Wednesday, October 22, 2008

If you elect me as a president...

ಪ್ರೆಸಿಡೆಂಟ್ ಆಫ್ ವಾಟ್? ಅಂತ ಪ್ರಶ್ನೆ ಬರೋದು ಸಹಜ, ಪ್ರೆಸಿಡೆಂಟ್ ಆಫ್ ವಾಟ್‌ಎವರ್...ಎಂದುಕೊಂಡು ಮುಂದೆ ಹೋಗೋಣ...ನಾವೆಲ್ಲ ಶಾಲಾ ದಿನಗಳಲ್ಲಿ ’ಎಲೈ ಹುಚ್ಚರ ಸಂಘದ ಅಧ್ಯಕ್ಷನೇ...’ ಎಂದು ನಮ್ಮ್ ನಮ್ಮೊಳಗೆ ಬೈದುಕೊಳ್ಳುತ್ತಿದ್ದುದೂ ನೆನಪಿಗೆ ಬಂತು.

ಏನೇ ಇರಲಿ ರಾಜಕಾರಣ ಹಾಗೂ ಆಶ್ವಾಸನೆ ಎನ್ನುವುವುಗಳು ಒಂದೇ ತಾಯಿಯ ಮಕ್ಕಳ ಹಾಗೆ, ನಮ್ಮ ಸುತ್ತ ಮುತ್ತ ನಡೆಯೋ ಬೇಕಾದಷ್ಟು ಚುನಾವಣೆಗಳ ಕ್ಯಾಂಪೇನುಗಳಲ್ಲಿ ’ನೀವು ನನ್ನನ್ನು ಆರಿಸಿ ತಂದಿದ್ದೇ ಆದರೆ...’ ಎನ್ನುವ ಪ್ರಣಾಳಿಕೆಗಳು ಪುಂಖಾನುಪುಂಕವಾಗಿ ಹೊರಬರುತ್ತಲೇ ಇವೆ. ಹಾಗೆ ಮಾನವಕುಲದಲ್ಲಿ ಪ್ರಚುರಗೊಂಡ ಆಶ್ವಾಸನೆಗಳಲ್ಲಿ ಶೇಕಡಾ ಹತ್ತರಷ್ಟು ಈಡೇರಿದ್ದರೂ ಇಂದು ನಾವು ಈ ಸ್ಥಿತಿಯಲ್ಲಿರುತ್ತಿರಲಿಲ್ಲ ಎನ್ನುವುದು ಬೇರೆ ವಿಷಯ. (ಸುಮ್ಮನೇ ಆರೋಪ ಹೊರಿಸ್ತೀನಿ, ಆದ್ರೆ ಅದಕ್ಕೆ ತಕ್ಕ ದಾಖಲೆ ಕೊಡೋದಿಲ್ಲ ಅನ್ನೋದಕ್ಕೆ ಈ ವಾಕ್ಯವೇ ಸಾಕ್ಷಿ - ದಾಖಲೆಗಳನ್ನು ಪೋಣಿಸಿ ಯಾರು ಉದ್ದಾರವಾಗಿದ್ದಾರೆ ನೀವೇ ಹೇಳಿ).

ಹೀಗೇ ದಿನನಿತ್ಯದ ಘಟನಾವಳಿಗಳನ್ನು ಅವಲೋಕಿಸಿ ಈ ಕೆಳಗಿನ ಅಣಿಮುತ್ತುಗಳನ್ನು ನಾನು ನನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇನೆ, ನೀವು ಓದಿನೋಡಿ ನಂತರ ನಿಮ್ಮ ಅಧ್ಯಕ್ಷನನ್ನು ನೀವೇ ಗುರುತಿಸಿ ಮತ ನೀಡಿ!

