Friday, November 23, 2007

ನಮ್ಮಲ್ಲಿನ ಬದಲಾವಣೆಗಳು

ಹೇ, ಇನ್ನೂ ನಮ್ಮ ಕನ್ನಡದ ಬಗ್ಗೆ ಬರೆಯೋದಕ್ಕೇನೂ ತಡವಾಗಿಲ್ಲ, ಈ ತಿಂಗಳ ಒಳಗೆ ಯಾವಾಗ ಬರೆದರೂ ಅದು ಕನ್ನಡಮ್ಮನ ಸೇವೆಗೆ, ಪದತಲಕ್ಕೆ ಸೇರುವ ಮಾತೇ! ಈ ತಿಂಗಳು ಆರಂಭವಾಗುವ ಮುನ್ನ ರಾಜ್ಯೋತ್ಸವ ಆಚರಣೆಗಳೇನೇ ಇದ್ದರೂ ನವೆಂಬರ್ ಒಂದಕ್ಕೆ ಸೀಮಿತವಾಗಿರಲಿ ಎಂದು ಆಶಿಸಿದ್ದೇ ಬಂತು, ಕನ್ನಡಿಗರ ಗುಂಪು, ಸಂಘಗಳು, ಸಂಘಟನೆಗಳು ಮಂತ್ರಿ ಮಾಗಧರ ದಂಡನ್ನು ತಮ್ಮ ಸಭೆ ಸಮಾರಂಭಗಳಿಗೆ ಅಮಂತ್ರಿಸಿಕೊಂಡು ಕುತೂಹಲದಿಂದ ಕಾದಿದ್ದೇ ಬಂತು, ಈ ಅಕ್ಟೋಬರ್ ಕೊನೆಯಿಂದ ನವೆಂಬರ್ ಕೊನೆಯವರೆಗೆ ತೆರೆಯ ಮರೆಯಲ್ಲಿ, ರಾಜ್ಯ ದೇಶದ ರಾಜಕೀಯದ ಲೆಕ್ಕದಲ್ಲಿ ಬೇಕಾದಷ್ಟು ಘಟಿಸಿದೆ, ಹಾಗಿದ್ದರಿಂದಲೇ ಅನೇಕ ಶಿಲಾನ್ಯಾಸಗಳು ಸಮಾರಂಭಗಳು ಮುಖ್ಯ ಅತಿಥಿಗಳಿಲ್ಲದೇ ತೊಳಲಾಡುತ್ತಿವೆ ಎನ್ನಿಸಿದ್ದು ನನ್ನ ಅನಿಸಿಕೆ ಅಥವಾ ಭ್ರಮೆ ಇದ್ದಿರಬಹುದು.

ಸುಮಾರು ಎರಡೂವರೆ ವರ್ಷದಿಂದ ಮಾತನಾಡಿಸದ ಕನ್ನಡಿಗ ಸ್ನೇಹಿತನೊಬ್ಬ ನಿನ್ನೆ ಬೆಳಿಗ್ಗೆ ಫೋನ್ ಮಾಡಿದಾಗಲೇ ನನಗೆ ಬಹಳಷ್ಟು ಆಶ್ಚರ್ಯ ಕಾದಿತ್ತು. ಯಾವುದೋ ಕೆಲಸದ ನಡುವೆಯೇ ಗೋಣಿಗೆ ಫೋನಾಯಿಸಿಕೊಂಡು ಮತ್ತೆ ಹಳೆಯ ನೆನಪುಗಳನ್ನು ಕೆದಕಿಕೊಂಡ ನಮ್ಮಿಬ್ಬರ ಮನಸ್ಸಿನಲ್ಲಿ ಬಹಳ ಸಂತಸದಾಯಕ ವಾತಾವರಣ ಮೂಡಿತ್ತು. ನಮ್ಮಿಬ್ಬರ ನಡುವಿನ ಪರಿಚಯ ಅಥವಾ ಸ್ನೇಹ ಎನ್ನುವುದು ಸುಮಾರು ಹನ್ನೆರಡು ವರ್ಷಗಳ ಹಳೆಯದು, ಅಥವಾ ಅದಕ್ಕೂ ಹಿಂದಿನದ್ದಿರಬಹುದು. ಆದರೆ ಈ ಸ್ನೇಹಿತ ನನ್ನೊಡನೆ ಮಾತನಾಡಿದ ರೀತಿ ನನ್ನಲ್ಲಿ ಬಹಳಷ್ಟು ಆಶ್ಚರ್ಯವನ್ನು ಹುಟ್ಟಿಸಿತ್ತು. ಆ ಸ್ನೇಹದ ಸಲಿಗೆ ಅಥವಾ ಸದರದಿಂದಲೇ ನನಗೆ ಅನ್ನಿಸಿದ್ದನ್ನೂ ನಿಜವಾಗಿಯೂ ಹೇಳಿಬಿಟ್ಟೆ, ಅದೇ ನನ್ನನ್ನು ಈ ಲೇಖನ ಬರೆಯುವ ಕಷ್ಟಕ್ಕೆ ಸಿಕ್ಕು ಹಾಕಿಸಿದ್ದು.

