ಮಾವನ ಮಿತಿ
ಬೇರೆ ಎಲ್ಲರಿಗೂ ಈ ರೀತಿ ಸಮಸ್ಯೆ ಬಂದಿರುತ್ತೆ, ಅದರಿಂದಲಾದರೂ ಏನಾದ್ರೂ ಉಪಾಯ ಹೊಳೆದ್ರೂ ಹೊಳೀಬಹುದು. ಸಮಸ್ಯೆ ಇಷ್ಟೇ, ನನ್ನ ಅಕ್ಕನ ಮಗಳೊಬ್ಬಳ ಮದುವೆ ನಿಶ್ಚಯವಾಗಿದೆ, ಹುಡುಗ ಒಂದೂವರೆ ಲಕ್ಷ ರೂಪಾಯಿ ವರದಕ್ಷಣೆ ಕೇಳ್ತಾ ಇದ್ದಾನಂತೆ, ಮತ್ತೆ ಮದುವೆ ಮಾಡಿಕೊಡೋ ಖರ್ಚೂ ಇರುತ್ತಲ್ವಾ? ವರದಕ್ಷಣೆ ವಿಷ್ಯನಾ ಪೋಲೀಸರಿಗೆ ರಿಪೋರ್ಟ್ ಮಾಡಿ, ಒಂದಲ್ಲ ಒಂದು ರಾದ್ಧಾಂತ ಎಬ್ಬಿಸಿ ಈ ಮದುವೆ ನಿಲ್ಸೋದು ಸುಲಭ - ಹುಡುಗನ ಮಾವನೇ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಅಂತೆ - ಆ ವಿಷ್ಯಾನ ಅವನಿಗೇ ಬಿಡೋಣ! ಹುಡುಗಿಗೆ ತಂದೆ ಇಲ್ಲ, ಅಣ್ಣ ಒಬ್ಬ ಗುಮಾಸ್ತನಾಗಿದ್ದಾನೆ, ಇರೋ ಮನೆ ಮತ್ತೆ ಸುತ್ತಲಿನ ಮನೆಗಳಿಂದ ಬಾಡಿಗೆ ರೂಪದಲ್ಲಿ ಒಂದಿಷ್ಟು ಆದಾಯ ಬರುತ್ತೆ ಅನ್ನೋದು ಬಿಟ್ರೆ ಯಾವುದೇ ಆಸ್ತಿ ಇಲ್ಲ, ಇನ್ನು ತಾಯಿ ಅಂದ್ರೆ ನನ್ನ ಅಕ್ಕ - ಮನೆ ಕೆಲ್ಸಾ ಮಾಡಿಕೊಂಡಿರ್ತಾಳೆ.
ಹುಡುಗಿಗೆ ನಾವು ಮೂರು ಜನ ಮಾವಂದಿರು, ಒಬ್ಬ ನನಗೂ ಇದಕ್ಕೂ ಸಂಬಂಧ ಇಲ್ಲ ಅಂತ ಕೈ ತೊಳಕೊಂಡು ಕೂತಿದ್ದಾನಂತೆ - ಇನ್ನೆರಡು ವಾರದಲ್ಲಿ ಅವನ ಹೊಸ ಮನೆ ಒಕ್ಕಲು, ಅದರಲ್ಲೂ ಅವನ ಮಗನಿಗೆ ಆಗಾಗ್ಗೆ ಹುಷಾರು ಇರೋಲ್ಲ, ಅವನೂ ಹೇಳಿ-ಕೇಳಿ ಮಿಡ್ಲು ಸ್ಕೂಲು ಮೇಷ್ಟ್ರು, ಅವನನ್ನ ಅವನಷ್ಟಕ್ಕೇ ಬಿಟ್ರೆ ಒಳ್ಳೇದು, ಅಲ್ವೇ? ಇನ್ನೊಬ್ಬ, ನನ್ನ ಹಿರಿಯಣ್ಣ, ಒಂದು ಸಣ್ಣ ಅಂಗಡಿ ಇಟ್ಟುಕೊಂಡು, ಶಾಲೆ-ಕಾಲೇಜಿಗೆ ಹೋಗೋ ಮೂರು ಮಕ್ಕಳ್ಳಿದ್ದೂ ಈ ಮದುವೆ ತನ್ನ ಮಗಳದ್ದೇ ಅನ್ನುವಷ್ಟರ ಮಟ್ಟಿಗೆ ತಲೆಕೆಡಿಸಿಕೊಂಡು ಕೂತಿದ್ದಾನೆ. ಮೂರನೆಯವ ನಾನು, ಹೇಳಿ-ಕೇಳಿ ಪರದೇಸಿ!
