Wednesday, January 17, 2007

It is good to be back...

'ಅಂತರಂಗ'ದಲ್ಲಿ ಏನನ್ನೂ ಬರೆದಿಲ್ಲ ಸುಮಾರು ನಾಲ್ಕು ವಾರಗಳಿಂದ ಎಂದುಕೊಂಡಾಗಲೆಲ್ಲ ಏನೋ ಒಂದು ರೀತಿಯ ಕಳವಳವಾಗುತ್ತಿದ್ದುದಂತೂ ನಿಜ, ಆದರೆ ಹಾಗೆ ಮಾಡಿದ್ದರಿಂದ ಬಹಳಷ್ಟು ಉಪಕಾರವಂತೂ ಆಗಿದೆ, ನನ್ನ ಆಲೋಚನಾ ಸರಣಿಗಳಲ್ಲಿ ಹಲವಾರು ಒರತೆಗಳು ಜೀವ ಪಡೆದುಕೊಂಡಿವೆ ಹೀಗೆ ಎಷ್ಟೋ ಧನಾತ್ಮಕ ಬದಲಾವಣೆಗಳಿಗೆ ಕಾರಣವಾದ ನನ್ನ ಭಾರತದ ಪ್ರವಾಸವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ!

ಹಲವಾರು ನೆಲೆಗಳಲ್ಲಿ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವಂತೆ ಹಾಗೂ ಹಲವಾರು ಮುಖಗಳನ್ನು ಎದುರುಗೊಂಡಂತೆಲ್ಲ ಹೊಸ ಹೊಸ ದೃಷ್ಟಿ ಕೋನಗಳನ್ನು ನನ್ನಲ್ಲಿ ಹುಟ್ಟುವಂತೆ ಮಾಡುವಷ್ಟು ಪರಿಣಾಮಕಾರಿಯಾಗುವಂತದ್ದು ಭಾರತದ ಪ್ರವಾಸ. ವರ್ಷಗಳು ಉರುಳಿದಂತೆ ಬದಲಾಗುವ ನನ್ನ ವಿಚಾರ ಸರಣಿಗಳು, ಜೊತೆಯಲ್ಲಿ ಸಾಕಷ್ಟು ಕ್ರಾಂತಿಯಲ್ಲಿ ಮಿಂದು ಪುಳಕಿತಗೊಳ್ಳುತ್ತಿರುವಂತೆ ಕಂಡುಬಂದ ಜನರು ಇವನ್ನೆಲ್ಲ ಕುರಿತು ಯೋಚಿಸುತ್ತಾ ಹೋದರೆ ಎಷ್ಟು ಬರೆದರೂ ಕಡಿಮೆಯೆ. ಹೀಗೇ ಮುಂಬರುವ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಬರೆಯಲು ಪ್ರಯತ್ನಿಸುತ್ತೇನೆ.

ಒಟ್ಟಿನಲ್ಲಿ, ನನ್ನ ಪ್ರಕಾರ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆರೋಗ್ಯಕರವಾದವು, ಅಲ್ಲಿನ ಪ್ರಚಂಡ ಬೆಳವಣಿಗೆ ಒಂದಲ್ಲ ಒಂದು ದಿನ ಭಾರತವನ್ನು ವಿಶ್ವದ ಅಗ್ರಮಾನ್ಯ ದೇಶವನ್ನಾಗಿ ಮಾಡುವುದರಲ್ಲಿ ಸಂಶಯವೇನಿಲ್ಲ, ಆದರೂ ಈ ಕೆಳಗಿನ ಅಂಶಗಳು ನನ್ನನ್ನು ಬಹಳವಾಗಿ ಯೋಚಿಸುವಂತೆ ಮಾಡಿವೆ:
- ಜನರಲ್ಲಿ ಅತಿಯಾದ ಮೊಬೈಲ್/ಸೆಲ್ ಫೋನ್ ಬಳಕೆ
- ಎಲ್ಲ ಕ್ರಾಂತಿಗೂ ಮುಖ್ಯವಾದ ಜನರ ಮನಸ್ಥಿತಿಯಲ್ಲಿನ ನಿಧಾನವಾದ ಬದಲಾವಣೆಗಳು
- ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ
- ಸರಿಯಾದ ನಾಯಕರ, ಮುತ್ಸದ್ದಿಗಳ, ದಾರ್ಶನಿಕರ ಹಾಗೂ ವಿಚಾರವಂತರ ಕೊರತೆ
- ಸರ್ವವ್ಯಾಪಿಯಾಗಿ ಕಂಡುಬರುವ ಅನಗತ್ಯ ಪೈಪೋಟಿ
- ಪ್ರಾದೇಶಿಕ ಭಾಷೆಗಳ ಅಭಾವ ಹಾಗೂ ಅಳಿವು-ಉಳಿವು
- ಉಳ್ಳವರ ನಡುವಿನ ಅಂತರ

ಬೆಂಗಳೂರಿನಲ್ಲಿನ ಐದಾರು ಕನ್ನಡ ಎಫ್, ಎಮ್. ರೇಡಿಯೋ ಸ್ಟೇಷನ್‌ಗಳಿಂದ ಹಿಡಿದು ನಾನು ಬಂದಿಳಿದ ಏರ್‌ಪೋರ್ಟುಗಳವರೆಗೆ ಬರೆಯಲು ಬಹಳಷ್ಟಿವೆ...ಕಾದು ನೋಡಿ.

5 comments:

Anveshi said...

ಸತೀಶ್ ಅವರೆ,
<"ಒಟ್ಟಿನಲ್ಲಿ, ನನ್ನ ಪ್ರಕಾರ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆರೋಗ್ಯಕರವಾದವು, ಅಲ್ಲಿನ ಪ್ರಚಂಡ ಬೆಳವಣಿಗೆ ಒಂದಲ್ಲ ಒಂದು ದಿನ ಭಾರತವನ್ನು ವಿಶ್ವದ ಅಗ್ರಮಾನ್ಯ ದೇಶವನ್ನಾಗಿ ಮಾಡುವುದರಲ್ಲಿ ಸಂಶಯವೇನಿಲ್ಲ">

ಭಾರತದ ಬಗೆಗೆ ನೀವು ಕಂಡಿರುವ ಕನಸು, ನಿಮ್ಮ ದೃಷ್ಟಿಕೋನ ನಿಜವಾಗಿಬಿಟ್ಟರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ... :)

ಆದರೆ,
<"ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ">

ಇದು ಇರುವವರೆಗೆ ಕನಸು ನನಸಾದೀತೇ?

Rajesh said...

ನಮಸ್ಕಾರ ಸತೀಶ್,

ಸ್ವಾಗತ. ನಿಮ್ಮ ಪ್ರವಾಸ ಯಾ ಅನುಭವ ಕಥನಕ್ಕೆ ಎದುರು ನೋಡುತ್ತಿದ್ದೇನೆ.

Satish said...

anvEShigaLE,

kanasu nanasAgutte kAdu nODabEku aShTE, namma lifetime nalli AguttO illavO annOdu million dollar prashne!

Satish said...

namaskAra rajEsh,

AgAgge bhETi koTTu huriduMbisuttiruvudakke dhanyavAdagaLu.

(kShamisi, ivattu kannaDadalli bareyalAguttilla, bEre computer baLausuttiddEne).

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service