ಅವನೊಡನೆ ನಡೆಸಿದ ಹದಿನೈದು ನಿಮಿಷದ ಮಾತುಕಥೆ ನನ್ನಲ್ಲಿ ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ: ನಮ್ಮಲ್ಲಿ ಬದಲಾವಣೆಗಳು ಸಹಜವೋ ಅಥವಾ ಬದಲಾವಣೆಗಳನ್ನು ನಾವೇ ನಮ್ಮ ಮೇಲೆ ಹೇರಿಕೊಳ್ಳುತ್ತೇವೋ, ನಾವು ಯಾವ ಯಾವ ರೀತಿ/ನಿಟ್ಟಿನಲ್ಲಿ ಬದಲಾಗಬೇಕು, ಬದಲಾದರೆ ಒಳ್ಳೆಯದು, ಇತ್ಯಾದಿ.

ನನ್ನ ಸ್ನೇಹಿತನ ಧ್ವನಿಯಲ್ಲಿ ಅಗಾಧವಾದ ಬದಲಾವಣೆಯಿದ್ದುದು ನನಗೆ ಮೊದಲ ಕ್ಷಣದಿಂದಲೇ ಗೊತ್ತಾಯಿತು. ಆತನ ಜೊತೆ ಎರಡು ವರ್ಷಗಳ ಹಿಂದೆ ಮಾತನಾಡುತ್ತಿರುವಾಗ ನಮ್ಮೂರಿನವನೇ ಅನ್ನಿಸಿದ ಮನುಷ್ಯ ಕೇವಲ ಎರಡೇ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗೊಂಡಿದ್ದ. ಅವನು ಉಚ್ಚರಿಸಿದ ಪ್ರತಿಯೊಂದು ಇಂಗ್ಲೀಷ್ ಪದಗಳಲ್ಲಿ ಸ್ಥಳೀಯ (ಅಮೇರಿಕನ್) ಪ್ರಭಾವವಿತ್ತು. ನಾನೂ ಪ್ರತಿದಿನವೂ ಸ್ಥಳೀಯರೊಡನೆ ಮಾತನಾಡುತ್ತೇನಾದರೂ ನನ್ನ ಭಾಷೆಯಲ್ಲಿಲ್ಲದ ಉಚ್ಚಾರ, ಸ್ವರಗಳೆಲ್ಲವೂ ನನ್ನ ಸ್ನೇಹಿತನಿಗೆ ಮೈಗೂಡಿತ್ತು. ನನ್ನ ಅನಿಸಿಕೆಯ ಪ್ರಕಾರ ಹೊರಗಿನಿಂದ ಭಾರತೀಯರು ಕಷ್ಟಪಟ್ಟು ಸ್ಥಳೀಯ ಅಮೇರಿಕನ್ ಆಕ್ಸೆಂಟಿನಲ್ಲಿ ಭಾಷೆಯನ್ನು ಬಳಸುತ್ತಾರೇನೋ ಎಂದು ಒಮ್ಮೆ ಅನಿಸಿದರೂ ಅವನು ತರ್ಕಬದ್ಧವಾದ ಮಾತುಗಳು ಕೃತಕವೆಂದು ಎಲ್ಲಿಯೂ ಅನ್ನಿಸಿಲಿಲ್ಲ.

’ನೀನು ಇಲ್ಲಿ ಯೂನಿವರ್ಸಿಟಿಯಲ್ಲಿ ಪಾಠ-ಪ್ರವಚನಗಳನ್ನೇನಾದರೂ ಮಾಡುತ್ತೀಯೇನು?’ ಎಂದಿದ್ದಕ್ಕೆ ’ಇಲ್ಲ, ಬರೀ ರಿಸರ್ಚ್ ಮಾತ್ರ’ ಎನ್ನುವ ಉತ್ತರ ಬಂತು. ಸ್ಥಳೀಯರ ಒಡನಾಟ ಅಷ್ಟೊಂದಿಲ್ಲದೇ ಒಂದು ಕಾಲದಲ್ಲಿ ನನ್ನೊಡನೆ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ ಮನುಷ್ಯ ಆತನೇ ಮಾಡಿದ ಟೆಲಿಫೋನ್ ಕರೆಯ ಮೂಲಕವಾದರೂ ಮಾಮೂಲಿಯಾಗಿ ಹಾಗೂ ಸಹಜವಾಗಿ ಕನ್ನಡದಲ್ಲೇ ಮಾತನಾಡುತ್ತಾನೆ ಎಂದುಕೊಂಡರೆ, ಬರೀ ಸ್ಥಳೀಯ ಅಕ್ಸೆಂಟಿನಲ್ಲೇ ಇಂಗ್ಲೀಷು ತುಂಬಿರುವ ಮಾತುಗಳನ್ನು ಆಡುತ್ತಾನಲ್ಲಾ ಅದನ್ನು ಹೇಗಾದರೂ ಸ್ವೀಕರಿಸುವುದು?

ನಾನು ತಡೆಯದೇ ಹೇಳಿಯೇ ಬಿಟ್ಟೆ, ’ಅಲ್ಲಯ್ಯಾ, ನೀನು ನೀಡಿದ ಎರಡು ಶಾಕ್‌ಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ, ಸ್ವಲ್ಪ ತಡಿ.’
'What shock?'
'ಅದೇ, ಒಂದು ನೀನು ಇಷ್ಟೊಂದು ವರ್ಷ ಬಿಟ್ಟು ಫೋನ್ ಮಾಡುತ್ತೀದ್ದೀಯಲ್ಲಾ, ಹೇಗಿದ್ದೀಯಾ ಏನು ಕಥೆ? ಮತ್ತೊಂದು ನಿನ್ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ, ನಿನ್ನೂರಿನವರ ಹತ್ತಿರ ಹೀಗೇ ಮಾತನಾಡಿದೆಯಾದರೆ ಅವರು ಶಾಕ್‌ನಿಂದ ಚೇತರಿಸಿಕೊಳ್ಳುತ್ತಾರೆ ಎಂಬ ಗ್ಯಾರಂಟಿಯೇನೂ ಇಲ್ಲ’.
’ಏನ್ ಬದಲಾವಣೆ, ಗೊತ್ತಾಗಲಿಲ್ಲ...’
’ನಿನ್ನ ಇಂಗ್ಲೀಷ್ ಸ್ವರದಲ್ಲಿ ಉಚ್ಚಾರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ, ಯಾವಾಗಿನಿಂದ ಹೀಗೆ?’
’ಬದಲಾವಣೆಯಾ, ನನಗೇನೂ ಬದಲಾದ ಹಾಗೆ ಅನ್ನಿಸೋದಿಲ್ಲ!’
’ಬರೀ ಶಾಕ್‌ಗಳನ್ನೇ ಕೊಡ್ತಾ ಇರ್ತೀಯೋ, ಅಥವಾ ನಿನ್ನ ಬಗ್ಗೆ ಮತ್ತಿನ್ನೊಂದಿಷ್ಟೇನಾದರೂ ಹೇಳ್ತೀಯೋ?’

ಹೀಗೆ ನಮ್ಮ ಸಂಭಾಷಣೆ ಬೆಳೆಯುತ್ತಾ ಹೋಯ್ತು, ಆದರೆ ನನ್ನ ಸ್ನೇಹಿತನಲ್ಲಾದ ಬದಲಾವಣೆಗಳು ನನಗೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನಮ್ಮ ಮಾತಿನ ಮಧ್ಯೆ ನನ್ನ ಸ್ನೇಹಿತ ಮತ್ತೆ ಮೊದಲಿನಂತಾಗಿ ಹೋಗಿದ್ದ ಎನ್ನುವ ಬದಲಾವಣೆಗಳು ನನಗೆ ಕಾಣಿಸತೊಡಗಿದವೋ ಅಥವಾ ನಾನು ಹಾಗೆ (ನನ್ನ ಸ್ವಾರ್ಥಕ್ಕೆ) ಊಹಿಸಿಕೊಳ್ಳತೊಡಗಿದೆನೋ ಗೊತ್ತಿಲ್ಲ. ಬರೀ ನಮ್ಮ ಮಾತನ್ನು ಬದಲಾಯಿಸಿಕೊಂಡರೆ ಸಾಕೆ, ಆ ರೀತಿಯ ಬದಲಾವಣೆಗಳು ಅನಿವಾರ್ಯವೇ ಎಂದು ನನ್ನನ್ನು ಹಲವಾರು ಬಾರಿ ಕೇಳಿಕೊಂಡೆ. ಕೇವಲ ಆರೇ ಆರು ವರ್ಷ ಅಮೇರಿಕದಲ್ಲಿ ಕಳೆದ ಸ್ನೇಹಿತನ ಹಾವಭಾವ ಮಾತುಕಥೆಗಳಲ್ಲಿ ಬದಲಾವಣೆ ಏಕಾಯಿತು? ಅದರ ಅಗತ್ಯವೇನು, ಹೇಗೆ? ಎಂದೆಲ್ಲಾ ಗೊಂದಲಗಳು ಗೋಜಲುಗಳು ಹುಟ್ಟಿಕೊಂಡು ತಳುಕು ಹಾಕಿಕೊಳ್ಳತೊಡಗಿದವು.

