ರಸ್ತೇ ಮೇಲಿನ ಗುಂಡಿ
ನಮ್ಮನೆಯಿಂದ ಸ್ವಲ್ಪ ದೂರದಲ್ಲಿರೋ ಹೈವೇ ಮೇಲೆ ಹೋದಾಗ್ಲೆಲ್ಲಾ ಇತ್ತೀಚೆಗೆ ರಸ್ತೆ ನಡುವೆ ಬಿದ್ದಿರೋ ಒಂದು ಸಣ್ಣ ಗುಳಿ ಅಥವಾ ಹೊಂಡ ನನ್ನ ಪರಿಚಯ ಮಾಡ್ಕೊಂದಿದೆ, ಕಾರಿನ ಚಕ್ರಗಳು ಅದರ ಮೇಲೆ ಹೋದಂತೆಲ್ಲ ಅದರ ವೇಗದ ಆಧಾರದ ಮೇಲೆ ಒಂದೋ ಎರಡೋ ಪದವನ್ನು ಅದು ಅರಚುತ್ತೆ, ಕೆಲವೊಂದ್ ಸರ್ತಿ ಅದು ’ಹಾಯ್’, ’ಹಲೋ’ ಅಂಥಾ ಕೇಳ್ಸಿದ್ರೂ ಇನ್ನ್ ಕೆಲವು ಸಲ ಅದರದ್ದೇ ಏನೋ ಒಂದು ಗಾಥೆ ಇರಬಹುದೇನೋ ಅನ್ನೋ ಅನುಮಾನಾನೂ ಬಂದಿದೆ.
ನಿಮಗೆಲ್ಲಾ ಅನ್ನಿಸ್‌ಬೋದು, ಈ ರಸ್ತೆ ನಡುವಿನ ಹೊಂಡಗಳ ಜೊತೆ ನಮ್ಮದೇನ್ ಮಾತೂ ಅಂತ. ಅವುಗಳ ಮಾತಿನಲ್ಲೂ ಒಂದು ಲಾಲಿತ್ಯ ಇರುತ್ತೇ, ಪ್ರೀತಿ ಇರುತ್ತೆ ಎಲ್ಲದಕ್ಕಿಂತ ಮುಖ್ಯವಾಗಿ ನೆಟ್ಟಗೆ ಇದ್ದದ್ದನ್ನ ಸರಿಯಾಗಿ ಇಟ್ಟುಕೊಳ್ಳದೇ ಹೋದ್ರೆ ಒಂದಲ್ಲ ಒಂದು ಯಾವ ಸ್ಥಿತಿಯನ್ನು ತಲುಪಬಹುದು ಅನ್ನೋ ಸತ್ಯಾಂಶ ಇರುತ್ತೆ. ಇವುಗಳನ್ನೆಲ್ಲಾ ನೋಡಿ, ಕೇಳಿದಾಗಲೆಲ್ಲಾ ನಾನು ಅವುಗಳಿಂದ ಏನಾದ್ರೊಂದನ್ನ ಕಲಿಯೋದು ಇದ್ದೇ ಇರುತ್ತಾದ್ದರಿಂದ ಅವುಗಳ ಜೊತೆಗಿನ ಒಡನಾಟವನ್ನು ಪುರಸ್ಕರಿಸೋದು. ಉದಾಹರಣೆಗೆ, ದಿನವೂ ನಿಮಗೆ ಎದುರಾಗುವ ಸ್ನಾನದ ಕೋಣೆ ಅಥವಾ ಶವರ್‌ನ ಗೋಡೆಗಳಿಗೆ ಆತ್ಮೀಯತೆಯಿಂದ ಅಂಟಿಕೊಂಡಿರುವ ಕೂದಲುಗಳನ್ನು ಸ್ವಲ್ಪ ಸರಿಯಾಗಿ ನೋಡಿ. ಅವುಗಳಲ್ಲಿ ಅದೇನೋ ಒಂದು ಅದಮ್ಯ ಬಲವಿದೆ, ಚೈತನ್ಯವಿದೆ ಅಂತ ಅನ್ನಿಸಿದರೂ ಅನ್ನಿಸಬಹುದು. ಇಲ್ಲಾ ಅಂತಂದ್ರೆ ಎರಡು ನಿರ್ಜೀವ ವಸ್ತುಗಳ ನಡುವೆ ಒಂದು ಬಂಧ ಬೆಳೆಯೋದಾದ್ರೂ ಹೇಗೆ? ನಮಗೆ ಗೊತ್ತಿರೋ ಯಾವುದೋ ರಸಾಯನಿಕ ಅಥವಾ ಎಲೆಕ್ಟ್ರೋ ಸ್ಟ್ಯಾಟಿಕ್ ಸಂಬಂಧಗಳಿಂದ ಅಂಥಾ ಅನುಬಂಧಗಳನ್ನು ಅಳೆಯೋದಾದ್ರೂ ಹೇಗೆ? ಇಂಥಾ ಸಂಬಂಧಗಳ ಮೇಲೆ ಬೆಳಕು ಚೆಲ್ಲೋದಕ್ಕೋಸ್ಕರವೇನೋ ಎನ್ನೋ ಹಾಗೆ ನಮ್ಮಲ್ಲಿನ ಬಾತ್‌ರೂಮ್ ಟಬ್‌ಗಳನ್ನು ಬೆಳ್ಳಗೆ ಮಾಡಿರೋದು ಅನ್ನೋದು ನನ್ನ ಯಾವತ್ತಿನ ಅನುಮಾನ.
ಇನ್ನು ರಸ್ತೆ ಮೇಲಿನ ಗುಂಡಿ ವಿಚಾರಕ್ಕೆ ಬರೋಣ. ಅದರ ಆತ್ಮೀಯತೆಗೆ ನಾನು ಯಾವ ಹೆಸರನ್ನೂ ಇನ್ನೂ ಕೊಟ್ಟಿರಲಿಲ್ಲ. ಒಂದು ರೀತಿ ಅಕ್ವೇರಿಯಮ್‌ನಲ್ಲಿರೋ ಮೀನುಗಳಿಗೆ ನಾವು ಯಾವತ್ತೂ ಹೆಸರು ಕೊಟ್ಟಿಲ್ಲವೋ ಹಾಗೆ ಏಕೆಂದ್ರೆ ಅವು ಎಷ್ಟೊತ್ತಿಗೆ ಬೇಕಾದರೂ ಮರೆಯಾಗಿ ಹೋಗಬಹುದು ಅನ್ನೋ ಕಾರಣ. ಈ ಗುಂಡಿ ನನಗೆ ಹೇಳೋ ಒಂದೋ ಎರಡೋ ಪದಗಳಲ್ಲಿ ಬೇಕಾದಷ್ಟು ತತ್ವಗಳೇ ಅಡಗಿರುತ್ತೆ. ಎಲ್ಲವೂ ನೆಟ್ಟಗೆ ನುಣ್ಣಗೆ ಇದ್ದಂಥ ರಸ್ತೆಗಳಲ್ಲೂ ಹೊಂಡಗಳು ಬೀಳುತ್ತವೆ ಎನ್ನುವುದು ಅವುಗಳ ಧ್ಯೇಯವಾಕ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಪಂಚಭೂತಗಳಿಗೆ ತೆರೆದುಕೊಂಡಿರುವುದೂ ಅಲ್ಲದೇ ಪ್ರತಿ ನಿಮಿಷಗಳಿಗೊಮ್ಮೆ ತಮ್ಮ ಮೈಮೇಲೆ ಅದೆಷ್ಟೋ ಭಾರದ ವಾಹನದ ಗಾಲಿಗಳನ್ನು ಹರಿಯಬಿಡುವುದು ಸಾಮಾನ್ಯವೇನಲ್ಲ, ಅದಕ್ಕೆಂತಹ ಹತ್ತಾನೆಯ ಬಲದ ಗುಂಡಿಗೆ ಇರಬೇಡ. ಅದೇ ರಸ್ತೆಯಲ್ಲಿ ಹೋಗೋ ವಾಹನಗಳ ಜೊತೆಗೆ ಸಂವಾದಿಸುವ ಛಲವೊಂದಿದ್ದರೆ ಮಾತ್ರ ಸಾಲದು, ತನ್ನ ಮೈ ಮೇಲೆ ಒಂದು ಕ್ಷಣದ ಭಾಗದಷ್ಟು ಕಾಲ ಮಾತ್ರ ಸ್ಪರ್ಷಿಸಿ ಹೋಗೋ ಚಕ್ರಗಳನ್ನು ಮಾತಿಗೆ ತೊಡಗಿಸುವ ಚಾಕಚಕ್ಯತೆಯೂ ಇರಬೇಕು.
