Wednesday, May 30, 2007

ಹೊರ(ಗಿನವನ)ನೋಟ

ಅಮೇರಿಕದ ಮಾದ್ಯಮಗಳಲ್ಲಿ ಹೊರ ದೇಶಗಳಲ್ಲಿನ ಜನರ ವಾರ್ಷಿಕ ಆದಾಯ ಇಷ್ಟಿದೆ ಎಂದು ಡಾಲರುಗಳಲ್ಲಿ ಹೇಳುವುದು ಸಾಮಾನ್ಯ. ಉದಾಹರಣೆಗೆ ಒಬ್ಬ ಸಾಮಾನ್ಯ ಭಾರತೀಯನೊಬ್ಬ ದಿನಕ್ಕೆ ನಲವತ್ತರಿಂದ ಐವತ್ತು ರೂಪಾಯಿಗಳನ್ನು ದುಡಿದರೆ ಆತನ ಆ ದಿನದ ಆದಾಯ ಒಂದು ಡಾಲರ್‌ಗೆ ಸಮ, ವರ್ಷಕ್ಕೆ ಅದು ಸುಮಾರು ಮುನ್ನೂರೈವತ್ತು ಡಾಲರ್ ಆಗಬಲ್ಲದು. ಇದೇ ರೀತಿ ಹೊರ ದೇಶಗಳಲ್ಲಿಯೂ ಸಹ ಇಲ್ಲಿನ ಬೆಲೆ, ಯೂನಿಟ್‌ಗಳು ಅಲ್ಲಿ ಮಹಾನ್ ಆಗಿ ಕಾಣಬಹುದು. ಉದಾಹರಣೆಗೆ ಪ್ರಿನ್ಸೆಸ್ ಡೈಯಾನ ಕಾರ್ ಆಕ್ಸಿಡೆಂಟ್‌ಗೆ ಸಿಕ್ಕು ಕ್ರಿಟಿಕಲ್ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿಕೊಂಡಿದ್ದಾಗ, ಆಕೆಯಿದ್ದ ಕಾರು ಘಂಟೆಗೆ ನೂರಾಹದಿನೈದು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎಂದು ವರದಿಯಾದಾಗ ಭಾರತದಂತಹ ದೇಶದಲ್ಲಿ ಅದು ಮಹಾನ್ ವೇಗವಾಗಿ ಕಾಣಿಸಿದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಸಹಜವಾದ ಸ್ಫೀಡ್‌ ಲಿಮಿಟ್ ಆಗಿರಬಹುದು. ಸಾಮಾನ್ಯವಾಗಿ ವಿದೇಶಗಳ ವರದಿಗಳನ್ನು ಓದಿ/ಕೇಳಿದಾಗ ಈ ರೀತಿಯ ತಿಳುವಳಿಕೆ ಇಲ್ಲದಿದ್ದರೆ ನಮಗೆ ದೊರಕಬಹುದಾದ ವಿಷಯ ವಸ್ತುಗಳನ್ನು ನಾವು ಹೇಗೆ ಬಳಸುತ್ತೇವೆ ಎನ್ನುವಲ್ಲಿ ಬಹಳಷ್ಟು ವ್ಯತ್ಯಾಸಗಳಾಗುತ್ತವೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟ - ಇಲ್ಲಿ ದೊರೆಯಬಹುದಾದ ಒಂದು ಲೀಟರ್ ಪೆಟ್ರೋಲ್ ಬೆಲೆ, ಒಂದು ಲೀಟರ್ ಬಾಟಲ್ ನೀರಿಗಿಂತಲೂ ಕಡಿಮೆ ಇರಬಹುದು. ಆದರೆ ಕೆಲವು ವಸ್ತುಗಳು ಉಳಿದ ದೇಶಗಳಿಗಿಂತ ಹೆಚ್ಚು ತುಟ್ಟಿಯಿರಬಹುದು. ಉದಾಹರಣೆಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಪ್ರಾಸೆಸ್ಸುಗಳು (ಮ್ಯಾನುಫ್ಯಾಕ್ಚರಿಂಗ್, ಮಾರ್ಕೆಟಿಂಗ್, ಲೀಗಲ್, ಡಿಸ್ಟ್ರಿಬ್ಯೂಷನ್, ಇತ್ಯಾದಿ) ಜ್ವರ, ಕೆಮ್ಮು ಮುಂತಾದ ಸಾಧಾರಣ ಅನಾರೋಗ್ಯಗಳಿಗೆ ಉಪಯೋಗಿಸಲ್ಪಡುವ ಮದ್ದು ಬಹಳ ದುಬಾರಿ ಎನಿಸಬಹುದು. ಭಾರತದಲ್ಲಿ ಬಹಳಷ್ಟು ಜನರು ಬಳಸಬಹುದಾದ ಸಂತಾನ ನಿರೋಧಕ ಮಾತ್ರೆಗಳು ರೂಪಾಯಿಗೆ ಒಂದು ಪ್ಯಾಕೆಟ್ ಸಿಗಬಹುದು, ಆದರೆ ಅಮೇರಿಕದಂತಹ ದೇಶಗಳಲ್ಲಿ ಇಪ್ಪತ್ತು ಮಾತ್ರೆಗಳಿಗೆ ಹದಿನೈದು ಡಾಲರ್‌ಗಳಾಗಬಹುದು. ಇಂತಹ ಮಾತ್ರೆಗಳನ್ನು ತಯಾರಿಸಿ, ಹಂಚುವ ಪ್ರಕ್ರಿಯೆಗಲ್ಲಿ ಸರ್ಕಾರದ ಕೈವಾಡ ಇದೆಯೇ ಇಲ್ಲವೇ ಎನ್ನುವುದೂ ಬೆಲೆಗಳಲ್ಲಿ ವ್ಯತ್ಯಾಸವನ್ನುಂಟುಮಾಡಬಲ್ಲದು.