ನಾನೂ ಬದಲಾಗಿದ್ದೇನೆ, ದಶಕದ ಮೇಲಿನ ಅನಿವಾಸಿತನ ನನ್ನನ್ನು ಬದಲಾಯಿಸಿದೆ ಇಲ್ಲವೆಂದೇನಿಲ್ಲ - ನಾನು ಭಾರತದಲ್ಲಿ ಎಷ್ಟೋ ಇಂಗ್ಲೀಷ್ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದವನು ಇಲ್ಲಿಗೆ ಬಂದು ತಿದ್ದಿಕೊಂಡಿದ್ದೇನೆ. ಆದರೆ ನನ್ನ ಕನ್ನಡದ ಬಳಕೆಯಲ್ಲಿ, ಅಥವಾ ಅದರ ಮಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಇವತ್ತಿಗೂ ಒಬ್ಬ ಸಾಮಾನ್ಯ ಮನುಷ್ಯನೊದನೆ ನಾನು ಸಹಜವಾಗಿ ಸಂವಾದವನ್ನು ಬೆಳೆಸಬಲ್ಲೆ ಎಂಬ ಹೆಗ್ಗಳಿಕೆ ನನ್ನದು. ಮಾನಸಿಕವಾಗಿ ’ಇವರು ಅಮೇರಿಕದಲ್ಲಿರುವವರು...’ ಎಂದು ಪೂರ್ವಭಾವಿ ಯೋಚನೆಯಲ್ಲಿ ಮಾತನಾಡಿಸುವವರನ್ನು ಹೊರತುಪಡಿಸಿ ಉಳಿದವರಿಗೆ ನನ್ನ ಅನಿವಾಸಿತನದ ಸೂಕ್ಷ್ಮವೂ ಗೊತ್ತಾಗದಿರುವಂತೆ ಬದುಕುವುದೂ ಸಾಧ್ಯವಿದೆ ಎಂಬುದು ಗೊತ್ತಿದೆ. ಜೊತೆಗೆ ನನ್ನ ಹಾಗೆಯೇ ಎಲ್ಲರೂ ಇರಲೇ ಬೇಕು ಎಂದೇನೂ ಇಲ್ಲ ಎನ್ನು ಸಾಮಾನ್ಯ ತಿಳುವಳಿಕೆಯೂ ಇದೆ. ಹೀಗಿದ್ದ್ಯಾಗ್ಯೂ, ನನ್ನ ಸ್ನೇಹಿತನಲ್ಲಿನ ಬದಲಾವಣೆಗಳು ನನ್ನಲ್ಲಿ ನಿರಾಶೆಯನ್ನುಂಟು ಮಾಡಿದವು ಎಂದರೆ ತಪ್ಪೇನೂ ಇಲ್ಲ. ಆತನಿಗಾದ ಬದಲಾವಣೆಗಳು ಸರಿ ತಪ್ಪು ಎನ್ನುವುದಕ್ಕಿಂತಲೂ ನನಗೇ ಗೊತ್ತಾಗುವಷ್ಟರ ಮಟ್ಟಿಗಿನ ಆತನಲ್ಲಿನ ಬದಲಾವಣೆಗಳು ಅಗತ್ಯವೇ ಎಂದು ಯೋಚಿಸತೊಡಗಿದೆ. ಇದೇ ದೇಶದಲ್ಲಿ ನೂರಾರು ವರ್ಷಗಳಿಂದ ತಲತಲಾಂತರದಿಂದ ನೆಲೆಸಿ ಬೆಳೆಯುತ್ತಿರುವ ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟುಗಳಲ್ಲಾಗಲೀ ತಮ್ಮ ವಾಕ್ಯ ರಚನೆಯ ಶೈಲಿಯಲ್ಲಾಗಲೀ ಬದಲಾವಣೆ ಮಾಡಿಕೊಳ್ಳದಿದ್ದರೂ ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲ ಮಾನ್ಯತೆಗಳನ್ನೂ ಪಡೆದುಕೊಂಡಿರುವಾಗ ನಮಗೆ ಆಕ್ಸೆಂಟು ಬದಲಾವಣೆ ಅಗತ್ಯವಿದೆಯೇ? ಬರೀ ಅಕ್ಸೆಂಟುಗಳನ್ನು ಬದಲಾಯಿಸಿಕೊಂಡ ಮಾತ್ರಕ್ಕೆ ಏನು ಸಾಧಿಸಿಕೊಂಡಂತಾಯಿತು, ಹೀಗೆ ಆರಂಭಗೊಂಡ ಬದಲಾವಣೆಯ ಆದಿ ಮತ್ತು ಅಂತ್ಯ ಎಲ್ಲಿ ಎನ್ನುವುದು ಇನ್ನೂ ಪ್ರಶ್ನೆಗಳಾಗೇ ತಲೆ ತಿನ್ನುತ್ತಲೇ ಇವೆ.

ನೀವು ಬದಲಾಗಿದ್ದೀರೇನು? ಏಕೆ ಬದಲಾಗಿದ್ದೀರಿ, ಇಲ್ಲವಾದರೆ ಏಕೆ ಬದಲಾಗಿಲ್ಲ?

8 comments:

ಸುಧನ್ವಾ said...

good effort. keep it up.
-sudhanva

v.v. said...

ಸತೀಶರವರಿಗೆ ನಮಸ್ಕಾರ.

ನಿಮ್ಮ "ಇವತ್ತಿಗೂ ಒಬ್ಬ ಸಾಮಾನ್ಯ ಮನುಷ್ಯನೊದನೆ ನಾನು ಸಹಜವಾಗಿ ಸಂವಾದವನ್ನು ಬೆಳೆಸಬಲ್ಲೆ ಎಂಬ ಹೆಗ್ಗಳಿಕೆ ನನ್ನದು." ಎಂಬ ಮಾತಿನ ಅರ್ಥ ತಿಳಿಯಿತಾದರೂ, ಅದರ ವೈಖರಿ ಕೊಂಚ ಮಟ್ಟಿಗೆ ಸೇರಲಿಲ್ಲ. ನೀವು "ಸಾಮಾನ್ಯ ಮನುಷ್ಯ" ಅಲ್ಲವೇ?

"ಇದೇ ದೇಶದಲ್ಲಿ ನೂರಾರು ವರ್ಷಗಳಿಂದ ತಲತಲಾಂತರದಿಂದ ನೆಲೆಸಿ ಬೆಳೆಯುತ್ತಿರುವ ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟುಗಳಲ್ಲಾಗಲೀ ತಮ್ಮ ವಾಕ್ಯ ರಚನೆಯ ಶೈಲಿಯಲ್ಲಾಗಲೀ ಬದಲಾವಣೆ ಮಾಡಿಕೊಳ್ಳದಿದ್ದರೂ ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲ ಮಾನ್ಯತೆಗಳನ್ನೂ ಪಡೆದುಕೊಂಡಿರುವಾಗ ನಮಗೆ ಆಕ್ಸೆಂಟು ಬದಲಾವಣೆ ಅಗತ್ಯವಿದೆಯೇ?"

ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟು ಮತ್ತು ವಾಕ್ಯ ರಚನೆಯ ಶೈಲಿಯನ್ನು ನಿಜಕ್ಕೂ ಬದಲಾವಣೆ ಮಾಡಿಕೊಂಡಿಲ್ಲವೇ ಅಥವಾ ಆ ಬದಲಾವಣೆ ಅವರದೇ ಆದ (ಅಮೆರಿಕದ ಮುಖ್ಯ ವಾಹಿನಿಯಿಂದ ಬೇರೆಯೇ ಆದ) ಶೈಲಿಗೆ ಆಗಿದೆಯೇ? ಹಾಗೆಯೇ, ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತಷ್ಟೂ ಮಾನ್ಯತೆ ದೊರೆಯುವುದು ನಿಜವಲ್ಲವೇ? ಕ್ರೀಡಾಪಟುಗಳು ಮತ್ತು ಮನರಂಜನಕಾರರನ್ನು ಬಿಟ್ಟರೆ, ಆಫ್ರಿಕನ್ ಅಮೆರಿಕನ್ ಗಣ್ಯ ವ್ಯಕ್ತಿಗಳು ಬಳಸುವ ಭಾಷೆಯ ಶೈಲಿ ಮತ್ತು ಆಕ್ಸೆಂಟ್ ಮುಖ್ಯ ವಾಹಿನಿಗೆ ಹತ್ತಿರವಿರುವುದಿಲ್ಲವೇ?

ನಾನು ನ್ಯೂಯಾರ್ಕ್ ವಿ.ವಿ.ಯಲ್ಲಿ ಓದುತ್ತಿದ್ದಾಗ, ನನ್ನ ಭಾರತೀಯ ಮಿತ್ರನೊಬ್ಬ ಅಮೆರಿಕನ್ ಆಕ್ಸೆಂಟ್ ಬಳಸಲು ಬಹಳಷ್ಟು ಶ್ರಮ ಪಡುತ್ತಿದ್ದ. ಒಂದು ದಿನ ನಾನು ಇಂಟರ್ ನ್ಯಾಷನಲ್ ಸ್ಟುಡೆಂಟ್ಸ್ ಅಡ್ವೈಸರ್ ಆಫೀಸಿನಲ್ಲಿ ಕುಳಿತು ಅಡ್ವೈಸರ್ (ಆಕೆಯ ಹೆಸರು ಡೆಬ್ಬೀ) ಒಂದಿಗೆ ಏನೋ ಹರಟಿಸುತ್ತಿದ್ದೆ. ನನ್ನ ಮಿತ್ರನೂ ಹರಟೆಗೆ ಸೇರಿದ. ಕೊಂಚ ಸಮಯದ ನಂತರ ಡೆಬ್ಬೀ ನನ್ನ ಮಿತ್ರನ ಶ್ರಮ ನೋಡಲಾರದೆ (ಕೇಳಲಾಗದೇ?), "ಇಷ್ಟೆಲ್ಲಾ ಕಷ್ಟ ಯಾಕೆ? ನಿನ್ನ ಆಕ್ಸೆಂಟ್ ನೀನು ಬಳಸು. ನಾನು ಇಟಲಿ ಮೂಲದವಳು. ನನ್ನ ಇಂಗ್ಲೀಷಿನಲ್ಲಿ ಇಟಾಲಿಯನ್ ಆಕ್ಸೆಂಟ್ ಇಲ್ಲವೇ? ಅದನ್ನು ಬದಲಾಯಿಸಬೇಕೇಕೇ?" ಎಂದಳು.

ಅವಳೆಂದ ಮಾತು ಮತ್ತು ನಿಮ್ಮ ಲೇಖನದ ಮುಖ್ಯ ಅಭಿಪ್ರಾಯ ಒಪ್ಪಿಕೊಳ್ಳಬೇಕಾದ ವಿಷಯವೇ.

ಆದರೆ ಅದರ ಫ್ಲಿಪ್ ಸೈಡ್ ಬೇರೆಯೇ ಇದೆ ಅಲ್ಲವೇ?

ವಂದನೆಗಳೊಂದಿಗೆ,
ಶೇಷಾದ್ರಿ

Satish said...

ಸುಧನ್ವಾ,
ಧನ್ಯವಾದಗಳು, ಹೀಗೇ ಆಗಾಗ್ಗ ಬರ್ತಾ ಇರಿ.

Satish said...

ಶೇಷಾದ್ರಿ,
ನಮಸ್ಕಾರ, ಹೇಗಿದ್ದೀರಾ?