***
ನೀವು ನನ್ನನ್ನು ಅಧ್ಯಕ್ಷನನ್ನಾಗಿ ಚುನಾಯಿತನನ್ನಾಗಿ ಮಾಡಿದರೆ....
- I will eliminate all school buses from the roads for one week!
Oh, school buses! ಅಮೇರಿಕದ ಶಾಲಾ ವಾಹನಗಳು ಎಂದರೆ ’ಅಯ್ಯಪ್ಪಾ’ ಅನ್ನೋ ಹಾಗೆ, ಒಂದು ರೀತಿ ರಸ್ತೆ ಮೇಲಿನ ಟ್ಯಾಂಕರುಗಳು ಅವು. ನನ್ನ ಒಂದು ಊಹೆಯ ಪ್ರಕಾರ ಪ್ರತಿ ಶಾಲಾ ಬಸ್ಸಿಗೆ ಇಲ್ಲಿ ಕನಿಷ್ಟ ಇಪ್ಪತ್ತೈದು ಕನ್ನಡಿಗಳಾದರೂ ಇರಬಹುದು ಜೊತೆಗೆ ಒಂದು ಸಾವಿರ ಮಿನುಗುವ ಲೈಟ್‌ಗಳು (ಉತ್ಪ್ರೇಕ್ಷೆ). ಶಾಲಾ ಬಸ್ಸಿಗೆ ರಸ್ತೆಗಳ ಮೇಲೆ ಆದ್ಯತೆ, ಅವು ನಿಂತರೆ ಎಲ್ಲರೂ ನಿಲ್ಲಬೇಕು, ಅದೂ ನಾನು ಬಳಸೋ ಒನ್ ಲೇನ್ ರಸ್ತೆಯ ಕಥೆ ದೇವರೇ ಗತಿ. ಶಾಲಾ ಬಸ್ಸುಗಳ ಲೀಡರ್‌ಶಿಪ್ ನಲ್ಲಿ ನಾವೆಲ್ಲ ಅವುಗಳ ಹಿಂದೆ, ಮೇಷ್ಟ್ರು ನಾಯಕತ್ವದಲ್ಲಿ ವಿದ್ಯಾರ್ಥಿಗಳೇನೋ ಹಿಂದೆ ಸಾಲುಗಟ್ಟುತ್ತಾರೆ ಆದರೆ ಶಾಲೆಪಾಲೆ ಮುಗಿಸಿ ಅವುಗಳಿಗೆಲ್ಲ ಗುಡ್‌ಬೈ ಹೇಳಿರೋ ನನಗೇಕೆ ಈ ಶಿಕ್ಷೆ, ಅದಕ್ಕೆಂದೇ ಐವತ್ತೆರಡು ವಾರಗಳ ವರ್ಷಗಳಲ್ಲಿ ನನ್ನ ಆಡಳಿತದಲ್ಲಿ ಒಂದು ವಾರ ಸ್ಕೂಲ್ ಬಸ್ಸುಗಳು ರಸ್ತೆಯ ಮೇಲೆ ಬಾರದಂತೆ ಮಾಡುವ ಆಶ್ವಾಸನೆ.

- I will iradicate "retirement" (the word) from the dictionary!
ನಮ್ಮ ಕಾಲದವರು ರಿಟೈರ್ ಆಗುವ ಮಾತೇ ಬರೋದಿಲ್ಲ ಬಿಡಿ. ನಾವೆಲ್ಲ ಬಲ್ಲ ಹಾಗೆ ಬೇಬಿ ಬೂಮರ್ಸ್ ತಲೆಮಾರಿನವರು ಮತ್ತೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳೋ ಹಾಗೆ ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ನಮ್ಮೆಲ್ಲ ಅಲ್ಪಸ್ವಲ್ಪ ಉಳಿತಾಯಗಳು ದಿನೇದಿನೇ ಕರಗುತ್ತಿರುವ ಶೋಚನೀಯ ಸ್ಥಿತಿಯನ್ನು ಕಂಡರೆ ನಮ್ಮ ತಲೆಮಾರಿಗೆ ’ನಿವೃತ್ತ’ ಅನ್ನೋ ಪದವೇ ದೂರವಾಗುವ ಹಾಗೆ ಕಾಣುತ್ತದೆ. ಆದ್ದರಿಂದ ಈ ಪದವನ್ನು ನಿಘಂಟಿನಿಂದ ತೆಗೆಯೋಣ ಎಂದು ಸಂಕಲ್ಪಿಸಿಕೊಂಡಿದ್ದೇನೆ.