ನಿನ್ನೆ ಎರಡೂವರೆ ಎಮ್‌ಎಲ್ ಬಾಟಲಿ ಐ ಡ್ರಾಪ್ಸ್‌ಗೆ ಇನ್ಷೂರೆನ್ಸ್ ಇದ್ದೂ ನಲವತ್ತೆರಡು ಡಾಲರ್ ಕೊಡಬೇಕಾಗಿ ಬಂದಾಗಲೇ ನಾನು ಬೆಲೆಗಳ ಬಗ್ಗೆ ಯೋಚನೆ ಮಾಡತೊಡಗಿದ್ದು! ಇನ್ಷೂರೆನ್ಸ್ ಇಲ್ಲದವರು ಒಂದೊಂದ್ ಮಿಲಿಲೀಟರ್‌ಗೆ ಇಪ್ಪತ್ತೈದು ಡಾಲರ್ ಕೊಡಬೇಕಾಗಿ ಬರಬಹುದಾದ ಒಂದು (after all) ಸೀಸನಲ್ ಅಲರ್ಜಿ ಡ್ರಾಪ್ಸ್‌ಗೆ ಅಷ್ಟೊಂದು ಹಣವೇ? ಈ ವ್ಯವಸ್ಥೆಯಲ್ಲಿ ಏನೋ ಕೊರತೆ ಇದೆ, ಅಥವಾ ನನಗೆ ಗೊತ್ತಿರದ ಯಾವುದೋ ಸೂತ್ರವನ್ನಾಧರಿಸಿ ಅತಿಯಾಗಿ ಬೆಳೆದುಹೋಗಿದೆ. ನನ್ನ ಅಕ್ಕಪಕ್ಕದವರಲ್ಲಿ ವಿಚಾರಿಸಲಾಗಿ 'ಇಷ್ಟೊಂದು ದುಬಾರಿಯೇ!' ಎಂದು ಅವರು ಮೂಗಿನ ಮೇಲೆ ಬೆರಳೇರಿಸದಿರುವುದನ್ನು ನೋಡಿ ಇನ್ನೂ ಆಶ್ಚರ್ಯವಾಗತೊಡಗಿತು.