ಸಾಮಾನ್ಯ ಮನುಷ್ಯ: ನಾನೂ ಸಾಮಾನ್ಯ ಮನುಷ್ಯನೇ, ಜನ ಸಾಮಾನ್ಯರೊಡನೆ ನಡೆಸಬಹುದಾದ ಸಂವಾದ ಎಂದಿದ್ದರೆ ಸರಿಯಾಗುತ್ತಿತ್ತೋ ಏನೋ. ನಮ್ಮ ದೇಶೀ-ವಿದೇಶಿ ಅನುಭವಗಳನ್ನು ಇಟ್ಟುಕೊಂಡು "ಸಹಜ"ವಾಗಿ ಮಾತುಕಥೆಯನ್ನಾಡುವುದು ಎಂಬ ಅರ್ಥ ಅಷ್ಟೇ. ನನ್ನ ವಿದೇಶೀ ಅನುಭವಗಳು ನನ್ನನ್ನು ವಿಶೇಷ (ಸ್ಪೆಷಲ್) ಮಾಡಬಹುದೇ ವಿನಾ ನನ್ನನ್ನು ಅಸಾಮಾನ್ಯ ಮಾಡೋದಿಲ್ಲ!

ಆಫ್ರಿಕನ್ ಅಮೇರಿಕನ್ ಅಕ್ಸೆಂಟ್, ವ್ಯಾಕ್ಯ ರಚನೆ: ಗಣ್ಯವ್ಯಕ್ತಿಗಳು (ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ) ಬಳಸುವ ಭಾಷೆ ಮುಖ್ಯವಾಹಿನಿಗೆ ಖಂಡಿತ ಹತ್ತಿರವಿದೆ, ಆದರೆ ಅದು ಎಕ್ಸೆಪ್ಷನ್ ಮಾತ್ರ. ಬಹಳಷ್ಟು ಆಫ್ರಿಕನ್ ಅಮೇರಿಕನ್ ಜನರಿಗೆ ಅವರದ್ದೇ ಆದ ಶೈಲಿ ಏಕಿದೆ, ಕೇವಲ ಕ್ರೀಡಾಪಟುಗಳು, ಮನರಂಜನೆಕಾರರಷ್ಟೇ ಏಕೆ ನಮ್ಮ ಸಹೋದ್ಯೋಗಿಗಳು, ದಿನನಿತ್ಯ ಅಲ್ಲಲ್ಲಿ ನಮ್ಮೊಡನೆ ಬೆರೆಯುವ ಹಲವಾರು ಜನರನ್ನು ನಾವು ನೋಡಿರುವ ಹಾಗೆ ಅವರು ಇದೇ ದೇಶದಲ್ಲಿ ಹುಟ್ಟಿ ಬೆಳೆದು ಬಂದಿದ್ದರೂ ಅವರು ಭಿನ್ನರಾಗಿರುವುದು ಸಾಧ್ಯವೆಂದಾದರೆ, ಪ್ರತಿಯೊಬ್ಬರ ಭಿನ್ನತೆಯೂ ಅದೇ ರೀತಿಯಲ್ಲಿ ಮಾನ್ಯತೆಯನ್ನೇಕೆ ಪಡೆಯೋದಿಲ್ಲ? ಅಥವಾ ಮಾನ್ಯತೆ ಪಡೆಯೋದಿಲ್ಲವೆನ್ನುವುದು ’ಭಿನ್ನರಾಗಿರುವವರ’ ಮನಸ್ಸಿನ ಗೊಂದಲವಿರಬಹುದು. ಇದೇ ರೀತಿ ನೋಡಿದರೆ, ಮೊದಲ ಜನರೇಷನ್ ಇಟಾಲಿಯನ್, ರಷಿಯನ್ ಅಥವಾ ಹಿಸ್ಪ್ಯಾನಿಕ್ ಜನರಿಗೆ ಮಾತ್ರ ಅವರ ಮೂಲ ಶೈಲಿ ಇರುವುದನ್ನು ಕಾಣುತ್ತೇವೆ, ನಂತರದ ಜನರೇಷನ್ನುಗಳ ಶೈಲಿ ಮುಖ್ಯವಾಹಿನಿಗೆ ಬಹಳ ಹತ್ತಿರದಲ್ಲಿರುತ್ತವೆ. ಆಫ್ರಿಕನ್ ಅಮೇರಿಕನ್ ಜನರ ಭಿನ್ನ ಶೈಲಿಗೆ ಹಲವಾರು ಕಾರಣಗಳು ಇದ್ದಿರಬಹುದು, ಭಿನ್ನರಾಗಿರುವುದೇ ವಿಶೇಷ ಇಲ್ಲಿ.

v.v. said...

ಸತೀಶ್,

ನಮಸ್ಕಾರ.

ಭಿನ್ನತೆಗೆ ಮಾನ್ಯತೆ ಕೊಡಬೇಕೇ?
ಜೀವನ ಮತ್ತು ಸಮಾಜದ ಬಗೆಗೆ ಲಿಬರ್ಟೇರಿಯನ್ ಧೋರಣೆ ಹೊಂದಿರುವ ನಾನು ಈ ಪ್ರಶ್ನೆಗೆ ಹೇಗೆ ಉತ್ತರಿಸುವೆನೆಂದು ಹೇಳಬೇಕಾದ್ದೇ ಇಲ್ಲ.