- I will eliminate the 8 O'clock from the dial!
ಇದು ಒಂಥರ ಇಂಟರೆಸ್ಟಿಂಗ್ ಕಾನ್ಸೆಪ್ಟ್. ಗಡಿಯಾರದ ಡಯಲಿನಲ್ಲಿ ಏಳು ಘಂಟೆಯ ನಂತರ ಒಂಭತ್ತು ಘಂಟೆ ಬರುವಂತೆ ಮಾಡುವುದು. ಒಂದು ರೀತಿ ಸೀನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿಯ ನಂತರ ಒಂದೇ ಸಮನೆ ಜ್ಯೂನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿ ಬಂದ ಹಾಗೆ ಮಧ್ಯೆ ಬರುವ ಕ್ಲಿಂಟನ್ ನ ಎಂಟು ವರ್ಷಗಳ ಆಡಳಿತವನು ಇತಿಹಾಸದಿಂದ ಡಿಲ್ಲೀಟ್ ಮಾಡಿದ ಹಾಗೆ...

ಪ್ರತಿ ದಿನ ಒಂದಲ್ಲ ಒಂದು ಎಂಟು ಘಂಟೆಯ ಮೀಟಿಂಗ್ ಇಟ್ಟೇ ಇರ್ತಾರೆ ನಮ್ಮ್ ಆಫೀಸಿನಲ್ಲಿ. ನಾನೋ ಎಷ್ಟು ಬೇಗ ಹೊರಟರೂ ಒಂದಲ್ಲ ಒಂದು ಕಾರಣದಿಂದ ಟ್ರಾಫಿಕ್ ಗೊಂದಲದಲ್ಲಿ ಸಿಕ್ಕು ಹಾಕಿಕೊಳ್ಳುವುದೇ ಹೆಚ್ಚು (again, thanks to school buses noted above). ಅದಕ್ಕೆಂದೇ ನಾನು ಕಾಫಿ ಕುಡಿಯಲಿ ಬಿಡಲಿ ನನ್ನ ರಕ್ತದೊತ್ತಡ ಮುಂಜಾನೆ ಏಳರಿಂದ ಒಂಭತ್ತು ಘಂಟೆಯವರೆಗೆ ಹೆಚ್ಚು ಇರೋದು ಖಾಯಂ. ಆದ್ದರಿಂದಲೇ ನಾನು ವಾಚಿನ ಡಯಲಿನಲ್ಲಿ ಫಾರ್ ಎವರ್ ಎಂಟು ಘಂಟೆ ಎನ್ನುವ ಕಾನ್ಸೆಪ್ಟ್ ಅನ್ನೇ ತೆಗೆದು ಹಾಕಿ ಬೆಳಿಗ್ಗೆ ಏಳರಿಂದ ಒಂಭತ್ತರವರೆಗೆ ಆಫೀಸಿಗೆ ತಲುಪಿದರೆ ಸಾಕು ಎನ್ನುವ ಹೊಸ ಕಾನೂನನ್ನು ಜಾರಿಗೆ ತರೋದು.

- I will convert Shareholders into Chair holders!
ಇದು ಸಂಪೂರ್ಣ ರೆಬೆಲಿಯಸ್ ಅಪ್ರೋಚ್...ನಾವೆಲ್ಲ ಕಂಪನಿಗಳ ಸ್ಟಾಕ್ ಅಥವಾ ಶೇರುಗಳನ್ನು ಕೊಂಡುಕೊಂಡು ಬಡವರಾಗಿರೋದು ನಿಮಗೆಲ್ಲ ಗೊತ್ತೇ ಇರೋ ವಿಚಾರ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶೇರ್ ಹೋಲ್ಡರ್ ಕೂಡ ಆ ಕಂಪನಿಯ ತಕ್ಕಮಟ್ಟಿನ ಪಾಲುದಾರ. ಆದ್ದರಿಂದ ಇಂದಿದ್ದು ನಾಳೆ ಮರೆಯಾಗುವ ನಮ್ಮ ಪೇಪರ್ ಹಣ ಹಾಗೂ ಅದಕ್ಕೆ ಬರುವ ಇಮ್ಯಾಜಿನರಿ ಓನರ್‌ಶಿಪ್‌ಗೆ ಪ್ರತಿಯಾಗಿ ಕಂಪನಿ ಬೀಳುವ ಹೊತ್ತಿಗೆ ಹಣ ಬಾರದಿದ್ದರೂ ಆ ಕಂಪನಿಗಳ ಕುರ್ಚಿ, ಮೇಜು, ಅಲ್ಲಿನ ಫಿಕ್ಸ್‌ಚರುಗಳು ಮೊದಲಾದವುಗಳನ್ನು ನಾವು ಹಳೆಯ ಶತಮಾನದಲ್ಲಿ ಮಾಡುತ್ತಿದ್ದ ಹಾಗೆ ದಂಗೆ ಎದ್ದು ಕಿತ್ತುಕೊಳ್ಳಬೇಕು ಎನ್ನುವುದು ನನ್ನ ವಾದ. ಶೇರುಗಳು ಹೋದರೂ ಹೋಗಲಿ ಒಂದು ಚೇರ್ ಆದರೂ ಸಿಗಲಿ ಎನ್ನುವುದು ನನ್ನ ಅಭಿಮತ.

