ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ
ಈ ವರ್ಷದ ಆಗಷ್ಟು ಎರಡರ ಮಧ್ಯಾಹ್ನ 1:11:25 (August 02, 08) ಇದ್ದ ನ್ಯಾಷನಲ್ ಸಾಲದ ಗಡಿಯಾರದ ಪ್ರಕಾರ US ನ ಪ್ರತಿಯೊಂದು ಫ್ಯಾಮಿಲಿಯ ದೇಶದ ಸಾಲದ ಪಾಲು ಸುಮಾರು 81 ಸಾವಿರ ಡಾಲರುಗಳು. ಟೈಮ್ ಸ್ಕ್ವಯರ್ ಹತ್ತಿರದಲ್ಲಿದ್ದ ಈ ಗಡಿಯಾರದ ಚಿತ್ರವನ್ನು ನಾನು ಬಹಳ ವರ್ಷಗಳಿಂದ ತೆಗೆಯಬೇಕು ಎಂದುಕೊಂಡರೂ ಆಗದಿದ್ದುದು ಕೊನೆಗೆ ೨೦೦೮ ರಲ್ಲಿ ಕೈಗೂಡಿತು, ಆದರೆ ಏನಾಶ್ಚರ್ಯ ಈ ಗಡಿಯಾರದ ಅವಧಿಯೂ ಮುಗಿಯುತ್ತ ಬಂದಹಾಗಿದೆಯಲ್ಲ ಎಂದುಕೊಂಡವನಿಗೆ ನನ್ನ ಊಹೆಗೆ ತಕ್ಕಂತೆ ಈ ಗಡಿಯಾರದ ಡಿಜಿಟ್ಟುಗಳೆಲ್ಲ "ಖಾಲಿ" ಆಗಿ ಮತ್ತೆ ಈ ಗಡಿಯಾರದ ಡಿಜಿಟ್ಟುಗಳನ್ನು ಹೆಚ್ಚಿಸಬೇಕಾಗಿ ಬಂದಿತೆಯಂತೆ. ಅಂದರೆ ಈ ದೇಶದ ಸಾಲ ಹತ್ತು ಟ್ರಿಲಿಯನ್ ಡಾಲರ್‌ಗಳಿಗೂ ಹೆಚ್ಚು!
ಈ ಗಡಿಯಾರದ ಮೂಲ Durst Organization ಹೇಳಿಕೆ ಪ್ರಕಾರ ಮುಂದಿನ ವರ್ಷ ಇದರಲ್ಲಿನ ಸಂಖ್ಯೆಗಳನ್ನು ಹೆಚ್ಚಿಸುತ್ತಾರಂತೆ, ಹೀಗೆ ಹೆಚ್ಚಿಸುವ ಸಂಖ್ಯೆಗಳ ಬಳಕೆ ಇನ್ನೆಷ್ಟು ಬರುತ್ತದೋ ಕಾದು ನೋಡಬೇಕು.
ಅಂದಹಾಗೆ ಈ ಗಡಿಯಾರದ ಹಿಂದಿನ ತತ್ವವನ್ನು ಪಂಡಿತರಿಗೆ ಬಿಡೋಣ, ಅಂಥವರು ಈ ಬರಹದ ಓದುಗರ ಸಮುದಾಯದಲ್ಲಿದ್ದಲ್ಲಿ ನಮಗೂ ಒಂದಿಷ್ಟು ವಿವರವನ್ನು ತಿಳಿಸಬಾರದೇಕೆ?
ಈ ಗಡಿಯಾರದ ಮೂಲ Durst Organization ಹೇಳಿಕೆ ಪ್ರಕಾರ ಮುಂದಿನ ವರ್ಷ ಇದರಲ್ಲಿನ ಸಂಖ್ಯೆಗಳನ್ನು ಹೆಚ್ಚಿಸುತ್ತಾರಂತೆ, ಹೀಗೆ ಹೆಚ್ಚಿಸುವ ಸಂಖ್ಯೆಗಳ ಬಳಕೆ ಇನ್ನೆಷ್ಟು ಬರುತ್ತದೋ ಕಾದು ನೋಡಬೇಕು.
