ಯಾರನ್ನ ನಂಬುವುದು? ಬಿಡುವುದು?
ಈಗಿನ ಕಾಲದ ನ್ಯೂಸ್ ಚಾನೆಲ್‌ಗಳನ್ನ ನೋಡ್ತಾ ಇದ್ರೆ ಒಂದು ರೀತಿ ವಾಕರಿಕೆ ಬಂದಂಗೆ ಆಗೋಲ್ಲ? ಒಂದು ಕಾಲದಲ್ಲಿ ಎಷ್ಟೊಂದು ಚೆನ್ನಾಗಿ ನಾವು ವಿಶ್ವದ ಆಗುಹೋಗುಗಳನ್ನು ಫಾಲೋ ಮಾಡುತ್ತಿದ್ದೆವು. ರೇಡಿಯೋ ಇಟ್ಟುಕೊಂಡು BBC, VoA, SLBC, AIR ಮೊದಲಾದ ಸ್ಟೇಷನ್ನುಗಳನ್ನು ತಿರುಗಿಸಿ ನೋಡುತ್ತಿದ್ದೆವು. ಆಗಿನ ಕಾಲದಲ್ಲಿ ಮ್ಯಾಗಜೀನುಗಳು, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದುತ್ತಿದ್ದೆವು. ಆಗಿನ ಕಾಲದ ಜರ್ನಲಿಸಮ್ ಅಂದ್ರೆ ಅದರಲ್ಲಿ ತಿರುಳಿತ್ತು, ಹುರುಳಿತ್ತು, ಎಲ್ಲಕ್ಕಿಂತ ಮುಖ್ಯವಾಗಿ ನ್ಯೂಸ್ ಇತ್ತು. ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡುವ ಪ್ರಕ್ರಿಯೆ ಇತ್ತು. ಓದುಗರನ್ನು, ಕೇಳುಗರನ್ನು ಪತ್ರಿಕಾ ಸಿಬ್ಬಂದಿ ಸೀರಿಯಸ್ ಆಗಿ ಪರಿಗಣಿಸುತ್ತಿದ್ದರು, ಗಮನಿಸುತ್ತಿದ್ದರು.
ಇದನ್ನು ಬೇಕಾದ್ರೆ, ನಾಸ್ಟಾಲ್ಜಿಯಾ ಎಂದು ಕರೆದು ಬದಿಗೆ ತಳ್ಳಬಹುದು, ಆದರೆ ಇಂದಿನ ನ್ಯೂಸ್ ನೆಟ್‌ವರ್ಕ್‌ಗಳಲ್ಲಿ ಯಾವುದೇ ಹುರುಳಿದ್ದಂತೆ ನನಗನ್ನಿಸೋದಿಲ್ಲ. ನ್ಯೂಸ್‌ಗಿಂತ ಹೆಚ್ಚಾಗಿ ಒಪಿನಿಯನ್ (Op Ed) ನಿಂದ ಎಲ್ಲ ಅಂಕಣಗಳು ತುಂಬಿರುತ್ತವೆ. ಕೆಲವೊಂದು ನ್ಯೂಸ್ ಪೇಪರುಗಳು, ಚಾನೆಲ್ಲುಗಳಂತೂ ಆಯಾ ಪೊಲಿಟಿಕಲ್ ಮ್ಯಾನಿಫೆಸ್ಟೋ ಅನ್ನು ಸಪೋರ್ಟ್ ಮಾಡುತ್ತಾ, ತಮ್ಮ ರಾಜಕೀಯ/ದುರೀಣರ ಮೌತ್‌ಪೀಸ್ ಆಗಿ ಬಿಟ್ಟಿವೆ.