ನಮ್ ದೊಡ್ಡ ಅಣ್ಣ - ಅದೇ ಅಂಗಡಿ ಇಟ್ಟುಕೊಂಡಿದ್ದಾನಲ್ಲ ಅವನು, ಈ ಎರಡು ವಾರದಲ್ಲಿ ಪದೇ-ಪದೇ ಫೋನ್ ಮಾಡ್ತಾನೇ ಇದ್ದ, ನನಗೆ ಏನಾದ್ರೂ ಮಾಡಿ ಹಣ ಹೊಂದಿಸಿಕೊಡು ಎನ್ನೋದು ಅದರದೆಲ್ಲದರ ಸಾರ. ನಾನು ಒಂದು ಲಕ್ಷ ರೂಪಾಯಿ ಕೊಟ್ರೂ ಅದರ ಡಾಲರ್ ಸಮ ಸುಮಾರು ಎರಡೂ ಕಾಲು ಸಾವಿರ ಆಗುತ್ತೆ. ನಮ್ಮ ಅಣ್ಣ ಹೇಳೋದೇನೂ ಅಂದ್ರೆ ಸಾಲದ ರೂಪದಲ್ಲಾದ್ರೂ ನಾನು ಈ ಮದುವೆಗೆ ದುಡ್ಡುಕೊಡಬೇಕಂತೆ. ಅದು ಆಗದೇ ಹೋದರೆ ಅವರ ಮನೆಯನ್ನು ನಾನೇ ಆಡವಿಟ್ಟುಕೊಳ್ಳಬೇಕಂತೆ, ಇತ್ಯಾದಿ, ಇತ್ಯಾದಿ.
ನನ್ನ ಮುಂದೆ ಇರೋ ಆಪ್ಷನ್‌ಗಳು ಇಷ್ಟು:
೧) ನೇರವಾಗಿ ಒಂದು ಲಕ್ಷಾನೋ, ಒಂದೂವರೆ ಲಕ್ಷಾನೋ ದಾನದ ರೂಪದಲ್ಲಿ ಬಿಸಾಕೋದು
ಇದು ಸಾಧ್ಯವಿಲ್ಲದ ಮಾತು, ಅಷ್ಟೊಂದು ದುಡ್ಡು ಕೊಡೋಕೆ ನನ್ನಲ್ಲಿ ಹಣವಿದ್ದರೂ ನನ್ನ ಹೆಂಡತಿ ಹೇಳಿದಂತೆ, ಅದನ್ನ ದುಡಿಯೋದಕ್ಕೆ, ಉಳಿಸೋದಕ್ಕೆ ನನಗೆ ಎಷ್ಟು ಸಮಯ ಬೇಕು ಅನ್ನೋದು ನನಗೆ ಗೊತ್ತಿರೋದೇ. ಈ ಮದುವೆಗೆ ಈ ಬಾರಿ ಹಣ ಕೊಟ್ಟರೆ ಅದು ಅಲ್ಲಿಗೇ ನಿಲ್ಲಲ್ಲ, ಇನ್ನುಳಿದ ಅಕ್ಕಂದಿರ, ಅಣ್ಣಂದಿರ ಮಕ್ಕಳಿಗೂ ಇದೇ ರೀತಿ ಹಣ ಕೊಡಬೇಕಾದ ಜವಾಬ್ದಾರಿ ನನ್ನ ಮೇಲೆ ಬಿದ್ದು ಬಿಡುತ್ತೆ.
೨) ಅಕ್ಕನ ಮನೆಯನ್ನು ಅಡವಿಟ್ಟುಕೊಂಡು ಸಾಲದ ರೂಪದಲ್ಲಿ ಹಣ ಕೊಡೋದು
ಸಾಲದ ರೂಪದಲ್ಲಿ ಹಣವನ್ನು ಕೊಡಬಹುದು, ಆದರೆ ಇವರೆಲ್ಲರ ಹಿಂದಿನ ಸಾಲ ತೀರಿಸುವ ಪರಂಪರೆಯನ್ನು, ಇವರ ನಡವಳಿಕೆಗಳನ್ನು ಕೂಲಕಂಷವಾಗಿ ಗಮಸಿದರೆ ಸಾಲ ಎಂದಿಗೂ ತೀರೋ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾದಾಗ ನಾನು ಒಂದೇ ಅವರ ಮನೆಯನ್ನು ನನ್ನ ಲೆಕ್ಕಕ್ಕೆ ಚುಕ್ತಾ ಮಾಡಿಕೊಂಡೋ, ಅಥವಾ ಸಾಲವನ್ನು ಮರೆತು ಬಿಡುವ ಧರ್ಮ ಸಂಕಟಕ್ಕೆ ಬಿದ್ದು ಬಿಡುತ್ತೇನೆ.
