ಓಡುವುದೇ ಗುರಿ...
ನಾವು ಗ್ರೇಡ್ ಸ್ಕೂಲಿನಲ್ಲಿದ್ದಾಗ ನಮಗೆ "ಪರೀಕ್ಷೆ" ಎನ್ನುವ ಈ ರೀತಿಯ ಒಂದು ಪದ್ಯ ಇತ್ತು...
ಇತ್ಯಾದಿ ಪ್ರಶ್ನೆಗಳಿಂದ ಕೊನೆಯಾಗುವ ಈ ಪರೀಕ್ಷೆಯ ಪರಿ ಬಹಳ ಇಷ್ಟವಾಗಿತ್ತು... ಇದರಲ್ಲಿ ವರ್ಣಿಸಿರುವ ಈ ಉಪಾದಿಗಳಲ್ಲಿ ಯಾವುದಾದರೊಂದನ್ನು ಯಾರಾದರೂ ಮಾಡುತ್ತಾರೆಯೇ ಎಂದು ಆಲೋಚಿಸಿ ಸೋಜಿಗಗೊಳ್ಳುವ ಕ್ಷಣಗಳನ್ನು ಅಂದಿನ ಕನ್ನಡ ತರಗತಿಗಳು ತಂದುಕೊಟ್ಟಿದ್ದವು. ಈ ಎಲ್ಲ ಬಲ ಕುಶಲ ಸಾಹಸಗಳನ್ನು ಯೋಚಿಸಿಕೊಂಡರೆ ಇತ್ತೀಚಿನ ದಿನಗಳಲ್ಲಿ "ಓಡು"ವುದಕ್ಕೆ ಹೆಚ್ಚಿನ ಜನರು ಒಲವು ತೋರಿಸುತ್ತಾರಾದ್ದರಿಂದ, ಓಡುವುದನ್ನು ಕುರಿತು ಧೀರ್ಘವಾಗಿ ಆಲೋಚಿಸಿಕೊಂಡಾಗ ಈ ಲೇಖನ ಹುಟ್ಟಿತು.
***
ಕ್ರಿಸ್ತಪೂರ್ವ 490 ರಲ್ಲಿ ಗ್ರೀಸ್‌ನ ಫೈಡಿಪಿಡಿಸ್ ಎಂಬಾತ ಮ್ಯಾರಥಾನ ಪಟ್ಟಣದಿಂದ ರಾಜಧಾನಿ ಏಥೆನ್ಸ್‌ವರೆಗಿನ ದೂರ (26.2 ಮೈಲಿ ಅಥವಾ 42 ಕಿ.ಮಿ.) ದೂರವನ್ನು ಓಡಿ ಕ್ರಮಿಸಿದ. ಗ್ರೀಕ್ ಸೈನಿಕರು ಪರ್ಶಿಯನ್‌ರ ವಿರುದ್ಧ ಗೆದ್ದ ಸಂದೇಶವನ್ನು ಸಾರುವುದು ಅವನ ಕೆಲಸವಾಗಿತ್ತು. ಆ ದೂರವನ್ನು ಕ್ರಮಿಸಿ, ಅವನು ಓಡಿ ನಿತ್ರಾಣನಾದ್ದರಿಂದ ಸತ್ತು ಹೋದನೆಂದು ಪ್ರತೀತಿ ಇದೆ. ಇದು ನಮ್ಮ ಆಧುನಿಕ "ಮ್ಯಾರಥಾನ್" ಎಂಬ ಕ್ರೀಡೆಗೆ ಹಿನ್ನೆಲೆ. ಫೈಡಿಪಿಡಿಸ್ ಸತ್ತು ಹೋದನೆಂದು ಯಾರೂ ಹೇಳೋದಿಲ್ಲ, ಆದರೆ ಅವನ ನೆನಪಿಗಾಗಿ 26.2 ಮೈಲು ದೂರವನ್ನು ಕ್ರಮಿಸುವ ಓಟ ಇಂದಿಗೂ ಬಹಳ ಜನಪ್ರಿಯವಾಗಿದೆ. ಅಷ್ಟೇ ಅಲ್ಲ, ದಿನೇ ದಿನೇ ಹೆಚ್ಚು ಹೆಚ್ಚು ಜನರನ್ನು ಓಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇಪ್ಪತ್ತಾರು ಮೈಲಿಯ ಮ್ಯಾರಥಾನ್ ಓಟ ಬಹಳ ಹೊತ್ತು ತೆಗೆದುಕೊಳ್ಳುತ್ತದೆ ಹಾಗೂ ಸರಿಯಾಗಿ ಟ್ರೈನಿಂಗ್ ಮಾಡದೇ ಓಡಲು ಸಾಧ್ಯವಿಲ್ಲ ಎಂಬಿತರ ಕಾರಣಗಳಿಗಾಗಿ ದೊಡ್ಡ ಮ್ಯಾರಥಾನ್ ಓಟದ ಕಸಿನ್‌ಗಳಾಗಿ ಅರ್ಧ ಮ್ಯಾರ್‌ಥಾನ್ (13.1 ಮೈಲು), 10ಕೆ (6.2 ಮೈಲು), 5ಕೆ (3.1 ಮೈಲು), ಇತ್ಯಾದಿಗಳೂ ಇವೆ. ಮ್ಯಾರಥಾನ್ ಎನ್ನುವ ಕ್ರೀಡೆಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡ್ಯೊಯ್ಯುವ ನೆಲೆಯಲ್ಲಿ ಆಧುನಿಕ ಕ್ರೀಡಾಳುಗಳು, 50 ರಿಂದ 200 ಮೈಲಿಯ ದೂರದ ಅಲ್ಟ್ರಾ ಮ್ಯಾರಥಾನ್ ಎನ್ನುವ ಬಗೆಯನ್ನು ಕಂಡುಕೊಂಡಿದ್ದಾರೆ. ಈ ಅಲ್ಟ್ರಾ ಮ್ಯಾರಥಾನ್‌ಗಳು ಕೆಲವೊಮ್ಮೆ ಕೆಲವು ದಿನಗಳ ವರೆಗೆ ನಡೆಯುವುದೂ ಉಂಟು (ರಾತ್ರಿ ಮತ್ತು ಹಗಲೂ ಸೇರಿ).
ಈ ಓಡುವುದರ ಹಿಂದಿನ ವಿಶೇಷತೆಯನ್ನು ತಿಳಿದುಕೊಳ್ಳೋಣ. ಈ ಆಧುನಿಕ ಪ್ರಪಂಚದಲ್ಲಿ ಯಾರಾದರೂ ಏಕೆ 26 ಮೈಲಿಗಳ ದೂರವನ್ನು ಓಡುತ್ತಾರೆ, ಅದರಿಂದ ಸಿಗುವ ಮಜವೇನು? ಅದರ ಹಿಂದಿನ ರಹಸ್ಯವೇನು?
ಪ್ರಾಣಿ ಸಂಕುಲದಲ್ಲಿ ಎರಡು ಕಾಲಿನ ಮೇಲೆ ಓಡಾಡುವ ಅನೇಕ ಪಕ್ಷಿ-ಪ್ರಾಣಿ ಪ್ರಬೇಧಗಳಿದ್ದರೂ ಮನುಷ್ಯನಷ್ಟು ನೇರವಾಗಿ ನಿಲ್ಲುವಂತಹ ದೈಹಿಕ ಕ್ಷಮತೆ ಇನ್ನೊಂದು ಪ್ರಾಣಿಗೆ ವಿಕಾಸಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ಬಂದಿರಲಾರದು. ಹುಟ್ಟುವಾಗ ಅತ್ಯಂತ ಅಸಹಾಯಕವಾಗಿ ಹುಟ್ಟುವ ನಾವು ಅದೆಷ್ಟು ಬೇಗ ನಮ್ಮ ದೈಹಿಕ ಸಮತೋಲನವನ್ನು ಕಂಡುಕೊಂಡು ನಿಲ್ಲುತ್ತೇವೆ. ಒಮ್ಮೆ ನಿಂತೆವೆಂದರೆ ಓಡುವುದೇ ಗುರಿ... ಈ ಕಾರಣಕ್ಕಾಗಿಯೇ ಕವಿ ನಿಸಾರ್ ಅಹ್ಮದ್ ಅವರು ತರುಣ ಮಿತ್ರನಿಗೆ ಎಂಬ ಕವನದಲ್ಲಿ "ಓಡುವುದೇ ಗುರಿಯೇ? ಓಡುವುದಿರಲಿ, ನಡುನಡುವೆ ನಿಂತು ನೋಡುವ ತಾಳ್ಮೆಯೂ ನಿನಗೆ ಬರಲಿ" ಎಂದು ಹೇಳಿರಬೇಕು. ಹಿಂದಿನ ಕಾಲದಲ್ಲಿ ಓಡುವುದು ನಿಜವಾಗಲೂ ಗುರಿಯಾಗಿದ್ದಿತು... ಗವಿಗಳಲ್ಲಿ ವಾಸಿಸುತ್ತಿದ್ದ ನಮ್ಮ ಪೂರ್ವಜರು ಪ್ರಾಣಿಗಳಿಗಿಂತ ಹೆಚ್ಚು ವೇಗವಾಗಿ ಓಡಬಲ್ಲವರಾಗಿದ್ದರು, ಅವರು ಅಂದಿನ ದಿನಗಳಲ್ಲಿ ಬೇಟೆಯಾಡಿ ಬದುಕಿದ್ದರಿಂದಲೇ ನಾವು ಇಂದಿಗೂ ಜೀವಂತವಾಗಿರುವುದು, ಅಷ್ಟೇ ಅಲ್ಲ, ನಮ್ಮ ವಂಶಾವಳಿಗಳಲ್ಲಿ ಓಡುವುದು ಸಹಜವಾಗಿರುವುದು... ಆದ್ದರಿಂದ ನಡೆಯಬಲ್ಲವರೆಲ್ಲ ಓಡಬಲ್ಲರು ಎಂದರೆ ತಪ್ಪೇನಿಲ್ಲ! ಓಡುವುದಕ್ಕೋಸರವೆಂದೇ ಮಿಲಿಯನ್ನುಗಟ್ಟಲೆ ವರ್ಷಗಳ ? ಕಾಲಮಾನದಲ್ಲಿ ನಮ್ಮ ಶರೀರ ತಕ್ಕನಾಗಿ ಅನುವಾಗಿದೆ. ನಮ್ಮ ದೈಹಿಕ ಸಮತೋಲನವನ್ನು ಕೇವಲ ಪುಟ್ಟ ಪಾದಗಳಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ನಾವು ನಿಲ್ಲುವ, ನಡೆಯುವ ಮತ್ತು ಓಡುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಕಾಸ ವಾದದಲ್ಲಿ ನಾವು ಹೇಗೆ ಬೆಳೆದು ಬಂದಿದ್ದೇವೆ ಎಂದು ಆಶ್ಚರ್ಯವಾಗುತ್ತದೆ.
ಇಂದಿನ ಟೆಕ್ನಾಲಜಿ ಕೆಲಸಗಾರರು ಹೆಚ್ಚಿನ ಮಟ್ಟಿಗೆ ಆಫೀಸುಗಳಲ್ಲಿ ದಿನಕ್ಕೆ ಎಂಟು ಘಂಟೆ ಕೂತು ಮೀಟಿಂಗುಗಳಲ್ಲಿ ಕಳೆಯುವ ಅಭ್ಯಾಸಕ್ಕೆ ಒಗ್ಗಿಕೊಂಡು ಹೋಗಿದ್ದಾರೆ ಎನ್ನಬಹುದು. ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ರೋಗಗಳಿಗೆ ನಾವು ದಕ್ಷಿಣ ಏಷ್ಯಾದ ಜನರು ಬಲಿಯಾಗುವುದನ್ನು ನಾವು ಅಂಕಿ-ಅಂಶಗಳಲ್ಲಿ ನೋಡಬಹುದು. ಈ ನಿಟ್ಟಿನಲ್ಲಿ ಒಳಾಂಗಣ ಜಿಮ್‌ನಲ್ಲಿ ಟ್ರೆಡ್‌ಮಿಲ್ ಉಪಯೋಗಿಸಿಕೊಂಡಾಗಲೀ, ಅಥವಾ ಹೊರಾಂಗಣದಲ್ಲಿ ಒಂದು ಸುತ್ತು ಓಡಿದರಾಗಲೀ ದೇಹದ ನರನಾಡಿಗಳಲ್ಲಿ ಸಂವೇದನೆ ಉಂಟಾಗಿ ಓಡುವವರಿಗೆ ಒಂದು ರೀತಿಯ ಸ್ಪೂರ್ತಿ ಸಿಕ್ಕಂತಾಗುವುದು ಅವರ ಅನುಭವದ ಮಾತು. ಕೆಲವರಿಗೆ ಓಡುವುದು ಒಂದು ರೀತಿಯ ಮೆಡಿಟೇಷನ್‌ಗೆ ಸಮನಾದರೆ, ಇನ್ನು ಕೆಲವರಿಗೆ ಓಡುವುದು ಒಂದು ರೀತಿಯ "ಕೆಲಸ", ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸುವ ಆತುರ. ಇನ್ನು ಕೆಲವರಿಗೆ ಹೊರಗಡೆ ನಿಸರ್ಗದ ಜೊತೆಗೆ ಬೆರೆಯುವ ಒಂದು ಅವಕಾಶ. ಕೆಲವರು ಸೂರ್ಯೋದಯಕ್ಕೂ ಮೊದಲಿನ ಸದ್ದಿಲ್ಲದ, ತಣ್ಣಗಿನ ವಾತಾವರಣವನ್ನು ಆಯ್ದುಕೊಂಡರೆ, ಇನ್ನು ಕೆಲವರು ಸಂಜೆಯ ಹೊತ್ತನ್ನು ಆರಿಸಿಕೊಳ್ಳುವುದುಂಟು.