***
ನಿಮ್ಮ ಓಟ್ ಅನ್ನು ಖಂಡಿತ ನನಗೇ ಹಾಕ್ತೀರಿ ತಾನೆ?

6 comments:

ಯಜ್ಞೇಶ್ (yajnesh) said...

ನಮ್ ಓಟು ನಿಮ್ಗೇ ಹಾಕ್ತೀನಿ ಸಾರ್.
ಅಂದ ಹಾಗೆ ನೀವು ಯಾವ ಎಲೆಕ್ಷನ್ ಗೆ ನಿಂತಿದ್ದೀರಾ?, ಎಲ್ಲಿ ನಿತಿಂದ್ದೀರಾ (ಎಲೆಕ್ಷನ್ ಗೆ)? ಯಾಕೆ ಅಂದ್ರೆ ನಮ್ಮ ಭಾರತದಲ್ಲಿ ಇತ್ತೀಚ್ಗೆ ಸಿಕ್ಕಾಪಟ್ಟೆ ಎಲೆಕ್ಷನ್. ರಾಜ್ಯಸಭೆ ಆಯ್ತು ಅಂತಿದ್ರೆ ಒಂದಿಷ್ಟು ಶಾಸಕರು ರಾಜಿನಾಮೆ ಕೊಟ್ರು, ಮತ್ತೆ ಎಲೆಕ್ಷನ್, ಆದಾದ ಮೇಲೆ ಒಂದಿಬ್ಬರು ಸ್ವರ್ಗ ಅಥ್ವಾ ನರ್ಕಕ್ಕೆ(ಇಲ್ಲಿಗೆ ಹೋಗೋರೇ ಜಾಸ್ತಿ) ಎಲೆಕ್ಷನ್ ನಿಲ್ಲೋಕೆ ಹೋಗ್ತಾರೆ. ಅವರ ಜಾಗ ತುಂಬಲು ಮತ್ತೆ ಎಲೆಕ್ಷನ್, ಒಂದಿಷ್ಟು ರಾಜ್ಯದ ಎಲೆಕ್ಷನ್ ಮುಗದ ಮೇಲೆ ಇನ್ನೊಂದಿಷ್ಟು ರಾಜ್ಯದ ಎಲೆಕ್ಷನ್. ಒಟ್ಟಿನಲ್ಲಿ ನಮ್ಗೆ ಎಲೆಕ್ಷನ್ ಕಾಟ ತಪ್ಪಿದ್ದಲ್ಲ.

ಸತೀಶ್ ಗೆ ಮತ, ದೇಶಕೆ ಹಿತ.

ಇಂದೇ ಮತ ಹಾಕಿ. ಮರೆಯಬೇಡಿ ಮರೆತು ನಿರಾಶರಾಗಬೇಡಿ.

ನೀವು ಅಲ್ಲಿ ಎಲೆಕ್ಷನ್ ಗೆ ನಿಂತರೆ ಏನೇನೋ ಅಶ್ವಾಸನೆ ಕೊಡ್ತೀನಿ ಅಂದ್ರಿ, ಅಕಸ್ಮಾತ್ ಸನ್ಮಾನ್ಯ ದೇವೇಗೌಡ್ರು ಇಲ್ಲಿ ಎಲೆಕ್ಷನ್ ಗೆ ನಿಲ್ಲಿ ಅಂದ್ರೆ ಏನು ಆಶ್ವಾಸನೆ ಕೊಡ್ತೀರಿ?

ಲೇಖನ ಚೆನ್ನಾಗಿದೆ ಸತೀಶ್.

-Yajnesh

Anonymous said...

ಶೇರ್ ಹೊಲ್ಡರ್ಸನ ಚೇರ್ ಹೊಲ್ಡರ್ಸ ಮಾಡ್ತಿರ? ಇಲ್ಲಿ ನಾವು ಬ್ಯಾಗ್ ಹೊಲ್ಡರ್ಸ (bag holders) ಆಗ್ತಾ ಇದ್ದಿವಿ. Left holding bag (of crap).

