ಗಂಡಾಂತರ
ಕನ್ನಡಿಗರು ಬಹಳ ಬುದ್ಧಿವಂತರು! ಹೀಗೆಂದು ಅನ್ನಿಸಿದ್ದು, ಮೊನ್ನೆ ನಾನು ರಿಸ್ಕ್ ಎನ್ನುವ ಪದಕ್ಕೆ ಕನ್ನಡದಲ್ಲಿ ಸಮನಾರ್ಥಕ ಪದವನ್ನು ಹುಡುಕುತ್ತಿದ್ದಾಗ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಎಂತೆಂತ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ, ಆದರೆ ನಾವು ಇಲ್ಲಿನ ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ದಿನೇದಿನೇ ಅನೇಕ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದೂ ಅಲ್ಲದೇ ಅವುಗಳನ್ನು ಮಿಟಿಗೇಟ್ ಹಾಗೂ ಮ್ಯಾನೇಜ್ ಮಾಡಬೇಕಾಗಿ ಬರುತ್ತದೆ. ರಿಸ್ಕ್ ಮ್ಯಾನೇಜ್‌ಮೆಂಟ್ ಎನ್ನುವುದು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಿನ್ನ ದೊಡ್ಡದೊಂದು ಭಾಗ. ನಾವು ಬರೆಯುವ ಡಾಕ್ಯುಮೆಂಟ್‌ಗಳಲ್ಲಿ ರಿಸ್ಕ್ ಎನ್ನುವ ಪದ ಬಂದಾಗಲೆಲ್ಲ ನಾವು ಅದನ್ನು ತೊಂದರೆಅಥವಾ ಅವಗಢ ಎಂದುಕೊಳ್ಳದೇ ನಮ್ಮ ಕಾರ್ಯದಲ್ಲಿ ಸಹಜವಾಗಿ ಬರುವ ಸಂಕಷ್ಟಗಳು ಎಂದುಕೊಂಡು ಅದನ್ನು ಎದುರಿಸುತ್ತೇವೆ ಹಾಗೂ ಉಪಶಮನ (mitigate) ಗೊಳಿಸುತ್ತೇವೆ.
"ರಿಸ್ಕ್" ಎನ್ನುವ ಪದಗಳಿಗೆ ಇಂಗ್ಲೀಷಿನಲ್ಲಿ a situation involving exposure to danger, ಎನ್ನುವ ನಾಮ ಪದವಾಗಿ ಅಥವಾ exposing oneself to danger or harm ಎನ್ನುವ ಕ್ರಿಯಾಪದವಾಗಿಯೂ ಬಳಸುವುದನ್ನು ನೋಡುತ್ತೇವೆ. ಮಾಮೂಲಿ ವ್ಯಾಖ್ಯೆಯಲ್ಲಿ ರಿಸ್ಕ್ ಎನ್ನುವ ಪದ ಕೆಟ್ಟದ್ದನ್ನು ಸೂಚಿಸುತ್ತದೆಯಾದರೂ, ನಾವು ನಮ್ಮ ದಿನನಿತ್ಯದ ಪ್ರಾಜೆಕ್ಟಿನಲ್ಲಿ ಬರುವ ಆಡಚಣೆಗಳನ್ನು ಹಾಗೂ ವ್ಯವಹಾರದಲ್ಲಿ ಆಗಬಹುದಾದ ಲಾಭ ಮತ್ತು ನಷ್ಟವನ್ನೂ ಸಹ ರಿಸ್ಕ್ ಅಥವಾ ರಿಸ್ಕ್ ತೆಗೆದುಕೊಂಡಿದ್ದರ ಫಲಿತಾಂಶ ಎಂದೇ ಕರೆಯುತ್ತೇವೆ. ಇನ್ನು ರಿಸ್ಕ್ ಸೀಕಿಂಗ್ (risk seeking) ಹಾಗೂ ರಿಸ್ಕ್ ಅವರ್ಸ್ (risk averse) ಜನರೂ ಸಹ ನಮ್ಮ ಮಧ್ಯೆ ಕಾಣಸಿಗುತ್ತಾರೆ. ರಿಸ್ಕ್ ಸೀಕಿಂಗ್ ಎಂದರೆ ತಮ್ಮನ್ನು ತಾವು ಪದೇಪದೇ ಗಂಡಾಂತರಕ್ಕೆ ಒಡ್ಡಿಕೊಳ್ಳುವವರು ಎಂದು ಭಾಷಾಂತರ ಮಾಡಲಾಗದು.