೩) ಹಣವನ್ನು ಸಾಲದ ರೂಪದಲ್ಲಿ ಕೊಡುವಂತೆ ಬ್ಯಾಂಕಿಗೆ ತಾಕೀತು ಮಾಡುವುದು, ಸಾಧ್ಯವಾದರೆ ಜಾಮೀನು ಅಥವಾ ಗ್ಯಾರಂಟಿಕೊಡುವುದು
ಇದೂ ಕೂಡಾ ಆಗದ ಮಾತು, ಈ ಹಿಂದೆ ಹೀಗೆ ಮಾಡಿ ಕೈ ಸುಟ್ಟುಕೊಂಡಿದ್ದಿದೆ. ಸಾಲವೇನೋ ಸಿಗುತ್ತೆ, ಆದರೆ ಜಾಮೀನು ರೂಪದಲ್ಲಿ ನಾನು ಸಿಕ್ಕಿ ಹಾಕಿಕೊಂಡು ಕೊನೆಗೆ ಅಸಲಿನ ಜೊತೆಗೆ ಬ್ಯಾಂಕಿನ ಬಡ್ಡಿಯೂ ನನ್ನ ತಲೆಗೇ ಬಂದು ಬೀಳುತ್ತೆ. ಇದರೆ ಬದಲಿಗೆ ಆಪ್ಷನ್ ೧, ಅಥವಾ ೨ ಒಳ್ಳೆಯದು.
೪) ಈ ಮೇಲಿನವು ಆಗದೇ ಹೋದರೆ ನನ್ನ ಅಣ್ಣ ತನ್ನ ಅಂಗಡಿಯನ್ನು ಆಧಾರವಾಗಿಟ್ಟುಕೊಂಡು ಸಾಲ ತೆಗೆಯುತ್ತಾನಂತೆ - ಅದಕ್ಕೆ ಬ್ಯಾಂಕ್ ಮ್ಯಾನೇಜರ್‌ಗೆ ನಾನು ಶಿಫಾರಸ್ಸು ಮಾಡಬೇಕಂತೆ
ವೈಯುಕ್ತಿಕವಾಗಿ ನನ್ನ ಅಣ್ಣನ ಮೇಲೆ ಕರುಣೆ ಇದೆ, ಆತನಿಗೆ ಪ್ರತಿ ತಿಂಗಳೂ ನಿಗದಿಯಾದ ಯಾವುದೇ ಆದಾಯವಿಲ್ಲ, ಇವತ್ತು ದುಡೀಬೇಕು, ನಾಳೆ ತಿನ್ನಬೇಕು. ಅಂತಾದ್ದರಲ್ಲಿ, ಅವನ ಅಂಗಡಿಯನ್ನು ಇಟ್ಟು ಸಾಲ ತೆಗೆದನೆಂದರೆ, ಅದು ಅವನು ತೀರಿಸೋ ಸಾಧ್ಯತೆ ಕಡಿಮೆಯೇ. ಕೊನೆಗೆ ಅದು ನನ್ನ ತಲೆಗೇ ಬಂದು ಗಂಟು ಬೀಳುತ್ತೆ.
೫) ದುಡ್ಡು ಕೊಡೋಕೇ ಆಗಲ್ಲ ಅನ್ನೋ ನಿರ್ಲಿಪ್ತತೆಯನ್ನು ಪ್ರದರ್ಶಿಸಿ - ಸುಮ್ಮನಿರುವುದು
ಇದೂ ಕೂಡಾ ಆಗದ ಮಾತು. ನನ್ನ ಸಂವೇದನೆಗಳು ನನ್ನನ್ನು ಈ ಸ್ಥಿತಿಗೆ ಒಯ್ಯಲಾರವು.
