Tuesday, June 19, 2007

ಒಂದು ಸಾಮಾನ್ಯ ಮುಂಜಾವು

ಓಹ್, ಹೆಚ್ಚೂ ಕಡಿಮೆ ಒಂದು ಸುಂದರವಾದ ಮುಂಜಾವಿನ ಬಗ್ಗೆ ಬರೆದು ಒಂದು ವರ್ಷವೇ ಆಗಿ ಹೋಯಿತು, ಫ್ರೀ ವೇಯಲ್ಲಿ ಕಾರು ಓಡಿಸದೇ ಈ ಚಿಕ್ಕ ಪುಟ್ಟ ರಸ್ತೆಗಳಲ್ಲಿ ತಿರುವಿನ ನಂತರ ಮುಂದೇನಿದೆ ಎಂದು ಹೆಜ್ಜೆ ಹೆಜ್ಜೆಗೂ ಯಾರೋ ಕೇಳುವ ಪ್ರಶ್ನೆಗಳು ರಸ್ತೆಯ ಮೇಲೆ ಹೆಚ್ಚು ಗಮನವಿರಿಸುವಂತೆ ಯಾವುದೋ ಅವ್ಯಕ್ತ ಶಕ್ತಿ ನನ್ನನ್ನು ಪ್ರೇರೇಪಿಸುತ್ತಿರುವುದರಿಂದ ನನಗೆ ಬೇಕಾದ ಮತ್ತೊಂದು ಜಗತ್ತನ್ನು ಸಂಪೂರ್ಣವಾಗೆ ನಿರ್ಲಕ್ಷಿಸುತ್ತಿದ್ದೇನೆಯೇ ಎಂದು ಒಮ್ಮೆ ಪಿಚ್ ಎನಿಸಿದಾಗ ನನಗೆ ಕೇಳುವಷ್ಟರ ಮಟ್ಟಿಗೆ 'ಚ್ಚು' ಎಂದುಕೊಂಡು ಅಪರೂಪಕ್ಕಾದರೂ ಅಗಲುವ ಸ್ನೇಹಿತರಂತೆ ತುಟಿಗಳನ್ನು ಬೇರೆ ಮಾಡಿದೆ. ದಿನವೂ ಈ ಸುದ್ದಿ, ಅದರ ಸುತ್ತಲಿನ ವಿಚಾರಗಳನ್ನು ಕೇಳದಿದ್ದರೆ ಏನು ಗಂಟು ಹೋಗುತ್ತೆ? ಎಂದು ಎಲ್ಲಿಂದಲೋ ಅವ್ಯಕ್ತ ಪ್ರಶ್ನೆ ಬಂದಿತೆಂದು ಗೊತ್ತಾದ ತಕ್ಷಣ ತೋರು ಬೆರಳಿನಲ್ಲಿ ತುಸು ಚೈತನ್ಯ ಹುಟ್ಟಿ ರೇಡಿಯೋ ತನ್ನಷ್ಟಕ್ಕೆ ತಾನೇ ಬಂದ್ ಆದ ಹಾಗನ್ನಿಸಿ, ಏಕದಂ ಮೌನ ನೆಲೆಸಿ ಪರೀಕ್ಷೆಗೆ ತಯಾರಾಗುವ ಹುಡುಗನಿಗೆ ತನ್ನ ಪರೀಕ್ಷೆಗಳು ದಿಢೀರ್ ಮುಂದು ಹೋದಾಗ ಇನ್ನೂ ಓದಲು ಸ್ವಲ್ಪ ಸಮಯ ಸಿಕ್ಕಿತು ಎಂದು ಸಂತೋಷವಾಗುವ ಹಾಗೆ ಒಂದು ಸಣ್ಣ ನಗೆ ತುಟಿಗಳ ಮೇಲೆ ಸುಳಿದಾಡಿತು.

ದಾರಿ ಪಕ್ಕದ ಬೃಹದಾಕಾರದ ಗೋಲ್ಫ್ ಕ್ಲಬ್ಬಿನಲ್ಲಿ ಮುಂಜಾನೆ ಅಷ್ಟೊತ್ತಿಗಾಗಲೇ ಹಿಂಡುಗಟ್ಟತೊಡಗಿದ್ದ ಆಟಗಾರರು ಕಣ್ಣಿಗೆ ಕಂಡು ಅವರ ಕಣ್ಣುಗಳಲ್ಲಿದ್ದ ಶಾಂತಿಯನ್ನು ನೋಡಿ ಒಮ್ಮೆ ಹೊಟ್ಟೆ ಕಿಚ್ಚಾದ ಹಾಗೆನಿಸಿದರೂ - they've earned it! - ಎಂದು ಸಂತೈಸುವ ಧ್ವನಿಯೊಂದು ಎಲ್ಲಿಂದಲೋ ಕೇಳಿದಂತೆನಿಸಿ ನನ್ನ ಪರಿತಾಪ ತುಸು ಕಡಿಮೆಯಾಯಿತು. ಈ ಮೌನ, ನಿಶ್ಶಬ್ದದ ಹಿಂದೆ ಏನಿದೆ ನೋಡೋಣ ಎಂದುಕೊಂಡು ಕಿವಿಗಳನ್ನು ಜಾಗೃತಗೊಳಿಸಿ ಬದಿಯ ವಿಂಡ್‌ಶೀಲ್ಡ್‌ನ್ನು ಒಂದು ಇಂಚು ಕೆಳಗಿಳಿಸಿದಾಗ ರಸ್ತೆಯನ್ನು ತಿಕ್ಕುವ ಟೈರುಗಳ ಶಬ್ದ ಸಂಗೀತ ಕಚೇರಿಯ ಆಲಾಪನೆಯಂತೆ ಕೇಳಿಬಂತು. ಇಷ್ಟೊತ್ತಿನವರೆಗೆ ಗಿಡಮರಗಳ ಮೇಲೆ ಹಗರುವಾಗಿ ಬೀಸಿ ಎಲೆಗಳ ಮೇಲೆ ನಿಂತಿದ್ದ ನೀರಿನ ಹನಿಗಳನ್ನು ಕೆಳಗೆ ಬೀಳಿಸುತ್ತಿದ್ದ ತಣ್ಣನೆ ಹವೆ ಅತ್ತಿಂದಿತ್ತ ಬೀಸುತ್ತಾ ತನ್ನ ಅಸ್ತಿತ್ವವನ್ನು ಶಬ್ದದ ಮೂಲಕವೂ ತೋರಿಸಬಲ್ಲೆ ಎಂದು ಒಂದೆರಡು ಬಾರಿ ಜೋರಾಗಿ ಬೀಸಿ ತನ್ನ ಇರುವನ್ನು ಪ್ರದರ್ಶಿಸಿತು.

ರೇಡಿಯೋ ಇಲ್ಲದ ಡ್ರೈವ್ ಕಾಫಿ ಇಲ್ಲದ ಮುಂಜಾವಿನಂತೆ ಸಪ್ಪಗಾಗಿ ಹೋಗಿತ್ತು - ರೇಡಿಯೋ ಇಲ್ಲದಿದ್ದರೂ ಗಡಿಯಾರದ ಪ್ರಕಾರ ಇಷ್ಟೊತ್ತಿಗೆ ಏನೇನು ಸುದ್ದಿಗಳು ಪ್ರಕಟವಾಗುತ್ತಿದ್ದವೋ ಅವುಗಳ ಬಗ್ಗೆ ಮನಸ್ಸು ಚಿಂತಿಸತೊಡಗಿದ್ದನ್ನು ನೋಡಿ ನನ್ನ control freak ಮನಸ್ಸು 'ಓಹೋ ಇಷ್ಟೊಂದು ರೆಡಿಯೋಗೆ ಅಡಿಕ್ಟ್ ಆಗಿದ್ದೀಯಾ...ಇನ್ನೊಂದು ವಾರ ರೆಡಿಯೋ ಹಾಕದಿರು!' ಎಂದು ಆದೇಶ ನೀಡಿದಂತಾಗಿ ಒಮ್ಮೆ ಬೆಚ್ಚಿ ಬಿದ್ದೆ - ಕೈಲಿದ್ದ ಹಾಲ್ ಐಸ್ ಕ್ರೀ ಇನ್ನೂ ತಿನ್ನುವುದಕ್ಕಿಂತ ಮೊದಲೇ ನೆಲದ ಮೇಲೆ ಕಡ್ಡಿಯಿಂದ ಜಾರಿ ಬಿದ್ದ ಹಾಗೆ ಮುಖ ಮಾಡಿಕೊಂಡು 'ನೀನ್ಯಾವನಯ್ಯಾ ನನಗೆ ಉಪದೇಶ ಕೊಡೋಕೆ...' ಎಂದು ಬೈದುಕೊಂಡೆನಾದರೂ ಕಂಟ್ರೋಲ್ ಬಹು ಮುಖ್ಯ ಎನಿಸಿ ಪೆಚ್ಚನೆ ಮುಖ ಸೆಕೆಂಡರಿಯಾಗಿಹೋಗಿ, after all - ರೆಡಿಯೋ ಕೇಳದಿದ್ದರೇನಂತೆ ಮನೆಯಲ್ಲಿರೋ ಒಂದಿಷ್ಟು MP3 ಹಾಡುಗಳಿಗೋ ಅಥವಾ ಅಲ್ಲಿಲ್ಲಿ ಬಿದ್ದುಕೊಂಡಿರೋ ಸಿಡಿಗಳಿಗೋ ಜೀವ ತುಂಬಿದರೆ ಹೇಗೆ ಎಂದು ಒಂದು ಸಣ್ಣ ಸಂತೋಷದ ಎಳೆಯೂ ಮಿಂಚಿ ಮಾಯವಾಯಿತು.