ಕನ್ನಡ ನಿಘಂಟಿನಲ್ಲಿ ರಿಸ್ಕ್ ಎನ್ನುವ ಪದಕ್ಕೆ ಅಪಾಯ, ಗಂಡಾಂತರ, ಕೇಡು, ನಷ್ಟ, ಹಾನಿ, ತೊಂದರೆ, ಮುಂದೆ ಸಂಭವಿಸಬಹುದಾದ ತೊಂದರೆ, ಕಷ್ಟ, ಕುತ್ತು ಎನ್ನುವ ಪದಗಳು ಸಿಗುತ್ತವೆ. ಆದರೆ, ನಮ್ಮ ಇಂಗ್ಲೀಷಿನ ಪರಿಭಾಷೆಯಲ್ಲಿ ಹೇಳುವಂತೆ take risk ಎಂದು ನಾವು ಯಾರಿಗೂ ಕನ್ನಡದಲ್ಲಿ ಹೇಳೋದಿಲ್ಲ. "ಮುಂದೆ ಗಂಡಾಂತರ ಬಂದೀತು, ಎಚ್ಚರ!" ಎಂದು ಹೇಳಿದರೂ "ಸುಮ್ಮನೇ ಅಪಶಕುನ ನುಡಿಯಬೇಡ!" ಎಂದು ಯಾರಾದರೂ ಗದರಿಸಿಬಿಟ್ಟಾರು! ರಿಸ್ಕ್ ತೆಗೆದುಕೊಳ್ಳುವುದನ್ನು ನಾವು ಕನ್ನಡಿಗರು ತುಂಬಾ ನೆಗೆಟಿವ್ ಆಗಿ ನೋಡುವುದರಿಂದಲೇ ಏನೋ, ನಾವು ಎಂದೂ ಎಲ್ಲೂ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗುವುದೇ ಇಲ್ಲ, ಅದೇ ನೋಡಿ ನಮ್ಮ ಜಾಯಮಾನ...ಅದಕ್ಕೇ ನಾವು ಕನ್ನಡಿಗರು ಬಹಳ ಬುದ್ಧಿವಂತರು ಎಂದು ಆರಂಭದಲ್ಲಿ ಬರೆದಿದ್ದು.
ನಮ್ಮ ಕನ್ನಡಿಗರಿಗೆ ಒಂದು ಕೆಲಸವನ್ನು ಬಿಟ್ಟು ಮತ್ತೊಂದು ಹುಡುಕುವುದಕ್ಕಾಗಲೀ, ಒಂದು ಮನೆಯನ್ನು ಬದಲಾಯಿಸಿ ಮತ್ತೊಂದಕ್ಕೆ ಹೋಗುವುದಕ್ಕಾಗಲೀ, ಈಗಿನ ಸ್ಥಿತಿಯಿಂದ ಮತ್ತೊಂದು ಸ್ಥಿತಿಯ ಬಗ್ಗೆ ಆಲೋಚಿಸುವುದರಲ್ಲಾಗಲೀ ಎಲ್ಲೂ ಮನಸ್ಸೇ ನಿಲ್ಲೋದಿಲ್ಲ. "ದಿನ ದಿನ ಗಂಡಾಂತರವನ್ನು ತೆಗೆದುಕೊಳ್ಳುವವರಿಗೆ ನೂರು ವರ್ಷ ಆಯಸ್ಸು" ಇದೆಯೆಂದು ಸಾರುವ ತೆಲುಗಿನ ನಾಣ್ಣುಡಿಯನ್ನು ನಮ್ಮ ಆಫೀಸಿನಲ್ಲಿ ಕೆಲಸ ಮಾಡುವ ತೆಲುಗು ಪರಂಪರೆಯವರು ಹಾಗೆಂದು ಉದ್ಧರಿಸುವುದಷ್ಟೇ ಅಲ, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ ಕೂಡ. ಆದರೆ, ಅದೇ ನಮ್ಮ ಕನ್ನಡಿಗರ ವಿಷಯಕ್ಕೆ ಬಂದರೆ ಬದಲಾವಣೆಗಳ ರಿಸ್ಕ್ ನಮಗೆ ಬಹಳ ದೊಡ್ಡದಾಗಿ ಕಾಣುತ್ತದೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ ಏನನ್ನಾದರೂ ಏಕೆ ಬದಲಿಸಬೇಕು, ನೀವೇ ಹೇಳಿ!?