೬) ಮನೆಯನ್ನು ಅಡವಿಟ್ಟುಕೊಂಡು ಬ್ಯಾಂಕಿನವರಿಗೆ ಸಾಲವನ್ನು ನನ್ನ ಅಕ್ಕನ ಹೆಸರಿಗೆ ಕೊಡುವಂತೆ ಹೇಳಿ, ನಾನು ಮತ್ತು ನನ್ನ ಅಣ್ಣ ಅದರಿಂದ ಹೊರಗಿರುವುದು
ಸದ್ಯಕ್ಕೆ ಇದು ಉಳಿದ ಉಪಾಯ. ಇದರಿಂದ ನಾನು ಮತ್ತು ನನ್ನ ಅಣ್ಣನೂ ಸಾಲದಿಂದ ಮುಕ್ತರಾದರೂ, ನನ್ನ ಅಕ್ಕನ ಮನೆ ಇವತ್ತಲ್ಲ ನಾಳೆ ಬ್ಯಾಂಕಿನವರಿಗೆ ಸೇರಿಯೇ ಸೇರುತ್ತೆ ಅನ್ನೋ ಸತ್ಯದ ದರ್ಶನವಾಗುತ್ತೆ. ಇವರಿಗೆ ಬರೋ ಚಿಲ್ಲರೇ ಆದಾಯದಿಂದ ಬ್ಯಾಂಕಿನವರ ಬಡ್ಡಿ-ಚಕ್ರಬಡ್ಡಿಯನ್ನು ತೀರಿಸಿ ಮನೆಯನ್ನು ಬಿಡಿಸಿಕೊಳ್ಳುವುದು ಕಷ್ಟ ಸಾಧ್ಯ. ಇನ್ನು ನನ್ನ ಸೋದರಳಿಯನೋ ಯಾವ ಜವಾಬ್ದಾರಿಯೂ ಇಲ್ಲದೇ ನಿಶ್ಚಿಂತನಾಗಿದ್ದಾನೆ. ನಾಳೆ ನನ್ನ ಅಕ್ಕ ಸತ್ತ ಮೇಲೆ, ಅವನು ಊರು ಬಿಟ್ಟು ಬೇರೆಲ್ಲಿಯೋ ಹೋಗುತ್ತಾನೆಯೇ ವಿನಾ ಸಾಲ ತೀರಿಸಿ ಮನೆಯನ್ನು ಬಿಡಿಸಿ, ಮನೆಗೆ ತಕ್ಕ ಮಗನಾಗಿ ಬದುಕುವ ಸಂಭವನೀಯತೆ ತುಂಬಾ ಕಡಿಮೆ. ಒಂದುವೇಳೆ, ನನ್ನ ಅಕ್ಕನ ಮಗ ಎಲ್ಲೂ ಯಾರನ್ನೂ ರಿಜಿಸ್ಟರ್ಡ್ ಮದುವೆ ಮಾಡಿಕೊಳ್ಲದೇ ಇದ್ದ ಪಕ್ಷದಲ್ಲಿ, ಅವನಿಗೆ ಒಂದು ಹುಡುಗಿ ನೋಡಿ ಮದುವೆ ಮಾಡಿ, ಇಷ್ಟೇ ಪ್ರಮಾಣದ ಹಣವನ್ನು ವರದಕ್ಷಿಣೆ ರೂಪದಲ್ಲಿ ಕೇಳು ಎಂದು ನಮ್ಮ ಅಣ್ಣನಿಗೆ ಹೇಳಿದ್ದೇನೆ. ಈಗ ನನ್ನ ಅಕ್ಕನ ಮಗಳನ್ನು ಮದುವೆ ಆಗ್ತಿರೋ ಹುಡುಗ ಡ್ರೈವರ್ ಅಂತೆ, ಅವನಿಗೆ ಒಂದೂವರೆ ಲಕ್ಷ ರೂಪಾಯಿ ವರದಕ್ಷಿಣೆಯಾದರೂ, ಗುಮಾಸ್ತರಿಗೂ ಅಷ್ಟೇ ಇರಬೇಕಲ್ಲವೇ? ವರದಕ್ಷಿಣೆಯನ್ನು ಕೆಟ್ಟದ್ದು ಎಂದವರ್ಯಾರು?
ಹೇಳಿ, ನೀವೆಂದಾದರೂ ಇಂಥ ಧರ್ಮ ಸಂಕಟದಲ್ಲಿ ಸಿಕ್ಕಿದ್ದೀರೇ? ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ?
8 comments:
How about paying the money directly to your nephew with some sort of agreement and hoping that he will pay back (for your niece's marriage maybe:) one day ?