ಎಲ್ಲೂ ನನ್ನನ್ನು ಕೇಳ್ತಾರೆ, ’ಓಹ್, ಅಮೇರಿಕದ ರಸ್ತೆಗಳು ನುಣ್ಣಗಿರುತ್ತವಂತೆ!’, ಈ ರೀತಿಯ ಉದ್ಗಾರಗಳಿಗೆ ನಾನು ಸೊಪ್ಪು ಹಾಕೋದೇ ಇಲ್ಲ. ಅಮೇರಿಕನ್ ರಸ್ತೆಗಳ ಬಗ್ಗೆ ಹೀಗೆ ಹೇಳೋರಿಗೆ ಅವುಗಳ ಬಗ್ಗೆ ಏನು ಗೊತ್ತು? ಕಾರಿದ್ದೋರು ಹೈವೇ ಹತ್ತೋ ಹಾಗೆ ಹೈವೇಗಳು ಗುಂಡೀ ಬೀಳೋದು ಸಾಮಾನ್ಯ ಅದು ಯಾವತ್ತಿದ್ದರೂ ಎಲ್ಲಿದ್ದರೂ ಹೊಂದುವಂತಹ ಒಂದು ಸಣ್ಣ ತರ್ಕ ಹಾಗೂ ತತ್ವ. ಹಾಗಿದ್ದ ಮೇಲೆ ತಮ್ಮೂರಿನ ರಸ್ತೆಗಳಲ್ಲಿನ ಅಷ್ಟೊಂದು ಗುಂಡಿಗಳ ಜೊತೆಗೆ ಹಗಲೂ ಇರುಳೂ ಸಂವಾದವನ್ನು ನಡೆಸಿಕೊಂಡೂ ರಸ್ತೆಗಳ ಮೇಲಿನ ಗುಂಡಿಗಳಿಗೇ ಅವಮಾನವಾಗುವ ಹಾಗೇ ಅದ್ಯಾವುದೋ ಕಣ್ಣೂ ಕಾಣದ ದೂರದೂರಿನ ರಸ್ತೆಗಳು ನುಣುಪಾಗಿರುತ್ತವೆ ಎಂದುಕೊಳ್ಳುವುದು ಯಾವ ನ್ಯಾಯ. ನಮ್ಮೂರಿನಲ್ಲಿರುವ ರಸ್ತೆಗಳಲ್ಲಿ ಕಂಡುಬರುವ ಕೆಲವೊಮ್ಮೆ ರಸ್ತೆಗಳಿಗಿಂತ ಗುಂಡಿಗಳೇ ತುಂಬಿಕೊಂಡಿರುವ ಪ್ರದೇಶಗಳಲ್ಲಿ ದಿನವೂ ವಾರ್ತಾಲಾಪ ನಡೆಸಿಕೊಂಡು ಹೋಗುವುದಕ್ಕಿಂತ ಇಲ್ಲಿನ ರಸ್ತೆಗಳಲ್ಲಿನ ಒಂದೆರಡು ಗುಂಡಿಗಳ ಬದುಕಿನ ಬಗ್ಗೆ ಒಂದಿಷ್ಟು ಕುತೂಹಲವನ್ನು ತೋರಿದರೂ ಸಾಕು, ಅವುಗಳಲ್ಲಿ ಅದೆಷ್ಟೋ ದೊಡ್ಡ ದೊಡ್ಡ ಕಥೆಗಳೇ ಹುದುಗಿವೆ. ರಾತ್ರೋ ರಾತ್ರಿ ಹುಟ್ಟಿಬೆಳೆಯುವ ನಾಯಿಕೊಡೆಗಳ ಹಾಗೆ ಇವತ್ತಿರದ ಗುಂಡಿಗಳು ನಾಳೆ ಎಲ್ಲಿ ಬೇಕಂದರಲ್ಲಿ ಎದ್ದು ಬಿಟ್ಟಾವು, ಐದು-ಹತ್ತು ಟನ್ ಭಾರವನ್ನು ಹೊರುವ ಟ್ರಕ್‌ಗಳು ಮಾತ್ರ ಎಂದು ಫಲಕಗಳನ್ನು