ಜರ್ಸೀ ಸಿಟಿಗೆ ವಿದಾಯ!
ಹತ್ತಿರ ಹತ್ತಿರ ಕಾಲು ಮಿಲಿಯನ್ ಜನಸಂಖ್ಯೆ ಇದ್ದುಕೊಂಡು ಹೆಜ್ಜೆ ಹೆಜ್ಜೆಗೆ ದೇಸೀ ಬದುಕನ್ನು ನೆನಪಿಗೆ ತಂದುಕೊಡುವ, ಬಿಳಿಯರು ಮೈನಾರಿಟಿ ಆಗಿರುವ ಹಾಗೂ ನ್ಯೂ ಯಾರ್ಕ್ ನಗರದಿಂದ ಕೇವಲ ಮೂರ್ನಾಲ್ಕು ಮೈಲು ದೂರವಿದ್ದುಕೊಂಡು ಹಡ್ಸನ್ ನದಿಯ ಪಶ್ಚಿಮ ದಂಡೆಯ ಬದಿಯಲ್ಲಿ ಯಾವಾಗಲೂ ಎಚ್ಚೆತ್ತುಕೊಂಡೇ ಇರುವ ಜೂಲು ನಾಯಿಯಂತೆ ಬಿದ್ದುಕೊಂಡಿರುವ ಜರ್ಸೀ ಸಿಟಿ ಎಂಬ ಪ್ರಪಂಚದೊಳಗಿನ ಪ್ರಪಂಚಕ್ಕೆ ನಾಲ್ಕು ವರ್ಷಗಳ ಹಿಂದೆ ಮೂವ್ ಆಗುವಾಗ ಈ ನಗರದಲ್ಲಿ ಬದುಕನ್ನು ಹೇಗೆ ತಳ್ಳುವುದು ಎಂದು ಹಲವಾರು ರೀತಿಯ ಯೋಚನೆಗಳು ಬಂದಿದ್ದು ಸಹಜ. ಇಂತಹ ಊರನ್ನು ಕಳೆದ ವಾರ ಬೀಳ್ಕೊಡುವಾಗ ಕಣ್ಣಾಲಿಗಳು ತುಂಬಿ ಬರದಿದ್ದರೂ ಇಲ್ಲಿ ಕಳೆದ ದಿನಗಳನ್ನು ಮುಂಬರುವ ವರ್ಷಗಳಲ್ಲಿ ಬಹಳಷ್ಟು ನೆನೆಸಿಕೊಳ್ಳುವುದಂತೂ ನಿಜ.
ಅಮೇರಿಕದಲ್ಲಿ ಎಲ್ಲರೂ ಒಂದಲ್ಲ ಒಂದು ಪ್ರದೇಶದಿಂದ ಮೂವ್ ಆಗುವುದು ಸಾಮಾನ್ಯವೆಂಬಂತೆ ಹಲವಾರು ಕಾರಣಗಳಿಂದಾಗಿ ನಾವೂ ಜರ್ಸೀ ಸಿಟಿಯನ್ನು ಬಿಟ್ಟು ನ್ಯೂ ಯಾರ್ಕ್ ನಗರದಿಂದ ಸುಮಾರು ಐವತ್ತು ಮೈಲು ಪಶ್ಚಿಮಕ್ಕಿರುವ ಪ್ಲಾಂಡರ್ಸ್ (Flanders) ಎನ್ನುವ ಪಟ್ಟಣಕ್ಕೆ ಬಂದು ಠಿಕಾಣಿ ಹೂಡಿದ್ದಾಯಿತು. ಕಳೆದ ಎರಡು ಮೂರು ತಿಂಗಳಿನಲ್ಲಿ ಹೊಸ ಮನೆಯನ್ನು ಹುಡುಕುವುದು ಅಲ್ಲಿಂದಿಲ್ಲಿಗೆ ಅಲೆಯುವುದು ಇವೆಲ್ಲ ನಡೆದೇ ಇತ್ತು, ಹೊಸ ಮನೆಯನ್ನು ಬಂದು ಸೇರಿದ ಮಟ್ಟಿಗೆ ಇಲ್ಲಿನ ತಲೆನೋವುಗಳು ವಾಸಿಯಾಗುವಂತಹವುಗಳಲ್ಲಿ, ಬದಲಿಗೆ ಇನ್ನೂ ಉಲ್ಬಣಗೊಂಡು ಮತ್ತಷ್ಟು ಚಿಂತೆ ಹುಟ್ಟಿಸುವ ಸನ್ನಿವೇಶಗಳೇ ಹೆಚ್ಚು. ಹೀಗೆಲ್ಲ ಒಂದಲ್ಲ ಒಂದು ಬದಲಾವಣೆಗಳ ನಡುವೆಯೂ ಆಫೀಸಿನ ಕೆಲಸಗಳನ್ನು ಯಾವ ತೊಂದರೆಗಳೂ ಇಲ್ಲದಂತೆ ನಿರ್ವಹಿಸಿಕೊಂಡು ಹೋಗುವುದು ಒಂದು ದೊಡ್ಡ ಸವಾಲೇ ಸರಿ.