ಇತರೆ ದೇಶಗಳಿಗೆ ಹೋಲಿಸಿದರೆ, ಅಮೆರಿಕದಲ್ಲಿ ಭಿನ್ನತೆಗೆ ಹೆಚ್ಚಿನ ಮಾನ್ಯತೆ ಕೊಡುತ್ತಾರೆ ಎಂಬುದನ್ನು ನಾನು ಖಂಡಿತಾ ಒಪ್ಪುತ್ತೇನೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು ಕೊಡುವ ಅಮೆರಿಕದಲ್ಲಿ ಅದು ಸಹಜವೂ ಸಹ. ಅಮೆರಿಕದ ಬಗೆಗೆ ನನಗೆ ಅಭಿಮಾನವಿರುವುದಕ್ಕೆ ಇದೂ ಒಂದು ಕಾರಣ.

ಆದರೆ, ಅಮೆರಿಕದಲ್ಲೂ ಒಂದು ಮಾತು ನಿಜ: ಇಂಗ್ಲೀಷ್ ಭಾಷೆಯನ್ನು ಆಕ್ಸೆಂಟ್ ಒಂದಿಗೆ ಮಾತನಾಡುವವರು ಡಿಸ್ಕ್ರಿಮಿನೇಷನ್ ಎದುರಿಸುತ್ತಾರೆ. (ಕೆಲವೊಮ್ಮೆ ಪಾಸಿಟೀವ್ ಡಿಸ್ಕ್ರಿಮಿನೇಷನ್ ಸಹ) ಹಲವು ಸ್ಟಡಿಗಳು ಈ ವಿಚಾರವನ್ನು ಎತ್ತಿ ತೋರಿಸಿವೆ. ಈ ಸ್ಟಡಿಗಳು ಆಫ್ರಿಕನ್ ಅಮೆರಿಕನ್ನರ ಆರ್ಥಿಕ ದರ್ಜೆ ಮತ್ತು ಅವರ ಆಕ್ಸೆಂಟ್/ಭಾಷಾ ಶೈಲಿಯಲ್ಲಿರುವ ಕಾರ್ರಿಲೇಷನ್ ಸಹ ತೋರಿಸಿವೆ. ಉನ್ನತ ಆರ್ಥಿಕ ವರ್ಗದ ಆಫ್ರಿಕನ್ ಅಮೆರಿಕನ್ನರ ಆಕ್ಸೆಂಟ್, ಕೆಳ ಆರ್ಥಿಕ ವರ್ಗದ ಜನರ ಆಕ್ಸೆಂಟಿಗಿಂತ ಅಮೆರಿಕನ್ ಮುಖ್ಯ ವಾಹಿನಿಯ ಆಕ್ಸೆಂಟನ್ನು ಹೋಲುವುದು ನಿಜವೇ ಅಲ್ಲವೇ?

ಆಕ್ಸೆಂಟ್, ಭಾಷೆ ಮತ್ತು ಡಿಸ್ಕ್ರಿಮಿನೇಷನ್ ನಡುವಿನ ಸಂಬಂಧಗಳನ್ನು ರಾಸಿನಾ ಲಿಪ್ಪಿ ಗ್ರೀನ್ ಅವರ ಇಂಗ್ಲೀಷ್ ವಿತ್ ಅನ್ ಆಕ್ಸೆಂಟ್ ಪುಸ್ತಕದಲ್ಲಿ ವಿವರವಾಗಿ ಓದಬಹುದು.

ಡಿಸ್ಕ್ರಿಮಿನೇಷನ್ ಬಹುಮಟ್ಟಿಗೆ ನೆಗೆಟಿವ್ ಆಗಿದ್ದರೂ, ಯಾವಗಲೂ ಅಲ್ಲ. ಉದಾಹರಣೆಗೆ ಅಮೆರಿಕನ್ ಟಿ.ವಿ. ಚಾನಲ್‌ಗಳಲ್ಲಿ ನ್ಯೂಸ್ ಆಂಕರ್ ಅಥವಾ ಪೊಲಿಟಿಕಲ್ ಅನಲಿಸ್ಟ್ ಆಗಲು ಆಫ್ರಿಕನ್ ಅಮೆರಿಕನ್ ಆಕ್ಸೆಂಟ್ ಇರುವವರಿಗೆ ಅಷ್ಟು ಸುಲಭವಲ್ಲ ಆದರೆ ಇಂಗ್ಲೀಷ್ ಆಕ್ಸೆಂಟ್ ಇದ್ದವರಿಗೆ ಅದು ಅಂತಹ ತೊಂದರೆ ಏನೂ ಅಲ್ಲ. ಕೆಲವೊಮ್ಮೆ ಇಂಗ್ಲೀಷ್ ಆಕ್ಸೆಂಟ್ ಹೊಂದಿರುವುದು ಪ್ರೆಸ್ಟೀಜಿಯಸ್ ಎಂದೂ ಭಾವಿಸಲಾಗುತ್ತದೆ. (ಖ್ಯಾತ ಗಾಯಕಿ ಮಡೋನಾಳ "ಸ್ಯೂಡೋ" ಇಂಗ್ಲೀಷ್ ಆಕ್ಸೆಂಟ್ ಬಗೆಗಿನ ಚರ್ಚೆ ನೀವು ಓದಿರಬಹುದು/ಕೇಳಿರಬಹುದು)

ಇಂತಹ ಪರಿಸ್ಥಿತಿಯಲ್ಲಿ ಕೆಲವರು ಅಮೆರಿಕನ್ ಆಕ್ಸೆಂಟ್ ಅನುಕರಿಸಲು ಪ್ರಯತ್ನಿಸುವುದು ಸಹಜವೇ ಅಲ್ಲವೇ?