ಓಡುವುದರಿಂದ ಉಪಯೋಗಗಳು ಎಷ್ಟೋ, ಸರಿಯಾದ ರೀತಿಯಲ್ಲಿ ಓಡದಿದ್ದರೆ ಅದರಿಂದ ಅಷ್ಟೇ ಅನಾನುಕೂಲಗಳೂ ಇವೆ. 68 ಕೆಜಿ (150 ಪೌಂಡ್) ತೂಕ ಇರುವ ಒಬ್ಬ ವ್ಯಕ್ತಿ ಹತ್ತು ನಿಮಿಷಕ್ಕೆ ಒಂದು ಮೈಲು ಓಡುತ್ತಾ ಆರು ಮೈಲು (ಒಂದು ಘಂಟೆಯಲ್ಲಿ) ದೂರವನ್ನು ಓಡಿದರೆ ಸುಮಾರು 750 ಕ್ಯಾಲೊರಿ ಖರ್ಚು ಮಾಡಿದಂತಾಗುತ್ತದೆ. ಇದೇ ಸಮಯದಲ್ಲಿ, ಆ ವ್ಯಕ್ತಿಯ ಹೃದಯದ ಬಡಿತ ಕೂಡ ಎರಡರಷ್ಟು ವೇಗವಾಗಿ ಹೊಡೆದುಕೊಳ್ಳತೊಡಗುತ್ತದೆ. ಹೀಗೆ, ದೇಹವನ್ನು ಅತಿಯಾಗಿ "ಶಿಕ್ಷಿಸುವ" ಕಾಯಕವಾದ ಓಡುವಿಕೆ, ಎಲ್ಲರಿಗೂ ಹೇಳಿ ಮಾಡಿಸಿದ್ದಲ್ಲ. ಅಕಸ್ಮಾತ್, ತನಗೆ ಗೊತ್ತಿಲ್ಲದೇ ಹೃದಯ ಸಂಬಂಧಿ ಖಾಯಿಲೆಗೆ ತೊಡಗಿದ ವ್ಯಕ್ತಿ, ಸ್ಥಳದಲ್ಲೇ ಸತ್ತು ಹೋಗುವ ಅಪಾಯವಿದೆ. ಆದ್ದರಿಂದ, ಓಡುವ ಇಷ್ಟ ಇರುವ ಯಾರಾದರೂ ತಮ್ಮ ಓಡುವ ವೇಗ ಹಾಗೂ ದೂರವನ್ನು ನಿಧಾನವಾಗಿ ಹೆಚ್ಚಿಸಿಕೊಂಡು ತಮ್ಮ ಫಿಟ್‌ನೆಸ್ ಅನ್ನು ಪರೀಕ್ಷಿಸಿಕೊಳ್ಳುವುದು ಸಾಮಾನ್ಯ.