ಆದರೂ ನಾನು ಜರ್ಸೀ ಸಿಟಿಯಲ್ಲಿ ಕಲಿತದ್ದು ಬಹಳಷ್ಟಿದೆ: ಮೊದಲೆಲ್ಲಾ ದಿನವೂ ಟ್ರೈನ್ ಹತ್ತಿ ನ್ಯೂ ಯಾರ್ಕ್ ನಗರಕ್ಕೆ ಕೆಲಸಕ್ಕೆ ಹೋಗುತ್ತಿರುವಾಗ ಅಷ್ಟಿಷ್ಟು ಓದಿದ್ದನ್ನು ನೆನೆಸಿಕೊಂಡರೆ, ಅಲ್ಲಿನ ಕಾಸ್ಮೋಪಾಲಿಟನ್ ಬದುಕಿನಲ್ಲಿ ಎಲ್ಲರೊಡನೆ ಹೊಂದಿಕೊಂಡಿದ್ದನ್ನು ಗುರುತಿಸಿದರೆ, ಎಂತಹ ನುರಿತ ಪಾರ್ಕಿಂಗ್ ತಜ್ಞನನ್ನೂ ಬೆರಗುಗೊಳಿಸುವ ಕಾರ್ ಪಾರ್ಕಿಂಗ್ ಸವಾಲುಗಳನ್ನು ಸ್ವೀಕರಿಸಿ ಜಯಿಸಿದ್ದನ್ನು ಆಲೋಚಿಸಿಕೊಂಡರೆ - ಜರ್ಸೀ ಸಿಟಿ ನಾನು ಕಳೆದುಕೊಂಡ ಬೆಂಗಳೂರು ನಗರದ ವಾತಾವರಣಕ್ಕಿಂತ ಭಿನ್ನವೇನಾಗಿರಲಿಲ್ಲ. ಪ್ರತೀ ಸಾರಿ ಮಳೆ ಬಿದ್ದಾಗಲೂ ಸಮುದ್ರ ಮಟ್ಟದ ಜರ್ಸೀ ಸಿಟಿ ತನ್ನ ಸುತ್ತ ಕೊಡಪಾನದ ನೀರನ್ನು ಸುರಿದುಕೊಂಡು ರಚ್ಚೆ ಹಿಡಿದು ಅಳುವ ಮಗುವನ್ನು ನೆನಪಿಸಿಬಿಡುತ್ತದೆ, ಎಲ್ಲಿ ನೋಡಿದರಲ್ಲಿ ನೀರು ನೀರೇ ತುಂಬಿಕೊಂಡು ಪಕ್ಕದ ನೆವಾರ್ಕ್ ಬೇ ಅಥವಾ ಇನ್ನೂ ಹತ್ತಿರದ ಅಟ್ಲಾಂಟಿಕ್ ಮಹಾಸಾಗರಕ್ಕೆ ತಾನೇನು ದೂರವಿಲ್ಲ ಎಂದು ಪದೇಪದೇ ಅಲ್ಲಿನ ನಿವಾಸಿಗಳನ್ನು ತಿವಿಯುತ್ತಲೇ ಇರುತ್ತದೆ.
