Friday, November 09, 2007

ನಮ್ಮ್ ದೀಪಾವಳಿ ಆಚರಣೇನೇ ಬೆಷ್ಟ್!

ನಿಮ್ಮೂರಲ್ಲೆಲ್ಲಾ ಹೇಗೋ ಗೊತ್ತಿಲ್ಲ, ನಮ್ಮೂರಲ್ಲಂತೂ ವಾತಾವರಣ ಬಹಳಷ್ಟು ತಣ್ಣಗಾಗಿ ಹೋಗಿದೆ, ನಿನ್ನೆ ಬೆಳಿಗ್ಗೆ ಬಿಲೋ ಫ್ರೀಜಿಂಗ್, ಇಪ್ಪತ್ತಾರು-ಇಪ್ಪತ್ತೇಳು ಡಿಗ್ರಿ ಫ್ಯಾರನ್‌ಹೈಟ್ ಇದ್ದಿದ್ದು ನೋಡಿ ನನಗಂತೂ ಇದ್ದ ಛಳಿ ಇನ್ನಷ್ಟು ಹೆಚ್ಚಾಗಿ ಹೋಯಿತು. ಈಗಾಗ್ಲೇ ಒಡೆದು ಹೋಗಿರೋ ಮೈ ಕೈಗೆ ನರಕ ಚತುರ್ದಶಿ ಪ್ರಯುಕ್ತವಾಗಿ ಎಣ್ಣೆ ಸವರಿ ಸ್ನಾನ ಮಾಡಿದ್ದು ಬಹಳ ಒಳ್ಳೇದೇ ಅನ್ನಿಸ್ತು. ಸದ್ಯ ನೀರ್ ತುಂಬೋ ಹಬ್ಬಾ ಎಲ್ಲಾ ವಾರದ ದಿನದಲ್ಲೇ ಬಂತು ಆದ್ರಿಂದ ಬೇಗನೇ ಸ್ನಾನಾ ಮಾಡಿ ಆಫೀಸಿಗೆ ಓಡಿದ್ದೇ ಬಂತು, ಅದರ ಬದಲಿಗೆ ವೀಕ್‌ಎಂಡ್ ಅಂಥಾ ಏನಾದ್ರೂ ಅಂದ್ಕೊಂಡಿದ್ರೆ ನಾವೆಲ್ಲಾ ಸೂರ್ಯಾ ಕಣ್ ಬಿಟ್ಟ್ ಮೇಲೆ ಏಳೋರು, ಕೊನೆಗೆ ಚತುರ್ದಶಿ ಮುಗಿದು ಹೋಗಿ ಅಮವಾಸೆ ದಿನಾ ಮಾತ್ರ ಸ್ನಾನಾ ಮಾಡಿ ನರಕ ಮಾತ್ರ ಗ್ಯಾರಂಟಿ ಸಿಗ್ತಾ ಇತ್ತು.

