Sunday, April 05, 2009

ಸಗಣಿಯೊಳಗಿನ ಹುಳಗಳೂ ಬಾವಿ ಕಪ್ಪೆಗಳೂ...



























ಮಾರ್ಚ್ ೨೯ ರ ವಿ.ಕ.ದಲ್ಲಿ ’ಜನಗಳ ಮನ’ದಲ್ಲಿ ರವಿ ರೆಡ್ಡಿ ಹಾಗೂ ಜಗದೀಶ್ ರಾವ್ ಕಲ್ಮನೆಯವರ ಬಗ್ಗೆ ಓದಿ ಹೀಗನಿಸಿದ್ದು ನಿಜ.

ಹ್ಞೂ, ’ಇಂಥವರ ಬಗ್ಗೆ ಎರಡು ಸಾಲು ಬರೆದರೂ ಜಾಗ ವೇಷ್ಟು’ ಎಂದಿದ್ದಾರಲ್ಲವೇ? ಜೊತೆಗೆ, ’...ಬೆಂಗಳೂರು ಸುಧಾರಣೆಯಾಗಬೇಕಿದೆ.’ ಎನ್ನುವ ಕುಹಕ ಅಲ್ಲ, ನಿಜ ಸ್ಥಿತಿ ಬೇರೆ ಕೇಡಿಗೆ.

***

’ನಾವು ಭಾರತೀಯರೂ, ಒಹೋಯ್!’ ಎಂದು ಮೊನ್ನೆ ಮೊನ್ನೆ ತಾನೆ ಅಶ್ವಥ್ ಕೂಗಿ ಹೋಗಿದ್ದರಲ್ಲವೇ? ಸಗಣಿಯೊಳಗಿನ ಹುಳುಗಳಿಗೆ ಅದೇ ಪ್ರಪಂಚ, ಒಂದು ವೇಳೆ ಅವುಗಳನ್ನೇನಾದರೂ ಯಾರಾದರೂ ಎತ್ತಿ ಹೊರಗೆ ಬಿಟ್ಟರೂ ಮತ್ತೆ ಸಗಣಿಯೊಳಗೆ ಸಿಗುವ ಸುಖಕ್ಕೆ ಜೋತು ಬೀಳುವ ಜಾತಿ. ಹಾಗೇ ಬಾವಿ ಕಪ್ಪೆಗಳೂ ಕೂಡ, ತಮ್ಮದೇ ಪ್ರಪಂಚದಲ್ಲಿ ತಾವೇ ದೊಡ್ಡವರು ಎಂದುಕೊಂಡ ಹಾಗೆ.

ಇವೇ ಅತಿರಥ-ಮಹಾರಥರು ಅಮೇರಿಕದ ಸಮ್ಮೇಳನಗಳಿಗೆ ಬಂದಾಗ ಬಾಲ ಮುದುರಿಕೊಂಡು ತಮಗೆ ತೋಚಿದ್ದನ್ನ ಬರೀತಾರೇ ವಿನಾ ಯಾರೊಬ್ಬರ ಹೆಸರಿಗೂ ಮಸಿ ಬಳಿಯುವ ಕಾಯಕಕ್ಕಂತೂ ಕೈಗೂಡಿದ್ದನ್ನ ನಾನು ನೋಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಅಮೇರಿಕದಲ್ಲಿ ಇನ್ನೂ ಮುಗಿಯದೇ ಇದ್ದ ’ಬಾಲ್ಟಿಮೋರ್ ಸಮ್ಮೇಳನ’ವನ್ನು ಈಗಾಗಲೇ ಮುಗಿದು ಹೋಯಿತು ಎಂದು ವರದಿಯನ್ನು ಹೊರಗೆ ಹಾಕಿದ್ದಕ್ಕೂ ಒಂದು ಅಪಾಲಜಿ ಇವುಗಳ ಮುಸುಡಿಯಿಂದ ಹೊರಡಲ್ಲ. ಇದ್ದ ಬದ್ದ ಸುದ್ದಿಗೆ ಒಂದಿಷ್ಟು ಕಣ್ಣೊರೆಸುವ ಚಾಕಚಕ್ಯತೆಯನ್ನು ಮುಟ್ಟಿಸಿ ಸುಳ್ಳಿನ ಮೇಲೆ ನೂರೆಂಟು ಸುಳ್ಳನ್ನು ಹೇಳೋ ಪದ್ಧತಿಯೂ ಇನ್ನೂ ನಿಂತ ಹಾಗಿಲ್ಲ.