-ಮಠ

Anonymous said...

politics nammantavrgalla bithaaki.
neevu nim bellbottom pyant memoir bardidralla aa tara innondashtu bareeri:)
s

Anveshi said...

ನೀವು ಒಂದು ಬಿಟ್ಹಾಕಿದೀರಿ...

ಒಂದು ವಾರ ಬ್ಲಾಗ್ ಪೋಸ್ಟ್ ಮಾಡೋದನ್ನು ನಿಲ್ಲಿಸ್ಬೇಕು ಎಂಬುದನ್ನೂ ನಿಮ್ಮ ಪ್ರಣಾಳಶಿಶುವಿನಲ್ಲಿ ಸೇರಿಸ್ಕೊಳ್ಳಿ. ಯಾಕೆಂದರೆ, ನಮಗೆ ಓದಬೇಕೂಂತ ಆಸೆ. ಆದ್ರೆ, ಓದಲು ಸಮಯ ಸಿಗ್ತಾ ಇಲ್ಲ. ಇದಕ್ಕಾಗಿ.

ದೀಪಾವಳಿ ಶುಭಾಶಯಗಳು

sunaath said...

ನೀವು ಪ್ರೆಸಿಡೆಂಟ್ ಆದ ಮೇಲೆ ಚುನಾವಣೆಗಳನ್ನು ಬಂದ್ ಮಾಡಿ ಒಗೀತೀನಿ ಅಂತ (ಖರೇ) ಆಶ್ವಾಸನೆಯನ್ನು ಕೊಟ್ಟರೆ, ನನ್ನ ಓಟು ನಿಮಗೇ!

Satish said...

ಯಜ್ಞೇಶ್,
ತುಂಬಾ ಥ್ಯಾಂಕ್ಸ್! ಅವೇ ಎಲೆಕ್ಷನ್ನುಗಳು ಬಂದೇ ಬರ್ತಾವೆ, ನಿಮ್ಮ ಅಧ್ಯಕ್ಷನನ್ನು ನೀವು ಆರಿಸಿಕೊಂಡಿದ್ದಕ್ಕೆ ಅಭಿನಂದನೆಗಳು :-) ಆಶ್ವಾಸನೆ ಕೊಡೋದೇನೂ ಬೇಡ ನಮ್ಮಲ್ಲಿ ಶ್ವಾಸ ಇರುವವರೆಗೆ ನಾವು ಹೇಳಿದ್ದೇ ಆಶ್ವಾಸನೆ.

ಮಠ್,
ಈಗ ಹೆಂಗಿದೀರ್ರೀ ಸರ್ರ, ಬರ್ನಾಂಕಿ ಏನೋ ಹೊಸ ಮಂತ್ರ ಹಾಕ್ಯಾನಂತಲ್ರಿ!

S,
ನಿಜ ಹೇಳಿದ್ದಕ್ಕೆ ಧನ್ಯವಾದ, ಪರವಾಗಿಲ್ಲ ಆ ಬೆಲ್‌ಬಾಟಮ್-ಪಾಪಾಸ್ ಕಳ್ಳಿ ಆರ್ಟಿಕಲ್ ಓದಿ ನೆನಪಿಟ್ಟುಕೊಂಡಿದ್ದೀರಲ್ಲ!

ಅನ್ವೇಷಿ ಪರಮಾತ್ಮರು,
ಇಷ್ಟು ದಿನ ಹುಡುಕಿ ಕೊನೆಗೆ ನಿಮ್ಮ ಅಸತ್ಯ ಸಿಗೋ ಹೊತ್ತಿಗೆ ನನ್ನ ಪ್ರೆಸಿಡೆನ್ಸಿ ಬೇಕಾಯ್ತಲ್ಲ ನಿಮಗೆ ಏನ್ ಹೇಳೋಣ ಹೇಳಿ.

ಸುನಾಥ್,
ನೀವ್ ಓಟ್ ಹಾಕಿ ಸಾರ್, ನಿಮಗೆ ಏನ್ ಬೇಕೋ ಅದನ್ನ ಮಾಡದಿದ್ರೆ ಆಮೇಲ್ ಕೇಳ್ರಿ (ನನ್ನ್ ಪಿ.ಎ. ನ) :-)