Thank goodness - ಈ ರಿಯರ್‌ವ್ಯೂ ಮಿರರ್‌ಗಳನ್ನು ಚಿಕ್ಕದಾಗಿ ಮಾಡಿದ್ದಾರೆ - can you imagine otherwise? ಹಿಂದಿನವುಗಳನ್ನು ಎಷ್ಟು ಅವಲೋಕಿಸಬೇಕೋ ಅಷ್ಟಿದ್ದರೆ ಚೆನ್ನ, ಹೆಚ್ಚೇನಾದರೂ ಆಯಿತೆಂದರೆ ಯಾವುದಾದರೂ ಡಿಪ್ರೆಷ್ಷನ್ನ್ ಔಷಧಿಗಳಿಗೆ ಆಹಾರವಾಗಬೇಕಾಗಿ ಬಂದುಬಿಡಬಹುದು. ಈ ಅವಲೋಕನ ಅನ್ನೋದು ಇರಬೇಕು ಒಂದು ರೀತಿ ಊಟದಲ್ಲಿನ ಉಪ್ಪಿನಕಾಯಿಯ ಹಾಗೆ - ಅದು ಬಿಟ್ಟು ಬರೀ ಉಪ್ಪಿನಕಾಯಿಯ ರಸವನ್ನು ಹಾಕಿಕೊಂಡು ಸಾರಿನಂತೆ ಕಲಸಿ ಎಷ್ಟು ಅನ್ನವನ್ನು ತಿನ್ನಲಾದೀತು. ಹಾಗಂತ ಈ ಅವಲೋಕನವೇ ಬೇಡ ಅನ್ನೋ ರೀತಿ ಆ ಚಿಕ್ಕ ರಿಯರ್ ವ್ಯೂ ಮಿರರ್ ಅನ್ನು ಮತ್ತೆಲ್ಲಿಗೋ ತಿರುಗಿಸಿ ಇಡೋದು ಬೇಡ, ಅವರವರ control freak ಮನಸ್ಸುಗಳಿಗೆ ಈ ವಿಚಾರದಲ್ಲಿ ಮೂಗು ತೂರಿಸುವ ಯಾವ ಆಸ್ಪದವೂ ಇಲ್ಲದಿರಲಿ...