ನಮ್ ದೀಪಾವಳಿ ಆಚರಣೇನೇ ಬೆಸ್ಟ್ ಅಂತೀನಿ, ವಾಹನ ಪೂಜೆ, ಅಂಗಡಿ ಪೂಜೆ ಅನ್ನೋದೇನೂ ಇಲ್ಲ ಬರೀ ನಾವೆಲ್ಲ ಲಕ್ಷ್ಮೀ ಪೂಜೆಗೆ ಒತ್ತು ಕೊಡೋರು ಯಾವತ್ತಿದ್ರೂ. ಪುರುಸೊತ್ತಿದ್ರೆ ಏನಾದ್ರೂ ವಿಶೇಷವಾಗಿ ಅಡುಗೆ ಮಾಡ್ತೀವಿ, ಇಲ್ಲಾ ಅಂತಂದ್ರೆ ದೇವಸ್ಥಾನಕ್ಕ್ ಹೋಗಿ ಅಲ್ಲಿನ ಕ್ಯಾಫೆಟೇರಿಯಾದಲ್ಲೇ ಏನಾದ್ರೂ ಸಿಹಿ ತಿಂದು ಬರ್ತೀವಿ. ಪಟಾಕಿಗಳಾಗಲೀ, ಬಾಣಬಿರುಸಾಗಲೀ ಹೊಡೆಯೋದೇ ಇಲ್ಲ, ಇನ್ನು ಸುರುಸುರು ಬತ್ತಿಯೂ ಸದ್ದೂ ಇಲ್ಲ. ಎಲ್ಲವೂ ಫೈರ್ ಪ್ರೂಪ್ ಮನೆಗಳಲ್ಲಿ ಹೆದರಿಕೊಂಡು ಉರಿಯೋ ಹಾಗಿನ ಊದಿನಬತ್ತಿಯ ಥರ, ಅದರ ಹೊಗೆಯೂ ಧಾರಾಳವಾಗಿ ಎಲ್ಲಿ ಬೇಕಂದಲ್ಲಿ ಹರಡುವಂತಿಲ್ಲ, ಸೀದಾ ದೇವರ ಕೋಣೆಯ ಮಂಟಪದಿಂದ ಕಿಟಕಿಯ ಕಡೆಗೆ ನಡೆಯಬೇಕು. ಅಲ್ದೇ ಹೊರಗಡೆ ಕೊರೆಯೋ ಛಳಿಯಲ್ಲಿ ಹೆಚ್ಚು ಹೊತ್ತು ಕಿಟಕಿ ಬಾಗಿಲನ್ನು ತೆಗೆದಿಡೋಕೂ ಆಗೋದಿಲ್ಲವಾದ್ದರಿಂದ ಪೂರ್ಣ ಊದಿನಕಡ್ಡಿ ಉರಿಯೋ ಅಷ್ಟು ವ್ಯವಧಾನವೂ ನಮಗಿದ್ದಂತಿಲ್ಲ.

ಊರಿನಲ್ಲಿರೋ ಮನೇ ಮಂದಿಗಾಗಲೀ ಸ್ನೇಹಿತರಿಗಾಗ್ಲೀ ಫೋನ್ ಮಾಡಿ ಶುಭಾಶಯಗಳನ್ನು ಹೇಳಬಹುದಿತ್ತು, ಅಂತಹ ಮಹತ್ತರ ಘಳಿಗೆಗೆಲ್ಲಾ ವೀಕ್‌ಎಂಡೇ ಸಮ. ವಾರದ ದಿನಗಳಲ್ಲಿ ಫೋನ್ ತಿರುಗಿಸಿ ನಿಧಾನವಾಗಿ ಮಾತನಾಡೋದಕ್ಕೆ ಯಾರಿಗೂ ಪುರುಸೊತ್ತು ಇದ್ದ ಹಾಗೆ ಕಾಣಿಸಲಿಲ್ಲ. ಪಾಪ, ನಮಗಿಂತ ವ್ಯಸ್ತರಾಗಿರೋ ಅವರೇ ಭಾರತದಿಂದ ಕರೆ ಮಾಡಿ, ಎಸ್‌ಎಮ್ಮೆಸ್ ಕಳಿಸಿ ಶುಭಾಶಯಗಳನ್ನು ಹಂಚಿಕೊಂಡಿದ್ದು ಇತ್ತೀಚಿನ ದಿನಗಳ ವಿಶೇಷಗಳಲ್ಲೊಂದು. ಭಾರತದಲ್ಲಂತೂ ಮೊಬೈಲ್ ಫೋನ್ ಕ್ರಾಂತಿಯೇ ಕ್ರಾಂತಿ - ಮೆಸ್ಸೇಜುಗಳನ್ನು ಇಲ್ಲಿಗಿಂತಲೂ ಅಲ್ಲಿ ಹೆಚ್ಚಾಗಿಯೇ ಬಳಸುತ್ತಾರೇನೋ ಅನ್ನಿಸಿತು, ಒಂದು ಕಾಲದಲ್ಲಿ ಕಮ್ಯೂನಿಕೇಷನ್ನ್ ಅನ್ನೋದೇ ಇರಲಿಲ್ಲವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ. ಈ ಸಂವಹನಗಳಲ್ಲಿ ಎಲ್ಲ ಥರನಾದ ಮೆಸ್ಸೇಜುಗಳಿವೆ, ನವರಸ ನವಭಾವಗಳಿಗನುಗುಣವಾಗಿ.

