ಅಕ್ಕ ಸಮ್ಮೇಳನ ಮತ್ತು ಊಟ-ತಿಂಡಿಯ ವ್ಯವಸ್ಥೆ
ದೂರದಿಂದ ಬಂದ ನನ್ನ ಸ್ನೇಹಿತರು ಶುಕ್ರವಾರದಿಂದ ಶನಿವಾರದವರೆಗೆ ಹಲವಾರು ಸೂಚನೆಗಳನ್ನು ನನಗೆ ವೈಯಕ್ತಿಕವಾಗಿ ನೀಡುತ್ತಲೇ ಬಂದಿದ್ದಾರೆ, ಕೆಳಗಿನವುಗಳು ಮುಖ್ಯ ಅಂಶಗಳು ಮಾತ್ರ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ಫುಡ್ ಕಮಿಟಿಯವರು ತಮ್ಮ ವ್ಯವಸ್ಥೆಯನ್ನು ನಿರಂತರವಾಗಿ ಸುಧಾರಿಸುತ್ತಲೇ ಬಂದು ಶನಿವಾರ ಮಧ್ಯಾಹ್ನದ ಊಟದ ಕ್ವಾಲಿಟಿ ಚೆನ್ನಾಗಿತ್ತು. ಜೊತೆಗೆ ಶನಿವಾರದ ಸಂಜೆಯ ಹೊತ್ತಿಗೆಲ್ಲಾ ಊಟದ ಲೈನು ಹೆಚ್ಚು ಉದ್ದವಾದಂತೆ ಎನ್ನಿಸಲೇ ಇಲ್ಲ; ಊಟವನ್ನು ಸಾವಿರಾರು ಜನರಿಗೆ ಹಂಚುವ ವ್ಯವಸ್ಥೆ, ಅದರಲ್ಲಿನ ಬಾಟಲ್‌ನೆಕ್ಕ್‌ಗಳನ್ನು ತೆಗೆದು ಎಲ್ಲವೂ ಸಸೂತ್ರವಾಗಿ ನಡೆದುಕೊಂಡು ಹೋಗುವಂತೆ ಮಾಡಿದ ಆಹಾರ ಸಮಿತಿಯವರಿಗೆ "ಅಂತರಂಗ"ದ ಅಭಿನಂದನೆಗಳು.
* ಎರಡು ವರ್ಷಕ್ಕೊಮ್ಮೆ ’ಅಕ್ಕ’ ಸಮ್ಮೇಳನ ನಡೆಯುವುದು ನಿಜವಾದರೆ ಸ್ಥಳ ಬದಲಾದರೂ ಈ ಹಿಂದಿನ ಅನುಭವಗಳಿಂದ ನಾವುಗಳು ಪಾಠವನ್ನೇಕೆ ಕಲಿಯೋದಿಲ್ಲ? ಕಾರ್ಯಕ್ರಮ ಹಾಗೂ ಸಮ್ಮೇಳನ ಸಮಿತಿಗಳು ಬದಲಾದರೂ ’ಅಕ್ಕ’ದ ಪದಾಧಿಕಾರಿಗಳು ಈ ಬಗ್ಗೆ ಒಂದು ’ಅನುಭವ ಬ್ಯಾಂಕ್’ ಏಕೆ ಸ್ಥಾಪಿಸಿ ಅವೇ ತಪ್ಪುಗಳು ಮತ್ತೆ ಮರುಕಳಿಸದಂತೆ ಏಕೆ ಮಾಡಬಾರದು?
* ಗುಜರಾತಿ ಸಂಸ್ಥೆಗಳಲ್ಲಿ ಹತ್ತು ಸಾವಿರದಷ್ಟು ಜನರಿಗೆ ಊಟ-ಉಪಹಾರವನ್ನು ಯಾವುದೇ ಲೋಪವಾಗದಂತೆ ಆಯೋಜಿಸುವುದು ನಿಜವಾದರೆ, ನಾಲ್ಕು ಸಾವಿರ ಕನ್ನಡಿಗರಿಗೆ ಉಣಬಡಿಸುವುದೇಕೆ ಕಷ್ಟ.
* ದಕ್ಷಿಣ ಭಾರತದ ತಿಂಡಿ-ತಿನಿಸುಗಳನ್ನು ದಯವಿಟ್ಟು ನಮ್ಮವರಿಂದಲೇ ಮಾಡಿಸಿ - "ಚಟ್ಣಿ ಸ್ವಲ್ಪವೂ ಚೆನ್ನಾಗಿರಲಿಲ್ಲ!"
* ಯಾರಾದರೂ ಒಂದು ವಡೆ ಅಥವಾ ಇತರ ತಿನಿಸನ್ನು ಹೆಚ್ಚು ಕೇಳಿದರೆ ದಯವಿಟ್ಟು ನಿರಾಕರಿಸದೇ ಕೊಡಿ.
* ಸಮ್ಮೇಳನಕ್ಕೆ ಬರುವವರಿಗೆ ಕಾರ್ಯಕ್ರಮಗಳು ಎಷ್ಟು ಮುಖ್ಯವೋ ಅದೇ ರೀತಿ ಊಟ-ಉಪಚಾರ ಹಾಗೂ ತಮ್ಮ ಬಂಧು-ಬಳಗ-ಸ್ನೇಹಿತರನ್ನು ಭೇಟಿ ಮಾಡುವುದು ಅಷ್ಟೇ ಮುಖ್ಯ, ಆದರೆ ಊಟ ಮಾಡಿದವರು ಅಲ್ಲೇ ಮೀಟಿಂಗ್ ಮಾಡಿ ಉಳಿದವರಿಗೆ ಟೇಬಲ್ ಸಿಗದ ಹಾಗೆ ಮಾಡದಂತೆ ಉಪಾಯವಾಗಿ ತಡೆ ಹಿಡಿಯಿರಿ.
* ನಮ್ಮವರು ಕಾಫಿ, ಊಟ-ತಿಂಡಿಗೆ ಸಮಯಕ್ಕಿಂತ ಮೊದಲು ಸರತಿ ಸಾಲಿನಲ್ಲಿ ನಿಲ್ಲದಂತೆ ತಡೆ ಹಿಡಿಯಿರಿ, ಒಮ್ಮೆ ಸಾಲಿನಲ್ಲಿ ನಿಂತವರನ್ನು ಐದು ನಿಮಿಷಗಳಿಗಿಂತ ಹೆಚ್ಚು ಕಾಯಿಸಬೇಡಿ.
*** ಇನ್ನೂ ಉಳಿದ ಅಬ್ಸರ್‌ವೇಷನ್ನುಗಳನ್ನು ಇಲ್ಲಿ ಮುಂದೆ ಸೇರಿಸಲಾಗುವುದು.
1 comment:
akka sammelanada bagge savivaravaada lekhana barediddeeraa.sammelanakke bandu nodidahaage agide.dhanyavaadagalu.
Post a Comment