ಬೆಂಗಳೂರಿನ ಎಫ್.ಎಂ. ರೇಡಿಯೋ ಸ್ಟೇಷನ್ ಒಂದರಲ್ಲಿ ಮಲೆಯಾಳಿ ಆಕ್ಸೆಂಟಿನಲ್ಲಿ ಕನ್ನಡ ಮತ್ತು ಇಂಗ್ಲೀಷನ್ನು ಮಾತನಾಡುವುದು ಹಾಸ್ಯಕ್ಕೆ ವಸ್ತುವಾಗಿದೆ. ಇದರಿಂದ ಕೆಲ ಮಲೆಯಾಳಿಗಳು ತಮ್ಮ ಆಕ್ಸೆಂಟ್ ತೊಡೆದುಕೊಳ್ಳಲು ಯತ್ನಿಸಬಹುದೇ?

ಕೆಲ ವರ್ಷಗಳ ಹಿಂದೆ ನನ್ನ ಅಮೆರಿಕನ್ ಮಿತ್ರಳೊಬ್ಬಳ ಜೊತೆಗೆ ಪೀಟರ್ ಸೆಲರ್ಸ್‌ನ "ದಿ ಪಾರ್ಟಿ" ಚಿತ್ರದ ಕುರಿತು ಮಾತನಾಡುತ್ತಿದ್ದೆ. ಅದರಲ್ಲಿ ಪೀಟರ್ ಸೆಲರ್ಸ್ ಭಾರತೀಯ ನಟನ ಪಾತ್ರ ಮಾಡಿದ್ದಾನೆ ಮತ್ತು ಭಾರತೀಯ (?!) ಆಕ್ಸೆಂಟಿನಲ್ಲಿ ಮಾತನಾಡುತ್ತಾನೆ. ನಾನು "ನನಗೆ ಆ ಚಿತ್ರ ಇಷ್ಟವಾಯಿತು" ಎಂದಾಗ ಆಕೆ "ಭಾರತೀಯರ ಆಕ್ಸೆಂಟ್ ಮತ್ತು ನಡವಳಿಕೆಯ ಬಗೆಗೆ ಹಾಸ್ಯಮಾಡುವ ಆ ಚಿತ್ರ ಒಂದು ರೇಸಿಸ್ಟ್ ಚಿತ್ರ. ಅಂತಹ ಚಿತ್ರ ನಿನಗೆ ಇಷ್ಟ ಆಯಿತಾ?!" ಎಂದು ಕೇಳಿದಳು!

ವಂದನೆಗಳೊಂದಿಗೆ,
ಶೇಷಾದ್ರಿ

Satish said...

ಶೇಷಾದ್ರಿ,

ಬದಲಾವಣೆ ಎಂಥವರನ್ನೂ ಆಕರ್ಷಿಸುತ್ತದೆ ಎನ್ನುವುದು ನನ್ನ ಅನುಭವ ಕೂಡಾ ಹಾಗೂ ಕೆಲವೊಮ್ಮೆ ಪ್ರಿಟೆನ್ಷನ್‌ನಲ್ಲೋ ಅಥವಾ ಬೇಕಂತಲೋ ನಾವೂ ಆಕ್ಸೆಂಟುಗಳನ್ನು ಬದಲಾಯಿಸುವುದು ಸಹಜ, ಆದರೆ ಆ ರೀತಿಯ ಬದಲಾವಣೆಗಳನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಕಾಣುವುದು ಒಂದು ವಿಧ, ಅದನ್ನೇ ಜೀವನವನ್ನಾಗಿ ಮಾಡಿಕೊಳ್ಳುವುದು ಮತ್ತೊಂದು ವಿಧ.

ಯಾರು ಯಾರಿಗೆ ಈ ಬದಲಾವಣೆ ಅಗತ್ಯವೋ ಹಾಗೆ ಆಗುವುದು ಸಾಮಾನ್ಯ ಕೂಡಾ. ದಶಕಗಳಿಗಿಂತಲೂ ಹೆಚ್ಚು ವರ್ಷಗಳ ಕಾಲ ಬಲ್ಲ ನನ್ನ ಸ್ನೇಹಿತನಲ್ಲಿನ ಬದಲಾವಣೆಗೆ ನಾನು ದಂಗು ಬಡಿದು ಹೋದೆ, ಆದ್ದರಿಂದ ಹಾಗೆ ಬರೆಯಬೇಕಾಯಿತು. ನಮ್ಮ ವೃತ್ತಿ ಜೀವನದಲ್ಲಿ ನಾವೂ ಬದಲಾಗಿದ್ದೇವೆ, ಕೆಲವು ಬದಲಾವಣೆಗಳನ್ನು ನಾವು ಹೇರಿಕೊಂಡಿದ್ದೇವೆ, ಇನ್ನು ಕೆಲವು ಅನಿವಾರ್ಯವೋ ಮತ್ತೊಂದೋ ಆಗಾಗ್ಗೆ ಬಂದು ಹೋಗುತ್ತಿರುತ್ತದೆ.

12 said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service

12 said...

Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.