***

’ಮೌಲ್ಯ’ವೆಂದರೇನು ಎಂದು ತಿಳಿದು ಅದನ್ನು ಪಚನ ಮಾಡಿಕೊಳ್ಳಲು ಇನ್ನೂ ಒಂದೈದು ಸಾವಿರ ವರ್ಷಗಳಾಗಬೇಕು ನಮಗೆ. ಇನ್ನು ಮೌಲ್ಯವನ್ನು ಆಧರಿಸಿದ ರಾಜಕಾರಣವೆಂದರೇನದು? ನಾವೆಲ್ಲ ಕುರಿಗಳು ಎಂದು ಕವಿಗಳು ಆಡಿ ಅಣಗಿಸಲಿಲ್ಲವೇ? ಅಂಥ ಕುರಿಗಳ ಮಂದೆಗೆ ಅಮೇರಿಕದೊಂದಿಷ್ಟು ಜನ ಪಾಪ ಏನೋ ಸಹಾಯವಾಗಲಿ ಎಂದು ಮನೆ-ಮಠ ಬಿಟ್ಟು, ಇರುವ ರಜಾ ವಜಾ ಮಾಡಿಕೊಂಡು, ಕೈಯಲ್ಲಿನ ಕಾಸು ಕರಗುವ ವರೆಗೂ ಪ್ರಯತ್ನ ಮಾಡುವ ಗೋಜಿಗಾದರೂ ಹೋಗುತ್ತಾರಲ್ಲ ಅದೇ ಮುಖ್ಯ.

ಐವತ್ತು ವರ್ಷಗಳಿಂದ ಚಲಾವಣೆಯಲ್ಲಿದ್ದ ಸಂವಿಧಾನ ಬದ್ಧ ’ಬಾವುಟ ಹಾರಿಸುವ ಕಾಯಿದೆ’ಯನ್ನು ಮುರಿದು ನಮ್ಮ ದೇಶದ ಬಾವುಟವನ್ನು ನಾವು ನಮ್ಮ ಮನೆ ಮುಂದೆ ಹಾರಿಸಿದರೆ ತಪ್ಪೇ? ಎಂದು ಸಾಧಿಸಿಕೊಂಡಿದ್ದು ನಮ್ಮಂಥ ಒಬ್ಬ ಅನಿವಾಸಿಯೇ.
ಅಮೇರಿಕದಲ್ಲಿ ಓದಿಕೊಂಡು, ಸದನದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಮುಂದೆ ಒಬ್ಬ ಪ್ರತಿಭಾವಂತ ಮುಖ್ಯಮಂತ್ರಿ ಎಂದು ಎಸ್. ಎಮ್. ಕೃಷ್ಣ ಹೆಸರು ತೆಗೆದುಕೊಳ್ಳಲಿಲ್ಲವೇ?

***

ಇಂಥವರ ಬಗ್ಗೆ ಬರೀ ಬೇಡ್ರಿ, ನಿಮ್ಮ ಮೂರುಕಾಸ್ ಪತ್ರಿಕೆಯಲ್ಲಿ, ಯಾರ್ ಕೇರ್ ಮಾಡ್ತಾರೆ? ಹಾಗೆ ಬರೆಯದೇ ಉಳಿದ ಜಾಗೆಯಲ್ಲಿ ಅವೇ-ಅವೇ ಪ್ರಭೃತಿಗಳ ದರ್ಶನ ಮಾಡಿಸಿಕೊಂಡು ಸುಖವಾಗಿರಿ. ಲಂಚ, ಭ್ರಷ್ಟಾಚಾರ ಅನ್ನೋದು ಹಾಡು ಹಗಲಿನ ದಂದೆಯಾಗಿದ್ದರೂ ಅದನ್ನು ಇದ್ದ ಹಾಗೆ ಬರೆದು ವರ್ಷಕ್ಕೊಬ್ಬ ಪುಂಡು ರಾಜಕಾರಣಿಯನ್ನಾದರೂ ಜೈಲಿಗೆ ಸೇರಿಸಿದ್ದೇ ನಿಜವಾಗಿದ್ದರೆ ಪತ್ರಿಕೆ ಪಾವನವಾಗುತ್ತಿತ್ತು, ಹಾಗಾಗೋದಿಲ್ಲ ಎಂದ ಮೇಲೆ ತಿಪ್ಪೇ ಸಾರಿಸಿಕೊಂಡೇ ಬಿದ್ದಿರಿ.