ಒಂದೇ ಒಂದು ಡಾಲರ್, ಅದರ ಬೆಲೆ, ಮೌಲ್ಯ ಅದರ ಹಿಂದಿನ ಮೆಹನತ್ತು - ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಅಮೇರಿಕದಲ್ಲಿ ಘಂಟೆಗೆ ಕೇವಲ ಎರಡು ಡಾಲರ್ ದುಡಿಯುವವರಿಂದ ಹಿಡಿದು ಸಾವಿರಾರು ಡಾಲರುಗಳನ್ನು ಕಮಾಯಿಸುವವರಿದ್ದಾರೆ, ಅವರೆಲ್ಲರಿಗೂ ಅವವರವರದ್ದೇ ಆದ ಫಿಲಾಸಫಿ ಇರುತ್ತದೆ, ಆಯ-ವ್ಯಯಗಳಿರುತ್ತವೆ. ಇಂಥವರನ್ನೆಲ್ಲ ಕಟ್ಟಿ ಹಾಕಲು ಹಗ್ಗದ ಹಾಗೆ ಒಂದೇ ಪ್ರಾಸೆಸ್ಸು ಇರಲು ಸಾಧ್ಯವಿಲ್ಲ, ಬೇರೆ ಬೇರೆ ರೀತಿನೀತಿಗಳು ಇದ್ದೇ ಇರುತ್ತವೆ ಎನ್ನುವುದು ಬಹಳ ದೊಡ್ಡ ಮಾತು. ನಾವೇನಾದರೂ ಆರ್ಥಿಕ ಸರಪಳಿಯ ಕೆಳಗಡೆ ಇದ್ದುದೇ ಹೌದಾದರೆ ಸಮಾಜಶಾಸ್ತ್ರದ ಬುನಾದಿಯಾದ 'ಎಲ್ಲರೂ ಒಂದೇ' ಎನ್ನುವ ತತ್ವ ಬಹಳಷ್ಟು ಕಡೆ ಹೊಂದದು ಎನ್ನುವಷ್ಟರ ಮಟ್ಟಿಗೆ ಕೆಟ್ಟದಾಗಿ ಗೋಚರಿಸತೊಡಗುತ್ತದೆ. ಅದೇ ಆರ್ಥಿಕವಾಗಿ ಅನುಕೂಲವಾಗಿದ್ದವರಿಗೆ ಅವೇ ತತ್ವಗಳು ಮತ್ತಿನ್ನೊಂದು ಕೋನದಲ್ಲಿ ಕಾಣತೊಡಗುತ್ತವೆ. ಒಂದು ಅಗತ್ಯವಸ್ತುವಿನ ಬೆಲೆ - ಅದು ಹಾಲಾಗಿದ್ದರಬಹುದು, ನೀರಾಗಿದ್ದರಬಹುದು, ಅಥವಾ ಪೆಟ್ರೋಲ್ ಆಗಿರಬಹುದು - ಸಮಾಜದ ವಿವಿಧಸ್ತರಗಳಲ್ಲಿ ಬಳಸುವಾಗ ಅದರಲ್ಯಾವ ಬದಲಾವಣೆಯೂ ಕಾಣದು - ಹಾಗಿದ್ದಾಗ ಘಂಟೆಗೆ ಎರಡು ಡಾಲರ್ ದುಡಿಯುವರಿಗೆ ಅನ್ಯಾಯವಾದಂತಾಗುವುದಿಲ್ಲವೇ? ಸಾಮಾನ್ಯ ಸಂಪನ್ಮೂಲಗಳನ್ನು ಆಧರಿಸುವುದಕ್ಕೇ ದಿನನಿತ್ಯದ ದುಡಿಮೆ ಸಾಕಾಗುವ ಸ್ಥಿತಿಯಲ್ಲಿ ದಿನತಳ್ಳುವುದೇ ಬದುಕಾಗಿ ಹೋಗುತ್ತದೆ.

