Wednesday, June 13, 2007

ನನ್ನ ಪೆನ್ನಿನ ಕಥೆ...

'ಆ ಪೆನ್ನು ನನ್ದೂ, ಅದಿಲ್ದೇ ಇದ್ರೆ ನಾನ್ ಎಕ್ಸಾಮ್‌ಗೇ ಹೋಗಲ್ಲ!' ಎಂದು ನೀವು ನಿಮ್ಮ ಬದುಕಿನಲ್ಲಿ ಯಾವತ್ತಾದ್ರೂ ಹಠ ಹಿಡಿಯದೇ ಈ ಲೇಖನ ಓದುವವರೆಗೆ ಬೆಳಿದಿದ್ದೀರಿ ಅಂದ್ರೆ, ನೀವು ನಾನು ಬೆಳೆದ ಭಾರತದ ವಾತಾವರಣದಲ್ಲಿ ಬೆಳಿದಿಲ್ಲ ಎಂದು ಅರ್ಥ!

***

ಅದ್ಯಾವ್ ಪುಣ್ಯಾತ್ಮ ನಮಗೆಲ್ಲಾ ಇಂಕ್ ಪೆನ್ನಲ್ಲಿ ಬರೆಯೋಕ್ ಕಲಿಸಿದ್ನೋ ಏನೋ ಅಥ್ವಾ ನಾವು ಓದೋ ಹೊತ್ತಿಗೆ ಇನ್ನೂ ಬಾಲ್ ಪಾಯಿಂಟ್ ಪೆನ್ನುಗಳು ಅವತಾರ ತಳೆದಿರ್ಲಿಲ್ವೋ ಯಾರಿಗ್ ಗೊತ್ತು - ಒಟ್ನಲ್ಲಿ ನಾನು ಪರೀಕ್ಷೆಗಳನ್ನು ಬರೆದಿದ್ದೆಲ್ಲಾ ಇಂಕ್ ಪೆನ್‌ನಲ್ಲೇ. ಸ್ಕೂಲು-ಕಾಲೇಜು ಮೆಟ್ಲು ಹತ್ತೋ ಹೊತ್ತಿಗೆ ಕಡಿಮೆ ಬೆಲೆಯ ವಿಂಡ್ಸರ್ ನಿಬ್ಬಿನ ಪೆನ್ನಿನಿಂದ ಹಿಡಿದು ಚೈನಾದಲ್ಲಿ ತಯಾರಾಗಿದ್ದು ಎಂದು ಹಣೆ ಪಟ್ಟಿ ಅಂಟಿಸಿಕೊಂಡ ಹೀರೋ ಪೆನ್ನುಗಳ ಹಾವಳಿ ಹೆಚ್ಚೇ ಇತ್ತು. ಈ ಫೌಂಟನ್ ಪೆನ್ನುಗಳಲ್ಲಿ ಹಿಡಿಯೋ ಇಂಕ್ ಕಡಿಮೆ ಅದೂ ಅಲ್ದೇ ಪ್ರತೀ ದಿನ ಸ್ಕೂಲಿಗೆ ಹೋಗ್‌ಬೇಕಾದ್ರೆ ಪೆನ್ನಿಗೆ ಇಂಕ್ ಬೇರೆ ಹಾಕ್ಕೊಂಡ್ ಹೋಗೋ ಕಷ್ಟಾ, ಯಾರಿಗೆ ಬೇಕಿತ್ತಪ್ಪಾ?

ಅದರ ಬದಲಿಗೆ ಡಜನ್ ಗಟ್ಟಲೆ ಬಾಲ್ ಪಾಯಿಂಟ್ ಪೆನ್ನುಗಳನ್ನು ತೆಗೆದುಕೊಂಡು, ಅವುಗಳು ಖಾಲಿಯಾದ ಹಾಗೆ ಅಥವಾ ಕಳೆದು ಹೋದ ಹಾಗೆ ಒಂದೊಂದಾಗೇ ಇರುವ ದಾಸ್ತಾನನ್ನು ಖರ್ಚು ಮಾಡಿಕೊಂಡು ಹೋಗೋ ತತ್ವ ಹೇಗಿರುತ್ತೇ, ಅದರ ಹಿಂದಿರುವ ಪರಂಪರೆ ಏನು, ಅದರ ಮರ್ಮವೇನು ಎಂದು ಯೋಚಿಸುತ್ತಾ ಹೋದ ಹಾಗೆಲ್ಲಾ ಎಕಾನಮಿ, ಅಭಿವೃದ್ಧಿ, ಬೆಳವಣಿಗೆ...ಮುಂತಾದ ದೊಡ್ಡ ದೊಡ್ಡ ಪದಗಳೆಲ್ಲ ಆಲೋಚನೆಗೆ ಬಂದು ಸುಸ್ತು ಮಾಡಿ ಹಾಕೋದಂತೂ ಗ್ಯಾರಂಟಿ!