ಮೊದಮೊದಲು ಅರ್ಧ, ಒಂದು, ಎರಡು... ಮೂರು ಹೀಗೆ ನಿಧಾನವಾಗಿ ಮೈಲುಗಳನ್ನು ಓಡುತ್ತಾ ಬಂದಾಗ ದೇಹಕ್ಕೆ ಅಭ್ಯಾಸವಾಗತೊಡಗಿ ನಿಧಾನವಾಗಿ ದಿನೇದಿನೇ ಮೈಲುಗಳು ಹೆಚ್ಚುತ್ತಾ ಹೋಗುತ್ತವೆ. ಹೀಗೆ ಒಂದೆರಡು ವರ್ಷ ವಾರಕ್ಕೆ ಕನಿಷ್ಥ ಪಕ್ಷ ಮೂರು ಬಾರಿಯಾದರೂ ಓಡುತ್ತಾ ಹೋದರೆ ಆಗ ಮ್ಯಾರಥಾನ್ ಓಡುವಷ್ಟು ಆತ್ಮವಿಶ್ವಾಸ ಮೂಡುತ್ತದೆ. ಓಡುವುದಕ್ಕೆ ಅನುವಾಗುವಲ್ಲಿ ದೇಹದ ಕೆಲಸ ಎಷ್ಟು ಮುಖ್ಯವೋ ಮನಸ್ಸಿನ ಕೆಲಸವೂ ಅಷ್ಟೇ ಮುಖ್ಯ. ಅವರೆಡರ ತಾಳಮೇಳವಿಲ್ಲದಿದ್ದಲ್ಲಿ ಒಂದು ಮೈಲು ಓಡುವುದೂ ಅಸಾಧ್ಯವಾದೀತು.
***
ನಾನೇಕೆ ಓಡುತ್ತೇನೆ?
ಈ ಪ್ರಶ್ನೆಯನ್ನು ಕೇಳಿಕೊಂಡಾಗಲೆಲ್ಲ ಅನೇಕ ಉತ್ತರಗಳು ಹೊಳೆಯುತ್ತವೆಯಾದರೂ, ಅವುಗಳಲ್ಲೆಲ್ಲಾ ಮುಖ್ಯವಾದುದು "ಅದು ಒಂದು ರೀತಿಯ ಮೆಡಿಟೇಶನ್ ಇದ್ದ ಹಾಗೆ". You compete against yourself and you meditate as you run!
***
ಕಳೆದ ವರ್ಷ (2019) ಉತ್ತರ ಅಮೇರಿಕದಲ್ಲಿ ಮ್ಯಾರಥಾನ್ ಓಟವನ್ನು ಪೂರೈಸಿದವರ ಸಂಖ್ಯೆ:
ಸತ್ವವನು ಪರಿಕಿಸುವ ಸಮಯ ಬಂದಿಹುದು
ಬಲ ಕುಶಲ ಸಾಹಸಗಳಿವೆ ನೋಡು|
ಆರು ಯೋಜನ ನೀರನೀಜಿ ಬರಬಲ್ಯಾ?
ನೂರು ಮೈಲಿಯ ಓಟ ಓಡಬಲ್ಯಾ?
ಮದಿಸಿದ ಸಲಗವ ಕಟ್ಟಿ ಹಿಡಿಯಬಲ್ಯಾ?

Month | Races | Finishers |
January | 40 | 28,589 |
February | 46 | 14,220 |
March | 71 | 46,252 |
April | 73 | 55,060 |
May | 86 | 42,352 |
June | 61 | 23,344 |
July | 25 | 9,012 |
August | 42 | 6,744 |
September | 94 | 19,964 |
October | 107 | 122,194 |
November | 61 | 90,903 |
December | 29 | 41,050 |
2019 gÀ°è 53,518 d£ÀgÀÄ £ÀÆå AiÀiÁPïð ¹n ªÀiÁågÀxÁ£ï C£ÀÄß ¥ÀÇgÉʹzÀgÀÄ.
GvÀÛgÀ CªÉÄÃjPÀzÀ mÁ¥ï 10 ªÀiÁågÀxÁ£ï NlªÀ£ÀÄß DAiÉÆÃf¹zÀ £ÀUÀgÀUÀ¼ÀÄ ºÁUÀÆ ¥ÀÇgÉʹzÀªÀgÀÄ.
Race | Finishers |
New York City Marathon | 53,518 |
Chicago Marathon | 45,858 |
Boston Marathon | 26,632 |
Los Angeles Marathon | 20,081 |
Honolulu Marathon | 18,804 |
Marine Corps Marathon | 18,357 |
Walt Disney World Marathon | 11,968 |
Philadelphia Marathon | 10,068 |
California International Marathon | 7,504 |
Twin Cities Marathon | 6,747 |
NqÀ®Ä DtªÁVgÀĪÀ d£À¸ÁUÀgÀ!
No comments:
Post a Comment