ಈ ವರ್ಲ್ಡ್ ಲೀಡರುಗಳ ಎನರ್ಜಿ ಹಿಂದಿನ ರಹಸ್ಯ ಏನು?
ಇತ್ತೀಚೆಗೆ ನಮ್ಮ ರಾಜಕೀಯ ಮುಖಂಡರನ್ನೆಲ್ಲ ನೋಡಿದ್ರೆ, ಇವ್ರಿಗೆಲ್ಲ ವಯಸ್ಸಾಗ್ತಾ ಇದ್ದಂಗೆ ಒಂದು ರೀತಿಯ ಹರೆಯ-ಹುಮ್ಮಸ್ಸು ಎದ್ದು ಕಾಣಿಸುತ್ತಲ್ಲಾ?
ಕಳೆದ ತಿಂಗಳು ಆಕ್ಟಾಜೆನೇರಿಯನ್ ಅಂದ್ರೆ, ಎಂಭತ್ತರ ಹರೆಯದ ನವಯುವಕ ಬೈಡೆನ್ ಅಧಿಕಾರದಿಂದ ಕೆಳಗಿಳಿದ ಮೇಲೆ, ಅವರಿಗಿಂತ ಸ್ವಲ್ಪವೇ ವಯಸ್ಸಿನಲ್ಲಿ ಕಡಿಮೆ ಇದ್ದು, ಇನ್ನೆರಡು ವರ್ಷಗಳಲ್ಲಿ ಎಂಬತ್ತು ಮುಟ್ಟುವ ನವ ತರುಣ.
ಇವರನ್ನೆಲ್ಲ ನೋಡಿದ್ರೆ ಅನ್ಸುತ್ತೆ, Eighty is new fifty ಅಂತ. ನಮಗೆಲ್ಲ ಒಂದು ದಿನ ಆಫ಼ೀಸಿಗೆ ಹೋಗಿ ಬಂದ್ರೆ ಉಸ್ಸಪ್ಪ ದಸ್ಸಪ್ಪಾ ಅನ್ಸೋವಾಗ, ಇವರಿಗೆಲ್ಲ ಅದು ಎಲ್ಲಿಂದ ಎನರ್ಜಿ ಬರುತ್ತೆ?
ಈ ನಿಟ್ಟಿನಲ್ಲಿ 74 ವರ್ಷದ ಮೋದಿಯವರನ್ನೂ ಸೇರಿಸಿ ಹೇಳ್ಬೇಕು, ಅವರಂತೂ ದಿನದ 24 ಗಂಟೆಯೂ ಕೆಲ್ಸ ಮಾಡೋರ ಹಾಗೆ ಕಾಣಿಸ್ತಾರೆ.
ಯಾವ ಪಕ್ಷದ ಲೀಡರುಗಳೇ ಇರಲಿ, ಈ ರಾಜಕೀಯ ರ್ಯಾಲಿಗಳಲ್ಲಿ ಭಾಗವಹಿಸಿ, ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯೋದಿದೆ ನೋಡಿ, ಅದರಷ್ಟು ಕಷ್ಟದ ಕೆಲಸ ಇನ್ನೊಂದಿಲ್ಲ. ಎಲೆಕ್ಷನ್ ಸಮಯದಲ್ಲಿ ಎಲ್ಲಾ ನಾಯಕರುಗಳು ಪಡೋ ಕಷ್ಟಾ ನೋಡಿ, ನಮಗೇ ಸಾಕಪ್ಪಾ ಅನ್ನಿಸುತ್ತೆ, ಅಂಥಾದ್ದರಲ್ಲಿ, ಅವರು ತಮ್ಮ ಸ್ಕೆಡ್ಯೂಲ್ಡ್ ಪ್ರೋಗ್ರಾಮ್‌ಗಳನ್ನ ಅದು ಹೇಗೆ ನಿಭಾಯಿಸ್ತಾರೋ, ಅನ್ಸುತ್ತೆ.
ನೀವು ಹೇಳ್ಬೋದು, ಅವರಿಗೆ ಸಪೋರ್ಟ್ ಸ್ಟಾಫ಼್ ಇರುತ್ತೆ, ಅವರ ಹತ್ರ ರಿಸೋರ್ಸುಗಳು ಇರುತ್ತೆ ಅಂತ. ಸುಮ್ನೆ ಬರಕೊಂಡ್ ಬಂದ ಭಾಷ್ಣನ ಓದಿದ್ರೆ , ಜನ ಮರುಳಾಗಿ ಓಟ್ ಹಾಕ್ತಾರೆ ಅಂದ್‌ಕೊಂಡಿದ್ದೀರಾ? ರಾಜಕೀಯದಲ್ಲಿ ಗೆಲ್ಲೋದಕ್ಕೆ ಬೇಕಾದಷ್ಟು ಸ್ಟ್ರಾಟೆಜಿಗಳು ಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಯಾವ ಸಮಯದಲ್ಲಿ ಹೇಗೆ ಮಾತಾಡಬೇಕು ಅನ್ನೋ ಪ್ರಜ್ಞೆ ಇರಬೇಕು.
