ಕನ್ನಡ ಬ್ಲಾಗ್ ಮಂಡಲ - ಭಾಷಣದ ಅವತರಣಿಕೆ
ಬಹಳ ಜನರ ಬೇಡಿಕೆ ಮೇರೆಗೆ ದಟ್ಸ್‌ಕನ್ನಡ ವರದಿಯಲ್ಲಿ ಪ್ರಕಟವಾದಂತೆ ಭಾಷಣದ ಆಡಿಯೋ ಹಾಗೂ ಬ್ಲಾಗ್ ಲಿಸ್ಟ್ ಅನ್ನು ಇಲ್ಲಿ ಕೊಡಲಾಗಿದೆ:
ಸತೀಶ್ ಕುಮಾರ್ ಕಂಡಂತೆ ಕನ್ನಡ ಬ್ಲಾಗ್‌ಮಂಡಲ
ಜನವರಿ ೧೩ ರಂದು ಭೂಮಿಕಾದಲ್ಲಿ ನಡೆದ ಭಾಷಣದ ಅವತರಣಿಕೆಗೆ ಇಲ್ಲಿ ಕ್ಲಿಕ್ ಮಾಡಿ (~40 MB, WAV file)
ಜೊತೆಗೆ ಈ ಕೆಳಗಿನ ಫೈಲ್‌ನಲ್ಲಿ 50 ಬ್ಲಾಗ್‌ಗಳ ಪಟ್ಟಿಯನ್ನೂ ಇಲ್ಲಿ ಕೊಡಲಾಗಿದೆ.
***
ಮೊದಲು ಪ್ರಕಟಿಸಿದ್ದ ೩೯ ಬ್ಲಾಗ್‌ಗಳ ಪಟ್ಟಿಯನ್ನು ಬದಲಾಯಿಸಿ ೫೦ ಬ್ಲಾಗ್‌ಗಳಿರುವ ಈ ಹೊಸಪಟ್ಟಿಯನ್ನು ಫೆಬ್ರುವರಿ ೩ ರಂದು ಸೇರಿಸಿದ್ದೇನೆ.
2 comments:
ಭೂಮಿಕಾದಲ್ಲಿನ ನಿಮ್ಮ ಭಾಷಣವನ್ನು ಕೇಳಿದೆ. ಒಳ್ಳೆಯ ಪಕ್ಷಿನೋಟವನ್ನು ಕೊಟ್ಟಿದ್ದೀರ.
ಸ್ವಂತ ಹೆಸರಿನಲ್ಲಿ ಬರೆಯದವರು - ಮನಸೋ ಇಚ್ಛೆ ಬರೆಯಬೇಕೆಂದೇ ಆಗಲಿ, ಬೇರೊಬ್ಬರ ಬಗ್ಗೆ ಕಟುವಾಗಿ ಬರೆಯಲು ಆಗಲಿ, ಆ ಕೆಲಸ ಮಾಡಬೇಕೆಂದೇನೂ ಇಲ್ಲ. ಅದಕ್ಕೆ ಬೇರೆ ಕಾರಣಗಳೂ ಇರಬಹುದು!
ನನ್ನ ಮಟ್ಟಿಗೆ ಹೇಳುವುದಾದರೆ, ನನ್ನ ಸ್ವಂತ ಹೆಸರಿನಲ್ಲಿ ಬರೆದರೆ ಯಾವ ಜವಾಬ್ದಾರಿಯಿಂದ ಬರೆಯುವೆನೋ, ಹೆಸರು ಮರೆಸಿದ್ದರೂ ಅದೇ ಜವಾಬ್ದಾರಿಯಲ್ಲೇ ನಾನು ಬರೆಯುತ್ತೇನೆ. ನನ್ನ ಎರಡೂ ಬ್ಲಾಗ್‍ಗಳಲ್ಲಿ ನಾನು ನನ್ನ ಹೆಸರನ್ನು ಹಾಕಿಲ್ಲ.ಆದರೆ, ಅದರಿಂದ ಯಾವುದೂ ವ್ಯತ್ಯಾಸವಾಗಿಲ್ಲ.
ಇದು, ಇನ್ನೂ ಅನೇಕರಿಗೆ ಸಲ್ಲುವ ಮಾತು ಎಂದು ನನ್ನೆಣಿಕೆ.
-ಹಂಸಾನಂದಿ
http://www.sampada.net/blog/hamsanandi
ಹಂಸಾನಂದಿ,
ಪೆನ್‌ನೇಮ್ ನಲ್ಲಿ ಬರೆಯುವುದಕ್ಕೆ ನೀವು ಹೇಳಿದ ಹಾಗೆ ಹಲವಾರು ಕಾರಣಗಳು ಖಂಡಿತ ಇವೆ, ಬರೆಯುವ ಜವಾಬ್ದಾರಿಯಲ್ಲಿ ಯಾವುದೇ ಏರುಪೇರಾಗದಿದ್ದರೂ ’ಇಂಥವರು’ ಬರೆದಿದ್ದು ಎನ್ನುವುದರಿಂದ ದೂರ ಉಳಿಯುವ ಸಾಧ್ಯತೆ ಪೆನ್‌ನೇಮ್ ಬಳಸಿ ಬರೆಯುವವರಿಗೆ ಹೆಚ್ಚಿನ ಮಟ್ಟದ ಸ್ವಾತಂತ್ರ್ಯ ತಂದುಕೊಡುತ್ತದೆ ಎನ್ನುವುದು ನನ್ನ ಅನಿಸಿಕೆ. ಪೆನ್‌ನೇಮ್ ಬಳಸಿ ಬರೆಯುವದಕ್ಕೆ ಸಾಕಷ್ಟು ಕಾರಣಗಳಿದ್ದರೂ ಒಂದು ಕಾಲದಲ್ಲಿ ನಾನೂ ಸಹ ’ಅಂತರಂಗಿ’, ’ನಿಮ್ಮವ’ ಎಂಬ ಹೆಸರುಗಳನ್ನು ಬಳಸಿ ಬರೆಯುತ್ತಿದ್ದುದು ’ಕ್ಯಾಂಡಿಡ್’ ಆಗಿ ಬರೆಯುವುದಕ್ಕೆ ಅನುಕೂಲವಾಗಲೀ ಎಂದಾಗಿತ್ತು. ಹೆಚ್ಚು ಜನ ಕನ್ನಡಿಗರು ಇರುವ ವ್ಯವಸ್ಥೆಯಲ್ಲಿನ ಪರಿಣಾಮ ಬೇರೆ ಇರಬಹುದು, ನಮ್ಮ ನಡುವಿನ ಸಣ್ಣ ಸಮೂಹಗಳಲ್ಲಿ ’ಅಡಗಿಕೊಂಡು’ ಬರೆಯುವುದಕ್ಕೆ ಹೊಸ ಅರ್ಥಗಳು ಹುಟ್ಟಬಹುದು.
Post a Comment