ಹಾಕಿದರೂ ಮುವತ್ತು-ನಲವತ್ತು ಟನ್ನ್ ತೂಕವನ್ನು ಬಡ ರಸ್ತೆಗಳ ಮೇಲೆ ಕೊಂಡೊಯ್ಯುವ ಮೂಢರಿರುವವರೆಗೆ. ರಾತ್ರೋ ರಾತ್ರಿ ಹುಟ್ಟುವ ಗುಂಡಿಗಳನ್ನು ರಾತ್ರೋ ರಾತ್ರಿ ಮುಚ್ಚಿ ಏನೇನೂ ಆಗಿಲ್ಲ ಎಂದು ತೋರಿಸುವಷ್ಟು ನಯ-ನಾಜೂಕಿನಿಂದ ಕೆಲಸ ಮಾಡುವವರನ್ನು ಕಲೆ ಹಾಕಿ ಈ ಗುಂಡಿಗಳಿಗೆ ಒಂದು ಕಾಯಕಲ್ಪ ಕೊಡದೇ ಹೋದರೆ ಗುಂಡಿಗಳು ಬೆಳೆದು ತಮ್ಮದೇ ಒಂದು ಸಂಘವನ್ನು ಕಟ್ಟಿಕೊಂಡು ಆಶ್ರಯ ನೀಡಿದ ರಸ್ತೆಗೇ ಕುತ್ತು ತಂದುಬಿಡಬಹುದಾದ ಆಪತ್ತಿದೆ. ಆದ್ದರಿಂದಲೇ ಅಮೇರಿಕದ ರಸ್ತೆಗಳು ಹಗಲೂ-ರಾತ್ರಿ ಎನ್ನದೇ ನಿರ್ಮಾಣಗೊಂಡವು ಜೊತೆಗೆ ಅವುಗಳ ದುರಸ್ತಿ ಕೂಡಾ ಹಾಗೇ ನಡೆದುಕೊಂಡು ಬಂದಿದೆ.
ಈ ಸಾರಿ ಈ ಹೆಸರಿಡದ ಗುಂಡಿ ಬಹಳ ಬೇಸರವಾಗಿದ್ದಂತೆ ಕಂಡುಬಂತು. ಹೆಚ್ಚು ಟ್ರಾಫಿಕ್ ಇರದಿದ್ದ ಕಾರಣ ನಾನು ನಿಧಾನಕ್ಕೆ ಅದರ ಮೇಲೆ ಕ್ರಮಿಸಿ ಒಂದು ಕ್ಷಣದ ಕಾಂಟ್ಯಾಕ್ಟ್‌ನಲ್ಲಿ ಅದರ ಮನದಾಳವನ್ನು ಕಣ್ಣಿನ ಡಾಕ್ಟರುಗಳು ರೆಟಿನಾವನ್ನು ನೋಡುವ ಹಾಗೆ ನೋಡಿದೆ. ಅದರಲ್ಲಿ ನಲಿವಿಗಿಂತಲೂ ಹೆಚ್ಚು ನೋವಿತ್ತು, ಹಿಂದಿನ ಚಕ್ರಗಳು ಅದೇ ಗುಂಡಿಯ ಮೇಲೆ ಹೋಗಿ ಕೆದಕಿ ನೋಡಲಾಗಿ ಇಂದು ರಾತ್ರಿ ಆ ಗುಂಡಿಯನ್ನು ಮುಚ್ಚಿ ಸರಿ ಮಾಡುತ್ತಾರೆ ಎನ್ನುವ ಮುನ್ಸೂಚನೆ ಸಿಕ್ಕಿತು. ನಾನಂದುಕೊಂಡಿದ್ದೆ, ಇಲ್ಲಿ ಈಗಾಗಲೇ ಸೊನ್ನೆಯ ತಾಪಮಾನ ಬಿದ್ದು ಕೊರೆಯುವ ಛಳಿ ಇದೆ, ಜೊತೆಗೆ ಒಂದೆರಡು ಬಾರಿ ಹಿಮಪಾತವೂ ಆಗಿದೆ. ಈ ಛಳಿ, ಮಳೆಯಲ್ಲಿ ರಸ್ತೆಯನ್ನು ಯಾರಾದರೂ ರಿಪೇರಿ ಮಾಡುವುದು ಸಾಧ್ಯವೇ ಎಂದು ಅನಿಸಿದ್ದರೂ ಕಡಿಮೆ ಜನರಿದ್ದೂ ಹೆಚ್ಚು ಮಷೀನುಗಳನ್ನು ಬಳಸುವಲ್ಲಿ, ಹಗಲೂ-ರಾತ್ರಿ, ಮಳೆ-ಛಳಿ-ಗಾಳಿಯಲ್ಲೂ ಕಷ್ಟಪಟ್ಟು ದುಡಿಯುವ ಇವರ ಡೆಡಿಕೇಷನ್ನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ’ಓಹ್, ನಮ್ಮ ಸಿಟಿ, ಕೌಂಟಿಯವರು ಟ್ಯಾಕ್ಸು ತೆಗೆದುಕೊಳ್ಳುತ್ತಾರೆ, ಅವರೇನು ರಸ್ತೆ ರಿಪೇರಿ ಮಾಡಿಸೋದು ಮಹಾ’ ಎಂದು ಯಾರು ಬೇಕಾದರೂ ಮೂಗು ಮುರಿಯಲಿ ಅವರ ಗುಂಡಿಗಳನ್ನು ನಿರ್ಮೂಲನ ಮಾಡುವ ದೃಢತೆಯನ್ನು ಮೆಚ್ಚಲೇ ಬೇಕು.
ಹಿಂದೆ ನಮ್ಮ ಅಜ್ಜೀ ಮನೆಯಲ್ಲಿನ ಸಿಮೆಂಟಿನ ಜಗುಲಿಯಲ್ಲಿ ಯಾರೋ ತೆಂಗಿನಕಾಯಿ ಸುಲಿಯಲು ಹೋಗಿ ಕತ್ತಿಯ ಕಚ್ಚು ತಾಗಿ ಒಂದು ಕಡೆ ಸಿಮೆಂಟ್ ಕಿತ್ತು ಹೋಗಿತ್ತು, ಅದನ್ನು ಎಷ್ಟು ಸರಿ ಮಾಡಿದರೂ ದಿನ ಬಿಟ್ಟು ದಿನ ಅದು ದೊಡ್ಡದಾಗಿ ಬೆಳೆಯುತ್ತಲೇ ಹೋಗಿ ಕೊನೆಗೆ ಇಡೀ ಜಗುಲಿಗೇ ಕುತ್ತು ತಂದಿತ್ತು. ಹಾಗೇ ಇಲ್ಲಿಯ ಪ್ರತಿಯೊಂದು ಗುಂಡಿಯೂ ಬೆಳೆದು ದೊಡ್ಡದಾಗೋದಿಲ್ಲವಲ್ಲ ಎಂಬ ಸಂಶಯ ನನ್ನ ಬೆನ್ನ ಹಿಂದೆ ಇತ್ತು. ಏನೇ ಆಗಲಿ ಇನ್ನೊಂದು ವಾರದಲ್ಲಿ ನೋಡೇ ಬಿಡೋಣ ಎಂದು ಸಂಕಲ್ಪ ಮಾಡಿಕೊಂಡವನಿಗೆ ಮರುದಿನವೇ ಮಹದಾಶ್ಚರ್ಯ. ನನ್ನ ಸ್ನೇಹಿತ ಗುಂಡಿಯಿರಲಿ ಅದು ಈ ಹಿಂದೆ ಅಲ್ಲಿ ಇದ್ದ ಬಗ್ಗೆಯೂ ಯಾವ ಪುರಾವೆ ಇರಲಿಲ್ಲ. ರಾತ್ರೋರಾತ್ರಿ ಯಾವುದೋ ಸೈನ್ಯವೊಂದು ರಸ್ತೆಯ ಮೇಲೆ ಬೀಡು ಬಿಟ್ಟ ಪರಿಣಾಮವೋ ಎಂಬುವಂತೆ ಪೂರ್ಣ ರಸ್ತೆ ತನ್ನ ಮಾಮೂಲಿ ಸ್ಥಿತಿಗೆ ಬಂದಂತಿತ್ತು, ಎಲ್ಲವೂ ಸ್ವಚ್ಛವಾಗಿತ್ತು. ನಮ್ಮೂರಿನಲ್ಲಿ ರಸ್ತೆ ಕಾಂಟ್ರಾಕ್ಟರುಗಳು ಆಕ್ರಮವಾಗಿ ಕಾಡನ್ನು ಕಡಿದು, ಕಟ್ಟಿಗೆಯನ್ನು ಉರಿಸಿ, ಅಳಿದುಳಿದ ಟಾರಿನ ಅಂಶವನ್ನು ರಸ್ತೆ ಬದಿಗೆ ಚೆಲ್ಲಿ ಹೋದಂತೆ ಯಾವ ಗುರುತಾಗಲೀ ಸಿಗ್ನೇಚರ್ ಆಗಲೀ ಕಾಣಸಿಗಲಿಲ್ಲ. ಕಡಿಮೆ ಜನರಿರುವ ಕಡೆ ಕೆಲಸ ಹೆಚ್ಚು ಇರಬೇಕು, ಕೆಲಸ ಹೆಚ್ಚಾದಂತೆ ಧಕ್ಷತೆ ಕಡಿಮೆ ಆಗಬೇಕು ಎಂದುಕೊಂಡಿದ್ದು ಸುಳ್ಳೇ ಆಗಿ ಹೋಯಿತು.
ಏನೇ ಇರಲಿ, ಯಾರೋ ರಾತ್ರೋ ರಾತ್ರಿ ಮಾಡಿದ ಕೆಲಸದ ಗತಿಯಿಂದಾಗಿ ರಸ್ತೆ ಮೇಲಿನ ನನ್ನ ಸ್ನೇಹಿತನೊಬ್ಬನ ತಳಮಳಗಳು ಇನ್ನು ಮುಂದೆ ನನಗೆ ತಿಳಿಯದೇ ಹೋಯಿತು. ತನ್ನ ಅಲ್ಪಾವಧಿಯಲ್ಲಿ ಅದೆಷ್ಟೋ ಜನರಿಗೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ನೆನಪಿಸಿದ ಗುಂಡಿಯನ್ನು ನಾವು ನೆನಪಿಡಬೇಕಾದ್ದು ನ್ಯಾಯವಲ್ಲವೇ?
6 comments:
ಸರ,
ನಮ್ಮ PWD (ಪಕ್ಕಾ ಒತ್ತುವ ಡಿಪಾರ್ಟ್ಮೆಂಟ್) ಅವರು ಯೇನಾದ್ರ ರಸ್ತೆ repair ಮಾಡಿದ್ರು ಅಂದ್ರ ಮತ್ತೆ ಒಂದು ವಾರದಾಗ ಗುಂಡಿ ತಿರುಗಿ ಬರತೈತಿ.
ಮಠ
bareyOke vishya bEDvebEDa ree nimage!..take it as a complement:)
guMDi, maragaLu, manegaLu ellavannu mAtADiskoMDu hOgbEku eMdE...i take back roads to work..