ಅಗತ್ಯವಸ್ತು - ಎನ್ನುವುದು ಇಲ್ಲಿ ಮುಖ್ಯವಾದ ಪದ; ಅದಕ್ಕೆ ಡಾಲರ್/ರೂಪಾಯಿಯ ಇತಿ-ಮಿತಿ ಇರೋದಿಲ್ಲ...ಅದು ಬೇಕು, ಅಷ್ಟೇ. ಅರ್ಥಶಾಸ್ತ್ರದ ತತ್ವಗಳೆಲ್ಲ ಇಂತಹ ಅಗತ್ಯವಸ್ತುಗಳಿಗೇನೆ ಹೆಚ್ಚು ಅನ್ವಯಿಸೋದು. ಪೆಟ್ರೋಲ್ ಬೆಲೆ ಹೆಚ್ಚು ಮಾಡಿ ನೋಡಿ, ಉಳಿದೆಲ್ಲವುಗಳ ಬೆಲೆ ಅದರ ಹಿಂಬಾಲಕರಾಗುತ್ತವೆ. ಐಶಾರಾಮಿ ವಿಷಯ-ವಸ್ತುಗಳು ಸಾಮಾನ್ಯರಿಂದ ದೂರವೇ ಉಳಿದುಬಿಡುತ್ತವೆ. ಕೊನೇಪಕ್ಷ ಅಗತ್ಯವಸ್ತುಗಳು, ಔಷಧ/ಮಾತ್ರೆ ಮುಂತಾದ ವಿಷಯಗಳಿಗೆ ಬಂದಾಗ ಎಷ್ಟೋ ಜನ ಹಣವಿಲ್ಲದವರು, ಇನ್ಷೂರೆನ್ಸ್ ಇರದವರು ಬಹಳಷ್ಟು ಬವಣೆಯನ್ನು ಅನುಭವಿಸುವುದನ್ನು ನೋಡಿದ್ದೇನೆ. ಕ್ಯಾಪಿಟಲಿಷ್ಟಿಕ್ ಪ್ರಪಂಚದಲ್ಲಿ ಆ ಬವಣೆಗಳು ಅರಣ್ಯರೋಧನವಾಗುತ್ತವೆಯೇ ಹೊರತು ಶ್ರೀಮಂತ ರಾಜಕಾರಣಿಗಳು ಮಾಡುವ ಪಾಲಿಸಿಗಳಾಗಲಿ, ಉಳ್ಳವರ ಪ್ರಪಂಚದಲ್ಲಿ ಅಂತಹವುಗಳಿಗೆ ಯಾವ ಸ್ಥಾನವಿರುವುದಿಲ್ಲ. ಕೈಲಾಗದವರನ್ನು ಸಲಹುವ ವಿಷಯಕ್ಕೆ ಬಂದಾಗ ಶ್ರೀಮಂತ ದೇಶಗಳಿಗಿಂತ ಬಡದೇಶಗಳಲ್ಲೇ ಹೆಚ್ಚು-ಹೆಚ್ಚು ಒಲವಿರುವುದು ಒಂದು ಸ್ವಾರಸ್ಯಕರವಾದ ವಿಷಯವಷ್ಟೇ.

ಒಂದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಅರಿತುಕೊಳ್ಳದೇ ಅದರ ಮೇಲೆ ಕಾಮೆಂಟ್ ಮಾಡುವುದು ದೂರ ದೇಶದವರ ಗಳಿಕೆಗಳನ್ನು ಅಮೇರಿಕದ ಕರೆನ್ಸಿಯಲ್ಲಿ ಅಳೆದಷ್ಟೇ ಅಭಾಸಗೊಳ್ಳಬಹುದಾದ ಅನುಭವವಾಗಬಹುದು. ಯಾವ ವ್ಯವಸ್ಥೆಯನ್ನೇ ತೆಗೆದುಕೊಂಡರೂ ಇದ್ದವರ-ಇಲ್ಲದವರ ನಡುವಿನ ಕಂದರ ದಿನಕಳೆದಂತೆ ಹೆಚ್ಚುತ್ತಿರುವುದು ಮತ್ತೊಂದು ದಿನದ ಮಾತು!

4 comments:

  1. Anonymous4:04 AM

    ಹೊರ ದೇಶದಲ್ಲಿದು ಪ್ರಪಂಚದ ಬಗ್ಗೆ ಬಹಳ ಆತ್ಮೀಯವಾಗಿ ಬರೆದಿದ್ದೀರಿ. ಬಹಳ ಸಂತೋಷ ವಾಯಿತು. ನಿಜಕ್ಕೂ ಚನ್ನ, ನಿಮ್ಮ ಬ್ಲೋಗೋಳ.
    ನಾನು ನಿಮ್ಮ ಬ್ಲೋಗನ್ಣು ಇವತಿಗೆ ನೂಡಿದೆ. ಇಷ್ಟರ ವಾರಿಗೆ, ನಮ್ಮ ಕುವೆಂಪು ಹೇಳಿದಂತೆ, ಎಂಥಾದರೂ ಇರು, ನಿ ಕನ್ನಡಿಗನಾಗಿರು ಅನ್ನುವ ಗಾದೆ ಮಾತನ್ನು ಲಕ್ಷಣವಾಗಿ ಹೋಲಿಸಿದ್ದೀರಿ.

    ಇವತಿನ ದಿನ ಕನ್ನಡದ ಅಭಿವೃದ್ಡಿ ಅತಿ ವೇಗದಲ್ಲಿ ನಡೆಯುತಿದೆ. ಅದರಲ್ಲಿ ಒಂದೆನೆಂದರೆ, ಈ ಅನ್‌ಲ್ಲಿನ್ ವಿಕಾಸ. ಈಗಾಗಲೇ, ಕನ್ನಡದಲ್ಲಿ ಬ್ಲೋಗ್ ಬರೆಯುವುದು ಬಹಳ ಸುಲಭವಾಗಿಢೆ. ಹೀಗೆ, ನಿಮ್ಮ ಹಾಗೆ, ಬಹಳಷ್ಟು ಜನ ಬ್ಲೋಗ್ ಗುಲನ್ನು ಬರೆಯ ಬೀಕೆನ್ನುವುದು, ನನ್ನ ಆಸೆ.

    ನೀವು ಒಂದು ವೇಳೆ, ಹೊರ ಸ್ಥಳಗಳಲ್ಲಿ software ಇಲ್ಲದೇ ಇದ್ದು, ಬ್ಲೋಗ್ ಮಾಡ ಬೇಕಾದರೆ, http://quillpad.in/kannada/ ಅನ್ನು ಉಪಯೋಗಿಸಬಹುದು.


    Your admirer, Srinath

    ReplyDelete
  2. ಶ್ರೀನಾಥ್,

    ಕ್ವಿಲ್‌ಪ್ಯಾಡ್ ಬಹಳ ಚೆನ್ನಾಗಿದೆ! ನೇರವಾಗಿ ಇ-ಮೇಲ್ ಕಳಿಸುವ ಆಪ್ಷನ್ ಇಷ್ಟವಾಯ್ತು.
    ಆಗಾಗ್ಗೆ 'ಅಂತರಂಗ'ಕ್ಕೆ ಭೇಟಿಕೊಡುತ್ತಿರಿ, ಧನ್ಯವಾದಗಳು.

    ReplyDelete
  3. Anonymous5:59 AM

    Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

    ReplyDelete