ಹೆಂಡ-ಸೀರೆ ಹಂಚಿ ಮತ ತೆಗೆದುಕೊಳ್ಳೋ ನಿಮ್ಮ ದೊರೆಗಳ ಪಾದ ನೆಕ್ಕೊಂಡು ಬಿದ್ದಿರಿ, ಇವತ್ತಲ್ಲ ನಾಳೆ ನಿಮಗೂ ಬೆಳಕಿನ ದರ್ಶನವಾದೀತು. ಬಡವರನ್ನ ದೋಚಿ ಸುಲಿಗೆ ಮಾಡಿ ಜಾತಿ ರಾಜಕಾರಣ ಮಾಡೋರು ನಿಮಗೆಲ್ಲ ಆದರ್ಶವಾಗಲಿ.

ದೇಶ ಬಿಟ್ಟು ಭಾಷೆ ಬಿಟ್ಟು, ಎಲ್ಲರಿಗಿಂತ ಹೆಚ್ಚು ಕೊರಗಿಕೊಂಡು, ಮನಸಲ್ಲಿ ಅಪ್ಪಟ ಮಾನವನಾಗಿ ಬೆಳೆಯೋ ಆಲೋಚನೆಗಳಿಗೆ ದಿನೇದಿನೇ ನೀರು ಕುಡಿಸುತ್ತಾ ಒಂದು ಕಡೆ ಬೇಡವೆಂದರೂ ದೂರ ಹೋಗುವ ಭಾರತೀಯತೆಯನ್ನು ಮತ್ತೊಂದು ಕಡೆ ಗಟ್ಟಿಯಾಗಿ ಅಪ್ಪಿಕೊಂಡೇ ನಾವು ನಿಟ್ಟುಸಿರು ಬಿಡ್ತೀವಿ, ಅವು ನಿಮಗೆಲ್ಲ ಖಂಡಿತ (ಈ ಜನುಮದಲ್ಲಿ) ಅರ್ಥ ಆಗಲ್ಲ ಬಿಡಿ.

6 comments:

ವಿ.ರಾ.ಹೆ. said...

ಸರ್, ನೀವು ಇಷ್ಟು ಬೇಜಾರಾಗ್ಬೇಡಿ, ಅವರು ಎಲ್ಲಾ ಅನಿವಾಸಿಗಳ ಬಗ್ಗೆ ಹಾಗೆ ಹೇಳಿಲ್ಲ ಅಂತ ಅನ್ಸುತ್ತೆ. ಅದು ಆ ವ್ಯಕ್ತಿಯ ಬಗ್ಗೆ ಮಾತ್ರ. ಅವರಿಬ್ಬರ ಏನೋ ಮನಸ್ತಾಪ ಅದು.

http://kshakirana.blogspot.com/2009/03/vs.html

ಸಾಗರದಾಚೆಯ ಇಂಚರ said...

ಸರ್,
ಕೆಲವರಿಗೆ ಹಾಗೆ, ತಾವು ಅನಿವಾಸಿಗಳನ್ನು ಟೀಕೆ ಮಾಡಿದ್ರೆ ಏನೋ ಸಾಧಿಸಿಬಿಟ್ವಿ ಅನ್ಕೋತಾರೆ, ತಮ್ಮ ಬುಡದಲ್ಲಿ ಇರುವ ಆನೆಗಿನ್ತನು ಪಕ್ಕದವನ ಬುಡದಲ್ಲಿ ಇರೋ ಇರುವೇನೆ ಹೆಚ್ಚು ಗಮನ ಕೊದೊವಂತ ವಿಷಯ ಅನ್ಥವ್ರದ್ದು. ಏನು ಮಾಡೋಕು ಆಗಲ್ಲ ಬಿಡಿ.

sunaath said...