ನಿಮ್ಮ ದೀಪಾವಳಿ ಆಚರಣೆ ಹೇಗಿತ್ತು ಅಂತ ಬರೀರಿ. ಮನೇ ಹೊರಗಡೆ ದೀಪಗಳನ್ನು ಇಟ್ಟಿದ್ರೋ ಇಲ್ವೋ? ನಿಮ್ಮ ಮನೆಯವರಿಗೆ ಮಕ್ಕಳಿಗೆ ಹೊಸ ಬಟ್ಟೆಬರೆ ತಂದಿದ್ರೋ ಹೇಗೆ? ದೇವಸ್ಥಾನಕ್ಕೆ ಹೋಗಿದ್ರಾ, ಲಕ್ಷ್ಮೀ ಪೂಜೆ ಮಾಡಿದ್ರಾ? ನಮ್ಮ್ ಹಬ್ಬಗಳ ಯಾದಿ ಇಲ್ಲಿಗೆ ಮುಗಿದ ಹಾಗೆ ಕಾಣ್ಸುತ್ತೆ, ಇನ್ನು ಬರೋದೇನಿದ್ರೂ ಅಮೇರಿಕನ್ ಹಬ್ಬಗಳು - ವೆಟಿರನ್ಸ್ ಡೇ, ಥ್ಯಾಂಕ್ಸ್‌ಗಿವಿಂಗ್, ಕ್ರಿಸ್‍ಮಸ್, ನ್ಯೂ ಇಯರ್!

ಹ್ಯಾಪ್ಫೀ ಹಾಲಿಡೇಯ್ಸ್!

6 comments:

Anonymous said...

ಸರ,
USA ದಾಗ ದೀಪಾವಳಿ ಅಂದ್ರ ಯೆಣ್ಣಿ ಹಚ್ಚಿ ಹೊಯ್ಕೊಂಡು chinese take-out ತಿಂದು ಗಡದ್ದ ನಿದ್ದಿ ಹೊಡದು 'ಓಂ ಶಾಂತಿ ಓಂ' ಸಿನಿಮಾ ನೋಡಿ ಮುಗ್ಸಿದ್ವಿರಿ. (ವಿ.ಸೂ: ಹೊಯ್ಕೊಂಡು ಅಂದ್ರ ಝಾಳಕ ಮಾಡೋದು. ಲಬೊ ಲಬೊ ಅಂತ ಬಾಯಿಂದ ಹೊಯ್ಕೊಳ್ಳುದು ಅಲ್ಲ)

-ಮಠ

Anonymous said...

"ಇನ್ನು ಸುರುಸುರು ಬತ್ತಿಯೂ ಸದ್ದೂ ಇಲ್ಲ" - ಸುರುಸುರು ಬತ್ತಿ ಇಲ್ಲ ಅಂದ್ರ ಇರ್ಲಿ ಬಿಡ್ರಿ. ಒಬ್ಬರಿಗೆ ಒಬ್ಬರು ಇಡು ಬತ್ತಿ ಏನೂ ಕಮ್ಮಿ ಇಲ್ಲ. ನಮ್ಮ ಧಾರವಾಡ ಕಡೆ expression ಗೊತ್ತಿರಬೇಕಲ್ಲ - "ಇಟ್ಟನಲೆ ಬತ್ತಿ....." ಬತ್ತಿ ಹಚ್ಚಕ ಆಗಿಲ್ಲ ಅಂದ್ರ ಬತ್ತಿ ಹೊಸಿಯಾಕ್ ಯೇನಗೈತಿ. ದೀಪಕ್ಕ ಬರತೈತಿ. ಅದು ಇಲ್ಲ ಬತ್ತಿ ಹಚ್ಹ್ಚುದ್ರಪ....ಅಂದ್ರ ಸಿಗರೇಟು ಹಚ್ಹ್ಚುದು. ನಿಮ್ಮ ಕಡೆ ಚಳಿಗೆ ಮಸ್ತ ಆಕ್ಕೈತಿ.