***
ನಾನು ಈ ಕೊರೋನ ಬೆಳವಣಿಗೆಯನ್ನು ಪ್ರತಿದಿನ ರಾತ್ರಿ ಒಂಭತ್ತು ಘಂಟೆಗೆ ಪ್ರಸಾರವಾಗುವ ABD News Live ನೋಡುತ್ತೇನೆ. Linsey Davis ಇದ್ದವರಲ್ಲಿ ಒಳ್ಳೆಯ anchor ಎಂದೇ ಹೇಳಬೇಕು. ಸ್ಫುಟವಾಗಿ ಯಾವ ತಪ್ಪೂ ಇಲ್ಲದೇ ಉತ್ತಮ ಧ್ವನಿಯಿಂದ ಈಕೆ ABC ನ್ಯೂಸ್ ನೋಡುಗರಿಗೆ ಇಷ್ಟವಾಗುತ್ತಾರೆ. ಜೊತೆಗೆ, ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವಷ್ಟರ ಮಟ್ಟಿನ objectivity ಯನ್ನು ನಾನು ಈವರೆಗೆ ಕಂಡಿದ್ದೇನೆ, ಅದರಲ್ಲೂ ಯಾವುದೇ "ಸ್ವಾಮಿನಿಷ್ಠೆ" ಈವರೆಗೆ ನನ್ನ ಅರಿವಿಗೆ ಬಂದಿಲ್ಲ.
ಒಂದು ಮೂವತ್ತು ನಿಮಿಷದ ನ್ಯೂಸ್ ದಿನಕ್ಕೊಮ್ಮೆ ಸಿಕ್ಕರೆ ಸಾಕು ಪ್ರಪಂಚದಲ್ಲಿ ಏನಾಗುತ್ತದೆ ಎಂದು ಗೊತ್ತಾಗಲು. ಅದಲ್ಲದೇ ನಮ್ಮನ್ನೆಲ್ಲ ಯಾವಾಗಲೂ ತಮ್ಮ ಕಡೆಗೆ ತಿರುಗಿಕೊಂಡಿರುವಂತೆ ಮಾಡುವ ಸೋಶಿಯಲ್ ಮೀಡಿಯಾ "ಚಾನಲ್ಲು"ಗಳಂತೂ ಇದ್ದೇ ಇರುತ್ತಾವಲ್ಲ, ನೀವು ಬೇಡವೆಂದರೂ ನಿಮ್ಮನ್ನು ಸುತ್ತಿಕೊಳ್ಳಲು?!
ಅಪ್ಪಿ-ತಪ್ಪಿಯೇನಾದರೂ ಒಳ್ಳೆಯ ಇಂಗ್ಲೀಷ್ ಬರವಣಿಗೆ ಸಿಗುತ್ತದೆಯೆಂದು NY Times ಏನಾದರೂ ನೋಡಿದರೆ ಸಾಕು, Trump ಮಹಾಶಯ ತಪ್ಪು ಮಾಡುವುದನ್ನೇ ಕಾಯುತ್ತಿರುವವರ ಹಾಗೆ ಇಲ್ಲಿನ ರಿಪೋರ್ಟರುಗಳು, ಅಲ್ಲ ಬರಹಗಾರರು ವರದಿ ಒಪ್ಪಿಸಿಯಾರು. ಅವರಿಗೆ ಮತಿ ಇಲ್ಲ, ಇವರಿಗೆ ಗತಿ ಇಲ್ಲ ಎನ್ನುವುದು ಖಚಿತವಾಯಿತು.
ಅಲ್ಲದೇ ಈ ಸೊಫೆಸ್ಟಿಕೇಟೆಡ್ ಚಾನೆಲ್‌ನ anchor ಗಳೆಲ್ಲ ಯಾವಾಗಲೂ breaking news ಗಳಲ್ಲೇ ತಮ್ಮನ್ನೇ ಕಳೆದುಕೊಂಡು ಅದು ಯಾಕಾದರೂ ಅರಚುತ್ತಿರುತ್ತಾರೋ, ಯಾರು ಬಲ್ಲರು?

No comments:
Post a Comment