***

ಹೊರಗಿನ ಶಬ್ದಗಳನ್ನು ಆಲಿಸಿದ್ದಾಯಿತು, ಒಳಗಿನ ಸದ್ದುಗಳನ್ನು ನಿಲ್ಲಿಸಿದ್ದಾಯಿತು, ಇನ್ನೊಂದು ವಾರ ರೆಡಿಯೋ ರಜೆ ತೆಗೆದುಕೊಂಡ ಸ್ನೇಹಿತನಾಯಿತು - ಏನಾದರೂ ಮಾಡಿ ಗದ್ದಲ ಮಾಡೋಣ ಎಂದುಕೊಂಡಾಗ - 'ಎಮ್ ಟೀವೀ ಸುಬ್ಬು ಲಕ್ಷ್ಮಿಗೆ ಬರಿ ಓಳು, ಬರಿ ಓಳು...' ಎಂದು ನನ್ನ ಬಾಯಿಂದ ಹಾಡಿನ ತುಣುಕೊಂದು ಹೊರಗೆ ಬಿತ್ತು! ಅಲ್ಲಾ, ಈ 'ಓಳು' ಅನ್ನೋ ಪದದ ಸರಿಯಾದ ಅರ್ಥ ಏನು? ಆ ಪದದ ಮೂಲ ಏನು, ಹೇಗೆ derive ಆಯ್ತು? ಯಾವ context ನಲ್ಲಿ ಕರ್ನಾಟಕದ ಯಾವ ಭಾಗದ ಜನ ಆ ಪದವನ್ನು ಬಳಸ್ತಾರೆ? ನಾನೇಕೆ ಇಷ್ಟು ದಿನ ಆ ಪದವನ್ನು ಕೇಳಲಿಲ್ಲ (ಈ ಹಾಡನ್ನು ಬರೆದು ಪ್ರಕಟಿಸೋವರೆಗೆ) - ಅಫೀಸ್ನಲ್ಲಿ ಟೈಮ್ ಸಿಕ್ಕಾಗ ಇಂಟರ್ನೆಟ್‌ನಲ್ಲಿ ನೋಡು! ಎಂದೊಂದು action item ಹುಟ್ಟಿಕೊಂಡಿದ್ದೂ ಅಲ್ಲದೇ ಜೊತೆಯಲ್ಲಿ ಯಾರನ್ನು ಕೇಳಿದರೆ ತಿಳಿಯುತ್ತೆ? ಎನ್ನೋ ಪ್ರಶ್ನೆಗಳು ಇಷ್ಟೊತ್ತು ತಿಳಿಯಾಗಿ ನಿಂತಿದ್ದ ನೀರಿನಲ್ಲಿ ಕಲ್ಲೊಂದು ಬಿದ್ದು ಅಲೆಗಳೋಪಾದಿಯಲ್ಲಿ ಹುಟ್ಟತೊಡಗಿದವು.

ಛೇ, on a weekday ಬೆಳಿಗ್ಗೆ ಏಳ್ ಘಂಟೇಗಿಂತ ಮೊದಲು ಫೋನ್ ಮಾಡಿ ಇಂತಾ ಪ್ರಶ್ನೆಗಳನ್ನು ಕೇಳಿದರೂ ಬೈಯದಿರೋ ಸ್ನೇಹಿತರಿರಬೇಕಪ್ಪಾ...ಒಂದು ಖಿನ್ನವಾದ ಮನಸ್ಥಿತಿ ಇನ್ನೆನು ಹುಟ್ಟಿ ಬಿಡಬೇಕು ಎನ್ನುವಷ್ಟರಲ್ಲಿ ಇಷ್ಟೊತ್ತು ಮರಗಳ ನಡುವೆ ಮರೆಯಾಗಿದ್ದ ಸೂರ್ಯನ ಕಿರಣಗಳು 'ಏನ್ ಸಾರ್, ಮುಂಜಾನೆ ಬಗ್ಗೆ ಯೋಚ್ನೆ ಮಾಡ್ತಿದ್ದದ್ದೇನೋ ಖರೆ, ಆದ್ರೆ ನಮ್ಮಗಳನ್ನ್ ಮರೆತೆ ಬಿಟ್ರಲ್ಲಾ!' ಎಂದು ನಕ್ಕಂತೆ ಹೊರಗೆ ಬರತೊಡಗಿ ಖಿನ್ನತೆ ದೂರವಾಗಿ, ಒಡನೆ 'ಅಲ್ವಾ?' ಅನ್ನೋ ಪ್ರಶ್ನೆಯೇ ಅದಕ್ಕುತ್ತರವಾಗಿ ಹೋಗಿ ಮತ್ತೆ ನಿಶ್ಶಬ್ದ ತಾಂಡವವಾಡತೊಡಗಿತು!

5 comments:

  1. thirgaa aangla bhaasheya lipiyalle bareetha iddheeni.nanna computer nanna hathra illa - idhara mEle baraha install maadoke boru.addrinda solpa ignore maadu maharaaya :-)

    ninna saamaanya mujaavu chennagidhe.eecheechege bengaloorina thale chittu hidisuva shabdhagalige oggalaaradhe odi hOgalu yatnisuththiruva nanage ninna munjaavu thannage, shaanthavaagidhe annisitu.ee naduve naanu, radio, paper, walkman, maathu, books, even thoughts...enoo illadhe summane koothu enoo madadhe iruva kaleyannu kaliyuththidhdeeni.so i can relate to what you have written :-)

    idhentaha praani? andhukollabeda.
    neenenaadru bengaloorinalle nelesiddiddidre ninage gotthaagthaa ithtu nanna "kharma" :-)

    summane koorOdhu - manasannu silence melEne ekaagra maadodenu summane andukondyaa? neeu adanne maadodaadre nanna best wishes.maadu maadu :-D

    liked the visuals you have used.
    keep it going.