***

ನಾನೂ ಅಮೇರಿಕಕ್ಕೆ ಬರುವಾಗ ನನ್ನ ಹೀರೋ ಪೆನ್ನುಗಳನ್ನು ಜೋಪಾನ ಮಾಡಿಟ್ಟುಕೊಂಡು ಬಂದವನೇ. ಅವುಗಳಿಗೆ ಹಾಕಬಹುದಾದ ಇಂಕ್ ಬಾಟಲನ್ನು ಅದು ಬ್ಯಾಗಿನಲ್ಲಿ ಸೋರಿ ಅಥವಾ ಒಡೆದು ಹೋಗಿ ಅವಾಂತರವಾಗಬಹುದಾದ ಹೆದರಿಕೆಯಿಂದ ಬಿಟ್ಟು ಬರುವಾಗ ಒಡ ಹುಟ್ಟಿದವರನ್ನು ಬಿಟ್ಟು ಬರುವ ದುಃಖವಾದರೂ ಎರಡು ಪೆನ್ನುಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಇಂಕನ್ನು ತುಂಬಿಸಿ, ಒಂದು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಇಟ್ಟು ರಬ್ಬರ್ ಬ್ಯಾಂಡ್ ಹಾಕಿ ಗಟ್ಟಿ ಮಾಡಿಕೊಂಡು ಎರಡೆರಡು ಸಲ ಮುಟ್ಟಿ ನೋಡಿಕೊಂಡು ಕ್ಯಾರಿ ಆನ್ ಅಥವಾ ಚೆಕ್ ಇನ್ ಬ್ಯಾಗಿನಲ್ಲಿಡುವುದೋ ಎಂದು ಯೋಚಿಸಿಕೊಂಡಂತೆಲ್ಲ ಯಾವ ನಿರ್ಧಾರವೂ ಗಟ್ಟಿಯಾಗದೇ, ಆಗಿದ್ದಾಗಲಿ ಎಂದು ಆ ದಿನ ಚೆಕ್ ಇನ್ ಲಗ್ಗೇಜಿನಲ್ಲಿಟ್ಟ ಪೆನ್ನುಗಳನ್ನು ಅಮೇರಿಕಕ್ಕೆ ಬಂದು ಎಷ್ಟೋ ವರ್ಷಗಳಾದರೂ ಉಪಯೋಗಿಸದೇ ನಿರುಪಯೋಗಿ ವಸ್ತುಗಳನ್ನಾಗಿ ಮಾಡಿದ್ದೂ ಅಲ್ಲದೇ ಒಂದು ಮನೆಯಿಂದ ಮತ್ತೊಂದು ಮನೆಗೆ ಮೂವ್ ಮಾಡುವಾಗಲೆಲ್ಲ, 'ಬೇಕೋ ಬೇಡವೋ' ಎನ್ನುವ ಸಂಕಷ್ಟಕ್ಕೆ ಸಿಲುಕುವಂತಾದದ್ದು ವಿಪರ್ಯಾಸವಲ್ಲದೇ ಮತ್ತಿನ್ನೇನು?