ಯಾವುದೇ ನಗರವೊಂದು ಕೆಟ್ಟ ಅನುಭವವನ್ನು ತನ್ನ ಮಡಿಲಿನಲ್ಲಿ ಹುದುಗಿಸಿಕೊಂಡಿರಲು ಅಲ್ಲಿನ ನಿವಾಸಿಗಳಿಗಿಂತ ಆ ನಗರಕ್ಕೆ ಪ್ರತಿದಿನದ ಮಟ್ಟಿಗೆ ಭೇಟಿ ಕೊಡುವ ಹಾಗೂ ಹಾದು ಹೋಗುವ ಜನರೂ ಹೆಚ್ಚಿನ ಮಟ್ಟಿನ ಕಾರಣವೆನ್ನುವುದು ನನ್ನ ಅನಿಸಿಕೆ. ಜರ್ಸೀ ಸಿಟಿಗೆ ಜನರನ್ನು ಎಲ್ಲೆಲ್ಲಿಂದಲೋ ಪ್ರವಾಸಿಗರಾಗಿ ಬರುವಂತೆ ಮಾಡುವ ಆಕರ್ಷಣೆಗಳಲ್ಲಿ ಕೆಲವೇ ಮೈಲುಗಳ ದೂರದಲ್ಲಿರುವ ಲಿಬರ್ಟಿ ದೇವಿಯ ಪ್ರತಿಮೆ (Statue of Liberty), ಹಿಂದೆ ವಲಸಿಗರು ಹಾದು ಹೋಗುತ್ತಿದ್ದ ಎಲ್ಲಿಸ್ ಐಲ್ಯಾಂಡ್ (Ellis Island), ಹಾಗೂ ಮಕ್ಕಳಿಗೆ ಆಕರ್ಷಣೆಯನ್ನು ತೋರಿಸುವ ಲಿಬರ್ಟಿ ಸೈನ್ಸ್ ಸೆಂಟರ್ (Liberty Science Center) ಮುಖ್ಯವಾದವುಗಳು. ಜರ್ಸೀ ಸಿಟಿಯ ಪಕ್ಕದಲ್ಲಿರುವ ಜರ್ಸೀ ರಾಜ್ಯದಲ್ಲೇ ದೊಡ್ಡ ನಗರವಾದ ನೆವಾರ್ಕ್ (Newark) ಹಾಗೂ ಅದರ ಲಿಬರ್ಟಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ - ಪ್ರತೀ ಎರಡು-ಮೂರು ನಿಮಿಷಗಳಿಗೊಮ್ಮೆ ಬಂದು ಹೋಗುವ ವಿಮಾನಗಳಿಗೇನು ಕಡಿಮೆಯಿಲ್ಲ. ಜರ್ಸೀ ಸಿಟಿಯ ಮತ್ತೊಂದು ಮುಖವಾಗಿ ನ್ಯೂ ಯಾರ್ಕ್ ನಗರಕ್ಕೆ ಸಂಪರ್ಕವನ್ನೊದಗಿಸುವ ಹಾಲಂಡ್ ಟನಲ್ (Holland Tunnel) - ಹೊರಗಿನಿಂದ ಬಂದವರೆಲ್ಲ ನ್ಯೂ ಯಾರ್ಕ್ ನಗರಕ್ಕೆ ಹೋಗಲು ಬಳಸುವ ಮುಖ್ಯ ಮಹಾದ್ವಾರ - ಆದರೆ ಜರ್ಸೀ ಸಿಟಿಯಲ್ಲಿ ಇದ್ದು ಜೀವನ ನಡೆಸುವವರಿಗೆ ಯಾವತ್ತೂ ಟ್ರಾಫಿಕ್ ಜಾಮ್‌ನ ಕಿರುಕುಳ ಇದ್ದೇ ಇದೆ ಎನ್ನುವುದು ಜೀವನದ ಅವಿಭಾಜ್ಯ ಅಂಗವಷ್ಟೇ.