ನಾವು ಕನ್ನಡಿಗರು ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಮೊದಲಿಗರಲ್ಲ. ಎಲ್ಲಿ ನಾವು ಮೊದಲಿಗರಾಗಲು ಹಿಂಜರಿಯುತ್ತೇವೆಯೋ ಅಲ್ಲಿ ನಾವು ಲೀಡರುಗಳಾಗೋದಿಲ್ಲ. ಎಲ್ಲಿ ನಮ್ಮ ಹಿರಿತನವಿರುವುದಿಲ್ಲವೋ ಅಲ್ಲಿನ ಕಾರ್ಯವೈಖರಿಗಳು ನಮ್ಮ ಆಲೋಚನೆಯಂತೆ ನಡೆಯುವುದಿಲ್ಲ. ಎಲ್ಲಿ ನಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲವೋ ಅಲ್ಲಿ ನಾವು ಯಾವಾಗಲೂ ಹೊರಗಿನವರಾಗಿರುತ್ತೇವೆ, ಅಲ್ಲದೇ ಅಲ್ಲಿ ಬೇರೊಬ್ಬರ, ಬೇರೆಯವರ ಆಲೋಚನೆಗಳಿಗೆ ಆಸ್ಪದ ಸಿಗುತ್ತದೆ. ಇವುಗಳೆಲ್ಲದರಿಂದಾಗಿ ನಮ್ಮತನ ದೂರವಾಗಿ ನಮ್ಮನ್ನು ಮತ್ಯಾನ್ಯಾರೋ ದುಡಿಸಿಕೊಳ್ಳಲು ತೊಡಗುತ್ತಾರೆ, ಹೀಗೆ ದುಡಿದುಕೊಂಡು ಬೆಳೆಯುವ ಜೀವಕ್ಕೆ ಕರ್ಮಠತನ ಲಭಿಸುತ್ತದೆ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿ ವ್ಯಸ್ತವಾಗಿರುವ ಕರ್ಮಠತನದ ಮನಸ್ಸಿಗೆ ಬದಲಾವಣೆ ಬೇಕೆಂದು ಅನ್ನಿಸದೇ ಅದು ಯಥಾಸ್ಥಿತಿಗೆ (status quo) ಶರಣಾಗಿ ವಿಷವರ್ತುಲಕ್ಕೆ (vicious circle) ಸಿಕ್ಕು ವಿಲವಿಲ ಒದ್ದಾಡುವಂತಾಗುತ್ತದೆ.
ಇವುಗಳೆಲ್ಲದರಿಂದ ಮುಕ್ತಿ ಬೇಕೆಂದಾದಲ್ಲಿ, ರಿಸ್ಕ್ ತೆಗೆದುಕೊಳ್ಳಲೇ ಬೇಕಾಗುತ್ತದೆ. ರಿಸ್ಕ್ ಅನ್ನುವ ಪದವನ್ನು ನಾವು ಕನ್ನಡಿಗರು ಅಪಾಯ ಅಥವಾ ಗಂಡಾಂತರ ಎನ್ನುವ ಅರ್ಥದಲ್ಲಿ ಬಳಸುವ ಬದಲು, ರಿಸ್ಕ್ ಅನ್ನು ಬದಲಾವಣೆಯ ಕೈಪಿಡಿಯನ್ನಾಗಿ ಸ್ವೀಕರಿಸಿ ಅದಕ್ಕೊಂದು ಸಾಹಸೀ ಪರಿಭಾಷೆಯನ್ನು ಕೊಡಬೇಕಾಗುವುದು, ಇಂದಿನ ದಿನಗಳ ಮಹಾ ಅಗತ್ಯಗಳಲ್ಲೊಂದು.
ಎದ್ದೇಳಿ, ಇನ್ನಾದರೂ ಸ್ವಲ್ಪ ರಿಸ್ಕ್ ತಗೊಳ್ಳಿ, ತೊಂದರೆ ಏನೋ ಆಗೋದಿಲ್ಲ, ಕನ್ನಡಿಗರು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದರೇನೇ, ತೊಂದರೆ!
***
Risk ಅನ್ನುವುದಕ್ಕೆ ಮತ್ತಿನ್ನೇನು ಪದಗಳನ್ನು ಕನ್ನಡದಲ್ಲಿ ಬಳಸಬಹುದು?

No comments:
Post a Comment