Just looked at your blog (forwarded to me through a yahoo group). Congratulations on a kannada blog. I know what amount of patience you need to write ANY blog, much less a non-English one. Keep it up, man!
Regarding this Dharmasankata: I have been in this position myself, many a time. My option is NEVER! These days, it is difficult to make ends meet as it is, without having to take care of the extended family. DO NOT get into this and DO NOT feel guilty. I would rather be a good husband, good father and a good citizen without trying to be a good mAva, good brother, good nephew....even good son.
Dear anonymous,
I partially agree with you on this...how do one ditch the pillars who helped immensely to establish one's life?
If you think they are your family nothing else should matter. It looks like you aren't close to any of the people mentioned here.
I am confused. Dude, do you really wanna help? The way you have wrote your options, it convinces me that you are not sympathetic to their condition. Imagine if someone in your family reads this. I am sure they will have no respect left for you or others like you.
Now to my suggestion.
I am in the US. So, I can imagine how much time it takes for someone with a green card to earn 3000 dollars.
If you think you need to help them, give them that money. Be happy that you are of some use to your family. Its no f**king donation man. Its your own family for gods sake!
I don't know you, you don't know me. Lets keep it that way.
Dear anonymous,
Thank you for airing your comments and suggestion.
Hope you read other comments for this post, everyone has their views and I appreciate yours.
Mitraa,
intha vishayagalalli yaarU salahe koduvudu uchitavalla. Nimma amtaraatma enu heluttadO adannu maaDi...
shubhavaagali.
so wht did u do finally?. i can understand wht u are going thru n wht they might be thinking.
hbt giving only part of money than teh entire amount? so tht rest of teh money others need to give
BTW is dowry system prevalent in ur caste or wht ever. as far as i know ppl frm sagar n shimoga don't demand dowry or anything of tht sort. i ahev seen my cousins n aunts get marrie dto ppl frm there n it was a simpel wedidng withou dowry. i guess u need to find a diff guy than thsi one as a guy who expects thinsg frm otehsr than earning it is not worth the time
- ವರದಕ್ಷಿಣೆಯನ್ನೇ ಕೇಳದ ವರನನ್ನು ಹುಡುಕಿ ಕೊಡುವುದು ಒಂದು ಉಪಾಯ.
- ಮನೆ ಅಡವಿಟ್ಟುಕೊಂಡು, ಸೋದರಳಿಯನ ಮದುವೆಯ ಸಮಯದಲ್ಲಿ ವಾಪಸು ಪಡೆಯಲು ಯತ್ನಿಸುವುದು ಇನ್ನೊಂದು ಉಪಾಯ.
- ಸಿಗದಿದ್ದರೆ ಮನೆಯನ್ನು ತಾವೇ ಇಟ್ಟುಕೊಂಡರಾಯಿತು. ಸ್ವಲ್ಪ ಧರ್ಮ ಸಂಕಟ ಕಡಿಮೆ.
- ಸೋದರಳಿಯ ವರದಕ್ಷಿಣೆಯನ್ನೇ ತೆಗೆದುಕೊಳ್ಳದಿದ್ದರೆ, ಅದನ್ನು ಗೌರವಿಸಿ, ಮನೆಯನ್ನು ವಾಪಸು ಕೊಡಬಹುದು.
- ನನ್ನ ಅಭಿಪ್ರಾಯ
- ೩೦೦೦ ಡಾಲರ್,
ಒಂದು ಮದುವೆಯ ಅಳಿವು-ಉಳಿವಿನ ಪ್ರಶ್ನೆಯಾದರೆ,
ವರದಕ್ಷಿಣೆಯ ಬಗ್ಗೆ ನಿಮ್ಮ ತಾತ್ವಿಕ ವಿರೋಧವೇನೂ ಇಲ್ಲವಾದರೆ,
ನಿಮಗಾಗಲೀ ನಿಮ್ಮ ಹೆಂಡತಿ ಮಕ್ಕಳಿಗಾಗಲೀ, ಅದು 'ಅಪಾತ್ರ ದಾನ' ವೆಂಬ ಭಾವವಿಲ್ಲವಾದರೆ,
ಸ್ವಂತ ಅಕ್ಕನ ಮಗಳಿಗೆ ಖರ್ಚು ಮಾಡಲಾಗದಷ್ಟು ದೊಡ್ಡ ಮೊತ್ತವೇನಲ್ಲ!
Post a Comment