ಒಂದು ಹೀರೋ ಪೆನ್ನು - ಒಂದು ಕಾಲದಲ್ಲಿ ಹದಿನೈದು ರೂಪಾಯಿಗಳಿಗೆ ಒಂದು ಸಿಗುತ್ತಿದ್ದುದು, ಈಗ ನೂರೈವತ್ತು ರೂಪಾಯಿಯಾಗಿರಬಹುದು - after all ಮೂರ್ನಾಲ್ಕು ಡಾಲರ್, ಅಷ್ಟೇ - ಕೆಲವರು ಕುಡಿಯಬಹುದಾದ ಸ್ಟಾರ್‌ಬಕ್ಸ್ ಅಥವಾ ಜಾವಾಸಿಟಿ ಕಾಫಿಯ ಬೆಲೆಗಿಂತಲೂ ಕಡಿಮೆ - ಎಂದು ಉಪೇಕ್ಷೆ ಮಾಡಲೇ? ಅಥವಾ ಒಂದು ಕಾಲದಲ್ಲಿ ನನ್ನೊಡಲಾಳದಲ್ಲಿದ್ದ ಧ್ವನಿಗೆ ಜೀವವಾದ, ನನ್ನೆಲ್ಲ ಪರೀಕ್ಷೆಗಳನ್ನು ಪಾಸು ಮಾಡಲು ಉಪಯೋಗಿಸಿದ, ಖಡ್ಗಕ್ಕಿಂತಲೂ ಹರಿತವಾದದ್ದು ಎಂದು ನನ್ನ ಹಿರಿಯರು ನಂಬಿಸಿದ ಮುಳ್ಳಿಗೆ (nib) ಶರಣು ಹೋಗಲೇ? ಅಪರೂಪಕ್ಕೊಮ್ಮೆ ನನ್ನ ಸೂಟ್ ಪಾಕೆಟ್‌ನಲ್ಲಿ ಸೇರಿಕೊಳ್ಳುವ ಯಾವತ್ತೋ ಇಟಲಿಯಲ್ಲಿ ನಲವತ್ತು ಯೂರೋಗಳಿಗೆ ಕೊಂಡುಕೊಂಡ ಹೊಸ ಫೌಂಟನ್ ಪೆನ್ನಿನ ಜೊತೆ ಈ ಹೀರೋ ಪೆನ್ನುಗಳಿಗೆ ಸಮನಾದ ಸ್ಥಾನಮಾನವನ್ನು ಕೊಡಲೇ? ಅಥವಾ ಆಫೀಸಿನಲ್ಲಿ ಪ್ರತಿದಿನವೂ ಉಪಯೋಗಿಸುವುದರ ಮೂಲಕ ನನ್ನ ಸಹೋದ್ಯೋಗಿಗಳು 'ಓ, ಫೌಂಟನ್ ಪೆನ್ನ್!' ಎಂದು ಉದ್ಗಾರವೆತ್ತುವಂತೆ ಪರೋಕ್ಷವಾಗಿ ಆಗ್ರಹಿಸಲೇ?

'ಇವುಗಳೋ - ಚೈನಾದಲ್ಲಿ ಮಾಡಿದ್ದು, ಇಂಡಿಯಾದಲ್ಲಿ ಕೊಂಡು ಉಪಯೋಗಿಸಿದ್ದು, ಈಗ ಉತ್ತರ ಅಮೇರಿಕವನ್ನು ಕಂಡುಕೊಂಡಿವೆ!' ಎಂದು ನನ್ನ ಅಂತಾರಾಷ್ಟ್ರೀಯತನವನ್ನು ಉತ್ಸಾಹದಿಂದ ಮೆರೆಯುವಂತೆ ನಟಿಸಲೇ?

ಟೈಪ್‌ರೈಟರುಗಳಲ್ಲಿ ಕುಟ್ಟಿ ಬರೆಯುವ ವರದಿಗಾರರೇ ಇಲ್ಲದಿರುವ ಕಾಲದಲ್ಲಿ, ಎಲ್ಲರೂ ಕಂಪ್ಯೂಟರಿನಲ್ಲೇ ನೇರವಾಗಿ ಬರೆದು ಪ್ರಕಟಿಸುವ ಮಾಧ್ಯಮಗಳಲ್ಲಿ - ಖಡ್ಗಕ್ಕಿಂತ ಹರಿತವಾದ ಲೇಖನಿಯ ಸ್ಥಾನಮಾನವಾದರೂ ಏನು?

Or, after all, ಈ ಪೆನ್ನುಗಳಿಂದ ಅಂತಹ ಮಹಾನ್ ಏನಾಗುತ್ತೇ? ಎಂದು ನಿಡುಸುಯ್ದು ಬೇಸ್‌ಮೆಂಟಿನ ಯಾವತ್ತೂ ತೆರೆಯದ ಬಾಕ್ಸುಗಳ ಮೂಲೆಗಳಲ್ಲೊಂದರಲ್ಲಿ ಇವುಗಳಿಗೆ ಪರ್ಮನೆಂಟ್ ಸ್ಥಾನಮಾನವನ್ನು ಕಲ್ಪಿಸಿಬಿಟ್ಟರೆ ಹೇಗೆ ಎಂದು ಹಲವಾರು ಸಲ ಯೋಚಿಸಿಕೊಂಡಿದ್ದಿದೆ.