ತಾವೇ ದೊಡ್ಡ ಪತ್ರಿಕಾಕರ್ತರು ಎನ್ನುವ ಬಾವಿಯೊಳಗಿನ ಕಪ್ಪೆಗಳಿಗೆ ಯಾಕೆ care ಮಾಡ್ತೀರಿ ಬಿಡಿ.

Anonymous said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

Santhosh Kumar said...

Satish,
I have read all your posts from way back 2006[frm past 10 days].
1.First of all, dont GENERALISE YOUR THINKING.
2.Read this article once again and think abt what u've written.
3.And dont think that in YOUR USA everything and EVERYONE is correct.
4.Come out of the INFERIORITY Complex.

Satish said...

ವಿಕಾಸ್,

’ಕ್ಷಕಿರಣ’ದ ಬಗ್ಗೆ ಇನ್ನೊಮ್ಮೆ ಎಲ್ಲಾದ್ರೂ ಬರೀತೀನಿ, ಕೆಲವೊಂದು ಇಷ್ಟವಾಯ್ತು, ಕೆಲವೊಂದು ಇಲ್ಲ.

ಸಾ.ಇ.,
ಜನಗಳನ್ನ ಬದಲಾಯಿಸೋಕಂತೂ ನಮ್ಮ ಕೈಯಲ್ಲಾಗಲ್ಲ, ಕೊನೇಪಕ್ಷ ನಮಗನ್ನಿಸಿದ್ದನ್ನಾದ್ರೂ ಹಂಚಿಕೊಂಡ್ರೆ ಅಷ್ಟೇ ಸಾಕು.

ಸುನಾಥ್,
ಅಲ್ವಾ, ನಾವೂ ಕೇರ್ಲೆಸ್ ಆಗಿರಬೇಕು, ಆಗ ಸರಿ ಆಗುತ್ತೆ, ಒಂದು ರೀತಿ ದಪ್ಪ ಚರ್ಮದವರ ಹಾಗೆ! :-)

ರಾಘವೇಂದ್ರ,
ಪುರುಸೊತ್ತು ಸಿಕ್ಕಾಗ ನೋಡ್ತೇನೆ, ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.

ಸಂತೋಷ್,
ಹ್ಞೂ, ಪರವಾಗಿಲ್ಲ, ೨೦೦೬ ರಿಂದ ಬರೆದ ಸುಮಾರು ಐನೂರು ಲೇಖನಗಳನ್ನೂ ಹತ್ತೇ ದಿನದಲ್ಲಿ ಓದಿ ಮುಗಿಸಿದ್ದೀರಲ್ಲ, ಗ್ರೇಟ್. ನಿಮ್ಮ ಫೀಡ್‌ಬ್ಯಾಕ್‌ಗೆ ಧನ್ಯವಾದಗಳು. ಈ ಬ್ಲಾಗ್‌ ಲೇಖನಗಳನ್ನು ಓದಿ ಟೈಮ್ ಹಾಳ್ ಮಾಡಿಕೊಳ್ಳೋ ಬದಲು ಯಾವ್ದಾದ್ರೂ ಪುಸ್ತಕವನ್ನು ಓದಿ ಒಂದಿಷ್ಟು constructive criticism ಕೊಡಿ/ಮಾಡಿ. ಬ್ಲಾಗ್ ಲೇಖನಗಳಿಗೆ ಬಹಳ ವಿಸ್ತಾರವಿರೋ ಹಾಗೆ ಅನೇಕ ಮಿತಿಗಳೂ ಇವೆ, ’ಅಂತರಂಗ’ ಕೂಡಾ ಆ ಮಿತಿಗೆ ಹೊರತೇನಲ್ಲ. ತಾವು ದೊಡ್ಡೋರು ಹೀಗೇ ಆಗಾಗ್ಗೆ ’ಅಂತರಂಗ’ಕ್ಕೆ ಭೇಟಿ ಕೊಡ್ತಾನೆ ಇರಿ.