-ಮಠ

MY SOUL IS MATHEMATICS said...

ಇಲ್ಲಿ ಇಂಡಿಯಾದಲ್ಲಿ ಪಟಾಕಿ ಹಚ್ಚಿಕೊಂಡು ಕೆಲವು ಮಕ್ಕಳು ವಿಪರೀತ ಗಾಯಮಾಡಿಕೊಂಡು ಆಸ್ಪತ್ರೆ ಸೇರುವವರೆ ಹೆಚ್ಚು. ಮೊನ್ನೆ ಒಂದು ಶಾಲೆಯ ಮಕ್ಕಳೆಲ್ಲಾ ಎಲ್ಲಾ ಹಿರಿಯರ ಹಾಗೂ ಶಿಕ್ಷಕರ ಸಮ್ಮುಖದಲ್ಲಿದ ಪಟಾಕಿ ಹಚ್ಚುವುದಿಲ್ಲವೆಂದು ಪ್ರತಿಜ್ಞೆ ಮಾಡಿದವು. ಬರೀ ಗಂಧಕ, ಸುಡುವ ರಾಸಾಯನಿಕಗಳು ಇರುವ ಅತ್ಯಂತ ವಿಷಕಾರಿಕ ರಸಾಯನಿಕಗಳು ಇರುವ ಈ ಪಟಾಕಿಗಳಿಂದ ಪರಿಸರ ಹಾಗೂ ಆರೋಗ್ಯಕ್ಕೆ ಹಾನಿ ಅಷ್ಟೆ. ನಿಜಕ್ಕೂ ಮೇಲಿನ ಶಾಲೆಯ ಮಕ್ಕಳಲ್ಲಿ ಆ ಅರಿವು ಉಂಟಾದದ್ದು ಮತ್ತು ಅರಿವು ಮೂಡಿಸಿದವರದ್ದು ಗ್ರೇಟ್. ಪಟಾಕಿ ಹಚ್ಚಿಯೇ ದೀಪಾವಳಿ ಮಾಡಬೇಕೆ. ಇರಲಿ ತಮಗೆ ಪಟಾಕಿರಹಿತ ದೀಪಾವಳಿಯ ಶುಭಾಶಯಗಳು.

Satish said...

ಮಠ,

ಅಲ್ರೀ ಸರ್ರ, ದೀಪಾವಳಿ ದಿನ ಯಾವ್ದೂ ಇಂಡಿಯನ್ ಅಂಗ್ಡಿ ಸಿಗಲಿಲ್ಲೇನ್ರಿ ನಿಮಗ.
ಇಲ್ಲಿ ಅಮೇರಿಕದಾಗ ಬತ್ತೀ ಇಡೋರ್ ಭಾಳಾ ಮಂದಿ ರೀ ಹುಷಾರ್ ಮತ್ತ.

ವಾಸು,

ಪ್ರತೀ ವರ್ಷ ಕಣ್ಣೂ-ಮೈ ಸುಟ್ಟುಗೊಳ್ಳೊ ವ್ಯವಸ್ಥೆ ಬಗ್ಗೆ ಯಾರೂ ಯಾಕೆ ತಲೆಕೆಡಿಸಿಕೊಂಡ ಹಾಗೆ ಕಾಣಲ್ಲ?
ಸುರ್ರ್ ಎಂದು ಉರಿಯೋ ಕುಡಿಕೆ ಢಬ್ ಎಂದು ಸಿಡಿದಾಗಲೆಲ್ಲ ಅಂತಹ ಕಂಪನಿಗಳನ್ನು ಕೋರ್ಟಿಗೆ ಹತ್ತಿಸಿದ್ದರೆ ಜನ ಕಂಪನಿಗಳು ಒಂದಿಷ್ಟು ಹುಷಾರಾಗಿರುತ್ತಿದ್ದರೇನೋ?

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service

Anonymous said...

Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.