ಜರ್ಸೀ ಸಿಟಿಯನ್ನು ಬಳಸುವ, ಅದರ ಮುಖಾಂತರ ಹಾದು ಹೋಗುವ ರಸ್ತೆಗಳಿಗೆನೂ ಕಡಿಮೆಯಿಲ್ಲ - ನನ್ನ ಫೇವರೈಟ್ ರೂಟ್ 1 & 9, ಟರ್ನ್ ಪೈಕ್, ರೂಟ್ 280, ರೂಟ್ 7, ಕೆನಡಿ ಬುಲವರ್ಡ್, ಮುಂತಾದವುಗಳು ಟ್ರಾಫಿಕ್ ಅನ್ನು ಹತೋಟಿಯಲ್ಲಿಡಲು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇವೆ. ಹ್ಯಾಕೆನ್‌ಸ್ಯಾಕ್ ನದಿಯ ಮೇಲೆ ನಿರ್ಮಿತವಾಗಿರೋ ಪುಲಾಸ್ಕಿ ಹೈವೇಯ ಸೊಬಗು ನೋಡಲು ಬಲು ಚೆನ್ನ - ಸುಮಾರು ನಾಲ್ಕು ಮೈಲು ಉದ್ದಕ್ಕಿರುವ ಸೇತುವೆಗೆ ಒಂದು ಪೈಸೆಯ ಟೋಲ್ ಅನ್ನೋ ಕೋಡೋದು ಬೇಡ - ಉಚಿತ ರಸ್ತೆಯೆಂದರೆ ನಂಬಲಿಕ್ಕೆ ಸಾಧ್ಯವೇ ಇಲ್ಲ!
ಎಲ್ಲಕ್ಕಿಂತ ಮುಖ್ಯವಾಗಿ ನಾನು ಜರ್ಸೀ ಸಿಟಿಯಲ್ಲಿಲ್ಲದ್ದರಿಂದ ಕಳೆದುಕೊಳ್ಳುತ್ತಿರುವುದೆಂದರೆ ಪ್ರತಿ ದಿನದ ಸೂರ್ಯಾಸ್ತ - ನಮ್ಮ ಮನೆಯಿಂದ ನಡೆದುಕೊಂಡು ಹತ್ತಿರದ ನೆವಾರ್ಕ್ ಬೇ ದಂಡೆಯಲ್ಲಿ ನಿಂತುಕೊಂಡರೆ ದಿನಕ್ಕೊಂದು ಚಿತ್ರ ಬರೆದುಕೊಡು ರಮಣೀಯವಾಗಿ ಕಾಣುತ್ತಿದ್ದ ಸೂರ್ಯಾಸ್ತವನ್ನು ನಾನು ಯಾವತ್ತಿಗೂ ಮಿಸ್ ಮಾಡಿಕೊಳ್ಳುತ್ತೇನೆ - ನಾನು ಅಲ್ಲಿ ನೋಡಿದಷ್ಟು ಸೂರ್ಯಾಸ್ತವನ್ನು ಮತ್ತಿನ್ನೆಲ್ಲೂ ನೋಡೇ ಇಲ್ಲ ಎಂದರೂ ಸರಿ. ಮೂಲತಃ ಪೂರ್ವದವನು ಪಶ್ಚಿಮಕ್ಕೆ ತೆರಳಿ ಅಲ್ಲಿನ ಪೂರ್ವ ತೀರದಲ್ಲಿ ವಾಸ ಮಾಡಿಕೊಂಡಿದ್ದುಕೊಂಡು ಅಲ್ಲಿನ ಪಶ್ಚಿಮದಲ್ಲಿ ಮುಳುಗುತ್ತಿದ್ದ ಸೂರ್ಯನನ್ನು ನೋಡುವ ಭಾಗ್ಯವನ್ನು ತಾನು ಇದ್ದಲ್ಲಿಂದ ಇನ್ನಷ್ಟು ಪಶ್ಚಿಮಕ್ಕೆ ತೆರಳಿ ಕಳೆದುಕೊಳ್ಳಬೇಕಾದದ್ದು ವಿಪರ್ಯಾಸವಲ್ಲದೇ ಮತ್ತಿನ್ನೇನು?!