    - jayashree (bluej/jaywalker etc.,)

    ReplyDelete
  2. jaywalker,

    ಬೆಂಗಳೂರಿನ ಶಬ್ದ ಮಾಲಿನ್ಯದ ಬಗ್ಗೆ ಕೇಳಿದ್ದೇನೆ ಹಾಗೂ ಅನುಭವಿಸಿದ್ದೇನೆ - ಅಲ್ಲಿಯವರು ಹೇಗಾದರೂ ಇರುತ್ತಾರಪ್ಪಾ ಎಂದುಕೊಂಡಾಗಲೆಲ್ಲ ’ರೂಢಿ’ ಎನ್ನುವ ಪದ ಉತ್ತರವಾಗಿದೆ.

    ಆದರೆ, ಕಂಟ್ರಿ ಸೈಡ್ ತುಂಬಾ ಚೆನ್ನಾಗಿರುತ್ತೆ ಅಲ್ಲಿ...ಸಿಟಿಯಲ್ಲಿ ನಿಮಗೆ ಬೇಕಾದದ್ದು ಸಿಗದಿದ್ದಾಗಲೆಲ್ಲ ಹಳ್ಳಿಯ ಕಡೆ ಹುಡುಕಿ ನೋಡಿ!

    ಧನ್ಯವಾದ.

    ReplyDelete
  3. Anonymous9:42 PM

    "ಫ್ರೀ ವೇಯಲ್ಲಿ ಕಾರು ಓಡಿಸದೇ ಈ ಚಿಕ್ಕ ಪುಟ್ಟ ರಸ್ತೆಗಳಲ್ಲಿ ತಿರುವಿನ ನಂತರ ಮುಂದೇನಿದೆ ಎಂದು ಹೆಜ್ಜೆ ಹೆಜ್ಜೆಗೂ ಯಾರೋ ಕೇಳುವ ಪ್ರಶ್ನೆಗಳು ರಸ್ತೆಯ ಮೇಲೆ ಹೆಚ್ಚು ಗಮನವಿರಿಸುವಂತೆ ಯಾವುದೋ ಅವ್ಯಕ್ತ ಶಕ್ತಿ ನನ್ನನ್ನು ಪ್ರೇರೇಪಿಸುತ್ತಿರುವುದರಿಂದ ನನಗೆ ಬೇಕಾದ ಮತ್ತೊಂದು ಜಗತ್ತನ್ನು ಸಂಪೂರ್ಣವಾಗೆ ನಿರ್ಲಕ್ಷಿಸುತ್ತಿದ್ದೇನೆಯೇ ಎಂದು ಒಮ್ಮೆ ಪಿಚ್ ಎನಿಸಿದಾಗ ನನಗೆ ಕೇಳುವಷ್ಟರ ಮಟ್ಟಿಗೆ 'ಚ್ಚು' ಎಂದುಕೊಂಡು ಅಪರೂಪಕ್ಕಾದರೂ ಅಗಲುವ ಸ್ನೇಹಿತರಂತೆ ತುಟಿಗಳನ್ನು ಬೇರೆ ಮಾಡಿದೆ."

    ಸತೀಶ್, ಕಾಪಾಡಿ ಸರ್! ಇಷ್ಟುದ್ದ ವಾಕ್ಯಗಳನ್ನು ಹೇರಬೇಡಿ!

    ReplyDelete
  4. ಜೋಶಿಯವರೆ,

    ನಿಮ್ಮ ಕಾಮೆಂಟ್ ನೋಡಿ ಒಂದು ದೊಡ್ಡ ನಗೆ ಬಂತು!

    ಉದ್ದುದ್ದಕ್ಕೆ ಬರೆಯೋದು ಸದ್ಯದ ಮಟ್ಟಿಗೆ ಹವ್ಯಾಸವಾಗಿದೆ, ಅದು ರೋಗವಾಗದಿದ್ದರೆ ಸಾಕು. :-)

    ReplyDelete