ಏನೇ ಇರಲಿ, ಮೋದಿ ಆಗ್ಲಿ, ಟ್ರಂಪ್ ಆಗ್ಲಿ, ಈ ವಯಸ್ಸಿನಲ್ಲಿ ಇಷ್ಟೊಂದು ಕೆಲ್ಸ ಮಾಡ್ತಾರಲ್ಲ ಅಂತ ಹೆಮ್ಮೆ ಪಡಬೇಕು.
***
ಈ ವರ್ಲ್ಡ್ ಲೀಡರುಗಳು ನಮ್ಮ ಥರಾ ಸಾಮಾನ್ಯ ಮನುಷ್ಯರು ತಾನೇ? ಜೀವನದಲ್ಲಿ ಮಹತ್ಸಾಧನೆಯ ಉದ್ದೇಶದಿಂದ ಅವರೆಲ್ಲ ಮುಂದೆ ಬಂದಿರ್ತಾರೆ. ಒಂದು ದೇಶಕ್ಕೆ ಒಬ್ಬರೇ ಪ್ರೆಸಿಡೆಂಟು ಅನ್ನೋ ಹಾಗೆ, ಎಲ್ಲರನ್ನು ಹಿಂದಿಕ್ಕಿ ಆ ಅಧಿಕಾರ ಸೂತ್ರ ಹಿಡಿಯೋದು ಅಂದ್ರೆ ಸುಮ್ನೇ ನಾ?
ಇಳೀ ವಯಸ್ಸಿನವರ ಈ ಪಾಡು ಇರಲಿ. ಭಾರತದಲ್ಲಿ ಅದೆಷ್ಟು ಮಹಾ ಪುರುಷರು ತಮ್ಮ ಚಿಕ್ಕ ವಯಸ್ಸಿನಲ್ಲಿ ಎಷ್ಟೊಂದು ಸಾಧನೆ ಮಾಡಿ ಕಾಲವಾಗಿಲ್ಲ. ಉದಾಹರಣೆಗೆ, ರಾಮಾನುಜಾಚಾರ್ಯರು ಬದುಕಿದ್ದು ಕೇವಲ 32 ವರ್ಷ ಮಾತ್ರ - ಅಷ್ಟೇ ಚಿಕ್ಕ ವಯಸ್ಸಿನಲ್ಲಿ ನಮ್ಮ ನೂರು ಜನ್ಮದ ಸಾಧನೆಯನ್ನು ಮಾಡಿದ್ದಾರೆ ಅಂದುಕೋ ಬಹುದು. ಹಾಗೆ, ಸ್ವಾಮಿ ವಿವೇಕಾನಂದ ಬದುಕಿದ್ದೂ ಕೂಡ 39 ವರ್ಷಗಳು ಮಾತ್ರ.
ಯಾಕೆ ಈ ಉದಾಹರಣೆಗಳನ್ನ ಹೇಳ್ತೀನಿ ಅಂದ್ರೆ, ವಯಸ್ಸು ಒಂದು ನಂಬರ್ ಮಾತ್ರ. ಇಂಥವರಿಂದ ಪ್ರೇರೇಪಣೆ ಪಡೆದು ನಾವೂ ಒಂದಿಷ್ಟು ಕಲೀಬೋದು, ಸಾಧಿಸಬಹುದು.
***
ಸುಮ್ನೇ ಹೀಗೆ ಮಾತಾಡ್ತಾ ನನ್ ಫ಼್ರೆಂಡ್ ಸುಬ್ಬನಿಗೆ ಈ ಬಗ್ಗೆ ಪ್ರಶ್ನೆ ಹಾಕಿದ್ದಕ್ಕೆ, ಹಾರಿಕೆ ಉತ್ರ ಕೊಟ್ಟ ನೋಡಿ!
"ಏ, ನೀ ಸುಮ್ನಿರೋ... ನಮ ಥರ, ಬೈಡೆನ್ ಏನು ಬೆಂಡೇಕಾಯಿ ತಿಂತಾನ? ಟ್ರಂಪ್ ಏನು ತೊಂಡೇಕಾಯಿ ತಿಂತಾನ? ಅವರ ಎನರ್ಜಿ ಎಲ್ಲ ಬೇಕನ್-ಪಾಕನ್ ಇಂದ ಬರುತ್ತೋ ಏನೋ ಯಾರಿಗೆ ಗೊತ್ತು?"
ನಿಜವಾಗಿ, ಅವರಿಗೆ ಈ ಇಳಿ ವಯಸ್ಸಿನ್ನಲ್ಲಿ ಅಷ್ಟೊಂದು ಎನರ್ಜಿ ಹೇಗೆ ಬರುತ್ತೆ?
No comments:
Post a Comment