ಮಠ,
ಯಾವಾಗ್ ನೋಡಿದ್ರೂ ಚಾ ಕುಡಿಯೋ ಮಂದೀ ನೋಡಿ ನಾವು ’ಪಕ್ಕೋಡಾ ವಡೆ ದೋಸೆ’ ಅಂತ ಹೆಸರಿಟ್ಟಿದ್ದಿವ್ರಿ. ಅವರುಗಳು ರಸ್ತೆ ರಿಪೇರಿ ಮಾಡೋದಿರಲಿ ತಮ್ಮ ತಮ್ಮ ವಾಹನಗಳನ್ನ ನೆಟ್ಟಗಿಟ್ಟಕೊಂಡ್ರೆ ಅದೇ ಮಹಾ ಪುಣ್ಯದ ವಿಷ್ಯಾ ನೋಡ್ರಿ
ಅನಾಮಧೇಯ,
ಮತ್ತಿನ್ನೇನ್ ಮಾಡೋದ್ ಹೇಳಿ, ಸಹೃದಯರ್ಯಾರೂ ಫೋನ್ ಮಾಡಂಗಿಲ್ಲ ಜೊತೆಗೆ ನಾನ್ ಹೋಗೋ ಬ್ಯಾಕ್ ರೋಡ್‌ಗಳಲ್ಲಿನ ಪರಿಸರ ದಿನಕ್ಕೊಂದೊಂದ್ ಕಥಾನಕವನ್ನು ಬಿಚ್ಚಿಕೊಂಡಿರುತ್ತೆ. ಅವರೂ ಇವ್ರಿಗೆ ಮಾತಾಡ್ಸಿ ಅವರಿಗಿಲ್ಲಿ ಬಯ್ಯೋ ಬದಲಿಗೆ ಈ ಗುಂಡಿ, ಮರಗಿಡ, ಒಣದ್ರಾಕ್ಷಿ ಮುಂತಾದವುಗಳೇ ಅಪ್ಯಾಯಮಾನವಾಗತೊಡಗಿವೆ ನೋಡಿ, ಸದ್ಯಾ ನೀವಾದ್ರೂ ನಮ್ಮ್ ಪಕ್ಷಕ್ಕ್ ಸೇರಿದ್ದೀರಲ್ಲಾ ಅಷ್ಟೇ ಸಾಕು!
ಅಬ್ಬ! ಅದು ಇದು ಅನ್ನೋ ಹಾಗಿಲ್ಲ, ಎಲ್ಲ ವಿಷಯ ನಿಮ್ಗೆ ಬರೆಯೋದು ಸುಲಭ ಅನ್ಸುತ್ತೆ :) hats off :)..ಲೇಖನ ಸರಳವಾಗಿದೆ.
’ಪಕ್ಕೋಡಾ ವಡೆ ದೋಸೆ’ :))
ಮನ,
ಥ್ಯಾಂಕ್ಸ್! ಸುಮ್ನೇ ಟೈಮ್‌ಪಾಸ್ ಲೇಖನಾ ಇದು, ಪಕ್ಕೋಡಾ ವಡೇ ದೋಸೆ ಹೆಸರುಗಳನ್ನು ಕೇಳಿ ಬಾಯಲ್ಲಿ ನೀರೂರಿರಬಹುದು ಎಂದುಕೊಂಡಿದ್ದೆ! :-)
Conan Barbarian
Conan the Barbarian Wallpapers
Age of Conan Classes
Game multiplayer online rpg
multiplayer online game like runescape
free online multiplayer game
age of conan gold
aoc gold
Age of Conan Torrent
Age of Conan Trial
Age of Conan Free Trial
Hibernia
Midgard
Albion
DAOC 3 Accounts
DAOC How to Run 3 Accounts
DAOC Triple Log
daoc plat
daoc platinum
wow gold
DAOC Emissary Broken Visions
DAOC Champ Exp Quest
DAOC Artifacts
DAOC templates
Dark Ages of Camelot
EQ2 Plat
EQ2 Gold
EverQuest ii platinum Venekor
Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food
Fading memories Everquest
Mentor everquest
eq2 guild permafrost
free warcraft servers
world of warcraft private servers
world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming
wow pvp
wow arena season 4
wow s3 arena power leveling service
Post a Comment