲ್ಲಿ ಬಳಕೆಯಾದಂತೆ, "ಎಷ್ಟು ಸಲ ಕುಟ್ಟುತ್ತೀರಿ" ಅನ್ನೋದು ಬಹಳ ಮುಖ್ಯವಾದ ವಿಚಾರ. ನಿಮ್ಮ ಎಲ್ಲ ಬರಹಗಳು ಟೆಕ್ಸ್ಟ್ ನಲ್ಲಿದ್ದರೆ ನಾವು ಅದನ್ನು ಬರಹ ವರ್ಸಸ್ ನುಡಿ ಕುಟ್ಟೋದೆಷ್ಟ್ ಸಲ ಅಂತ ಲೆಕ್ಕ ಹಾಕಿ ನೋಡಬಹುದು!
ಉಉನಾಶೆ,
೧. ಧನ್ಯವಾದ!
೨. ಫಾಂಟ್ ಕನ್ವರ್ಷನ್ ಮೂಲಕ ನುಡಿಯಲ್ಲಿದ್ದದ್ದನ್ನು ಬರಹಕ್ಕೆ ಬದಲಾಯಿಸೋಕಾಗೋದಿಲ್ವಾ?
೩. ನನ್ನ ಎಲ್ಲ ಬರಹಗಳನ್ನೂ .txt ಫೈಲ್‌ನಲ್ಲೇ ಇಟ್ಟಿದ್ದೇನೆ, ನಾನು ಯಾವಾಗ್ಲೂ ಬರಹ ಪ್ಯಾಡ್‌ನಲ್ಲೇ ಬರೆಯೋದು.
ನುಡಿ ಮತ್ತು ಬರಹ ಫಾಂಟುಗಳು ಒಂದೇ ಎನ್ಕೋಡಿಂಗ್ ಅನ್ನು ಬಳಸುತ್ತವೆ(ಕರ್ನಾಟಕ ಸರ್ಕಾರ ಅನುಮೋದಿಸಿದ). ಆದ್ದರಿಂದ ನುಡಿಯಲ್ಲಿ ಬರಹ ಫಾಂಟುಗಳು ಮತ್ತು ಬರಹದಲ್ಲಿ ನುಡಿ ಫಾಂಟುಗಳನ್ನು ಉಪಯೋಗಿಸಬಹುದು.
-ವಾಸು
ವಾಸು,
ಧನ್ಯವಾದಗಳು.
ಮತ್ತೊಂದು ಅಬ್ಸರ್‌ವೇಷನ್, ಟ್ರಾನ್ಸ್ಲಿಟರೇಷನ್ ಮೂಲಕ ಬರೆಯೋದು ಇಂಗ್ಲೀಷ್ ಲಿಪಿಯಲ್ಲಿ ಕನ್ನಡವನ್ನು ಓದಲಿಕ್ಕೆ ಸಹಾಯ ಮಾಡುತ್ತೆ, ಅದೇ ಕಗಪದಲ್ಲಿ ಬರೆದರೆ ಇಂಗ್ಲೀಷ್ ಲಿಪಿಯಲ್ಲಿ ಓದಲು ಕಷ್ಟ ಸಾಧ್ಯ!
Conan Barbarian
Conan the Barbarian Wallpapers
Age of Conan Classes
Game multiplayer online rpg
multiplayer online game like runescape
free online multiplayer game
age of conan gold
aoc gold
Age of Conan Torrent
Age of Conan Trial
Age of Conan Free Trial
Hibernia
Midgard
Albion
DAOC 3 Accounts
DAOC How to Run 3 Accounts
DAOC Triple Log
daoc plat
daoc platinum
wow gold
DAOC Emissary Broken Visions
DAOC Champ Exp Quest
DAOC Artifacts
DAOC templates
Dark Ages of Camelot
EQ2 Plat
EQ2 Gold
EverQuest ii platinum Venekor
Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food
Fading memories Everquest
Mentor everquest
eq2 guild permafrost
free warcraft servers
world of warcraft private servers
world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming
wow pvp
wow arena season 4
wow s3 arena power leveling serviceq
Post a Comment