***

ಅಮೇರಿಕದ ಪೆನ್ನುಗಳನ್ನು ರಾಶಿ-ರಾಶಿಯಾಗಿ ಕೊಂಡು (ಹೋಲ್‌ಸೇಲ್ ಬೆಲೆಯಲ್ಲಿ) ಪ್ರತಿಯೊಂದು ಪೆನ್ನನ್ನೂ ಅವುಗಳಲ್ಲಿನ ಜೀವರಸ (ಇಂಕ್) ಬತ್ತುವ ವರೆಗೆ ಬರೆಯಬೇಕು, ಎಸೆಯುವ ಮೊದಲು ಅವುಗಳ ಸಂಪೂರ್ಣ ಪ್ರಯೋಜನ ಪಡೆಯಬೇಕು ಎನ್ನುವ ನನ್ನ ಕನ್ಸರ್‌ವೇಟಿವ್ ಬುದ್ಧಿ (ಜಿಪುಣತನವಲ್ಲ ಎನ್ನುವುದನ್ನು ಒತ್ತಿ ಹೇಳುತ್ತಾ), ಎಷ್ಟೋ ಸಲ ಅದೆಲ್ಲೋ ಕಳೆದುಹೋದ ಅಥವಾ ಯಾರೋ ತೆಗೆದುಕೊಂಡು ಕೊಡಲು ಮರೆತ ಪೆನ್ನುಗಳನ್ನು ನೆನೆಸಿಕೊಂಡು ಮಮ್ಮಲ ಮರುಗಿದ್ದಿದೆ. ಒಳ್ಳೆಯದೋ ಕೆಟ್ಟದೋ ಇತ್ತೀಚೆಗೆ ಬರೀ ಓದುವುದಷ್ಟೇ ಕಡಿಮೆಯಾಗಿಲ್ಲ, ಬರೆಯುವುದೂ ಕಡಿಮೆಯಾಗಿದೆ - ಅಂದರೆ ಪೆನ್ನು ಹಿಡಿದು ಪೇಪರ್/ಪುಸ್ತಕಗಳಲ್ಲಿ ಬರೆಯುವುದು. ಕೊನೇ ಪಕ್ಷ ಬರೆಯುವುದು ಮರೆತೇ ಹೋಗದಿರಲಿ ಎಂದುಕೊಂಡು (ಅಥವಾ ಆ ರೀತಿ ಹಠ ತೊಟ್ಟುಕೊಂಡವರ ಹಾಗೆ) ಮೀಟಿಂಗುಗಳಲ್ಲಿ ಉದ್ದುದ್ದವಾದ ಟಿಪ್ಪಣಿ (ನೋಟ್ಸು)ಗಳನ್ನು ಮಾಡಿಕೊಂಡಿದ್ದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ವಾಙ್ಮಯ", "ಯಜ್ಞ" ಮುಂತಾದ ಪದಗಳನ್ನು ಬರೆದುಕೊಂಡು 'ಓಹ್, ಇನ್ನೂ ಮರೆತಿಲ್ಲ...' ಎಂದು ಸಂತಸ ಪಟ್ಟುಕೊಂಡಿದ್ದಿದೆ!

***

ಇಷ್ಟು ಬೆಳೆದು, ಇಲ್ಲಿಗೆ ಬಂದು ನನ್ನ ಸೆನ್ಸಿಟಿವಿಟಿಗಳು ಬಹಳಷ್ಟು ಬದಲಾದ ಹಾಗೆ ನನ್ನ ಲೇಖನಿಯ ಮೊನೆ ಮೊನಚಾಗದೇ ಹಾಗೇ ಉಳಿದಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ ಬೇಸ್‌ಮೆಂಟಿನ ಬಾಕ್ಸುಗಳ ಮೂಲೆಯಲ್ಲೆಲ್ಲೋ ಅಡಗಿ ಕುಳಿತ ನಾನು ಭಾರತದಿಂದ ತಂದ ಪೆನ್ನುಗಳು ಇಷ್ಟು ದಿನ ಬಳಸದಿದ್ದುದ್ದಕ್ಕೆ ಮೊಡ್ಡಾಗಿದೆ ಎನ್ನುವುದನ್ನು ಒಪ್ಪಿಕೊಳ್ಳದೇ ಬೇರೆ ಗತಿಯಿಲ್ಲ ಎನ್ನುವಂತಾಗಿದೆ!

ಇದಿಷ್ಟು ನನ್ನ ಪೆನ್ನಿನ ಕಥೆ, ಇನ್ನು ನಿಮ್ಮದು...

7 comments:

ಮನಸ್ವಿನಿ said...