ಅಂದಹಾಗೆ ಈ ಗಡಿಯಾರದ ಹಿಂದಿನ ತತ್ವವನ್ನು ಪಂಡಿತರಿಗೆ ಬಿಡೋಣ, ಅಂಥವರು ಈ ಬರಹದ ಓದುಗರ ಸಮುದಾಯದಲ್ಲಿದ್ದಲ್ಲಿ ನಮಗೂ ಒಂದಿಷ್ಟು ವಿವರವನ್ನು ತಿಳಿಸಬಾರದೇಕೆ?
5 comments:
ನಮ್ಮ ಇಂಡಿಯಾ ದೇಶದ ಸಾಲದ ಭಾರದಲ್ಲಿ ಪ್ರತಿಯೊಬ್ಬನ ಪಾಲೆಷ್ಟು ಹೇಳಬಹುದಾ?
I don't think India is having debt as that of USA. Since Indian population is huge compared to that of USA, naturally it should be minimal. We should not forget that the invaders like Mohammad Ghazni, looted our land 14 times :-( but still India is rich... :-)
ತತ್ವ? ಯಾವುದಕ್ಕೆ?
ಅಮೆರಿಕಾದಲ್ಲಿ ಸರಿಯಾದ ಅಂಕಿ-ಅಂಶ ನೀಡಿರಬಹುದು. ಆದರೆ ಭಾರತದಲ್ಲಿ ನೀಡುವ ಅಂಕಿ-ಅಂಶ ನೋಡಿದರೆ ಪಾಪ ಚಿತ್ರಗುಪ್ತನೂ ಆತ್ಮಹತ್ಯೆ ಮಾಡಿಕೊಂದುಬಿದುತ್ತಾನೆ. ಕೆಲವು ಕಡೆ ತೋರಿಸುವ ದೇಶದ ಜನಸಂಖ್ಯೆ ಬೇರೆ ಬೇರೆ ಮೂಲಗಳಲ್ಲಿ ಬೇರೆ ಬೇರೆಯಾಗಿರುತ್ತದೆ!
saar, heading gaade onchuru badalayisidange ideyalla ! :)
ಎಲ್ಲರಿಗೂ...ದಯವಿಟ್ಟು ಕ್ಷಮಿಸಿ ಉತ್ತರಿಸಲು ತಡವಾಗಿದ್ದಕ್ಕೆ.
ಸುನಾಥ್,
ಭಾರತದಲ್ಲಿನ ಸಾಲದ ಹೊರೆಯ ಬಗ್ಗೆ ನನಗೆ ಗೊತ್ತಿಲ್ಲ, ಪುರುಸೊತ್ತಿದ್ದಾಗ ನೋಡಿ ಹೇಳುತ್ತೇನೆ.
ಓಂಕಾರ್,
ಒಳ್ಳೇ ಲೆಕ್ಕಾನೇ ಹಾಕಿದ್ದೀರ ಸಾರ್ ನೀವು! :-)
ಹರೀಶ್,
ಪಾಪ ಹೋಗಲಿ ಚಿತ್ರಗುಪ್ತನನ್ನು ಸುಮ್ನೇ ಬಿಡಿ, ಅವನೇನಾದರೂ ಸತ್ತರೆ ಅವನ ಕಷ್ಟನಷ್ಟವನ್ನು ಲೆಕ್ಕಾ ಇಡೋರು ಯಾರು?
ವಿಕಾಸ್,
ಯಾವ ಗಾದೆ ಹೇಳಿ, ನಾನು ಇದೇ ರೀತಿ ಬಳಸೋದು ಯಾವಾಗಲೂ...
Post a Comment