ಜಂಗಮಕ್ಕಳಿವಿಲ್ಲವೆನ್ನುವಂತೆ ಮೂವ್ ಮಾಡುತ್ತಿರುವುದೇ ಇಲ್ಲಿನ ಬದುಕು, ಒಂದಲ್ಲ ಒಂದು ದಿನ ಇಲ್ಲಿಂದ ಇನ್ನೆಲ್ಲಿಗೋ ತೆರಳಿ ಮತ್ತೆ ಅಲ್ಲಿಂದ ಮತ್ತಿನ್ನೆಲ್ಲಿಗೋ ಹೋಗುವುದು ಇದ್ದೇ ಇದೆ. ಈಗ ಪ್ಲಾಂಡರ್ಸ್‌ನಲ್ಲಿ ನೀರು ಕುಡಿಯುವ ಋಣವಿದೆ, ಅದನ್ನು ಪ್ರತಿ ಹನಿ ಮುಗಿಯುವ ವರೆಗೆ ಚುಕ್ತಾ ಮಾಡಿ ಮತ್ತಿನ್ನೆಲ್ಲಿಗೆ ತೆರಳುವುದೋ ನೋಡೋಣ.
ನನ್ನ ಅಮೇರಿಕನ್ ಬದುಕಿನಲ್ಲಿ ನಾಲ್ಕು ವರ್ಷಗಳನ್ನು ನಿರಾಂತಕವಾಗಿ ಕಳೆಯುವಂತೆ ಮಾಡಿದ ಜರ್ಸೀ ಸಿಟಿಗೆ ನಮನ ಹಾಗೂ ಹೃತ್ಪೂರ್ವಕ ವಿದಾಯ!
3 comments:
ನಾನು Endicott ನಲ್ಲಿ ಒಂದಷ್ಟು ತಿಂಗಳು ಕೆಲ್ಸ ಮಾಡಿದ್ದಾಗ ನ್ಯೂಯಾರ್ಕ್ ನೋಡಕ್ಕೆ ಹೋಗಿದ್ದಾಗ ನನ್ ಸ್ನೇಹಿತ ಜರ್ಸಿ ಸಿಟಿ ನಲ್ಲಿದ್ದ. ಆ ಹಡ್ಸನ್ ಸದಿ ಪಕ್ಕದ ಒಂದು ದೊಡ್ಡ ಅಪಾರ್ಟ್ ಮೆಂಟ್ ನಲ್ಲಿದ್ದ. ಅಲ್ಲಿಂದ ಸಂಜೆ ನ್ಯೂಯಾರ್ಕ್ ನಗರ ಎಷ್ಟು ಚೆನ್ನಾಗಿ ಕಾಣ್ತಿತ್ತು ಗೊತ್ತ.. ಒಳ್ಳೆ ನಗರ..
ಜರ್ಸೀ ಸಿಟೀ ಒಳ್ಳೇದೇ, ಸೆಪ್ಟೆಂಬರ್ ೧೧ ರ ನಂತರ ಹಡ್ಸನ್ ನದಿಯ ಇಕ್ಕೆಲಗಳಿಗೆ ಬಲು ಬೆಲೆ! ಹೊಸ ಮೇಯರ್ ಬಂದ ಮೇಲೆ ಇಡೀ ನಗರಕ್ಕೆ ಹೊಸ ರೂಪವನ್ನು ತರೋ ಪ್ರತಿಜ್ಞೆ ಬೇರೆ ಇದೆ, ಇತ್ತೀಚೆಗೆ ಕೆಲಸಕ್ಕೆ ಸೇರಿದ ಪೋಲಿಸರು ನಗರವನ್ನು ನೀಟಾಗಿ ಇಡಲು ತಮ್ಮ ಶಕ್ತಿ ಮೀರಿ ಹೆಣಗುತ್ತಿದ್ದಾರೆ!
Conan Barbarian
Conan the Barbarian Wallpapers
Age of Conan Classes
Game multiplayer online rpg
multiplayer online game like runescape
free online multiplayer game
age of conan gold
aoc gold
Age of Conan Torrent
Age of Conan Trial
Age of Conan Free Trial
Hibernia
Midgard
Albion
DAOC 3 Accounts
DAOC How to Run 3 Accounts
DAOC Triple Log
daoc plat
daoc platinum
wow gold
DAOC Emissary Broken Visions
DAOC Champ Exp Quest
DAOC Artifacts
DAOC templates
Dark Ages of Camelot
EQ2 Plat
EQ2 Gold
EverQuest ii platinum Venekor
Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food
Fading memories Everquest
Mentor everquest
eq2 guild permafrost
free warcraft servers
world of warcraft private servers
world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming
wow pvp
wow arena season 4
wow s3 arena power leveling service
Post a Comment