ನಮಸ್ಕಾರ,

ಪೆನ್ನಿನ ಬಗ್ಗೆ ಸೆಂಟಿಮೆಂಟ್ ನಂಗೂ ತುಂಬಾ ಇತ್ತು. ಅದರಲ್ಲೂ ನನ್ನ ಹೀರೋ ಪೆನ್..ಅಯ್ಯೋ ಈಗಲೂ ನೆನೆಪು ಬರ್ತಾ ಇದೆ. ನನಗೆ ಅಪ್ಪ ಮೊದಲ ಬಾರಿಗೆ ೩೦/೪೦ ರೂಪಾಯಿ ಕೊಟ್ಟು ಹೀರೋ ಪೆನ್ ಕೊಂಡು ಕೊಟ್ಟಾಗ ಸ್ವರ್ಗಕ್ಕೆ ಮೂರೆ ಗೇಣು ಅನ್ನುವಂತೆ ಕುಣಿದಿದ್ದಂತೂ ಹೌದು.೬ ನೇ ವರ್ಗದ ವಾರ್ಷಿಕ ಪರೀಕ್ಷೆಯ ಮುಗಿಯುತ್ತಿದ್ದಂತೆ ನನ್ನ ಅಂದದ ಚಂದದ ಹೀರೋ ಪೆನ್ ಯಾರೊ ಕದ್ದಿದ್ದು,ನಾನು ಮನೆಯಲ್ಲಿ ಅತ್ತಿದ್ದು ಎಲ್ಲಾ ನೆನಪಿಗೆ ಬಂತು. ಪೆನ್ ಕಳೆದು ಹೋದ ಮಾರನೆಯ ದಿನವೆ ಅಪ್ಪ ಹೊಸ ಹೀರೋ ಪೆನ್ ತಂದು ಕೊಟ್ಟಿದ್ದರೂ,ಮೊದಲ ಹೀರೋ ಪೆನ್ನನ್ನು ಮರೆಯದೆ ಮುಖ ಗಂಟು ಹಾಕಿಕೊಂಡದ್ದು ಎಲ್ಲ ನೆನಪಿಗೆ ಬಂದವು.

ನಿಮ್ಮ ಬರಹ ಮತ್ತೆ ಎಲ್ಲವನ್ನು ನೆನಪಿಸಿದೆ..ಅಯ್ಯೋ ನನ್ನ ಹೀರೋ ಪೆನ್!! :(

ಧನ್ಯವಾದಗಳು :)

Satish said...

ಮನ,

ಸದ್ಯ, ನೀವಾದ್ರೂ ನಮ್ ಕಾಲ್ದೋರ್ ಅಂತ ಹೆಮ್ಮೆಯಿಂದ ಹೇಳ್ಕೊಂಡ್ರಲ್ಲಾ... :-)
ನನಗ್ಗೊತ್ತು ಬಹಳಷ್ಟು ಜನರಿಗೆ ಈ ಪೆನ್ನುಗಳು ಕಾಡಿವೆ ಅಂತ...ಧನ್ಯವಾದ ನಿಮ್ಮ ಕಥೆಯನ್ನು ಹಂಚಿಕೊಂಡಿದ್ದಕ್ಕೆ.

Anonymous said...

"ಇದಿಷ್ಟು ನನ್ನ ಪೆನ್ನಿನ ಕಥೆ, ಇನ್ನು ನಿಮ್ಮದು..."
- ನನ್ನದೂ ಒಂದು ಪೆನ್ನಿನ ಕಥೆ ಇದೆ. ಅದರ ಹೆಸರು "ತಿಳಿ ನೀಲಿ ಪೆನ್ನು" ನಂಗೂ ಪೆನ್ನಿನ ಹುಚ್ಚು. ಈಗ ಪೆನ್ನಲ್ಲಿ ಬರೆಯೋದೇ ತಪ್ಪಿಹೋಗಿದೆ.

Satish said...

sritri ಅವರೇ,

ಪೆನ್ನು ಉಪಯೋಗಿಸಿ ಬರೆಯೋದನ್ನೇ ನಿಲ್ಲಿಸಿ ಬಿಡಬೇಡಿ, ಕೀ ಬೋರ್ಡಿನಲ್ಲಿ ಕುಟ್ಟುವುದಕ್ಕಿಂತ ಪೆನ್ನು ಹಿಡಿದು ಬರೆಯೋದರಲ್ಲೇ ಬಲು ಮಜವಿದೆ, ಅದರೆ ಅಲ್ಲಿ ಬರೆದದ್ದನ್ನು ಮತ್ತೆ 'ಕೀ ಇನ್' ಮಾಡಬೇಕಲ್ಲಾ ಅನ್ನೋ ಗೊಂದಲ ಅಷ್ಟೇ! :-)

Anonymous said...

Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service